ರೈಲು ಡಿಕ್ಕಿ ಹೊಡೆದು ನಾಲ್ವರು ಸ್ವಚ್ಛತಾ ಕಾರ್ಮಿಕರು ಸಾವು

ತಿರುವನಂತಪುರಂ :  ಶನಿವಾರ ಸಂಜೆ ಶೋರನೂರ್ ರೈಲು ನಿಲ್ದಾಣದ ಬಳಿ ತಿರುವನಂತಪುರಂ ಕಡೆಗೆ ಹೋಗುವ ಕೇರಳ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ತಮಿಳುನಾಡಿನ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸ್ಚಚ್ಛತಾ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ರೈಲು ನಿಲ್ದಾಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಶೋರನೂರ್ ಸೇತುವೆಯ ಬಳಿ ರೈಲ್ವೆ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದಾಗ ಮಧ್ಯಾಹ್ನ … Continued

ಕಾಶ್ಮೀರ | ಪ್ರತ್ಯೇಕ ಎನ್‌ಕೌಂಟರಿನಲ್ಲಿ ಮೂವರು ಭಯೋತ್ಪಾಕರು ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಶನಿವಾರ (ನ. 2) ಭಾರತೀಯ ಭದ್ರತಾ ಪಡೆ ನಡೆಸಿದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ (Encounters) ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಅನಂತನಾಗದಲ್ಲಿ ಇಬ್ಬರು ಮತ್ತು ಖನ್ಯಾರ್‌ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಕಾರ್ಯಾಚರಣೆ ಮುಂದುವರಿದಿದೆ. ಖನ್ಯಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಓರ್ವ ಉಗ್ರ ಹತನಾಗಿದ್ದಾನೆ. ಮೂಲಗಳ … Continued

ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಫೀಸ್‌ ಕೇಳಿದ್ರೆ ಶಾಕ್‌ ಆಗ್ತೀರಾ ; ಒಂದು ಸಲಹೆಗೆ ಪಡೆವ ಶುಲ್ಕ 1…10…50 ಕೋಟಿ ರೂ. ಅಲ್ಲ, ಎಷ್ಟೆಂದರೆ…

ಪಾಟ್ನಾ: ಬಿಹಾರದ ನಾಲ್ಕು ವಿಧಾನಸಭಾ ಸ್ಥಾನಗಳ ಮುಂಬರುವ ಉಪಚುನಾವಣೆಗಳಿಗೆ ಮುಂಚಿತವಾಗಿ, ಜನ ಸೂರಜ್‌ ಪಕ್ಷದ ಸಂಸ್ಥಾಪಕರಾದ ಪ್ರಶಾಂತ ಕಿಶೋರ ಅವರು ತಾವು ಚುನಾವಣಾ ತಂತ್ರಗಾರರಾಗಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಸಲಹೆ ನೀಡಲು ಕನಿಷ್ಠ 100 ಕೋಟಿ ರೂಪಾಯಿಗಳ ಶುಲ್ಕವಾಗಿ ವಿಧಿಸುವುದಾಗಿ ಹೇಳಿದ್ದಾರೆ. ಬಿಹಾರದ ಬೆಳಗಂಜನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಇದನ್ನು … Continued

ವೀಡಿಯೊ…| ಜೂಜಾಟ ನಿಲ್ಲಿಸಲು ಹೋದ ಪೊಲೀಸರ ಮೇಲೆಯೇ ದೊಣ್ಣೆ, ಇಟ್ಟಿಗೆಗಳಿಂದ ದಾಳಿ ಮಾಡಿದ ಗುಂಪು ; ಇಬ್ಬರು ಪೊಲೀಸರಿಗೆ ಗಾಯ

ಲಕ್ನೋ: ದೀಪಾವಳಿ ಸಂದರ್ಭದಲ್ಲಿ ಜೂಜಾಡುತ್ತಿದ್ದವರಿಗೆ ಅಲ್ಲಿಂದ ತೆರಳಲು ಸೂಚಿಸಿದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಭೀಕರ ದಾಳಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಬರೇಲಿಯ ಪ್ರೇಮ ನಗರ (Prem Nagar) ಪ್ರದೇಶದಲ್ಲಿ ಅನಧಿಕೃತ … Continued

ಬಿಲ್‌ ಬಾಕಿ ; ಬಾಂಗ್ಲಾದೇಶಕ್ಕೆ ಅರ್ಧದಷ್ಟು ವಿದ್ಯುತ್ ಸರಬರಾಜು ನಿಲ್ಲಿಸಿದ ಅದಾನಿ ಪವರ್ ; ವಿದ್ಯುತ್‌ ಸಮಸ್ಯೆ ಉಲ್ಬಣ..

