ನಟ ಸುಶಾಂತ ಸಿಂಗ್‌ ಸಾವು: ಡ್ರಗ್ ಆಂಗಲ್ ಪ್ರಕರಣದಲ್ಲಿ ಎನ್‌ಸಿಬಿಯಿಂದ 12,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಲ್ಲಿ ಮಾದಕವಸ್ತು ಸಂಬಂಧಿತ ಕೋನವನ್ನು ತನಿಖೆ ಮಾಡುತ್ತಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಶುಕ್ರವಾರ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ 33 ಆರೋಪಿಗಳ ಹೆಸರು ಇದ್ದು, 200 ಸಾಕ್ಷಿಗಳ ಹೇಳಿಕೆಯನ್ನು ಒಳಗೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. … Continued

ಐಟಿ ಅಧಿಕಾರಿಗಳಿಗೆ ತಾಪ್ಸಿ ಪನ್ನು ಫೋನ್‌ ಡಾಟಾ ಅಳಿಸಿದ ಶಂಕೆ

ಗುರುವಾರ ನಡೆದ ಒಂದು ಪ್ರಮುಖ ಬೆಳವಣಿಗೆಯಲ್ಲಿ, ನಟಿ ತಾಪ್ಸೀ ಪನ್ನು ಅವರು ತಮ್ಮ ಫೋನ್‌ನಿಂದ ‘ಕೆಲವು ಡೇಟಾವನ್ನು’ ಅಳಿಸಿದ್ದಾರೆ ಎಂಬ ಶಂಕೆ ಇದೆಯೆಂದುಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಐಟಿ ಇಲಾಖೆ ಆಕೆಯ ಮನೆ ಮತ್ತು ಕಚೇರಿಯಲ್ಲಿ ದಾಳಿ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. … Continued

ಜಮ್ಮು-ಕಾಶ್ಮೀರ: ಸಹಜ ಸ್ಥಿತಿಗೆ ಮರಳಲು ಭಾರತದ ಕ್ರಮಕ್ಕೆ ಅಮೆರಿಕ ಸ್ವಾಗತ

ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ನಂತರ ಪೂರ್ಣ ಪ್ರಮಾಣದ ಆರ್ಥಿಕ ಮತ್ತು ರಾಜಕೀಯ ಸಹಜ ಸ್ಥಿತಿಗೆ ಮರಳಿಸಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಅಮೆರಿಕ ಸರ್ಕಾರ ಸ್ವಾಗತಿಸಿದೆ. ಭಾರತದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿ ಕಣಿವೆ ರಾಜ್ಯದ ಕೇಂದ್ರ ಪ್ರದೇಶವನ್ನು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಹಜ ಸ್ಥಿತಿಗೆ ಮರಳಿಸಲು ನವದೆಹಲಿ ಕೈಗೊಂಡ ಕ್ರಮಗಳನ್ನು ಬೈಡೆನ್ … Continued

ಸರ್ಕಾರದೊಂದಿಗೆ ಒಟಿಟಿ ಉದ್ಯಮ ಪಾಲುದಾರಿಕೆ: ಜಾವಡೇಕರ್

ನವ ದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಒಟಿಟಿ ಉದ್ಯಮದ ಪ್ರತಿನಿಧಿಗಳನ್ನು ಗುರುವಾರ ಭೇಟಿ ಮಾಡಿದ್ದು, ಸರ್ಕಾರದ ಹೊಸ ಮಾರ್ಗಸೂಚಿಯನ್ನು ಅವರು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರೇಕ್ಷಕರಿಗೆ ವೇದಿಕೆಯ ಉತ್ತಮ ಅನುಭವನ್ನುಂಟು ಮಾಡಲು ಸಚಿವಾಲಯದೊಂದಿಗೆ ಒಟಿಟಿ ಉದ್ಯಮ ಪಾಲುದಾರರಾಗಲಿದ್ದಾರೆ ಎಂದು ಹೇಳಿದ್ದಾರೆ. ಒಟಿಟಿ ಉದ್ಯಮದ ಪ್ರತಿನಿಧಿಗಳ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಎಲ್ಲಾ … Continued

ಶ್ರೀಧರನ್‌ ಕೇರಳ ಸಿಎಂ ಅಭ್ಯರ್ಥಿ ಘೋಷಣೆಯೂ…ಯೂ ಟರ್ನ್‌ ಗೊಂದಲವೂ

  ಕೊಚ್ಚಿ: ಮೆಟ್ರೋ ಮ್ಯಾನ್‌ ಇ ಶ್ರೀಧರನ್‌ ಅವರ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಗೊಂದಲವೇರ್ಪಟ್ಟಿದೆ. ಇ ಶ್ರೀಧರನ್‌ ಅವರು ಕೇರಳದ ಏ.೬ರಂದು ನಡೆಯಲಿರುವ ಕೇರಳದ ವಿಧಾನಸಭೆ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುವಾರ ಬಿಜೆಪಿ ಕೇರಳದ ರಾಜ್ಯಾಧ್ಯಕ್ಷ ಗುರುವಾರ ಘೋಷಣೆ ಮಾಡಿದ ಬೆನ್ನಲ್ಲೇ ಇದು ದೊಡ್ಡ ಸುದ್ದಿಯಾಯಿತು, ಇದು ಸಾಕಷ್ಟು ಸುದ್ದಿಯಾಗುತ್ತಿದ್ದಂತೆಯೇ ದೆಹಲಿಯಲ್ಲಿ … Continued

