ದುಬೈನಲ್ಲಿ ಮಹದೇವ ಬೆಟ್ಟಿಂಗ್ ಆಪ್ ಮಾಲೀಕನ ಬಂಧನ : ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭ

ನವದೆಹಲಿ : ಮಹಾದೇವ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಮತ್ತು ಮಹಾದೇವ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ ಮಾಲೀಕ ರವಿ ಉಪ್ಪಲ್ ಅವರನ್ನು ಸ್ಥಳೀಯ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದಾರೆ. ಇಂಟರ್‌ಪೋಲ್ ಮೂಲಕ ಜಾರಿ ನಿರ್ದೇಶನಾಲಯ ನೀಡಿದ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಆತನನ್ನು , ಯುನೈಟೆಡ್ ಅರಬ್ ಎಮಿರೇಟ್ಸ್‌ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದಾರೆ. ಕಳೆದ … Continued

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ… ಈಗ ರಾಜಸ್ಥಾನದ ನೂತನ ಮುಖ್ಯಮಂತ್ರಿ : ಸಿಎಂ ಸ್ಥಾನಕ್ಕೆ ಹೆಸರು ಘೋಷಿಸಿದ ವಸುಂಧರಾ ರಾಜೇ

ಜೈಪುರ: ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭಜಲಲಾಲ ಶರ್ಮಾ ಅವರು ರಾಜಸ್ಥಾನದ ನೂತನ ಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ. ರಾಜಸ್ಥಾನವು ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಮರಳಿದ ಪ್ರಮುಖ ರಾಜ್ಯವಾಗಿದೆ. ಇಂದು, ಸೋಮವಾರ ಬೆಳಿಗ್ಗೆ, ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಮೂವರು … Continued

ಐಪಿಎಲ್‌ 2024 ಹರಾಜು ಪಟ್ಟಿ ಪ್ರಕಟ: 333 ಆಟಗಾರರ ಪಟ್ಟಿ ಮುನ್ನಡೆಸುವ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಹರಾಜು ಪಟ್ಟಿಯನ್ನು ಡಿಸೆಂಬರ್ 11ರಂದು ಸೋಮವಾರ ಪ್ರಕಟಿಸಲಾಯಿತು. ವಿಶ್ವಕಪ್ ವಿಜೇತ ಟ್ರಾವಿಸ್ ಹೆಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ 333 ಆಟಗಾರರ ಹರಾಜು ಪಟ್ಟಿಯನ್ನು ಮುನ್ನಡೆಸಿದ್ದಾರೆ. IPL 2024 ಹರಾಜು: ಟಾಪ್ ಬ್ರಾಕೆಟ್‌ನಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ ಜೂನ್‌ನಲ್ಲಿ ವೆಸ್ಟ್ … Continued

ಅರೇ ಮೋಹನಜೀ, ಖಡೇ ತೋ ಹೋ ಜಾಯಿಯೇ …: ಮಧ್ಯಪ್ರದೇಶದ ಸಿಎಂ ಸ್ಥಾನಕ್ಕೆ ಬಿಜೆಪಿ ಹೆಸರಿಸಿದ್ದು ಹೀಗೆ…

ಭೋಪಾಲ್‌ :ಮೋಹನ ಯಾದವ್ ಅವರು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ಪ್ರಕಟಿಸಿದೆ. ಈ ಘೋಷಣೆಯು ಮೋಹನ ಯಾದವ್ ಮತ್ತು ಇತರ ಬಿಜೆಪಿಯ ನಾಐಕರು ಸೇರಿದಂತೆ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ಅವರು ಮೋಹನ ಯಾದವ್ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯ ಹೆಸರಿನ … Continued

ʼರಾಜ್ಯʼಗಳ ಒಪ್ಪಿಗೆಯಿಲ್ಲದೆ ʼಸಿಬಿಐʼ ಪ್ರಕರಣಗಳ ತನಿಖೆ ನಡೆಸಲು ಕಾನೂನು ಬೇಕು: ಸಂಸದೀಯ ಸಮಿತಿ

ನವದೆಹಲಿ : ಕೆಲವು ರಾಜ್ಯಗಳು ‘ಸಾಮಾನ್ಯ ಒಪ್ಪಿಗೆ’ (general consent) ಹಿಂಪಡೆದಿರುವುದು ನಿರ್ಣಾಯಕ ಪ್ರಕರಣಗಳ ತನಿಖೆಗೆ ಸಿಬಿಐನ ಅಧಿಕಾರದಲ್ಲಿ ತೀವ್ರ ಮಿತಿಗಳಿಗೆ ಕಾರಣವಾಗಿದೆ ಎಂದು ಪ್ರತಿಪಾದಿಸಿದ ಸಂಸದೀಯ ಸಮಿತಿಯು ಹೊಸ ಕಾನೂನನ್ನು ಜಾರಿಗೊಳಿಸುವ ಮತ್ತು ಸಿಬಿಐಗೆ ವ್ಯಾಪಕ ಅಧಿಕಾರ ನೀಡುವ ಅವಶ್ಯಕತೆಯಿದೆ ಎಂದು ಸೋಮವಾರ ಹೇಳಿದೆ. ಹೊಸ ಕಾನೂನು ಜಾರಿಯಾದರೆ ಸಿಬಿಐ “ರಾಜ್ಯದ ಒಪ್ಪಿಗೆ ಮತ್ತು … Continued