ನವದೆಹಲಿ: ಬಾಂಗ್ಲಾದೇಶದಲ್ಲಿ ತೀವ್ರವಾದ ವಿದ್ಯುತ್ ಸಮಸ್ಯೆಗೆ ಕಾರಣವಾಗಬಹುದಾದ ಪ್ರಮುಖ ಕ್ರಮದಲ್ಲಿ, ಬಿಲಿಯನೇರ್ ಅದಾನಿ ಪವರ್‌ ಕಂಪನಿಯು ಬಾಕಿ ಇರುವ ಬಿಲ್‌ಗಳ ಕಾರಣಕ್ಕೆ ಬಾಂಗ್ಲಾದೇಶಕ್ಕೆ ತನ್ನ ವಿದ್ಯುತ್ ಪೂರೈಕೆಯ 50 ಪ್ರತಿಶತವನ್ನು ಕಡಿತಗೊಳಿಸಿದೆ. ಮಾಧ್ಯಮ ವರದಿಯ ಪ್ರಕಾರ, ಬಾಂಗ್ಲಾದೇಶವು ಅದಾನಿ ಪವರ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್‌ಗೆ (ಎಪಿಜೆಎಲ್) $846 ಮಿಲಿಯನ್ ಬಾಕಿ … Continued

ಲೆಜೆಂಡರಿ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ನಿಧನ

ನವದೆಹಲಿ : ಖ್ಯಾತ ಫ್ಯಾಷನ್‌ ಡಿಸೈನರ್‌ ರೋಹಿತ್‌ ಬಾಲ್‌ (Rohit Bal) ಶುಕ್ರವಾರ (ನ.1) ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಫ್ಯಾಷನ್‌ ಡಿಸೈನ್‌ ಕೌನ್ಸಿಲ್‌ ಆಫ್‌ ಇಂಡಿಯಾ (Fashion Design Council of India) ರೋಹಿತ್‌ ಬಾಲ್‌ ಅವರ ನಿಧನವನ್ನು ಖಚಿತಪಡಿಸಿದೆ. ಬಾಲ್ ಅವರ ನಿಧನದ ಸುದ್ದಿಯನ್ನು ಫ್ಯಾಷನ್‌ ಡಿಸೈನ್‌ ಕೌನ್ಸಿಲ್‌ ಆಫ್‌ ಇಂಡಿಯಾ … Continued

ಹೇಮಂತ್ ಸೊರೇನ್‌ ವಯಸ್ಸೆಷ್ಟು..? 5 ವರ್ಷದಲ್ಲಿ ಜಾರ್ಖಂಡ್ ಸಿಎಂಗೆ 7 ವರ್ಷ ವಯಸ್ಸಾಗಿದ್ದು ಹೇಗೆ..? ಬಿಜೆಪಿ ಪ್ರಶ್ನೆ

ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಹೇಮಂತ ಸೊರೇನ್ ಬರ್ಹೈತ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದಾಗ್ಯೂ, ಅವರ ಅಫಿಡವಿಟ್, ಈಗ ಅವರ ವಯಸ್ಸಿನ ಬಗ್ಗೆ ವಿವಾದಕ್ಕೆ ಕಾರಣವಾಗಿದೆ. ಹೇಮಂತ ಸೋರೆನ್ ಅವರ 2019 ರ ನಾಮಪತ್ರದಲ್ಲಿ ಅವರಿಗೆ 42 ವರ್ಷ ಎಂದು ಹೇಳಿತ್ತು, ಆದರೆ ಈ ವರ್ಷದ ಅಫಿಡವಿಟ್ ಅವರ ವಯಸ್ಸು 49 ಎಂದು ಹೇಳಿದೆ. ಈ … Continued

ದೀಪಾವಳಿ ಆಚರಿಸುತ್ತಿದ್ದ ವೇಳೆ ಮಗನ ಎದುರೇ ವ್ಯಕ್ತಿ-ಅಪ್ರಾಪ್ತನ ಹತ್ಯೆ ; ಇದರ ʼಮಾಸ್ಟರ್‌ ಮೈಂಡ್‌ʼ ಮತ್ತೊಬ್ಬ ಅಪ್ರಾಪ್ತ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ದೆಹಲಿಯ ಶಾಹದಾರ ಪ್ರದೇಶದ ಬಿಹಾರಿ ಕಾಲೋನಿಯಲ್ಲಿ ಗುರುವಾರ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಪ್ರಾಪ್ತ ಹುಡುಗ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಒಬ್ಬ ಹುಡುಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತರನ್ನು ಆಕಾಶ (40) ಮತ್ತು ಆತನ ಸಹೋದರನ ಮಗ ರಿಷಭ (16) ಎಂದು … Continued

ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಿ ; ಪ್ರಧಾನಿ ಮೋದಿಗೆ ಪತ್ರ ಬರೆದ ಯತ್ನಾಳ

ಬೆಂಗಳೂರು: ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ವಕ್ಫ್ ಮಂಡಳಿಯು ದೇಶದಾದ್ಯಂತ ರೈತರು, ಭೂಮಾಲೀಕರು, ದೇವಸ್ಥಾನಗಳು, ಟ್ರಸ್ಟ್‌ಗಳು ಮತ್ತು ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸುವ ಅನಿಯಂತ್ರಿತ, ಸ್ಪಷ್ಟ … Continued

ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಬಿಬೇಕ ದೆಬ್ರಾಯ್ ನಿಧನ

ನವದೆಹಲಿ: ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ ದೆಬ್ರಾಯ್‌ ಅವರು ಶುಕ್ರವಾರ (ನವೆಂಬರ್‌ 1) ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ದೆಬ್ರಾಯ್‌ ಅವರು ಈ ಹಿಂದೆ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ (ಜಿಪಿಇ) ವಿಶ್ವ ವಿದ್ಯಾಲಯದಲ್ಲಿ ಕುಲಪತಿಯಾಗಿ … Continued