ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರ ನಿರಾಕರಣೆ : ಸರ್ಕಾರದಿಂದ ಮನವೊಲಿಸುವ ಯತ್ನ

ಬೆಂಗಳೂರು: ಜನವರಿ 22 ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ. ರಾಜ್ಯಪಾಲರ ಈ ಅನಿರೀಕ್ಷಿತ ನಿರ್ಧಾರದ ಬೆನ್ನಲ್ಲೇ, ರಾಜ್ಯ ಸರ್ಕಾರವು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿದೆ. ರಾಜ್ಯಪಾಲರ ಈ ನಿರ್ಧಾರಕ್ಕೆ ನಿಖರವಾದ ಕಾರಣಗಳು ಅಧಿಕೃತವಾಗಿ ಇನ್ನು ಬಹಿರಂಗವಾಗಿಲ್ಲ. ರಾಜ್ಯದ ಕಾಂಗ್ರೆಸ್‌ ಸರ್ಕಾರದ … Continued

ಮೊಟ್ಟೆ ಕರಿ ವಿಚಾರಕ್ಕೆ ಜಗಳ : ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡತಿ…!

ಘಾಜಿಯಾಬಾದ್ : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಪತ್ನಿಯೇ ತನ್ನ ಗಂಡನ ನಾಲಿಗೆಯನ್ನು ಕಚ್ಚಿ ತುಂಡರಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಬೇಗಮಾಬಾದ್ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದಾಗಿ 32 ವರ್ಷದ ವಿಪಿನ್ ಎಂಬ ಯುವಕ ತನ್ನ ಮಾತು ಹಾಗೂ ನಾಲಿಗೆಯನ್ನು ಕಳೆದುಕೊಳ್ಳುವಂತಾಗಿದೆ. ಸೋಮವಾರ … Continued

ಸಂಸದ ಬಿವೈ ರಾಘವೇಂದ್ರ ಕಾರಿಗೆ ವಾಹನ ಡಿಕ್ಕಿ

ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರ ಇನ್ನೋವಾ ಕಾರಿಗೆ ಮತ್ತೊಂದು ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆಎಂದು ವರದಿಯಾಗಿದೆ. ಅವರು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಲಭ್ಯವಾದ ಮಾಹಿತಿ ಪ್ರಕಾರ, ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದ ರಾಘವೇಂದ್ರ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಮುಂದಿದ್ದ ಕಾರಿನ ಎಸ್ಕಾರ್ಟ್ … Continued

ಶಿರಸಿಯಲ್ಲಿ ಜ.22ರಿಂದ ಐದು ದಿನಗಳ ರೋಟರಿ ಆಹಾರ ಮೇಳ-ಆಲೆಮನೆ ಉತ್ಸವ

ಶಿರಸಿ : ನಾಲ್ಕನೇ ವರ್ಷದ ರೋಟರಿ ಆಹಾರ ಮೇಳ ಹಾಗೂ ಆಲೆಮನೆ ಉತ್ಸವವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿಕಾಸಾಶ್ರಮ ಮೈದಾನದಲ್ಲಿ ಜ.೨೨ರಿಂದ ೨೬ರವರೆಗೆ ನಡೆಯಲಿದೆ. ರೋಟರಿ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ ನಾಯ್ಕ ಹಾಗೂ ಸಂಚಾಲಕ ಡಾ.ದಿನೇಶ ಹೆಗಡೆ ಮತ್ತಿತರರು ಈ ಬಗ್ಗೆ ಮಾಹಿತಿ ನೀಡಿದರು. ಆಲೆಮನೆ ಉತ್ಸವವು … Continued

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಅವಿರೋಧ ಆಯ್ಕೆ

ಬೆಂಗಳೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೂತನ ಅಧ್ಯಕ್ಷರಾಗಿ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಆಯ್ಕೆಯಾಗಿದ್ದಾರೆ ಎಂದು ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ತಿಳಿಸಿದ್ದಾರೆ. ಶಮಾನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಹಾಸಭಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಈಶ್ವರ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು … Continued

ಅಸಭ್ಯ ವೀಡಿಯೊ ವೈರಲ್ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್ ಅಮಾನತು

ಬೆಂಗಳೂರು: ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆಗಿನ ಅಸಭ್ಯ ವೀಡಿಯೊ ವೈರಲ್ ಆದ ನಂತರರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ (Ramachandra rao) ಅವರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸೋಮವಾರ ಮಧ್ಯಾಹ್ನದ (ಜನವರಿ 19) ಹೊತ್ತಿಗೆ 10 ದಿನಗಳ ಕಡ್ಡಾಯ ರಜೆ ಮೇಲೆ … Continued

