ಅಯೋಧ್ಯೆ ರಾಮಮಂದಿರ ಕುರಿತು ಆಕ್ಷೇಪಾರ್ಹ ಹೇಳಿಕೆ: ಮಣಿಶಂಕರ ಅಯ್ಯರ್ ಪುತ್ರಿ ವಿರುದ್ಧ ದೂರು ದಾಖಲು

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ‘ಪ್ರಾಣ ಪ್ರತಿಷ್ಠೆ’ ಖಂಡಿಸಿ ಜನವರಿ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ವಿರುದ್ಧ ದೂರು ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕರಾದ ಅಜಯ ಅಗರ್ವಾಲ್ ಅವರು ದೆಹಲಿಯ ಸೈಬರ್ ಕ್ರೈಂ ಪೊಲೀಸ್ … Continued

ಪಾಕಿಸ್ತಾನ ಐಎಸ್‌ಐಗೆ ಭಾರತದ ಸೇನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಭಾರತದ ರಾಯಭಾರಿ ಕಚೇರಿ ಕೆಲಸಗಾರನ ಬಂಧನ

ನವದೆಹಲಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಉತ್ತರ ಪ್ರದೇಶ ಎಟಿಎಸ್)ವು ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಪಾಕಿಸ್ತಾನಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್‌ನನ್ನು ಬಂಧಿಸಿದೆ. ಸತ್ಯೇಂದ್ರ ಸಿವಾಲ್ ಎಂಬವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಹಾಪುರ ಮೂಲದ ಆತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ(ಮಲ್ಟಿ-ಟಾಸ್ಕಿಂಗ್ ಸ್ಟಾಫ್ ( MTS) ಆಗಿ ಕೆಲಸ … Continued

ಫೆಬ್ರವರಿ 5 ರಿಂದ ಡಿಡಿಯಲ್ಲಿ ರಮಾನಂದ ಸಾಗರ ‘ರಾಮಾಯಣʼ ಧಾರವಾಹಿ ಮತ್ತೆ ಪ್ರಸಾರ

ನವದೆಹಲಿ: 1987 ರಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ಅವರ ಪೌರಾಣಿಕ ಧಾರವಾಹಿ ʼರಾಮಾಯಣʼವು ಮತ್ತೆ ದೂರದರ್ಶನ (ಡಿಡಿ) ನ್ಯಾಷನಲ್‌ನಲ್ಲಿ ಮತ್ತೆ ಪ್ರಸಾರವಾಗಲಿದೆ. ದೂರದರ್ಶನದ ಅಧಿಕೃತ ಹ್ಯಾಂಡಲ್‌ನ ಟ್ವೀಟ್ ಪ್ರಕಾರ ಈ ಧಾರವಾಹಿ ಟಿವಿಯಲ್ಲಿ ಮತ್ತೆ ಪ್ರಸಾರವಾಗಲು ಸಿದ್ಧವಾಗಿದೆ. ಶುಕ್ರವಾರ, ದೂರದರ್ಶನದ ಅಧಿಕೃತ X ಹ್ಯಾಂಡಲ್, ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿದ ರಮಾನಂದ ಸಾಗರ ಅವರ ಪೌರಾಣಿಕ … Continued

ವೀಡಿಯೊ..| ಎಲ್ಲಾ ಬುರುಡೆ..ಎಲ್ಲಾ ಬುರುಡೆ, ವಧು ಅನ್ನೋದು ಬುರುಡೆ..ವರ ಅನ್ನೋದು ಬುರುಡೆ : 568 ಜೋಡಿ ನಕಲಿ ಸಾಮೂಹಿಕ ವಿವಾಹ ಕಾರ್ಯಕ್ರಮ, 15 ಜನರ ಬಂಧನ

ಬಲಿಯಾ: ಮುಖ್ಯಮಂತ್ರಿ ಸಾಮೂಹಿಕ ವಿವಾಹ ಸ್ಕೀಮ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಉತ್ತರ ಪ್ರದೇಶದಲ್ಲಿ ವಿವಾಹ ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ. ಬುಧವಾರ ಮೊದಲ ಬಾರಿಗೆ ವರದಿಯಾದ ಈ ಹಗರಣದಲ್ಲಿ ನಕಲಿ ಸಾಮೂಹಿಕ ವಿವಾಹದಲ್ಲಿ ವಧುಗಳು ಹಾರ ಬದಲಾಯಿಸುವುದನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ … Continued

ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ರಿಂದ ಎಲ್‌.ಕೆ. ಅಡ್ವಾಣಿ ವರೆಗೆ: 1954 ರಿಂದ 2024ರ ವರೆಗಿನ ʼಭಾರತ ರತ್ನʼ ಪ್ರಶಸ್ತಿ ಪುರಸ್ಕೃತರ ಪಟ್ಟಿ

ನವದೆಹಲಿ : ಬಿಜೆಪಿ ದಿಗ್ಗಜ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು 1954 ರಲ್ಲಿ ಸ್ಥಾಪಿಸಲಾಯಿತು. ಮಾನವ ಪ್ರಯತ್ನದ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯ … Continued

