ಮುದ್ದೆಯಲ್ಲಿ ವಿಷ ಹಾಕಿ ತಂದೆ, ತಾಯಿ ಸೇರಿ ನಾಲ್ವರ ಹತ್ಯೆ ಮಾಡಿದಳೇ ಬಾಲಕಿ..!

ಚಿತ್ರದುರ್ಗ: 17 ವರ್ಷದ ಬಾಲಕಿಯೊಬ್ಬಳು ಇಡೀ ಕುಟುಂಬಕ್ಕೆ ಮುದ್ದೆಯಲ್ಲಿ ವಿಷ ಬೆರೆಸಿ ನಾಲ್ವರ ಹತ್ಯೆಗೈದಿರುವ ಆಘಾತಕಾರಿ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ಜುಲೈ 12ರಂದು ಈ ಘಟನೆ ನಡೆದಿತ್ತು.  ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಬಂದ ನಂತರ ಮುದ್ದೆಯಲ್ಲಿ ವಿಷ ಬೆರಸಿರುವುದು ಈಗ ಬಯಲಾಗಿದೆ. ಪೋಷಕರ ಬೈಗುಳ, ತನ್ನನ್ನು ಕೂಲಿಗೆ … Continued

ಕನ್ನಡ ಚಿತ್ರರಂಗದ ಹಿರಿಯ ನಟ, ʼಪಾಪ ಪಾಂಡು’ ಖ್ಯಾತಿಯ ಶಂಕರ್​ ರಾವ್​ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿಯ ನಟ ಶಂಕರ್​ ರಾವ್​  ನಿಧನರಾಗಿದ್ದಾರೆ. ಅವರು ಸೋಮವಾರ (ಅ.18) ಬೆಳಗಿನ ಜಾವ 6.30ರ ಸುಮಾರಿಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಂಕರ್​ ರಾವ್​ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ತುಮಕೂರಿನಲ್ಲಿ ಬಾಲ್ಯ … Continued

ಬೆಳಗಾವಿ: ರಾಜಹಂಸಘಡದಲ್ಲಿ ಯುವಕರಿಬ್ಬರು ನೀರು ಪಾಲು

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿ ನಡೆದ ಬಗ್ಗೆ ವರದಿಯಾಗಿದೆ. ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರ ಪೈಕಿ ಒಬ್ಬ ಯುವಕ ಪಾರಾಗಿದ್ದಾನೆ. ಫೋಟೋ ಶೂಟ್​ಗೆಂದು ರಾಜಹಂಸಘಡ ಕೋಟೆಗೆ ಹೋಗಿದ್ದರು. … Continued

ಗೋಕರ್ಣ: ಈಜಲು ಸಮುದ್ರಕ್ಕೆ ಇಳಿದ ಬೆಂಗಳೂರಿನ ಯುವಕ ನಾಪತ್ತೆ

ಕುಮಟಾ: ಸಮುದ್ರದಲ್ಲಿ ಈಜಲು ಹೋಗಿದ್ದ ಪ್ರವಾಸಿಗನೊಬ್ಬ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಯುವಕನನ್ನು ಬೆಂಗಳೂರು ಮೂಲದ ರವಿ ನಂದನ್ (23) ಎಂದು ಗುರುತಿಸಲಾಗಿದೆ. ಆತನ ಪತ್ತೆಗಾಗಿ ಹುಡುಕಾಟ ನಡೆದಿದೆ. ಭಾನುವಾರ ಬೆಂಗಳೂರಿನಿಂದ ಐದು ಜನ ಯುವಕರು ಪ್ರವಾಸಕ್ಕೆಂದು ಗೋಕರ್ಣಕ್ಕೆ … Continued

ಕರ್ನಾಟಕದಲ್ಲಿ ಭಾನುವಾರ ಕೊರೊನಾ ಸೋಂಕು ಏರಿಕೆ, ಸಾವಿನ ಸಂಖ್ಯೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು (ಭಾನುವಾರ) ಹೊಸದಾಗಿ 326 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 4 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 380 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 9,450 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,83,459 ಕ್ಕೆ ಏರಿಕೆಯಾಗಿದೆ. ಚೇತರಿಸಿಕೊಂಡವರ ಸಂಖ್ಯೆ 29,36,039 … Continued

