ಉಪರಾಷ್ಟ್ರಪತಿ ಚುನಾವಣೆ: ಮೊದಲ ದಿನವೇ ಐವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ನವದೆಹಲಿ: ಆಗಸ್ಟ್‌ 6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯ ಮೊದಲ ದಿನವಾದ ಮಂಗಳವಾರ ಐವರು ನಾಮಪತ್ರ ಸಲ್ಲಿಸಿದ್ದಾರೆ. ಜುಲೈ 19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಕಡ್ಡಾಯ ದಾಖಲೆ ನೀಡಲು ವಿಫಲವಾದ ಕಾರಣ ಒಬ್ಬ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ತಮಿಳುನಾಡಿನ ಸೇಲಂ ಜಿಲ್ಲೆಯ ಕೆ ಪದ್ಮರಾಜನ್, … Continued

4 ಕೈಗಳು 4 ಕಾಲುಗಳ ಮಗು ಜನನ: ಇದು ದೇವಿಯ ಅವತಾರ ಎಂದ ಜನ

ಹಾರ್ಡೋಯ್: ಉತ್ತರಪ್ರದೇಶದ ಹರ್ದೋಯಿಯಲ್ಲಿ ಅಸಾಮಾನ್ಯ ಹೆಣ್ಣು ಮಗುವೊಂದು ಜನಿಸಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕೆಲವರು ಇದನ್ನು ದೇವರ ಪವಾಡ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಆದರೆ ವೈದ್ಯರು ಇದನ್ನು ಜೈವಿಕ ಅಸ್ವಸ್ಥತೆ ಎಂದು ಹೇಳುತ್ತಾರೆ. ಹರ್ದೋಯಿಯಲ್ಲಿರುವ ಶಹಾಬಾದ್ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರು ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲಿನ ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯಾದ ಬಳಿಕ ಅಲ್ಲಿದ್ದ … Continued

ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ: ದಿಲ್ಲಿ ಪೊಲೀಸರಿಂದ ತೇಜಸ್ವಿ ಸೂರ್ಯ ವಿಚಾರಣೆ

ನವದೆಹಲಿ: ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ಸುಮಾರು ಎರಡು ಗಂಟೆ ವಿಚಾರಣೆಗೆ ಒಳಪಡಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆ ಮುಂದಿನ ಬ್ಯಾರಿಕೇಡ್‌ಗಳನ್ನು ಮುರಿದು, ಪ್ರತಿಭಟನೆ ನಡೆಸಿದ್ದ ಪ್ರಕರಣದಲ್ಲಿ ಈ ವಿಚಾರಣೆ ನಡೆಸಲಾಗಿದೆ. ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ … Continued

ನೂಪುರ್ ಶರ್ಮಾ ಕುರಿತ ಸುಪ್ರೀಂ ಅಭಿಪ್ರಾಯ ವಿರೋಧಿಸಿ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ಸೇನಾನಿಗಳಿಂದ ಬಹಿರಂಗ ಪತ್ರ

ನವದೆಹಲಿ: ಪ್ರವಾದಿ ಮೊಹಮ್ಮದ್‌ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಜುಲೈ 1ರಂದು ಸುಪ್ರೀಂ ಕೋರ್ಟ್‌ ನೀಡಿದ ಕಟ್ಟು ಟಪ್ಪಣಿಗಳನ್ನು ವಿರೋಧಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಬಹಿರಂಗ ಪತ್ರವು ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳಿದ್ದ … Continued

ಕೆಲ ಕಂಟೆಂಟ್‌ಗಳನ್ನು ತೆಗೆದುಹಾಕಲು ಕೇಂದ್ರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಟ್ವಿಟರ್

ಬೆಂಗಳೂರು: ಕೆಲವು ಟ್ವೀಟ್‌ ಕಂಟೆಂಟ್‌ಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಾಮಾಜಿಕ ಮಾಧ್ಯಮ ತಾಣ ಟ್ವಿಟರ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದೆ. ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ಟೇಕ್ ಡೌನ್ ನೋಟಿಸ್‌ಗಳನ್ನು ಅನುಸರಿಸಲು ಕೇಂದ್ರವು ಇತ್ತೀಚೆಗೆ ಟ್ವಿಟರ್‌ಗೆ ಕೊನೆಯ ಅವಕಾಶ ನೀಡಿತ್ತು. ಒಂದು ವೇಳೆ ಅಂತಹ ವಿಷಯಗಳನ್ನು ತೆಗೆದು ಹಾಕದಿದ್ದರೆ … Continued

ಯುದ್ಧ ವಿಮಾನಗಳನ್ನು ಒಟ್ಟಿಗೆ ಹಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ ತಂದೆ-ಮಗಳ ಜೋಡಿ…!

