ಪಂಜಾಬ್‌ನಲ್ಲಿ ಕಾಂಗ್ರೆಸ್ ಮುಖಂಡನ ಗುಂಡಿಕ್ಕಿ ಹತ್ಯೆ : ದುಷ್ಕೃತ್ಯದ ಹೊಣೆ ಹೊತ್ತ ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ

ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯೊಂದರಲ್ಲಿ ಬಲ್ಜಿಂದರ್ ಸಿಂಗ್ ಬಲ್ಲಿ ಎಂಬ ಸ್ಥಳೀಯ ಕಾಂಗ್ರೆಸ್ ಮುಖಂಡನನ್ನು ಸೋಮವಾರ ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೆಲ ಅಪರಿಚಿತ ದುಷ್ಕರ್ಮಿಗಳು ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಬಲ್ಲಿ ಅಜಿತ್ವಾಲ್‌ನಲ್ಲಿ … Continued

ಶಿವಸೇನೆ Vs ಶಿವಸೇನೆ ಪ್ರಕರಣದಲ್ಲಿ ಅನರ್ಹತೆ ಅರ್ಜಿ ಬಗ್ಗೆ ನಿರ್ಧರಿಸಲು ಸ್ಪೀಕರ್‌ಗೆ ಗಡುವು ನಿಗದಿಗೆ ಸೂಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆ ಶಾಸಕರ ಅನರ್ಹತೆಯ ಅರ್ಜಿಗಳನ್ನು ನಿರ್ಧರಿಸಲು ಸಮಯ ನಿಗದಿಪಡಿಸುವಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಈಗಾಗಲೇ ಸುಮಾರು ಐದು ತಿಂಗಳ ಕಾಲಾವಕಾಶವನ್ನು ನೀಡಲಾಗಿದ್ದು, ಇನ್ನೂ ವಿಳಂಬ ಮಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯವು ನಾರ್ವೇಕರ್ ಅವರಿಗೆ ಎಚ್ಚರಿಕೆ ನೀಡಿತು. ಮತ್ತು ನ್ಯಾಯಾಲಯದ … Continued

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ : ಮೂಲಗಳು

ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಮೂಲಗಳ ಪ್ರಕಾರ ಈ ಅಧಿವೇಶನದಲ್ಲಿ ನೂತನ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನ ವಿಶೇಷ … Continued

ಕರ್ನಾಟಕದ ಮೂರು ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ

ನವದೆಹಲಿ : ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಈ ಸೇರ್ಪಡೆಯಿಂದಾಗಿ ಭಾರತದಲ್ಲಿ 42 ನೇ ಸ್ಥಳ ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣದ ಪಟ್ಟಿಗೆ ಸೇರಿದಂತಾಗಿದೆ. ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನವು ಈ … Continued

ಭಾರತ vs ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ : ಮೊದಲ ಎರಡು ಪಂದ್ಯಕ್ಕೆ ಕೆ.ಎಲ್‌. ರಾಹುಲ್ ನಾಯಕ, ಆರ್ ಅಶ್ವಿನ್ ಪೂರ್ಣ ಸರಣಿಗೆ ಆಯ್ಕೆ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಎರಡು ಸೆಟ್ ತಂಡಗಳನ್ನು ಆಯ್ಕೆ ಮಾಡಿದೆ. ಮೊದಲ ಎರಡು ಏಕದಿನದ ಪಂದ್ಯಗಳಿಗೆ ಕೆ.ಎಲ್. ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಆರ್ ಅಶ್ವಿನ್ 2022 ರ ನಂತರ ಮೊದಲ ಬಾರಿಗೆ ಏಕದಿನದ ಪಂದ್ಯಾವಳಿಯ ತಂಡಕ್ಕೆ ಮರಳಿದ್ದಾರೆ ಮತ್ತು ಸಂಪೂರ್ಣ ಸರಣಿಗೆ ಅವರು ಆಯ್ಕೆಯಾಗಿದ್ದಾರೆ. ಅಂತಿಮ ಏಕದಿನ ಪಂದ್ಯಕ್ಕೆ ಭಾರತವು ತನ್ನ … Continued

ರಸ್ತೆಯಲ್ಲಿ ಸಾರ್ವಜನಿಕರ ಎದುರೇ ಹೊಡೆದಾಡಿಕೊಂಡ ಇಬ್ಬರು ಪೊಲೀಸರು : ತನಿಖೆ ಆರಂಭ | ವೀಡಿಯೊ

ಬಿಹಾರದ ನಳಂದಾದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಹಗಲು ಹೊತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಆಘಾತಕಾರಿ ವೀಡಿಯೊ ಆನ್‌ಲೈನ್‌ನಲ್ಲಿ ಹೊರಹೊಮ್ಮಿದೆ. ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಇಬ್ಬರು ಪೊಲೀಸರು ನಳಂದಾದಲ್ಲಿ ರಸ್ತೆಯ ಮಧ್ಯದಲ್ಲಿ ಹೊಡೆದಾಡಿಕೊಂಡಿದ್ದಾರೆ. ಒಬ್ಬ ಅಧಿಕಾರಿ ಸಾರ್ವಜನಿಕರ ಮುಂದೆಯೇ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸುವುದರೊಂದಿಗೆ ವೀಡಿಯೊ ಆರಂಭವಾಗುತ್ತದೆ. ಮೊದಲ ಪೋಲೀಸರು ಅಲ್ಲಿಂದ ತೆರಳಲು ಯತ್ನಿಸಿದಾಗ ಮತ್ತೋರ್ವ ಪೋಲೀಸ್‌ … Continued

ಭಾರತೀಯ ವರ್ಣಚಿತ್ರಕಾರಳ ಈ ಕಲಾಕೃತಿಯು ದಾಖಲೆಯ 61.8 ಕೋಟಿ ರೂ.ಗಳಿಗೆ ಮಾರಾಟ…!

