ಅಫ್ಘಾನಿಸ್ತಾನ ಶಾಂತಿ ಕುರಿತು ಚರ್ಚೆ : ಎನ್‌ಎಸ್‌ಎ ಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಭಾರತದ ಆಹ್ವಾನ

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತು ಪ್ರಾದೇಶಿಕ ಶಕ್ತಿಗಳ ಜತೆ ಚರ್ಚೆ ನಡೆಸಲು ಭಾರತ ಮುಂದಾಗಿದೆ. ಅಫ್ಘಾನಿಸ್ತಾನ ಭವಿಷ್ಯ ಎಂಬ ವಿಚಾರ ಕುರಿತು ನವೆಂಬರ್ ನಲ್ಲಿ ನವದೆಹಲಿಯಲ್ಲಿ ಪ್ರಾದೇಶಿಕ ಭದ್ರತಾ ಸಂವಾದ ನಡೆಸಲು ತೀರ್ಮಾನಿಸಲಾಗಿದ್ದು, ಈ ಮಹತ್ವಪೂರ್ಣ ಸಭೆಗೆ ರಷ್ಯಾ, ಚೀನಾ, ಇರಾನ್, ಪಾಕಿಸ್ತಾನ, … Continued

ಕೊರೊನಾ ಸಾಂಕ್ರಾಮಿಕ ರೋಗದ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಒಂದೂ ಕೋವಿಡ್ ಸಾವು ದಾಖಲಿಸದ ಮುಂಬೈ..!

ಮುಂಬೈ: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಆರಂಭವಾದ ನಂತರ ಇದೇ ಮದಲ ಬಾರಿಗೆ ಮುಂಬೈ ಭಾನುವಾರ ಒಂದೇ ಒಂದು ಕೋವಿಡ್ -19 ಸಾವನ್ನು ದಾಖಲಿಸಲಿಲ್ಲ. ಟ್ವೀಟ್‌ನಲ್ಲಿ, ಮುಂಬೈ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರು ಮಾರ್ಚ್ 26, 2020 ರ ನಂತರ ಇದೇ ಮೊದಲ ಬಾರಿಗೆ ಮುಂಬೈ ಭಾನುವಾರ ಕೊರೊನಾ ವೈರಸ್ಸಿನಿಂದ ಶೂನ್ಯ ಸಾವುಗಳನ್ನು ವರದಿ … Continued

ಭಾರತದ ತಂಡದ ಮಾಜಿ ಕ್ರಿಕೆಟ್‌ ಆಟಗಾರ ಯುವರಾಜ್ ಸಿಂಗ್ ಬಂಧನ; ವಿಚಾರಣೆ ಬಳಿಕ ಬಿಡುಗಡೆ

ಚಂಡೀಗಡ: ಪರಿಶಿಷ್ಟ ಜಾತಿ ಸಮುದಾಯವನ್ನು ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರನ್ನು ಹರಿಯಾಣದ ಪೊಲೀಸರು ಇಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಲೈವ್ ಚ್ಯಾಟಿಂಗ್ ಮಾಡುವ ವೇಳೆ ಪರಿಶಿಷ್ಟ ಜಾತಿಯ ಯುಜವೇಂದ್ರ ಚಹಲ್ ಅವರನ್ನ ಜಾತಿ ಕಾರಣಕ್ಕೆ … Continued

ಜ್ವರ, ಶೀತಕ್ಕೆ ಚಿಕಿತ್ಸೆ ನೀಡಲು 7 ತಿಂಗಳ ಮಗುವಿಗೆ ಕಬ್ಬಿಣದ ಸರಳಿಂದ ಬರೆ ಎಳೆದ ಮಾಂತ್ರಿಕ..!

ಜೈಪುರ: ಈವಿಜ್ಞಾನ ಹಾಗೂ ತಂತ್ರಜ್ಞಾನದ ಕಾಲದಲ್ಲಿಯೂ ಮೂಢ ನಂಬಿಕೆ ಅನುಸರಿಸುವವರೂ ಇದ್ದಾರೆ. ಇದಕ್ಕೆ ಉದಾಹರಣೆಯಾಗಿ ರಾಜಸ್ಥಾನದ ಭಿಲ್ವಾರಾದಲ್ಲಿ ಘಟನೆಯೊಂದು ನಡೆದಿದ್ದು, ತಾಂತ್ರಿಕನೊಬ್ಬ 7 ತಿಂಗಳ ಗಂಡು ಮಗುವಿಗೆ ಜ್ವರ ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದಾಗಿ ಹೇ ಬಿಸಿ ಕಬ್ಬಿಣ ರಾಡ್‌ನಿಂದ ಬರೆ ಎಳೆದಿದ್ದಾನೆ. ಭಿಲ್ವಾರಾದ ದಾದಾಬರಿ ಕಾಲೋನಿಯಲ್ಲಿ ಮಧ್ಯಪ್ರದೇಶದ ನೆಮಂಚ್ ಮೂಲದ ಕೂಲಿ ಕಾರ್ಮಿಕ ಶಂಭು … Continued

