ಸ್ನೇಹಿತನ ಕಾಪಾಡಲು ಹೋಗಿ ಇಬ್ಬರು ಯುವಕರು ನೀರು ಪಾಲು

ಕೊಪ್ಪಳ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ರಾಜೇಶಕುಮಾರ್(26) ಮತ್ತು ಮಧುಕಿರಣ್ (25) ಎಂದು ಗುರುತಿಸಲಾಗಿದೆ. ಇವರು ಹೈದರಾಬಾದ್‌ ಮೂಲದವರಾಗಿದ್ದಾರೆ. ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆಯ ನಂತರ ಮೃತ ದೇಹ ಸಿಕ್ಕಿದೆ. ಪ್ರವಾಸಕ್ಕೆ ಬಂದಿರುವ ನಾಲ್ವರು … Continued

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಗಲ್ಫ್ ಇಸ್ಲಾಮಿಕ್ ಹೂಡಿಕೆಯ ಕಚೇರಿ: 3 ವರ್ಷಗಳಲ್ಲಿ 3500 ಕೋಟಿ ರೂ. ‌ಬಂಡವಾಳ ಹೂಡಿಕೆ

ದುಬೈ: ಭಾರತ ಹಾಗೂ ‌ ಯುನೈಟೆಡ್ ‌ಅರಬ್ ಯಮಿರೆಟ್ಸ್ ( ಯುಎಇ) ನಡುವೆ ಹೂಡಿಕೆ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲು ಗಲ್ಫ್ ಇಸ್ಲಾಮಿಕ್ ಹೂಡಿಕೆ ( GII) ತನ್ನ ಕಚೇರಿಯನ್ನು ರಾಜಧಾನಿ ‌ಬೆಂಗಳೂರಿನಲ್ಲಿ ತೆರೆಯಲು ಮುಂದೆ ‌ಬಂದಿದೆ. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ,ಹಾಗೂ ಐಟಿ ಮತ್ತು ಬಿಟಿ ಸಚಿವ … Continued

ಇಂದಿನ ಕಲುಷಿತ ರಾಜಕಾರಣದಲ್ಲಿ ಎಂ.ಪಿ.ಕರ್ಕಿ ಡಾಕ್ಟ್ರು ಎಂಬ ಅಪರೂಪದ ಪರಿಶುದ್ಧ ರಾಜಕಾರಣಿ

ಕಾರವಾರ: ನೇರ ನಡೆ, ನುಡಿ ವ್ಯಕ್ತಿತ್ವದ ಅತ್ಯಂತ ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ, ಮಾಜಿ ಶಾಸಕ ಡಾ. ಎಂ. ಪಿ. ಕರ್ಕಿಯಂಥವರು ಈಗಿನ ರಾಜಕಾರಣದಲ್ಲಿ ಹುಡುಕಿದರೂ ಸಿಗುವುದು ಕಷ್ಟ. ಕುಮಟಾ -ಹೊನ್ನಾವರ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಪಕ್ಷ ರಾಜಕಾರಣದಾಚೆಗೂ ಮೀರಿ ಅಪಾರ ಗೌರವ ಪಡೆದಿದ್ದು ಅವರ ಈ ಗುಣಗಳಿಂದಾಗಿಯೇ. ಅವರಿಗೆ ಅವರ … Continued

ನೇರ -ಸರಳ ವ್ಯಕ್ತಿತ್ವದ, ಧೀಮಂತ ನಾಯಕ, ಪ್ರಾಮಾಣಿಕ ರಾಜಕಾರಣಿ ಡಾ.ಎಂ.ಪಿ.ಕರ್ಕಿ ನಿಧನ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಕಂಡ ಧೀಮಂತ ರಾಜಕಾರಣಿ ಹಾಗೂ ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ಹಾಗೂ ಖ್ಯಾತ ವೈದ್ಯ ಡಾ. ಎಂ.ಪಿ.ಕರ್ಕಿ (೮೬) ತಮ್ಮ ವಯೋಸಹಜ ಅನಾರೋಗ್ಯದಿಂದ ಇಂದು (ಸೋಮವಾರ) ಸಂಜೆ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಡಿಸ್ಟಾರ್ಜ್ ಮಾಡಿ ಹೊನ್ನಾವರಕ್ಕೆ ಕರೆತಂದು ಸೇಂಟ್ ಇಗ್ನೇಷಿಯಸ್ … Continued

ಹುಬ್ಬಳ್ಳಿ: ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನದ ಆರೋಪ: ಸೋಮು ಅವರಾದಿ ಪೊಲೀಸ್ ವಶಕ್ಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ಮಾಡಿದ ಆರೋಪದ ಮೇಲೆ ಪಾಸ್ಟರ್‌ ಸೋಮು ಅವರಾದಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವನಗರ ಎಪಿಎಂಸಿ ಠಾಣೆ ಪೊಲೀಸರು ಸೋಮು ಅವರಾದಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ನವನಗರದ ಚರ್ಚ್ ನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸಲು ಪ್ರಯತ್ನಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಚರ್ಚಿಗೆ ತೆರಳಿದ್ದ ಹಿಂದೂಪರ ಸಂಘಟನೆಗಳ … Continued

