ನೋಯ್ಡಾ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಏಕೆ ಕೆಡವಲಾಯ್ತು…? ಮಾಹಿತಿ ಇಲ್ಲಿದೆ

ನವದೆಹಲಿ: ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಭಾನುವಾರ (ಆಗಸ್ಟ್ 28) ಕೆಡವಲಾಯಿತು. ನೋಯ್ಡಾದಲ್ಲಿ ಎಮರಾಲ್ಡ್ ಕೋರ್ಟ್ ಈ ಯೋಜನೆಯನ್ನು ಕೆಡವಿದ್ದರಿಂದ ಡೆವಲಪರ್ ಸೂಪರ್‌ಟೆಕ್‌ಗೆ ಸುಮಾರು 1,000 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಕಟ್ಟಡವನ್ನು ನೆಲಸಮಗೊಳಿಸಲು ಸುಮಾರು 20 ಕೋಟಿ ರೂ. ಬೇಕಾಗಿದೆ. ಹಾಗಾದರೆ, ಕಟ್ಟಡಗಳನ್ನು ಏಕೆ ನೆಲಸಮ ಮಾಡಲಾಗಿದೆ? ಇಲ್ಲಿದೆ ಮಾಹಿತಿ ಅವಳಿ ಗೋಪುರಗಳು (ಅವುಗಳೆಂದರೆ ಅಪೆಕ್ಸ್ ಮತ್ತು … Continued

100 ಮೀಟರ್‌ಗಳಷ್ಟು ಎತ್ತರದ ನೋಯ್ಡಾ ಅವಳಿ ಗೋಪುರಗಳು ನೆಲಸಮ : ಸ್ಫೋಟಗಳಿಂದ ಕೇವಲ 9 ಸೆಕೆಂಡುಗಳಲ್ಲಿ ಉರುಳಿದ ಕಟ್ಟಡಗಳು | ದೃಶ್ಯ ವೀಕ್ಷಿಸಿ

ನವದೆಹಲಿ: ತಿಂಗಳುಗಟ್ಟಲೆ ಸಿದ್ಧತೆ ಮತ್ತು ಯೋಜನೆಯ ನಂತರ ನೋಯ್ಡಾದ ಬಹುಮಹಡಿ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಭಾನುವಾರ (ಆಗಸ್ಟ್ 28) ಮಧ್ಯಾಹ್ನ 2:30 ಕ್ಕೆ ಕೆಡವಲಾಯಿತು. ಅವಳಿ ಕಟ್ಟಡಗಳ ಪೈಕಿ ಒಂದಾಗಿರುವ ‘ಅಪೆಕ್ಸ್ ಟವರ್ (Apex Tower) 32 ಹಾಗೂ ಸಯಾನಿ (Ceyane) 29 ಮಹಡಿಗಳನ್ನು ಹೊಂದಿದೆ. ಅಪೆಕ್ಸ್​ ಟವರ್​ನ ಎತ್ತರ 103 ಮೀಟರ್ ಇದೆ. ಹಾಗೂ … Continued

ವೀಡಿಯೊ ಶೇರ್‌ ಮಾಡಿ ಭಾರತದ ಗ್ರಾಮೀಣ ರಸ್ತೆಗಳಲ್ಲಿ ಇದನ್ನು ಮಾಡಿ ಎಂದು ಸಚಿವ ನಿತಿನ್ ಗಡ್ಕರಿಗೆ ಒತ್ತಾಯಿಸಿದ ಉದ್ಯಮಿ ಆನಂದ್ ಮಹೀಂದ್ರಾ | ವೀಕ್ಷಿಸಿ

ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು ಅವರ ಆಕರ್ಷಕ ಟ್ವಿಟರ್ ಪೋಸ್ಟ್‌ಗಳು ಸಾಮಾನ್ಯವಾಗಿ ಯಾವುದೇ ಸಮಯದಲ್ಲಿ ವೈರಲ್ ಆಗುತ್ತವೆ. ಶನಿವಾರ, ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ ಮಹಿಂದ್ರಾ ಅವರು, ಸುಂದರವಾದ ಮರದ ಸುರಂಗದ ವೀಡಿಯೊವನ್ನು ಮರುಟ್ವೀಟ್ ಮಾಡಿದ್ದಾರೆ – ಇದನ್ನು “ಟ್ರನಲ್” ಎಂದೂ ಕರೆಯುತ್ತಾರೆ ಎಂದು ಹೇಳಿರುವ ಅವರು, … Continued

ಕಾಂಗ್ರೆಸ್‌ಗೆ ತೆಲಂಗಾಣ ನಾಯಕ ಎಂ.ಎ.ಖಾನ್‌ ರಾಜೀನಾಮೆ, ರಾಹುಲ್ ಗಾಂಧಿ ಪಕ್ಷದ ಪತನಕ್ಕೆ ಕಾರಣ ಎಂದ ಹಿರಿಯ ನಾಯಕ

ಹೈದರಾಬಾದ್‌: ಕಾಂಗ್ರೆಸ್‌ಗೆ ಮತ್ತೊಂದು ಆಘಾತವಾಗಿ, ತೆಲಂಗಾಣದ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಎಂ.ಎ. ಖಾನ್ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ರಾಹುಲ್‌ ಗಾಂಧಿಗೆ ಹಿರಿಯರೊಂದಿಗೆ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ” ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಅನುಭವಿ ರಾಜಕಾರಣಿಯಾದ ಖಾನ್ ಅವರು, ರಾಹುಲ್ … Continued