ಭವಿಷ್ಯ‌ ನಿಧಿ ಠೇವಣಿ ಬಡ್ಡಿ ದರ ಶೇ.8.5

ಉದ್ಯೋಗಿಗಳ ಭವಿಷ್ಯ‌ ನಿಧಿ ಠೇವಣಿಯ ಬಡ್ಡಿ ದರವನ್ನು ಶೇ.8.5 ರಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ. ಮೂಲ ವೇತನದಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಪ್ರಕಾರ ಶೇ.12ರಷ್ಟು ಉದ್ಯೋಗಿಗಳು ಮತ್ತು ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರು ನೀಡಬೇಕಾಗುತ್ತದೆ ಎಂದು ಭವಿಷ್ಯ ನಿಧಿ ಸಂಘಟನೆ ತಿಳಿಸಿದೆ. 2020-21 ನೇ ಸಾಲಿನಲ್ಲಿ ಭವಿಷ್ಯ ನಿಧಿಯ ಠೇವಣಿ ಬಡ್ಡಿದರ ಶೇಕಡಾ 8.5 ರಲ್ಲಿ ಮುಂದುವರಿಸಲು … Continued

ರೈತರ ಆಂದೋಲನಕ್ಕೆ ಧ್ವನಿಯಾಗುವವರ ವಿರುದ್ಧ ಐಟಿ ದಾಳಿ; ರಾಹುಲ್‌

ನವ ದೆಹಲಿ:ದೇಶದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಧ್ವನಿಗೂಡಿಸುವವರ ವಿರುದ್ಧ ಮೋದಿ ಸರ್ಕಾರ ದಾಳಿ ನಡೆಸಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗುರುವಾರ ಮೂರು ಖ್ಯಾತ ಹಿಂದಿ ಪದ್ಯಗಳ ಸಾಲುಗಳನ್ನು ಬಳಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದರು. ರೈತರ ಪರವಾಗಿರುವವರ ಮೇಲೆ ದಾಳಿ ನಡೆಸಿದ್ದಾರೆ … Continued

ಅನುರಾಗ್ ಕಶ್ಯಪ್, ನಟಿ ತಾಪ್ಸೀ ಪನ್ನು, ಇತರರ ಮೇಲೆ ೨ನೇ ದಿನವೂ ಮುಂದುವರಿದ ಐಟಿ ದಾಳಿ

  ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸೀ ಪನ್ನು ಮತ್ತು ಇತರರಿಗೆ ಸಂಬಂಧಿಸಿರುವ ಆಸ್ತಿಗಳ ಮೇಲೆ ದಾಳಿ ಎರಡನೇ (ಮಾ.೪) ದಿನವೂ ಮುಂದುವರಿಯಿತು. ಮುಂಬೈ, ಪುಣೆ ಮತ್ತು ಇತರ ಸ್ಥಳಗಳಲ್ಲಿ ಕಶ್ಯಪ್, ಪನ್ನು, ವಿಕಾಸ್ ಬಹ್ಲ್, ಚಲನಚಿತ್ರ ನಿರ್ಮಾಪಕ ಮಧು ಮಂಟೆನಾ ಮತ್ತು ಇತರರಿಗೆ ಸಂಬಂಧಿಸಿರುವ ಆಸ್ತಿಗಳ … Continued

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ರೈಲಿನಲ್ಲಿಯೇ ಸಿನಿಮಾ, ನ್ಯೂಸ್

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ. ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋಗಳನ್ನು ರೈಲುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಮೀಡಿಯಾ ಸರ್ವರ್ ಗಳನ್ನು ಬೋಗಿಗಳ ಒಳಗೆ ಇರಿಸಲಾಗುವುದು ಎಂದು … Continued

ಒಟಿಟಿ ಪ್ಲಾಟ್‌ಫಾರ್ಮಿನಲ್ಲಿ ಪ್ರದರ್ಶನವಾಗುವ ಮೊದಲು ಸೆನ್ಸಾರ್ ಬೇಕು:ಮೌಖಿಕವಾಗಿ ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್‌

ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ನಲ್ಲಿನ ಚಲನಚಿತ್ರಗಳು ಅಥವಾ ಟೆಲಿವಿಷನ್ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಲಭ್ಯವಾಗುವ ಮೊದಲು ಅವುಗಳನ್ನು ಸೆನ್ಸಾರು/ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮೌಖಿಕವಾಗಿ ಹೇಳಿದೆ. ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಮುಖ್ಯಸ್ಥ ಅಪರ್ಣಾ ಪುರೋಹಿತ್ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಉನ್ನತ … Continued