ರಾಹುಲ್‌ ಗಾಂಧಿ ಸೇರಿದಂತೆ ಯಾವ ಕಾಂಗ್ರೆಸ್‌ ನಾಯಕರೂ ಮೋದಿಗೆ ಸರಿಸಾಟಿಯಲ್ಲ’ ಎಂದ ಸಂಸದ ಕಾರ್ತಿ ಚಿದಂಬರಂ : ಕಾಂಗ್ರೆಸ್ ನಿಂದ ನೋಟಿಸ್

ಚೆನ್ನೈ: ರಾಹುಲ್ ಗಾಂಧಿ ಸೇರಿದಂತೆ ಯಾವುದೇ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರದ ತಂತ್ರಕ್ಕೆ ಸರಿಸಾಟಿಯಾಗುವುದಿಲ್ಲ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರ, ಸಂಸದ ಕಾರ್ತಿ ಚಿದಂಬರಂ ಅವರಿಗೆ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಶೋಕಾಸ್ ನೋಟಿಸ್ ನೀಡಿದೆ. ಈ ಕ್ರಮವು ಪಕ್ಷದ ನಾಯಕತ್ವದ ಟೀಕೆ ಮತ್ತು … Continued

ಆಘಾತಕಾರಿ ವೀಡಿಯೊ | ನೋಯ್ಡಾದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಪಿಚ್‌ ಮೇಲೆಯೇ ಹೃದಯಾಘಾತದಿಂದ ಕುಸಿದುಬಿದ್ದು ಇಂಜಿನಿಯರ್ ಸಾವು

ನೋಯ್ಡಾ: ಕ್ರಿಕೆಟ್ ಆಡುತ್ತಿದ್ದ ವೇಳೆ ಇಂಜಿನಿಯರ್ ಒಬ್ಬರು ಪಿಚ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವಿಗೀಡಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಇದರ ವೀಡಿಯೊ ಹೊರಬಿದ್ದಿದ್ದು, ಇಂಜಿನಿಯರ್ ವಿಕಾಸ್ ನೇಗಿ ಎಂಬವರು ರನ್ ತೆಗೆದುಕೊಳ್ಳಲು ಪಿಚ್‌ನ ಇನ್ನೊಂದು ಬದಿಗೆ ಓಡಿದರು ಆದರೆ ಮಧ್ಯದಲ್ಲಿ ಕುಸಿದರು. ಅವರು ಕುಸಿದು ಬೀಳುವುದನ್ನು ನೋಡಿದ ವಿಕೆಟ್ ಕೀಪರ್ ತಕ್ಷಣವೇ ಓಡಿ ಬರುತ್ತಿರುವುದು … Continued

ಕಾಸರಗೋಡು : ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು

ಕಾಸರಗೋಡು : ತಾಯಿಯ ಎದೆಹಾಲು ಕುಡಿಯುವ ವೇಳೆ ಹಾಲು ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಮಗು ಮೃತಪಟ್ಟ ಘಟನೆ  ಕೇರಳ ಕಾಸರಗೋಡು ಜಿಲ್ಲೆಯ ಗಡಿಭಾಗವಾದ ಕುಂಬಳೆ ಸಮೀಪದ ಬಂಬ್ರಾಣ ಎಂಬಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಅಬ್ದುಲ್ ಅಜೀಜ್ – ಖದೀಜಾ ದಂಪತಿ ಪುತ್ರಿ ಸುಮಾರು ಮೂರು ತಿಂಗಳ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ತನ್ನ 30 ವರ್ಷಗಳ ʼಮೌನವ್ರತʼ ಮುಕ್ತಾಯಗೊಳಿಸ್ತಾರಂತೆ 85 ವರ್ಷದ ಈ ಮಹಿಳೆ…!