ಎಸ್.ಬಿ.ಐ.ಗೆ ಲಾಭದಲ್ಲಿ ಗಣನೀಯ ಕುಸಿತ

ನವದೆಹಲಿ : ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಲಾಭದಲ್ಲಿ ಭಾರೀಕುಸಿತವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿವ್ವಳ ಲಾಭ ಶೇ.35ರಷ್ಟು ಕುಸಿತ ಕಂಡಿದೆ ಮೂರನೇ ತ್ರೈಮಾಸಿಕದಲ್ಲಿ ಲಾಭವು 9,164 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ … Continued

ತನ್ನ ಚುನಾವಣೆಯಲ್ಲಿ ಭಾರತ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೊಸ ಆರೋಪ ಮಾಡಿದ ಕೆನಡಾ

ನವದೆಹಲಿ: ತಮ್ಮ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಭಾರತದ ಪಾತ್ರವಿದೆ ಆರೋಪಿಸಿದ ತಿಂಗಳುಗಳ ನಂತರ, ಕೆನಡಾವು ಭಾರತವನ್ನು ತಮ್ಮ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಹುದಾದ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೆಸರಿಸಿದೆ. ಈ ಹೊಸ ಆರೋಪಕ್ಕೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಆರೋಪವನ್ನು ಕೆನಡಾದ ಭದ್ರತಾ ಗುಪ್ತಚರ ಸೇವೆಯು ಡಿಕ್ಲಾಸಿಫೈಡ್ ಗುಪ್ತಚರ ವರದಿಯಲ್ಲಿ ಮಾಡಿದೆ. … Continued

ಮೌಂಟ್ ಎವರೆಸ್ಟ್‌ ಪರ್ವತ ಶಿಖರದ 360-ಡಿಗ್ರಿಯ ಲುಕ್‌ ತೋರಿಸುವ ವೀಡಿಯೊ ವೈರಲ್: ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಭೂಮಿಯ ಮೇಲೆ ಎಲ್ಲವೂ ಚಿಕ್ಕದಾಗಿದೆ ಎಂದು ತೋರುವಂತಹ ಸ್ಥಳ ಭೂಮಿಯ ಮೇಲಿದ್ದರೆ ಬಹುಶಃ ಅದು ವಿಶ್ವದ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಎವರೆಸ್ಟ್ ಆಗಿರಬೇಕು. ಈಗ, ಪರ್ವತದ ಸೌಂದರ್ಯದ ಬಗ್ಗೆ ನಮಗೆ ಪರಿಚಯವಾಗುವಂತೆ, ಮೌಂಟ್ ಎವರೆಸ್ಟ್ ಶಿಖರದಿಂದ 360-ಡಿಗ್ರಿ ನೋಟವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. @historyinmemes ಬಳಕೆದಾರರಿಂದ X ನಲ್ಲಿ … Continued

ಪಂಜಾಬ್ ರಾಜ್ಯಪಾಲರ ಹುದ್ದೆಗೆ ಬನ್ವಾರಿಲಾಲ ಪುರೋಹಿತ್ ರಾಜೀನಾಮೆ

ನವದೆಹಲಿ: ಪಂಜಾಬ್ ಗವರ್ನರ್ ಬನ್ವಾರಿಲಾಲ ಪುರೋಹಿತ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆಗೆ “ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳನ್ನು” ಉಲ್ಲೇಖಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಪಂಜಾಬ್ ಹಾಗೂ ಚಂಡೀಗಢದ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.”ದಯವಿಟ್ಟು ಅದನ್ನೇ ಸ್ವೀಕರಿಸಿ ಎಂದು ರಾಷ್ಡ್ರಪತಿ ಮುರ್ಮು … Continued

ʼಭಾರತ ರತ್ನʼ ನೀಡಿದ್ದಕ್ಕೆ ಎಲ್‌.ಕೆ.ಅಡ್ವಾಣಿ ಬರೆದ ಕೃತಜ್ಞತಾ ಪತ್ರದಲ್ಲಿ ಸಂಸ್ಕೃತ ಮಂತ್ರದ ಉಲ್ಲೇಖ, ವಾಜಪೇಯಿಗೆ ನಮನ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಇಂದು, ಶುಕ್ರವಾರ ತಮಗೆ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ʼಭಾರತ ರತ್ನʼವನ್ನು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. “ಇದು ಒಬ್ಬ ವ್ಯಕ್ತಿಯಾಗಿ ನನಗೆ ಗೌರವ ಮಾತ್ರವಲ್ಲ, ನನ್ನ ಜೀವನದುದ್ದಕ್ಕೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ನಾನು ಶ್ರಮಿಸಿದ ಆದರ್ಶಗಳು ಮತ್ತು ತತ್ವಗಳಿಗೆ ಸಹ ನೀಡಿದ … Continued