ನವದೆಹಲಿ : ದಿವಂಗತ ಸಿಖ್‌- ಹಂಗೇರಿಯ ವರ್ಣಚಿತ್ರಕಾರರಾದ ಅಮೃತಾ ಶೇರ್‌ಗಿಲ್‌ ಅವರ ‘ದಿ ಸ್ಟೋರಿ ಟೆಲ್ಲರ್‌’ ಪೇಂಟಿಂಗ್ ಇತ್ತೀಚೆಗೆ 61.8 ಕೋಟಿ ರೂ.ಗಳಿಗೆ ಮಾರಾಟವಾಗಿದೆ. 1937ರ ದಿನಾಂಕದ ಈ ವರ್ಣಚಿತ್ರವು ವಿಶ್ವದಾದ್ಯಂತ ಹರಾಜಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿದೆ. ಆಯಿಲ್ ಆನ್ ಕ್ಯಾನ್ವಾಸ್ ಪೇಂಟಿಂಗ್ ನಲ್ಲಿ ಸೈಯದ್ ಹೈದರ್ ರಾಝಾ ಅವರ ‘ಗೆಸ್ಟೇಷನ್’ ಎಂಬ ಶೀರ್ಷಿಕೆಯ … Continued

ಬಿಜೆಪಿ ಜೊತೆ ಮೈತ್ರಿ ಇಲ್ಲ, ಚುನಾವಣೆ ವೇಳೆ ಈ ಬಗ್ಗೆ ನಿರ್ಧಾರ : ಎಐಎಡಿಎಂಕೆ ನಾಯಕ

ಚೆನ್ನೈ: ಬಿಜೆಪಿ ಪಕ್ಷದ ಜೊತೆ ಸದ್ಯಕ್ಕೆ ಯಾವುದೇ ಮೈತ್ರಿ ಇಲ್ಲ ಮತ್ತು ಚುನಾವಣೆಯ ಸಮಯದಲ್ಲಿ ಮಾತ್ರ ಮೈತ್ರಿ ಬಗ್ಗೆ ನಿರ್ಧರಿಸಲಾಗುವುದು ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕರೊಬ್ಬರು ಸೋಮವಾರ ಹೇಳಿದ್ದಾರೆ. ದ್ರಾವಿಡ ನಾಯಕ ಸಿಎನ್ ಅಣ್ಣಾದೊರೈ ಅವರನ್ನು ಟೀಕಿಸಿದ್ದಕ್ಕೆ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ ಎಐಎಡಿಎಂಕೆಯ ಹಿರಿಯ ನಾಯಕ ಡಿ.ಜಯಕುಮಾರ … Continued

ಜಿಎಸ್‌ಬಿ ಸೇವಾ ಮಂಡಳದ ಗಣೇಶ ಅತ್ಯಂತ ಶ್ರೀಮಂತ ….: 69 ಕೆ.ಜಿ. ಚಿನ್ನ, 336 ಕೆ.ಜಿ. ಬೆಳ್ಳಿಯಿಂದ ಗಣೇಶನಿಗೆ ಅಲಂಕಾರ, ಈ ವರ್ಷದ ವಿಮೆ ಮೊತ್ತ 360 ಕೋಟಿ ರೂ. | ವೀಕ್ಷಿಸಿ

ಮುಂಬೈ: ಮುಂಬೈನ ಜನಪ್ರಿಯ ಗಣೇಶ ಮಂಡಳದಲ್ಲಿ ಒಂದಾದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸೇವಾ ಮಂಡಲವು ಹಬ್ಬದ ಪೂರ್ವಭಾವಿಯಾಗಿ ಸೋಮವಾರ 69 ಕೆಜಿ ಚಿನ್ನ ಮತ್ತು 336 ಕೆಜಿ ಬೆಳ್ಳಿಯಿಂದ ಅಲಂಕರಿಸಲ್ಪಟ್ಟ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಈ ವರ್ಷ ಗಣೇಶ ಚತುರ್ಥಿಗೆ ದೇಣಿಗೆಯಾಗಿ 36 ಕೆಜಿ ಬೆಳ್ಳಿ ಹಾಗೂ 250 ಗ್ರಾಂ ಚಿನ್ನದ ಪೆಂಡೆಂಟ್ ಸ್ವೀಕರಿಸಿದ್ದೇವೆ … Continued

ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನ : ಕಾರ್ಯಸೂಚಿಯಲ್ಲಿ 8 ಮಸೂದೆಗಳು, ನೂತನ ಸಂಸತ್‌ ಕಟ್ಟಡಕ್ಕೆ ಸ್ಥಳಾಂತರ

ನವದೆಹಲಿ: ಇಂದು, ಸೋಮವಾರದಿಂದ ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದೆ. ಎಂಟು ಮಸೂದೆಗಳನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಸಂಸತ್ತಿನ 75 ವರ್ಷಗಳ ಪಯಣ ಮತ್ತು ಹೊಸ ಕಟ್ಟಡಕ್ಕೆ ಸದನದ ನಡಾವಳಿಗಳ ಕುರಿತು ಚರ್ಚೆ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಮತ್ತೆ ಅಚ್ಚರಿಯ ಮಸೂದೆ, ಕಾಯ್ದೆಯನ್ನು ಮಂಡಿಸಲಾಗುತ್ತದೆಯಾ ಎಂಬ ಕುತೂಹಲವೂ ಇದೆ. ಈ ಹಿಂದೆ … Continued