ಡಿಜಿಪಿ ರಾಮಚಂದ್ರ ರಾವ್ ವೈರಲ್‌ ವೀಡಿಯೊ; ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಳಗಾವಿ: ಹಿರಿಯ ಐಪಿಎಸ್ ಅಧಿಕಾರಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್‌ ಅವರು ಕಚೇರಿಯಲ್ಲೇ ಮಹಿಳೆಯೊಂದಿಗೆ ಸರಸವಾಡಿದ್ದಾರೆ  ಎಂಬ ಆರೋಪಿತ ವೀಡಿಯೊ ವೈರಲ್​​ ಆಗಿದ್ದು, ಈ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಸೋಮವಾರ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿರುವಾಗಲೇ ತಮ್ಮ ಕಚೇರಿಯ ಒಳಗಡೆ ಮಹಿಳೆಯನ್ನು ತಬ್ಬಿಕೊಂಡಿರುವ … Continued

ಕಚೇರಿಯಲ್ಲೇ ಉನ್ನತ ಪೊಲೀಸ್‌ ಅಧಿಕಾರಿ ಸರಸದ ವೀಡಿಯೊ ವೈರಲ್‌ ;ಆರೋಪ ಅಲ್ಲಗಳೆದ ಡಿಜಿಪಿ

ಬೆಂಗಳೂರು: ಕಚೇರಿಯಲ್ಲಿರುವಾಗಲೇ ಕರ್ನಾಟಕ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆ ಜೊತೆ ಸರಸವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಿಜಿಪಿ ರಾಮಚಂದ್ರ ರಾವ್‌ (DGP Ramachandra Rao) ಅವರು ಮಹಿಳೆ ಜೊತೆ ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸವಾಡಿದ್ದು ಎನ್ನಲಾದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಮಚಂದ್ರರಾವ್ ಸದ್ಯ ಡಿಸಿಆರ್ ಇ ಡಿಜಿಪಿಯಾಗಿದ್ದು … Continued

ಬೆಂಗಳೂರು : ಕಾಲೇಜು ಬಸ್‌ ಡಿಕ್ಕಿ ಹೊಡೆದು ಶಾಲೆಗೆ ಹೋಗುತ್ತಿದ್ದ ತಾಯಿ -ಮಗ ಸಾವು ; ಚಾಲಕ ಪರಾರಿ

ಬೆಂಗಳೂರು : ವಿವೇಕ ನಗರದ ಬಳಿ ವೇಗವಾಗಿ ಬಂದ ಕಾಲೇಜು ಬಸ್ಸೊಂದು ಡಿಕ್ಕಿ ಹೊಡೆದಿದ್ದರಿಂದ 37 ವರ್ಷದ ಮಹಿಳೆ ಮತ್ತು ಅವರ ಮಗ ಸಾವಿಗೀಡಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ವಿವೇಕನಗರ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಆಂಧ್ರಪ್ರದೇಶದ ಮೂಲದ, ಆರ್ಮಿ ಪಬ್ಲಿಕ್ ಶಾಲೆಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಂಗೀತಾ … Continued

ಲಕ್ಕುಂಡಿ : ಉತ್ಖನನದ ವೇಳೆ ಪುರಾತನ ಶಿವಲಿಂಗ ಪತ್ತೆ

ಗದಗ:  ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಉತ್ಖನನ ಸ್ಥಳ ಪಕ್ಕದ ಗೋಡೆಯಲ್ಲಿ ಪುರಾತನ ಕಾಲದ ಶಿವಲಿಂಗವೊಂದು ಪತ್ತೆಯಾಗಿದೆ. ಲಕ್ಕುಂಡಿಯಲ್ಲಿನ ಕೋಟೆ ಗೋಡೆಯ ಪಕ್ಕದಲ್ಲಿದ್ದ ಶಾಲಾ ಕಟ್ಟಡವನ್ನು ಕೆಡಹುವಾಗ ಅಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ. ಲಕ್ಕುಂಡಿಯಲ್ಲಿ ಮನೆಬಳಿ ಸಿಕ್ಕ ಆಭರಣಗಳನ್ನು ಕುಟುಂಬವೊಂದು ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಗ್ರಾಮದಲ್ಲಿ ಉತ್ಖನನ ಕಾರ್ಯವನ್ನು (Lakkundi … Continued