ರೈಲು ನಿಲ್ದಾಣದಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಕದ್ದು ಕಳ್ಳ ಪರಾರಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಲಕ್ನೋ: ಮಥುರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನು ವ್ಯಕ್ತಿಯೊಬ್ಬರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಪರಾಧ ಸೆರೆಯಾಗಿದೆ. ಈ ಘಟನೆಯ ವೀಡಿಯೋ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ವ್ಯಕ್ತಿ ಎಸ್ಕೇಪ್ ಆಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಎಲ್ಲರೂ ಮಲಗಿರುವುದನ್ನು ಗಮನಿಸಿದ … Continued

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಕೆಲವು ಗಂಟೆಗಳ ಮೊದಲು ಕ್ಲಬ್‌ನಲ್ಲಿ ಬಲವಂತವಾಗಿ ಕುಡಿಸುವಂತೆ ಕಾಣುವ ವೀಡಿಯೊ ಹೊರಬಿತ್ತು | ವೀಕ್ಷಿಸಿ

ನವದೆಹಲಿ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾದ ನೈಟ್‌ಕ್ಲಬ್‌ನಿಂದ ಹೊರಬರುವ ಮಾರ್ಗದಲ್ಲಿ ತತ್ತರಿಸುತ್ತಿರುವ ಸ್ಥಿತಿಯಲ್ಲಿಯಲ್ಲಿ ಭದ್ರತಾ ಕ್ಯಾಮೆರಾದ ದೃಶ್ಯಗಳು ತೋರಿಸಿದ ಒಂದು ದಿನದ ನಂತರ, ಈಗ ಮತ್ತೊಂದು ವೀಡಿಯೊ ಹೊರಬಿದ್ದಿದೆ. ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸುವ ಗಂಟೆಗಳ ಮೊದಲಿನದ್ದು ಎಂದು ಹೇಳಲಾದ ಮತ್ತೊಂದು ಕ್ಲಿಪ್ ಹೊರಬಿದ್ದಿದ್ದು, ಅದರಲ್ಲಿ ಫೋಗಟ್‌ ಅವರಿಗೆ ಡ್ಯಾನ್ಸ್ ಫ್ಲೋರ್‌ನಲ್ಲಿ … Continued

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್ ಅವರನ್ನು ಭೇಟಿಯಾದ ಆನಂದ್ ಶರ್ಮಾ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಅವರನ್ನು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸ್ಟೀರಿಂಗ್ ಸಮಿತಿಯ ಮಾಜಿ ಅಧ್ಯಕ್ಷ ಆನಂದ್ ಶರ್ಮಾ ದೆಹಲಿಯಲ್ಲಿ ಭೇಟಿಯಾದರು. ದೆಹಲಿಯ ಆಜಾದ್ ಅವರ ನಿವಾಸದಲ್ಲಿ ನಡೆದ ಭೇಟಿ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಎಂದು ಮೂಲಗಳು ಖಚಿತಪಡಿಸಿವೆ. … Continued

ಮಾಲ್ ಒಳಗೆ ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳಿಂದ ಭಜನೆ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಗರದ ಮಾಲ್‌ನಲ್ಲಿ ನಮಾಜ್ ಮಾಡುವ ಕುರಿತು ಶನಿವಾರ ವಿವಾದ ಭುಗಿಲೆದ್ದಿದೆ. ಬಲಪಂಥೀಯ ಹಿಂದೂಪರ ಸಂಘಟನೆಗಳ ಸದಸ್ಯರು ಮಾಲ್‌ನಲ್ಲಿ ಮುಸ್ಲಿಂ ನೌಕರರು ನಮಾಜ್ ಮಾಡುವುದನ್ನು ವಿರೋಧಿಸಿದರು. ಶನಿವಾರ, ಮಾಲ್‌ನ ನೆಲಮಹಡಿಯಲ್ಲಿನ ಅಗ್ನಿಶಾಮಕ ನಿರ್ಗಮನದ ಬಳಿ ಕೆಲವು ಉದ್ಯೋಗಿಗಳು ನಮಾಜ್ ಮಾಡುತ್ತಿದ್ದಾಗ, ಕೆಲವು ಹಿಂದೂಪರ ಸಂಘಟನೆಗಳ ಸದಸ್ಯರು ಸ್ಥಳಕ್ಕೆ ಆಗಮಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇಂದು … Continued

ಬಿಹಾರದ ಮೂವರು ಅಧಿಕಾರಿಗಳ ಮನೆ ಮೇಲೆ ವಿಚಕ್ಷಣ ದಳ ದಾಳಿ: 4 ಕೋಟಿ ರೂಪಾಯಿ ನಗದು ವಶ

ಪಾಟ್ನಾ: ಬಿಹಾರದ ಮೂವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ವಿಜಿಲೆನ್ಸ್ ಇನ್ವೆಸ್ಟಿಗೇಶನ್ ಬ್ಯೂರೋ (ವಿಐಬಿ) ದಾಳಿ ನಡೆಸಿದ ನಂತರ 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಯ ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರಾಯ್‌ ಅವರಿಗೆ ಸಂಬಂಧಿಸಿದ ಬಿಹಾರದ ಪಾಟ್ನಾ ಮತ್ತು ಕಿಶನ್‌ಗಂಜ್‌ನಲ್ಲಿ ವಿಐಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ … Continued

ಡಿಆರ್‌ಡಿಒದಲ್ಲಿ 1901 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ (CEPTAM) ನೇಮಕಾತಿ, ಹಿರಿಯ ತಾಂತ್ರಿಕ ಸಹಾಯಕ-B (STA-B) ಮತ್ತು ತಂತ್ರಜ್ಞ- ಹುದ್ದೆಗಳಿಗೆ 1901 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅಪೇಕ್ಷಿತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-ಬಿ ಮತ್ತು ಟೆಕ್ನಿಷಿಯನ್-ಎ … Continued