ಸಂಸತ್ ಭದ್ರತಾ ಲೋಪದ ಘಟನೆ : ಲೋಕಸಭೆಯಲ್ಲಿ ಒಳನುಗ್ಗಿದ ಪ್ರಕರಣದಲ್ಲಿ ಆರು ಮಂದಿ ಭಾಗಿ, 5 ಮಂದಿ ಬಂಧನ, ಮತ್ತೊಬ್ಬನಿಗಾಗಿ ಶೋಧ

ನವದೆಹಲಿ : ಲೋಕಸಭೆಯ ಸಭಾಂಗಣದ ಒಳಗೆ ಭದ್ರತೆಯನ್ನು ಉಲ್ಲಂಘಿಸಿದ ಇಬ್ಬರು ಮತ್ತು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ನಾಲ್ವರು ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಗೊತ್ತಿರುವವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯೊಂದು ಹೇಳಿದೆ. ಪ್ರಮುಖ ಭದ್ರತಾ ಲೋಪದಲ್ಲಿ, ಲೋಕಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಸದನದ ಅಧಿವೇಶನ ನಡೆಯುತ್ತಿರುವಾಗ ಲೋಕಸಭೆಯ ಕೊಠಡಿಗೆ ಹಾರಿದ್ದಾರೆ. ಅವರು … Continued

ವೀಡಿಯೊ: ಲೋಕಸಭೆಗೆ ನುಗ್ಗಿದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಸದರು

ನವದೆಹಲಿ : ಹೊಗೆ ಡಬ್ಬಿ ಹಿಡಿದ ಇಬ್ಬರು ವ್ಯಕ್ತಿಗಳು ಲೋಕಸಭೆಗೆ ನುಗ್ಗಿದ ನಂತರ ಆಘಾತದಿಂದ ಚೇತರಿಸಿಕೊಂಡ ಸಂಸದರು, ಒಳನುಗ್ಗಿದ ಇಬ್ಬರಲ್ಲಿ ಒಬ್ಬನನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸುವ ಮೊದಲು ಆತನನ್ನು ಥಳಿಸಿದ್ದಾರೆ. ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೋರಂಜನ ಡಿ ಮತ್ತು ಸಾಗರ ಶರ್ಮಾ ಎಂಬವರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಹಾರಿದರು. ಸಾಗರ … Continued

ಸಂಸತ್​ ಸದನದಲ್ಲಿ ಭಾರಿ ಭದ್ರತಾ ಲೋಪ: 4 ಮಂದಿ ಬಂಧನ, 2 ಘಟನೆ, ಮೈಸೂರಿನ ನಂಟು

ನವದೆಹಲಿ: ಬುಧವಾರ ಲೋಕಸಭೆಯಲ್ಲಿ ಪ್ರಮುಖ ಭದ್ರತಾ ಲೋಪ ಸಂಭವಿಸಿದ್ದು, ಭದ್ರತೆ ಉಲ್ಲಂಘನೆ ಮಾಡಿ ಕಲಾಪದ ವೇಳೆ ಸಂಸತ್ ಭವನಕ್ಕೆ ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಅಧಿಕಾರಿಗಳು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. … Continued

ಸಂಸತ್ತಿನ ಮೇಲೆ ನಡೆದ ದಾಳಿಯ 22ನೇ ವಾರ್ಷಿಕ ದಿನವೇ ಲೋಕಸಭೆಯಲ್ಲಿ ಭದ್ರತಾ ಲೋಪ : ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಗೆ ನುಗ್ಗಿದ ಇಬ್ಬರು ವ್ಯಕ್ತಿಗಳು

ನವದೆಹಲಿ: ಸಂಸತ್ತಿನ ದಾಳಿಯ 22ನೇ  ವಾರ್ಷಿಕ ದಿನ  ಬುಧವಾರ ಲೋಕಸಭೆಯಲ್ಲಿ ನಡೆದ ಪ್ರಮುಖ ಭದ್ರತಾ ಲೋಪದಲ್ಲಿ ಇಬ್ಬರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆ ಸದನಕ್ಕೆ ಜಿಗಿದು ಸದನದ ಸುತ್ತಲೂ ಓಡಲು ಪ್ರಾರಂಭಿಸಿದ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಸದನದ ಕೊಠಡಿಗೆ ಜಿಗಿದ ನಂತರ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ಗ್ಯಾಸ್ … Continued

ದುಬೈನಲ್ಲಿ ಮಹದೇವ ಬೆಟ್ಟಿಂಗ್ ಆಪ್ ಮಾಲೀಕನ ಬಂಧನ : ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭ

ನವದೆಹಲಿ : ಮಹಾದೇವ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಮತ್ತು ಮಹಾದೇವ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ ಮಾಲೀಕ ರವಿ ಉಪ್ಪಲ್ ಅವರನ್ನು ಸ್ಥಳೀಯ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದಾರೆ. ಇಂಟರ್‌ಪೋಲ್ ಮೂಲಕ ಜಾರಿ ನಿರ್ದೇಶನಾಲಯ ನೀಡಿದ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಆತನನ್ನು , ಯುನೈಟೆಡ್ ಅರಬ್ ಎಮಿರೇಟ್ಸ್‌ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದಾರೆ. ಕಳೆದ … Continued

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ… ಈಗ ರಾಜಸ್ಥಾನದ ನೂತನ ಮುಖ್ಯಮಂತ್ರಿ : ಸಿಎಂ ಸ್ಥಾನಕ್ಕೆ ಹೆಸರು ಘೋಷಿಸಿದ ವಸುಂಧರಾ ರಾಜೇ