ನವೆಂಬರ್ ತಿಂಗಳಿಂದ ಶಾಲಾ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ

ಬೆಂಗಳೂರು: ರಾಜ್ಯದಲ್ಲಿ 1-5ನೇ ತರಗತಿಯನ್ನ ಪ್ರಾರಂಭ ಮಾಡುತ್ತಿದ್ದೇವೆ. ಅಕ್ಟೋಬರ್ 25 ರಿಂದ 1-5ನೇ ತರಗತಿ ವರೆಗೆ ಮಾರ್ಗಸೂಚಿಯನ್ನ ಪಾಲಿಸಿ ತರಗತಿ ಪ್ರಾರಂಭಿಸುತ್ತಿದ್ದೇವೆ. ಕೊವಿಡ್​ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಹಿನ್ನೆಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಯನಾಡಿದ ಅವರು, ಅನೇಕ ತಾಲೂಕುಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 0 ರಷ್ಟಿದೆ. ಇವೆಲ್ಲವನ್ನ … Continued

ಭಗವಂತನ ಅನುಭಾವದಲ್ಲಿ ಬೆರೆತರೆ ಜೀವನಕ್ಕೆ ಮುಕ್ತಿ: ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳು

ಯಾದಗಿರಿ: ಮನುಷ್ಯ ನಿತ್ಯ ಜೀವನದ ಜಂಜಾಟದಿಂದ ಮಾನಸಿಕವಾಗಿ ಖಿನ್ನನಾಗುತ್ತಿದ್ದಾನೆ. ಇದರಿಂದ ಮುಕ್ತಿ ಹೊಂದಬೇಕಾದರೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆ ಕೂಡಲಿಯ ಆರ್ಯ ಅಕ್ಷೋಭ್ಯ ಮಠದ ಪೀಠಾಧಿಪತಿ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳರು ಹೇಳಿದರು. ನಗರದ ಬಿ.ಶ್ರೀನಿವಾಸರಾವ್ ಕುಲಕರ್ಣಿ ನಿವಾಸದಲ್ಲಿ ನಡೆದ ವೈಕುಂಠ ಶ್ರೀರಾಮದೇವರ ಪೂಜಾ ಕಾರ್ಯಕ್ರಮದ ನಂತರ ಭಕ್ತರಿಗೆ ಆಶೀರ್ವಚನ ನೀಡಿದ ಅವರು, … Continued

ಸರ್ಕಾರದ ಮಹತ್ವದ ನಿರ್ಧಾರ..:ಅಕ್ಟೋಬರ್ 25ರಿಂದ 1 ರಿಂದ 5ರ ವರೆಗೆ ಭೌತಿಕ ತರಗತಿ ಶಾಲೆ ಆರಂಭ

ಬೆಂಗಳೂರು: ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿಗಳಿಗೆ ಶಾಲೆಯಲ್ಲಿ ಭೌತಿಕ ತರಗತಿಗಳು  ಆರಂಭ ಆಗಲಿದೆ. ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆಯಿಂದ ತೀರ್ಮಾನ ಮಾಡಲಾಗಿದೆ. ಶಾಲೆ ಆರಂಭಕ್ಕೆ ಕೊವಿಡ್​ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. 1 ರಿಂದ 5ನೇ ತರಗತಿವರೆಗೆ ಶಾಲೆ ಆರಂಭಕ್ಕೆ ತಜ್ಞರ ಸಮ್ಮತಿ ಒಪ್ಪಿಗೆ ನೀಡಿದೆ. … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್‌ 22ರ ವರೆಗೂ ಮಳೆ ಮುಂದುವರಿಕೆ..!

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 22ರ ವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಕರಾವಳಿ ಜಿಲ್ಲೆಗಳಲ್ಲಿ ತೀವ್ರವಾಗಿರಲಿದ್ದು, ಹೀಗಾಗಿ ಕರಾವಳಿಯ ಹಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, … Continued

ಡೀಸೆಲ್‌ ಬೆಲೆ ವಿಪರೀತ ಹೆಚ್ಚಳ: ಅ.28ರಿಂದ ಲಾರಿ ಮುಷ್ಕರದ ಎಚ್ಚರಿಕೆ..!

ಬೆಂಗಳೂರು: ಸರ್ಕಾರ ಕೂಡಲೇ ಡೀಸೆಲ್ ಮೇಲಿನ ತೆರಿಗೆ ಇಳಿಸಬೇಕು. ಇಲ್ಲದಿದ್ದರೆ ಇದೇ 28ರಿಂದ ಲಾರಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘ ಹೇಳಿದೆ. ಮಿತಿಮೀರಿದ ತೆರಿಗೆ ವಿಸುತ್ತಿರುವುದರಿಂದ ಲಾರಿ ಉದ್ಯಮ ತೀವ್ರ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಗಿರುವುದರಿಂದ ಇದೇ 23ರಂದು ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ … Continued