ಕಾಶ್ಮೀರದ ಕುಲ್ಗಾಂನಲ್ಲಿ ಮತ್ತೆ ಇಬ್ಬರು ಸ್ಥಳೀಯೇತರ ಕಾರ್ಮಿಕರ ಗುಂಡಿಕ್ಕಿ ಹತ್ಯೆ ಮಾಡಿದ ಭಯೋತ್ಪಾಕರು, ಎರಡು ದಿನಗಳಲ್ಲಿ ಮೂರನೇ ದಾಳಿ

ಕುಲಗಂ: : ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾನುವಾರ ಭಯೋತ್ಪಾದಕರು ಇಬ್ಬರು ಸ್ಥಳೀಯೇತರ ಕಾರ್ಮಿಕರನ್ನು ಗುಂಡು ಹೊಡೆದು ಕೊಂದಿದ್ದು, ಮತ್ತೊಬ್ಬನನ್ನು ಗಾಯಗೊಳಿಸಿದ್ದಾರೆ. ಕಾಶ್ಮೀರದಲ್ಲಿ ಕಳೆದ 15 ದಿನಗಳಲ್ಲಿ 11 ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಕುಲ್ಗಾಂನ ಲಾರಾನ್ ಗಂಗಿಪೋರ ವನ್ಪೋಹ್ ನಲ್ಲಿ ಕಾರ್ಮಿಕರ ಬಾಡಿಗೆ ವಸತಿಗೃಹ ಪ್ರವೇಶಿಸದ ಬಂದೂಕುಧಾರಿಗಳು ಪ್ರವೇಶಿಸಿದರು ಮತ್ತು ಅವರ ಮೇಲೆ ಗುಂಡು … Continued

ಕೇರಳದಲ್ಲಿ ಮಳೆಗೆ ಕೊಚ್ಚಿಹೋದ ಮೂರು ತಲೆಮಾರುಗಳ ಆರು ಜನರ ಕುಟುಂಬ..!

ತಿರುವನಂತಪುರಂ: ಕೇರಳದ ಕೂಟಕ್ಕಲ್‌ ನ ಕವಳಿಯಲ್ಲಿ  ಇಡೀ ಕುಟುಂಬ – ಅಜ್ಜಿ, ತಂದೆ, ತಾಯಿ ಮತ್ತು ಮೂವರು ಹೆಣ್ಣುಮಕ್ಕಳು – ಅಕ್ಟೋಬರ್ 16 ರ ಶನಿವಾರ ಮಳೆಗೆ ಕೊಚ್ಚಿ ಹೋಗಿದ್ದಾರೆ. ಅಲ್ಲಿ ಶನಿವಾರ ಭೂಕುಸಿತ ಸಂಭವಿಸಿದೆ. ಒಟ್ಟಲಂಗಲ್ ಮಾರ್ಟಿನ್ ಅವರ ಮನೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ, ಮತ್ತು ಅದರೊಂದಿಗೆ ಕುಟುಂಬದ ಆರು ಮಂದಿ ಸಹ. ಅವರಲ್ಲಿ ಮೂವರ … Continued

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ; ವಿಮಾನದಲ್ಲಿ ಬಳಸುವ ಇಂಧನಕ್ಕಿಂತ 30%ಕ್ಕಿಂತ ಹೆಚ್ಚು ದುಬಾರಿ..!