ಹಳದೀಪುರ: ಬೈಕ್‌-ಸಾರಿಗೆ ಬಸ್‌ ಡಿಕ್ಕಿ, ಬೈಕ್‌ ಸವಾರ ಸಾವು

ಹೊನ್ನಾವರ : ತಾಲೂಕಿನ ಹಳದೀಪುರದ ನವಿಲಗೋಣ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾರಿಗೆ ಬಸ್ -ಬೈಕ್ ಡಿಕ್ಕಿಯಾಗಿ ಬೈಕ್‌ ಸವಾರ ಸಾವಿಗೀಡಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದ ವರದಿಯಾಗಿದೆ. ಸಾರಿಗೆ ಇಲಾಖೆಯ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಮೃತಪಟ್ಟಿದ್ದು ಬೈಕ್‌ ನುಜ್ಜುಗುಜ್ಜಾಗಿದೆ. ಮೃತ ಬೈಕ್ ಸವಾರನನ್ನು ಸಂಕೊಳ್ಳಿಯ ಗಣಪತಿ ಅನಂತ … Continued

ಪೊಲೀಸರಿಗೆ ತ್ರಿಶೂಲ ಕೊಟ್ಟು ಹಿಂಸೆಯ ದೀಕ್ಷೆ ಕೊಡಿ: ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಪೊಲೀಸರ ಡ್ರೆಸ್‌ ಮಾತ್ರ ಯಾಕೆ ಬದಲಾಯಿಸಿದ್ದೀರಿ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ ಎಂದು ಸರ್ಕಾರವನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆ ಮತ್ತು ಉಡುಪಿಯ ಕಾಪು ಠಾಣೆಯ ಸಿಬ್ಬಂದಿ ಕೇಸರಿ ಶಾಲು … Continued

ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನದ ಆರೋಪ: ಆರೋಪಿ ಬಂಧನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

ಹುಬ್ಬಳ್ಳಿ: ಇಲ್ಲಿನ ಭೈರಿದೇವರಕೊಪ್ಪದ ಸರ್ವಧರ್ಮ ಪ್ರಾರ್ಥನಾ ಮಂದಿರದಲ್ಲಿ ಮತಾಂತರಕ್ಕೆ ಪ್ರಚೋದನೆ‌ ಮಾಡುತ್ತಿದ್ದ ಸೋಮಲಿಂಗ ಅವರಾದಿ ಎಂಬವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರು ನವನಗರದ ಪೊಲೀಸ್ ಠಾಣೆ ಮುಂದೆ ಭಾನುವಾರ ಪ್ರತಿಭಟನೆ ‌ನಡೆಸಿದರು. ವಿವಾರದ ವಿಶೇಷ ಪ್ರಾರ್ಥನೆಗೆ ಕರೆದುಕೊಂಡ ಬಂದ 7-8 ಜನರನ್ನು ಮತಾಂತರಕ್ಕೆ ಯತ್ನಿಸಲಾಗಿದೆ ಎಂಬುದು … Continued

ಪ್ರೀತಿಸಿ ಮದುವೆಯಾದವಳ ಕೊಂದು ಅವಳ ಚಿನ್ನಾಭರಣದೊಂದಿಗೆ ಠಾಣೆಗೆ ಬಂದು ಶರಣಾದ ಆರೋಪಿ

ಶಿವಮೊಗ್ಗ: ಪ್ರೀತಿಸಿ ಮದುವೆಯಾದ ಪತ್ನಿಯ ಶೀಲ ಶಂಕಿಸಿದ ಗಂಡ ಆಕೆಯ ಕೊಲೆ ಮಾಡಿದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೆ, ಕೊಲೆ ಮಾಡಿದ ನಂತರ ಪತ್ನಿಯ ಮೈಮೇಲಿದ್ದ ಒಡವೆಗಳೊಂದಿಗೆ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಆಯನೂರು ಮೂಲದ 21 ವರ್ಷದ ಫಿಜಾ ಕೌಸರ್ (21) ಎಂಬವಳು ಪತಿಯಿಂದಲೇ ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಆಯನೂರಿನಿಂದ … Continued

ದುಬೈ:ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಅನಿವಾಸಿ ಭಾರತೀಯರಿಗೆ‌ ಕೈಗಾರಿಕಾ ‌ಸಚಿವ ‌ನಿರಾಣಿ‌ ಆಹ್ವಾನ

ದುಬೈ: ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ರಾಜ್ಯದ ಬೃಹತ್ ‌ಮತ್ತು ಮಧ್ಯಮ ಕೈಗಾರಿಕಾ ‌ ಸಚಿವ ‌ಮುರುಗೇಶ್ ನಿರಾಣಿ‌ ಆಹ್ವಾನಿಸಿದ್ದು, ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ, ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಹೇಳಿದ್ದಾರೆ. ದುಬೈನಲ್ಲಿ ಬಸವ‌ ಸಮಿತಿ ‌ವತಿಯಿಂದ‌ ಏರ್ಪಡಿಸಿದ್ದ ಬಸವ‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ … Continued