ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತ ಖಂಡಿಸಿ ಮುಂದುವರೆದ ಪ್ರತಿಭಟನೆ

ಮ್ಯನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿದೆ. ಜನರು ಬೀದಿಗಿಳಿದು ಮಿಲಿಟರಿ ಆಡಳಿತವನ್ನು ವಿರೋಧಿಸುತ್ತಿದ್ದಾರೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೋರಾಟ ತೀವ್ರಗೊಂಡಿರುವ ಯಾಂಗೂನ್‌ಗೆ ದೊಡ್ಡ ಸಂಖ್ಯೆಯ ಸೇನಾ ಪಡೆಗಳನ್ನು ಕಳಿಸಲಾಗುತ್ತಿದೆ. ಹಿಂದೆ ಕೂಡ ಹಲವು ಬಾರಿ ಸೇನೆ … Continued

೧೦ ಲಕ್ಷ ವ್ಯಾಕ್ಸಿನ್‌ ಹಿಂಪಡೆಯಲು ಸೀರಂ ಇನ್ಸ್ಟಿಟ್ಯೂಟ್‌ಗೆ ದಕ್ಷಿಣ ಆಫ್ರಿಕಾ ಮನವಿ

ಅಸ್ಟ್ರಾಜೆನೆಕಾ ಅವರ ಶಾಟ್ ಬಳಕೆಯನ್ನು ತಡೆಹಿಡಿಯುವುದಾಗಿ ದೇಶ ಹೇಳಿದ ಒಂದು ವಾರದ ನಂತರ ಫೆಬ್ರವರಿ ಆರಂಭದಲ್ಲಿ ಕಂಪನಿಯು ಕಳುಹಿಸಿದ ಒಂದು ಮಿಲಿಯನ್ ಸಿಒವಿಐಡಿ -19 ವ್ಯಾಕ್ಸಿನ್ ಪ್ರಮಾಣವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ದಕ್ಷಿಣ ಆಫ್ರಿಕಾವು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಕೇಳಿದೆ ಎಂದು ದಿ ಎಕನಾಮಿಕ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ, ಅಸ್ಟ್ರಾಜೆನೆಕಾ ಶಾಟ್ ಅನ್ನು ಉತ್ಪಾದಿಸುತ್ತಿರುವ … Continued

ಅವಿಜಿತ್ ರಾಯ್ ಹತ್ಯೆ ಪ್ರಕರಣ: ಬಾಂಗ್ಲಾದಲ್ಲಿ ಐವರು ಭಯೋತ್ಪಾದಕರಿಗೆ ಮರಣದಂಡನೆ

  2015ರಲ್ಲಿ ಬಾಂಗ್ಲಾದೇಶ ಮೂಲದ ಅಮೆರಿಕ ಬ್ಲಾಗರ್ ಅವಿಜಿತ್ ರಾಯ್ ಅವರ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಸೇನಾ ಮೇಜರ್ ಸೇರಿದಂತೆ ನಿಷೇಧಿತ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪಿನ ಐವರು ಸದಸ್ಯರಿಗೆ ಮರಣದಂಡನೆ ಮತ್ತು ಆರನೇ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 26, 2015 ರಂದು ಡಾಕಾ ವಿಶ್ವವಿದ್ಯಾಲಯದಲ್ಲಿ ಪುಸ್ತಕ ಮೇಳ ತೊರೆದ ನಂತರ 42 … Continued

ನೇಪಾಳದಲ್ಲಿ ನೂತನ ವಿದೇಶ ಪ್ರವಾಸ ನೀತಿ ಖಂಡಿಸಿ ಬೀದಿಗಿಳಿದ ಮಹಿಳೆಯರು

ನೇಪಾಳದಲ್ಲಿ ಮಹಿಳೆಯರ ವಿದೇಶಿ ಪ್ರವಾಸ ನೀತಿಗೆ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ನೇಪಾಳದಲ್ಲಿ ೪೦ ವರ್ಷದೊಳಗಿನ ಮಹಿಳೆಯರು ವಿದೇಶಕ್ಕೆ ತೆರಳುವಾಗ ಪಾಲಕರಿಂದ (ಕಡ್ಡಾಯವಾಗಿ ಪುರುಷರು) ಪ್ರವಾಸದ ಉದ್ದೇಶ ತಿಳಿಸುವ ಅನುಮತಿ ಪತ್ರ ತರಬೇಕೆಂದು ಪ್ರವಾಸ ನೀತಿಯಲ್ಲಿ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ದೇಶಾದ್ಯಂತ ವಿವಿಧೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ … Continued

ಸಾಲ ಮರುಪಾವತಿ ವಿಫಲ: ಬಿ.ಆರ್‌.ಶೆಟ್ಟಿ ಆಸ್ತಿ ಮುಟ್ಟುಗೋಲಿಗೆ ಲಂಡನ್‌ ನ್ಯಾಯಾಲಯ ಆದೇಶ

ದುಬೈ: ದುಬೈನ ಬ್ಯಾಂಕ್‌ಗಳಿಂದ ಪಡೆದ ಸಾಲ ಮಾರುಪಾವತಿ ಮಾಡಲು ವಿಫಲವಾಗಿರುವ, ಕರ್ನಾಟಕ ಮೂಲಕ ದುಬೈ ಉದ್ಯಮಿ ಬಿ.ಆರ್ ಶೆಟ್ಟಿಯವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಎಂದು ಲಂಡನ್‌ ನ್ಯಾಯಾಲಯ ಆದೇಶಿಸಿದೆ. ದುಬೈನ ದೊಡ್ಡ ಆರೋಗ್ಯ ಸೇವಾ ಕಂಪನಿಯಾಗಿರುವ ಎನ್‌ಎಂಸಿ ಹೆಲ್ತ್‌ ಕೇರ್‌ನ ಮಾಲೀಕರಾಗಿದ್ದ ಬಿ.ಆರ್‌ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್‌ ಮುಹೈರಿ ಹಾಗೂ ಸಯೀದ್ ಅಲ್‌ ಖುಬೈಸಿ, … Continued