ನವದೆಹಲಿ: ಜನಸಾಮಾನ್ಯರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬಳಸುವ ಪೆಟ್ರೋಲ್‍ನ ಬೆಲೆ ವಿಮಾನಗಳಿಗೆ ಬಳಸುವ ಇಂಧನಕ್ಕಿಂತಲೂ ಈಗ ದುಬಾರಿಯಾಗಿದೆ…! ನಾಔಉ ವಾಹನಗಳಿಎ ಬಳಸುವ ಪೆಟ್ರೋಲ್‌ ದರವು ವಿಮಾನಗಳಲ್ಲಿ ಬಳಸುವ ಒಂದು ಲೀಟರ್ ಟರ್ಬೈನ್ ಇಂಧನ(ಎಟಿಎಫ್)ಕ್ಕಿಂತ .ಶೇ.33ರಷ್ಟು ಹೆಚ್ಚಳವಅಗುವ ಮೂಲಕ ದೇಶದಲ್ಲೇ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಭಾನುವಾರ ಕೂಡ ಪೆಟ್ರೋಲ್, ಡೀಸೆಲ್ ಬೆಲೆ 35 ಪೈಸೆ … Continued

ಬೆಂಗಳೂರಿನಿಂದ ಹೊರಟ ಲಾರಿಯಿಂದ 7 ಕೋಟಿ ರೂ.ಮೌಲ್ಯದ 9,000 ಮೊಬೈಲ್ ಫೋನ್ ಲೂಟಿ…!

ಮಥುರಾ: ಸುಮಾರು 7 ಕೋಟಿ ರೂ.ಗಳ ಮೌಲ್ಯದ 9 ಸಾವಿರ ಮೊಬೈಲ್​ ಫೋನ್​​ಗಳನ್ನು ಒಯ್ಯುತ್ತಿದ್ದ ಬೆಂಗಳೂರು ಮೂಲದ ಟ್ರಕ್​​​ ಅನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ. ಲಾರಿಯನ್ನು ಮಧ್ಯಪ್ರದೇಶದ ಶಿಯೋಪುರ್​​ ಎಂಬಲ್ಲಿ ದುಷ್ಕರ್ಮಿಗಳು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ, ವಾಹನದಿಂದ ಎತ್ತಿ ಎಸೆದಿದ್ದಾರೆ. ಆ ನಂತರ ಲಾರಿಯನ್ನು ಲೂಟಿ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದರೂ ಉತ್ತರಪ್ರದೇಶದ ಮಥುರಾದಲ್ಲಿ … Continued

ಭಾರತದಲ್ಲಿ 14,146 ಕೋವಿಡ್ -19 ಪ್ರಕರಣಗಳು ವರದಿ, ನಿನ್ನೆಗಿಂತ 11.5% ರಷ್ಟು ಕಡಿಮೆ

ನವದೆಹಲಿ: ಭಾನುವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಇತ್ತೀಚಿನ ಕೋವಿಡ್ -19 ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು 14,146 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಇದು ಹಿಂದಿನಕ್ಕಿಂತ ಶೇಕಡಾ 11.5 ರಷ್ಟು ಕಡಿಮೆ. ಭಾರತದಲ್ಲಿ ಒಟ್ಟು ಕೋವಿಡ್ ಕೇಸ್ ಲೋಡ್ 3,40,67,719 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ … Continued

ದಕ್ಷಿಣ ಏಷ್ಯಾದಲ್ಲಿ ದೊಡ್ಡ ಪಾನ್ ಇಸ್ಲಾಮಿಸ್ಟ್ ಕಾರ್ಯಸೂಚಿ ಕಾರ್ಯನಿರ್ವಹಣೆ: ಕಾಶ್ಮೀರದಲ್ಲಿ ಕಾಶ್ಮೀರೇತರರ ಹತ್ಯೆ ಕುರಿತು ಕಾಂಗ್ರೆಸ್‌ನ ಮನೀಶ್ ತಿವಾರಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ನಾಗರಿಕರ ಹತ್ಯೆಗೆ ಭಾನುವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ , ದಕ್ಷಿಣ ಏಷ್ಯಾದಲ್ಲಿ ಒಂದು ದೊಡ್ಡ ಪಾನ್ ಇಸ್ಲಾಮಿಸ್ಟ್ ಕಾರ್ಯಸೂಚಿಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಮುಸ್ಲಿಮರಲ್ಲದವರ ಹತ್ಯೆ, ಬಾಂಗ್ಲಾದೇಶದಲ್ಲಿ ಹಿಂದೂಗಳು ಹತ್ಯೆ ಮತ್ತು ಪೂಂಚ್‌ನಲ್ಲಿ ಭಾರೀ ಒಳನುಸುಳುವಿಕೆ ನಡುವೆ ಒಂಬತ್ತು ಜವಾನರು ಮೃತಪಟ್ಟಿದ್ದಾರೆಯೇ..? ಬಹುಶಃ … Continued