ನವದೆಹಲಿ: ಏರ್ ಕಮೋಡೋರ್ ಸಂಜಯ್ ಶರ್ಮಾ ಮತ್ತು ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ ತಂದೆ-ಮಗಳು ಜೋಡಿ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನ ಒಟ್ಟಿಗೆ ಹಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಅನನ್ಯ ಬೆಳೆದಂತೆ, ಭಾರತೀಯ ವಾಯುಪಡೆಯಲ್ಲಿ (IAF) ಫೈಟರ್ ಪೈಲಟ್ ಆಗಿರುವ ತನ್ನ ತಂದೆ ತನ್ನ ಸಹವರ್ತಿ ಸ್ಕ್ವಾಡ್ರನ್ ಪೈಲಟ್‌ಗಳೊಂದಿಗೆ ಇದನ್ನು … Continued

ಯಾರೇ ನೂಪುರ್ ಶರ್ಮಾ ತಲೆ ತಂದರೂ ಮನೆ ಉಡುಗೊರೆ ಕೊಡುವೆ ಎಂದ ಅಜ್ಮೀರ್ ದರ್ಗಾ ಮೌಲ್ವಿ ವಿರುದ್ಧ ಎಫ್‌ಐಆರ್ ದಾಖಲು

ಜೈಪುರ: ಪ್ರವಾದಿ ಮೊಹಮ್ಮದ್ ಕುರಿತು ನೀಡಿದ ಹೇಳಿಕೆಗೆ ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡುವ ಯಾರಿಗಾದರೂ ತನ್ನ ಮನೆಯನ್ನು ಉಡುಗೊರೆಯಾಗಿ ನೀಡಲು ವೀಡಿಯೊದಲ್ಲಿ ಆಫರ್ ನೀಡಿದ ನಂತರ ಅಜ್ಮೀರ್ ದರ್ಗಾದಲ್ಲಿ ಆ ಮೌಲ್ವಿಯ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ದರ್ಗಾ ‘ಖಾದಿಮ್’ ಸಲ್ಮಾನ್ ಚಿಶ್ತಿ ವಿರುದ್ಧ ರಾಜಸ್ಥಾನ ಪೊಲೀಸರು ಸೋಮವಾರ ರಾತ್ರಿ ಎಫ್‌ಐಆರ್ … Continued

ಹಿಂದೂ ದೇವತೆಗಳ ಚಿತ್ರಗಳಿರುವ ಪೇಪರ್‌ನಲ್ಲಿ ಸುತ್ತಿ ಕೋಳಿ ಮಾಂಸ ಮಾರುತ್ತಿದ್ದ ವ್ಯಕ್ತಿಯ ಬಂಧನ

ನವದೆಹಲಿ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಹಿಂದೂ ದೇವತೆಗಳ ಚಿತ್ರಗಳಿರುವ ಪೇಪರ್‌ನಲ್ಲಿ ಕೋಳಿ ಮಾಂಸ ಸುತ್ತಿ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಮತ್ತು ಪೊಲೀಸ್ ತಂಡದ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ತಾಲಿಬ್ ಹುಸೇನ್ ತನ್ನ ಅಂಗಡಿಯಿಂದ ಕೋಳಿ ಮಾಂಸವನ್ನು ಹಿಂದೂ ದೇವರು ಮತ್ತು … Continued

ತಿರುಪತಿ ದೇವಸ್ಥಾನದಲ್ಲಿ 6 ಕೋಟಿ ರೂ. ದಾಟಿದ ಒಂದು ದಿನದ ಕಾಣಿಕೆ ಹುಂಡಿ ಸಂಗ್ರಹ

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಇತಿಹಾಸದಲ್ಲಿಮೂರನೇ ಬಾರಿಗೆ ಕಾಣಿಕೆ ಹುಂಡಿ ಸಂಗ್ರಹದಲ್ಲಿ  ದಾಖಲೆ ಮಾಡಿದೆ. ಸೋಮವಾರ ಒಂದೇ ದಿನದಲ್ಲಿ ಟಿಟಿಡಿಯ ಹುಂಡಿಯ ಆದಾಯ ಬರೋಬ್ಬರಿ 6.18 ಕೋಟಿ ರೂ.ಗಳಾಗಿವೆ. ಹುಂಡಿಯ ಆದಾಯ ಮೂರನೇ ಬಾರಿಗೆ ಒಂದೇ ದಿನಕ್ಕೆ 6 ಕೋಟಿ ರೂ. ಗಳನ್ನು ದಾಟಿದೆ. ಏಪ್ರಿಲ್ 1, 2012 ರಂದು 5.73 ಕೋಟಿ ರೂ.ಗಳು … Continued

‘ಆಕ್ಷೇಪಾರ್ಹ’ ಪೋಸ್ಟರ್‌ಗಾಗಿ ಕಾಳಿ ನಿರ್ಮಾಪಕರ ವಿರುದ್ಧ ದೆಹಲಿ, ಉತ್ತರ ಪ್ರದೇಶದಲ್ಲಿ ಎಫ್‌ಐಆರ್

ನವದೆಹಲಿ: ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವ ಪೋಸ್ಟರ್‌ ಪ್ರಕರಣಕ್ಕೆ ಸಂಬಂಧಿಸದಂತೆ ದೆಹಲಿ ಪೊಲೀಸರು ಮತ್ತು ಉತ್ತರ ಪ್ರದೇಶ ಪೊಲೀಸರು ‘ಕಾಳಿ’ ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ಗಳು ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳದಲ್ಲಿ ಅಪರಾಧ, ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು ಮತ್ತು ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದ ಆರೋಪಗಳನ್ನು ಹೊಂದಿವೆ. ಚಿತ್ರ ನಿರ್ಮಾಪಕಿ … Continued