ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ನಂ.1ನೇ ಸ್ಥಾನಕ್ಕೆ ಜಿಗಿದ ಭಾರತ: ಎಲ್ಲ ಮಾದರಿಯಲ್ಲೂ ಭಾರತವೇ ಈಗ ನಂ.1…

ನವದೆಹಲಿ : ಭಾರತವು ಧರ್ಮಶಾಲಾದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು 4-1 ಅಂತರದಿಂದ ಗೆದ್ದ ಒಂದು ದಿನದ ನಂತರ, ರೋಹಿತ್ ಶರ್ಮಾ ತಂಡವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಭಾನುವಾರ ವಿಶ್ವ ಕ್ರಿಕೆಟ್ ಆಡಳಿತ ಮಂಡಳಿ(ಐಸಿಸಿ)ಯು ಬಿಡುಗಡೆ ಮಾಡಿದ ಇತ್ತೀಚಿನ ಪೆಕಿಂಗ್ ಆರ್ಡರ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೆ … Continued

ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆ : ಹಿಸ್ಸಾರ್ ಸಂಸದ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಹರ್ಯಾಣದ ಬಿಜೆಪಿಯ ಸಂಸದ ಬ್ರಿಜೇಂದ್ರ ಸಿಂಗ್ ಭಾನುವಾರ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಬಲವಾದ ರಾಜಕೀಯ ಕಾರಣಗಳಿಗಾಗಿಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. “ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಸೇವೆ ಸಲ್ಲಿಸಲು … Continued

ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ರಾಮನವಮಿಗೆ ʼಸಾರ್ವತ್ರಿಕ ರಜೆʼ ಘೋಷಣೆ; ಇದ್ಯಾವ ನಾಟಕ ಎಂದ ಬಿಜೆಪಿ

ಕೋಲ್ಕತ್ತಾ: ಈ ವರ್ಷದ ಏಪ್ರಿಲ್ 18ರ ರಾಮ ನವಮಿಯನ್ನು ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ. ದುರ್ಗಾ ಪೂಜೆ, ಕಾಳಿ ಪೂಜೆ ಮತ್ತು ಸರಸ್ವತಿ ಪೂಜೆ ಇವು ಪಶ್ಚಿಮ ಬಂಗಾಳದ ಪ್ರಮುಖ ಹಬ್ಬಗಳು. ರಾಮ ನವಮಿಗೆ ಇದೇ ಮೊದಲ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಮಮತಾ ಬ್ಯಾನರ್ಜಿಯವರ ತೃಣಮೂಲ … Continued

ಅಕ್ರಮ ಮರಳು ಗಣಿಗಾರಿಕೆ ಪ್ರಕರಣ: ಆರ್‌ಜೆಡಿ ನಾಯಕ-ಲಾಲು ಯಾದವ್ ಆಪ್ತನ ಬಂಧನ

ನವದೆಹಲಿ: ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಪ್ರಮುಖ ನಾಯಕ ಮತ್ತು ಲಾಲು ಪ್ರಸಾದ ಯಾದವ್ ಅವರ ನಿಕಟವರ್ತಿ ಸುಭಾಷ ಯಾದವ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಆರ್‌ಜೆಡಿ ಸುಭಾಷ ಯಾದವಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಇ.ಡಿ. ನಡೆಸಿದ 14 ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ಈ ಬಂಧನವಾಗಿದೆ. ಸುಭಾಷ … Continued

ತಮಿಳುನಾಡಿನಲ್ಲಿ 2019ರ ಸೂತ್ರದಂತೆ ಸ್ಥಾನ ಹಂಚಿಕೆ ಮಾಡಿದ ಡಿಎಂಕೆ : ಕಾಂಗ್ರೆಸ್ಸಿಗೆ 9 ಸ್ಥಾನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆ ತನ್ನ ಮಿತ್ರ ಪಕ್ಷವಾದ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಡಿಎಂಕೆ ಪಕ್ಷವು ತನ್ನ ಇಂಡಿಯಾ ಬ್ಲಾಕ್ ಮಿತ್ರವಾದ ಕಾಂಗ್ರೆಸ್ಸಿಗೆ ತಮಿಳುನಾಡಿನಲ್ಲಿ ಒಂಬತ್ತು ಸ್ಥಾನಗಳನ್ನು ಮತ್ತು ಪುದುಚೇರಿಯಲ್ಲಿ ಒಂದು ಸ್ಥಾನವನ್ನು ನೀಡಿದೆ. ಡಿಎಂಕೆಯ 2019 ರ ಸೀಟು ಹಂಚಿಕೆಯ ಸೂತ್ರದಂತೆ ಈ ಬಾರಿಯೂ … Continued

ವಿಶ್ವ ಸುಂದರಿ 2024 ಪ್ರಶಸ್ತಿ ಗೆದ್ದ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ

ಮುಂಬೈ: ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಅವರು ಶನಿವಾರ ಮಿಸ್‌ ವರ್ಲ್ಡ್ 2024 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಿಸ್ ಲೆಬನಾನ್ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು. ಇಲ್ಲಿ ನಡೆದ ಫೈನಲ್‌ನಲ್ಲಿ ಪೋಲೆಂಡ್‌ನ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಅವರು ತಮ್ಮ ಉತ್ತರಾಧಿಕಾರಿಗೆ ಮಿಸ್‌ ವರ್ಲ್ಡ್‌ ಕಿರೀಟವನ್ನು ತೊಡಿಸಿದರು. 28 … Continued

ಲೋಕಸಭಾ ಚುನಾವಣೆಗೆ ವಾರಗಳ ಮುಂಚೆ ಚುನಾವಣಾ ಆಯುಕ್ತ ಅರುಣ ಗೋಯೆಲ್ ದಿಢೀರ್‌ ರಾಜೀನಾಮೆ

ನವದೆಹಲಿ: ಅಚ್ಚರಿಯ ನಡೆಯಲ್ಲಿ, ಲೋಕಸಭೆ ಚುನಾವಣೆ ದಿನಾಂಕದ ನಿರೀಕ್ಷಿತ ಘೋಷಣೆಗೆ ಕೆಲವೇ ದಿನಗಳ ಮೊದಲು ಚುನಾವಣಾ ಆಯುಕ್ತ ಅರುಣ ಗೋಯೆಲ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರುಣ ಗೋಯೆಲ್ ಅವರ ಅಧಿಕಾರಾವಧಿ ಡಿಸೆಂಬರ್ 2027 ರವರೆಗೆ ಇತ್ತು. ಗೋಯೆಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. … Continued

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ರಾಜೀನಾಮೆ ನೀಡಿದ ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಕುನಾರ ಹೆಂಬ್ರಾಮ್..!

ಕೋಲ್ಕತ್ತಾ:  ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಕುನಾರ್ ಹೆಂಬ್ರಾಮ್ ಅವರು ವೈಯಕ್ತಿಕ ಕಾರಣ ನೀಡಿ ಲೋಕಸಭೆ ಚುನಾವಣೆಗೆ ಮುನ್ನ ಪಕ್ಷವನ್ನು ತೊರೆದಿದ್ದಾರೆ. ಹೆಂಬ್ರಾಮ್ ಜಾರ್‌ಗ್ರಾಮದ ಬಿಜೆಪಿ ಸಂಸದರಾಗಿದ್ದು, ರಾಜ್ಯದ ಬುಡಕಟ್ಟು ಪ್ರಾಬಲ್ಯದ ಮಾಜಿ ಮಾವೋವಾದಿಗಳ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ನಡೆಸಲಿರುವ ಕೆಲವು ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ. ಶನಿವಾರ ಮಾಧ್ಯಮದವರೊಂದಿಗೆ … Continued

ಲೋಕಸಭೆ ಚುನಾವಣೆ : ಆಂಧ್ರಪ್ರದೇಶದಲ್ಲಿ ಟಿಡಿಪಿ-ಬಿಜೆಪಿ-ಜನಸೇನೆ ನಡುವೆ ಸೀಟು ಹಂಚಿಕೆ ಒಪ್ಪಂದ ಅಂತಿಮ

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಎನ್‌ಡಿಎಯನ್ನು ಇನ್ನಷ್ಟು ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಮತ್ತು ಜನಸೇನಾ ಪಕ್ಷದ ಬೆಂಬಲ ಘೋಷಿಸಿದ್ದು, ಈ ಮೂರೂ ಪಕ್ಷಗಳು ಮೈತ್ರಿಯನ್ನು ಅಂತಿಮಗೊಳಿಸಿದೆ. ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಲಾಗಿದೆ ಎಂದು ಘೋಷಿಸಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಲೋಕಸಭೆ ಚುನಾವಣೆ … Continued

ಕಾಂಗ್ರೆಸ್ಸಿಗೆ ಆಘಾತ : ಸೋನಿಯಾ ಗಾಂಧಿ ಕುಟುಂಬದ ಆಪ್ತ ಬಿಜೆಪಿಗೆ ಸೇರ್ಪಡೆ

ಭೋಪಾಲ್ : ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ ಪಚೌರಿ, ಮಾಜಿ ಸಂಸದ ಗಜೇಂದ್ರ ಸಿಂಗ್ ರಾಜುಖೇಡಿ ಮತ್ತು ಪಕ್ಷದ ಮಾಜಿ ಶಾಸಕರು ಸೇರಿದಂತೆ ಹಲವವಾರು ನಾಯಕರು ಶನಿವಾರ ಭೋಪಾಲ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ … Continued