ಜೈಪುರ: ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭಜಲಲಾಲ ಶರ್ಮಾ ಅವರು ರಾಜಸ್ಥಾನದ ನೂತನ ಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ. ರಾಜಸ್ಥಾನವು ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಮರಳಿದ ಪ್ರಮುಖ ರಾಜ್ಯವಾಗಿದೆ. ಇಂದು, ಸೋಮವಾರ ಬೆಳಿಗ್ಗೆ, ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಮೂವರು … Continued

ಐಪಿಎಲ್‌ 2024 ಹರಾಜು ಪಟ್ಟಿ ಪ್ರಕಟ: 333 ಆಟಗಾರರ ಪಟ್ಟಿ ಮುನ್ನಡೆಸುವ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಹರಾಜು ಪಟ್ಟಿಯನ್ನು ಡಿಸೆಂಬರ್ 11ರಂದು ಸೋಮವಾರ ಪ್ರಕಟಿಸಲಾಯಿತು. ವಿಶ್ವಕಪ್ ವಿಜೇತ ಟ್ರಾವಿಸ್ ಹೆಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ 333 ಆಟಗಾರರ ಹರಾಜು ಪಟ್ಟಿಯನ್ನು ಮುನ್ನಡೆಸಿದ್ದಾರೆ. IPL 2024 ಹರಾಜು: ಟಾಪ್ ಬ್ರಾಕೆಟ್‌ನಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ ಜೂನ್‌ನಲ್ಲಿ ವೆಸ್ಟ್ … Continued

ಅರೇ ಮೋಹನಜೀ, ಖಡೇ ತೋ ಹೋ ಜಾಯಿಯೇ …: ಮಧ್ಯಪ್ರದೇಶದ ಸಿಎಂ ಸ್ಥಾನಕ್ಕೆ ಬಿಜೆಪಿ ಹೆಸರಿಸಿದ್ದು ಹೀಗೆ…

ಭೋಪಾಲ್‌ :ಮೋಹನ ಯಾದವ್ ಅವರು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ಪ್ರಕಟಿಸಿದೆ. ಈ ಘೋಷಣೆಯು ಮೋಹನ ಯಾದವ್ ಮತ್ತು ಇತರ ಬಿಜೆಪಿಯ ನಾಐಕರು ಸೇರಿದಂತೆ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ಅವರು ಮೋಹನ ಯಾದವ್ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯ ಹೆಸರಿನ … Continued

ʼರಾಜ್ಯʼಗಳ ಒಪ್ಪಿಗೆಯಿಲ್ಲದೆ ʼಸಿಬಿಐʼ ಪ್ರಕರಣಗಳ ತನಿಖೆ ನಡೆಸಲು ಕಾನೂನು ಬೇಕು: ಸಂಸದೀಯ ಸಮಿತಿ

ನವದೆಹಲಿ : ಕೆಲವು ರಾಜ್ಯಗಳು ‘ಸಾಮಾನ್ಯ ಒಪ್ಪಿಗೆ’ (general consent) ಹಿಂಪಡೆದಿರುವುದು ನಿರ್ಣಾಯಕ ಪ್ರಕರಣಗಳ ತನಿಖೆಗೆ ಸಿಬಿಐನ ಅಧಿಕಾರದಲ್ಲಿ ತೀವ್ರ ಮಿತಿಗಳಿಗೆ ಕಾರಣವಾಗಿದೆ ಎಂದು ಪ್ರತಿಪಾದಿಸಿದ ಸಂಸದೀಯ ಸಮಿತಿಯು ಹೊಸ ಕಾನೂನನ್ನು ಜಾರಿಗೊಳಿಸುವ ಮತ್ತು ಸಿಬಿಐಗೆ ವ್ಯಾಪಕ ಅಧಿಕಾರ ನೀಡುವ ಅವಶ್ಯಕತೆಯಿದೆ ಎಂದು ಸೋಮವಾರ ಹೇಳಿದೆ. ಹೊಸ ಕಾನೂನು ಜಾರಿಯಾದರೆ ಸಿಬಿಐ “ರಾಜ್ಯದ ಒಪ್ಪಿಗೆ ಮತ್ತು … Continued

ಜೆಎನ್‌ ಯು ಕ್ಯಾಂಪಸ್‌ನಲ್ಲಿ ಧರಣಿ ನಡೆಸಿದರೆ ₹20,000, ದೇಶ ವಿರೋಧಿ ಘೋಷಣೆ ಕೂಗಿದರೆ ₹10,000 ದಂಡ : ಹೊಸ ನಿಯಮ

ನವದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಹಿಂಸಾಚಾರ, ಧರಣಿ ಮತ್ತು ಉಪವಾಸ ಸತ್ಯಾಗ್ರಹಗಳನ್ನು ನಡೆಸಿದರೆ ಇನ್ನು ಮುಂದೆ 20,000 ರೂಪಾಯಿ ದಂಡ ಬೀಳಲಿದೆ. ಅದೇ ವೇಳೆ ದೇಶ ವಿರೋಧಿ ಘೋಷಣೆ (Anti-national slogans) ಕೂಗುವುದು, ಧರ್ಮ, ಜಾತಿ ಅಥವಾ ಸಮುದಾಯದ ಕಡೆಗೆ ಅಸಹಿಷ್ಣುತೆ ಪ್ರಚೋದಿಸಿದರೆ 10,000 ರೂಪಾಯಿಗಳವರೆಗೆ ದಂಡ ವಿದಿಸಲಾಗುತ್ತದೆ ಎಂದು … Continued