ಪ್ಲಾಸ್ಟಿಕ್‌, ಗಾಜಿನ ಮೇಲೆ ಹೆಚ್ಚು ಕಾಲ ಬದುಕುವ ಕೊರೊನಾ ಸೋಂಕು: ಐಐಟಿ ಸಂಶೋಧನೆ

ಕೊರೊನಾ ಸೋಂಕು ಕಾಗದ ಹಾಗೂ ಬಟ್ಟೆಗೆ ಹೋಲಿಕೆ ಮಾಡಿದರೆ ಪ್ಲಾಸ್ಟಿಕ್‌ ಹಾಗೂ ಗಾಜಿನ ಮೇಲ್ಮೈ ಮೇಲೆ ಹೆಚ್ಚು ಕಾಲ ಬದುಕುಳಿಯುತ್ತದೆ ಎಂದು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಬಾಂಬೆ ಸಂಶೋಧಕರು ತಿಳಿಸಿದ್ದಾರೆ. ಭೌತಶಾಸ್ತ್ರದ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟಗೊಂಡ ಪ್ರಬಂಧದಲ್ಲಿ ಈ ಮಹತ್ವದ ವಿಷಯವನ್ನು ತಿಳಿಸಲಾಗಿದೆ. ಗಾಜು ಹಾಗೂ ಪ್ಲಾಸ್ಟಿಕ್‌ ಮೇಲೆ ಕೊವಿಡ್‌-೧೯ ಸೋಂಕು ಹೆಚ್ಚು … Continued

ಮತ್ತೆ ಕಾಣಿಸಿಕೊಂಡ ಎಬೊಲಾ: ಮೂವರ ಸಾವು

3 ಜನರು ಗಿನಿಯಾದಲ್ಲಿ ಎಬೊಲದಿಂದ ಮೃತಪಟ್ಟಿದ್ದಾರೆ. 2016 ರ ನಂತರದಲ್ಲಿ ಇದು ಎಬೊಲಾದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಗಿನಿಯಾದ ಆರೋಗ್ಯ ಅಧಿಕಾರಿಗಳು ಭಾನುವಾರ ಅಲ್ಲಿ ಕನಿಷ್ಠ ಮೂವರು ಎಬೊಲಾದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ಕೊನೆಗೊಂಡ ವಿಶ್ವದ ಮಾರಕ ಎಬೊಲ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಮೂರು ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಗಿನಿಯಾ ಕೂಡ … Continued

ಶ್ರೀಲಂಕಾ ತಮಿಳರ ಸಮಾನತೆ-ನ್ಯಾಯಕ್ಕೆ ಭಾರತ ಬದ್ಧ: ಮೋದಿ

ಶ್ರೀಲಂಕಾದಲ್ಲಿ ವಾಸಿಸುವ ತಮಿಳರ ಹಕ್ಕುಗಳ ವಿಷಯವನ್ನು ಭಾರತವು ನೆರೆಯ ದೇಶದ ಸರ್ಕಾರದೊಂದಿಗೆ ಸತತವಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ‘ಅವರು ಸಮಾನತೆ, ನ್ಯಾಯದೊಂದಿಗೆ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಆಡಳಿತವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಭಾಷಣ ಮಾಡಿದ ಮೋದಿ, ಶ್ರೀಲಂಕಾದಲ್ಲಿ ‘ತಮಿಳು … Continued

ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊದಲ ಭಾರತದ ಹುಡುಗಿ

ಉಡುಪಿ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಹಳೆಯ ವಿದ್ಯಾರ್ಥಿ ರಶ್ಮಿ ಸಮಂತ್ ಗುರುವಾರ ಆಕ್ಸ್‌ಫರ್ಡ್ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆನ್ಸಿಯ ಪ್ರತಿಷ್ಠಿತ ಸ್ಥಾನವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಇವರು. ಪ್ರಾಸಂಗಿಕವಾಗಿ, ಐತಿಹಾಸಿಕ ಗೆಲುವಿನಲ್ಲಿ, ಅವರು ಈ ಹುದ್ದೆಗೆ ಇತರ ಮೂರು ಅಭ್ಯರ್ಥಿಗಳ … Continued

ಶೇಮ್‌ ಆನ್‌ ಯು: ಮ್ಯಾನ್ಮಾರ್‌ನಲ್ಲಿ ಚೀನಾ ವಿರುದ್ಧ ಪ್ರತಿಭಟನೆ

ಮ್ಯಾನ್ಮಾರ್‌: ಒಮ್ಮತದಿಂದ ‘ಶೇಮ್ ಆನ್ ಯು ಚೀನಾ’ ಎಂದು ಕೂಗುತ್ತ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರಕ್ಕೆ ಬೀಜಿಂಗ್ ಬೆಂಬಲ ನೀಡುವುದನ್ನು ವಿರೋಧಿಸಿ ಯುವಕರು ಭಾನುವಾರ ಯಾಂಗೊನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮ್ಯಾನ್ಮಾರ್ ನೌ ಪ್ರಕಾರ, ಯುವ ಪ್ರತಿಭಟನಾಕಾರರು ಕೈಯಿಂದ ಮತ್ತು ಮುದ್ರಿತ ಫಲಕಗಳನ್ನು ಹಿಡಿದಿಕೊಂಡು ಚೀನಾವು … Continued