ಧನ್ಬಾದ್ (ಜಾರ್ಖಂಡ್): ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಮಂದಿರದ ಉದ್ಘಾಟನೆಯೊಂದಿಗೆ ತನ್ನ ಕನಸು ನನಸಾದ ನಂತರ ಜಾರ್ಖಂಡ್‌ನ 85 ವರ್ಷದ ಮಹಿಳೆಯೊಬ್ಬರು ತಮ್ಮ ೩೧ ವರ್ಷಗಳ ‘ಮೌನ ವ್ರತ’ವನ್ನು ಕೊನೆಗೊಳಿಸಲಿದ್ದಾರೆ…! 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನವೇ ಸರಸ್ವತಿ ದೇವಿ ತಮ್ಮ ʼಮೌನವ್ರತʼದ ಪ್ರತಿಜ್ಞೆ ಆರಂಭಿಸಿದ್ದು, ರಾಮಮಂದಿರ ಉದ್ಘಾಟನೆ ವೇಳೆಯೇ ಅದನ್ನು ಮುರಿಯುವುದಾಗಿ … Continued

ಭಾರತ-ಮಾಲ್ಡೀವ್ಸ್ ವಿವಾದ : ಟಾಟಾ ಸಮೂಹದಿಂದ ಲಕ್ಷದ್ವೀಪದಲ್ಲಿ 2 ತಾಜ್ ಬ್ರಾಂಡ್ ರೆಸಾರ್ಟ್‌ ನಿರ್ಮಾಣ…!

ಟಾಟಾ ಗ್ರೂಪ್‌ನ ಎರಡು ರೆಸಾರ್ಟ್‌ಗಳನ್ನು 2026 ರಲ್ಲಿ ಭಾರತದ ದ್ವೀಪಸಮೂಹವಾದ ಲಕ್ಷದ್ವೀಪದ ಸುಹೇಲಿ ಮತ್ತು ಕದ್ಮತ್ ದ್ವೀಪಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮತ್ತು ನಂತರದ ಮಾಲ್ಡೀವ್ಸ್‌ನೊಂದಿಗಿನ ಉದ್ವಿಗ್ನತೆಯ ನಂತರ ಇದು ಗಮನ ಸೆಳೆದಿದೆ. ಕಳೆದ ವರ್ಷ ಜನವರಿಯಲ್ಲಿ, ಟಾಟಾ ಗ್ರೂಪ್‌ನ ಅಂಗ ಸಂಸ್ಥೆಯಾದ ಇಂಡಿಯನ್ ಹೋಟೆಲ್ಸ್ ಕಂಪನಿಯು ಲಕ್ಷದ್ವೀಪದಲ್ಲಿ ಎರಡು … Continued

ಅಯೋಧ್ಯೆ ರಾಮಮಂದಿರ ಸಮಾರಂಭ : ಜನವರಿ 22 ರಂದು ಉತ್ತರ ಪ್ರದೇಶದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಲಕ್ನೋ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನವರಿ 22 ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವುದರ ಜೊತೆಗೆ ಉದ್ಘಾಟನಾ ಸಮಾರಂಭದ ದಿನದಂದು ರಾಜ್ಯಾದ್ಯಂತ ಮದ್ಯ ಮಾರಾಟ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಆದಿತ್ಯನಾಥ ಅವರು ಜನವರಿ 22 ರಂದು ಎಲ್ಲಾ … Continued

55ನೇ ವಯಸ್ಸಿಗೆ ಬದುಕಿನ ಗಾಯನ ನಿಲ್ಲಿಸಿದ ಖ್ಯಾತ ಹಿಂದುಸ್ತಾನೀ ಗಾಯಕ ರಶೀದ್ ಖಾನ್

ಕೋಲ್ಕತ್ತಾ: ಕೋಲ್ಕತ್ತಾ ಮೂಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಹಿಂದುಸ್ತಾನೀ ಗಾಯಕ ಉಸ್ತಾದ್ ರಶೀದ್ ಖಾನ್ ಅವರು ಮಂಗಳವಾರ (ಜನವರಿ ೯) ಮಧ್ಯಾಹ್ನ ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಸ್ತ್ರೀಯ ಗಾಯಕನಿಗೆ 55 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ … Continued

ಉದ್ಯೋಗಕ್ಕಾಗಿ ಭೂಮಿ ಹಗರಣ: ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ, ಮಗಳು ಮಿಸಾ ಭಾರತಿ, ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇ.ಡಿ.

ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಉದ್ಯೋಗಕ್ಕಾಗಿ ಭೂ ಹಗರಣ (land-for-job scam)ದ ಆರೋಪಪಟ್ಟಿ ಸಲ್ಲಿಸಿದೆ. ಇ.ಡಿ.ಆರೋಪಪಟ್ಟಿಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಗಳು ಮಿಸಾ ಭಾರತಿ, ಹಿಮಾ ಯಾದವ್, ಹೃದಯಾನಂದ ಚೌಧರಿ ಮತ್ತು ಅಮಿತ್ ಕತ್ಯಾಲ್ ಅವರ ಹೆಸರುಗಳಿವೆ. ಹೆಚ್ಚುವರಿಯಾಗಿ, ಆರೋಪಪಟ್ಟಿಯಲ್ಲಿ ಎರಡು ಸಂಸ್ಥೆಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ. … Continued

ಲಕ್ಷದ್ವೀಪ ಹೊಗಳಿದ ಇಸ್ರೇಲ್‌ : ಉಪ್ಪು ನೀರು ಶುದ್ಧೀಕರಿಸುವ ಯೋಜನೆ ಕೆಲಸ ತಕ್ಷಣವೇ ಪ್ರಾರಂಭಿಸ್ತೇವೆ ಎಂದ ದೇಶ

ನವದೆಹಲಿ: ಕಳೆದ ವರ್ಷ ತನ್ನ ತಂಡವು ಸುಂದರವಾದ ದ್ವೀಪಸಮೂಹಕ್ಕೆ ಭೇಟಿ ನೀಡಿದ ನಂತರ ಲಕ್ಷದ್ವೀಪದಲ್ಲಿ ನಿರ್ಲವಣೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಇಸ್ರೇಲ್ ಸೋಮವಾರ ಹೇಳಿದೆ. ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯು ಯೋಜನೆಯ ಕೆಲಸವನ್ನು ತ್ವರಿತವಾಗಿ ಪ್ರಾರಂಭಿಸಲು ತನ್ನ ಉತ್ಸುಕತೆಯನ್ನು ವ್ಯಕ್ತಪಡಿಸಿತು. X ನಲ್ಲಿನ ಪೋಸ್ಟ್‌ನಲ್ಲಿ, ಇಸ್ರೇಲ್ ರಾಯಭಾರ ಕಚೇರಿಯು, “ಕಳೆದ ವರ್ಷ ನಾವು ನಿರ್ಲವಣೀಕರಣ … Continued

‘ಭಾರತ ನಮ್ಮ ನಿಕಟ ಮಿತ್ರ ರಾಷ್ಟ್ರಗಳಲ್ಲಿ ಒಂದು ‘: ತಮ್ಮದೇ ಸಚಿವರು ನೀಡಿದ ಪ್ರಧಾನಿ ಮೋದಿ ವಿರೋಧಿ ಹೇಳಿಕೆ ಖಂಡಿಸಿದ ಮಾಲ್ಡೀವ್ಸ್ ಪ್ರವಾಸೋದ್ಯಮ

ಮಾಲೆ: ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI)ಯು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತನ್ನ ದೇಶದ ಕೆಲವು ಉಪ ಮಂತ್ರಿಗಳು ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿದೆ ಮತ್ತು ಭಾರತವನ್ನು “ನಮ್ಮ ನಿಕಟ ಮಿತ್ರರಾಷ್ಟ್ರಗಳಲ್ಲಿ ಒಂದು” ಎಂದು ಬಣ್ಣಿಸಿದೆ. ಈ ಹಿಂದೆ ಮಾಲ್ಡೀವ್ಸ್‌ನ ವಿವಿಧ ಬಿಕ್ಕಟ್ಟುಗಳಲ್ಲಿ ಭಾರತ ಯಾವಾಗಲೂ … Continued