ಜೆಎನ್‌ ಯು ಕ್ಯಾಂಪಸ್‌ನಲ್ಲಿ ಧರಣಿ ನಡೆಸಿದರೆ ₹20,000, ದೇಶ ವಿರೋಧಿ ಘೋಷಣೆ ಕೂಗಿದರೆ ₹10,000 ದಂಡ : ಹೊಸ ನಿಯಮ

ನವದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಹಿಂಸಾಚಾರ, ಧರಣಿ ಮತ್ತು ಉಪವಾಸ ಸತ್ಯಾಗ್ರಹಗಳನ್ನು ನಡೆಸಿದರೆ ಇನ್ನು ಮುಂದೆ 20,000 ರೂಪಾಯಿ ದಂಡ ಬೀಳಲಿದೆ. ಅದೇ ವೇಳೆ ದೇಶ ವಿರೋಧಿ ಘೋಷಣೆ (Anti-national slogans) ಕೂಗುವುದು, ಧರ್ಮ, ಜಾತಿ ಅಥವಾ ಸಮುದಾಯದ ಕಡೆಗೆ ಅಸಹಿಷ್ಣುತೆ ಪ್ರಚೋದಿಸಿದರೆ 10,000 ರೂಪಾಯಿಗಳವರೆಗೆ ದಂಡ ವಿದಿಸಲಾಗುತ್ತದೆ ಎಂದು … Continued

ಬಿಜೆಪಿಯಿಂದ ಅಚ್ಚರಿಯ ಆಯ್ಕೆ : ಮೋಹನ ಯಾದವ್ ಮಧ್ಯಪ್ರದೇಶದ ನೂತನ ಸಿಎಂ

ಭೋಪಾಲ: ಅಚ್ಚರಿಯ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್‌ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯಾದವ್ (ಒಬಿಸಿ) ಸಮುದಾಯದ ನಾಯಕ ಮೋಹನ ಯಾದವ್ (58) ಅವರನ್ನು ಆಯ್ಕೆ ಮಾಡಿದೆ. ಮಧ್ಯಪ್ರದೇಶದಲ್ಲಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಇತರೆ ಹಿಂದುಳಿದ ವರ್ಗದವರು (ಒಬಿಸಿ) ಇದ್ದಾರೆ. ಆದರೆ, ಕುತೂಹಲಕಾರಿಯಾಗಿ ಯಾದವ ಸಮುದಾಯವು ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಸೋಮವಾರ ಸಂಜೆ, ಮೋಹನ ಯಾದವ್ ಬಿಜೆಪಿಯ ಶಾಸಕಾಂಗ ಪಕ್ಷದ … Continued

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕೇಂದ್ರ ಸರ್ಕಾರದ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್ ಸಂವಿಧಾನ ಪೀಠ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ‘ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ. ಆರ್ಟಿಕಲ್ 370 … Continued

ಅಯೋಧ್ಯೆ : ಭಗವಾನ್‌ ಶ್ರೀರಾಮನ ಜೀವನಗಾಥೆ ಸಾರುವ 100 ವಿಗ್ರಹಗಳ ಮೆರವಣಿಗೆಗೆ ಸಜ್ಜು

ಲಕ್ನೋ : ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಭಗವಾನ್‌ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಭಗವಾನ್‌ ರಾಮನ ಜೀವನಗಾಥೆ ಸಾರುವ ನೂರು ವಿಗ್ರಹಗಳೊಂದಿಗೆ ಮೆರಮಣಿಗೆ ನಡೆಸಲಾಗುವುದು ಎಂದು ಶಿಲ್ಪಿ ರಂಜಿತ್‌ ಮಂಡಲ್‌ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಜನನದಿಂದ ವನವಾಸದ ವರೆಗಿನ ಜೀವನ, ರಾವಣನ ವಿರುದ್ಧದ ವಿಜಯ ಹಾಗೂ ಅಯೋಧ್ಯೆಗೆ ಹಿಂದಿರುಗಿದ್ದು … Continued

“ಹಿಂದೂಗಳ ಕನಸು ನನಸಾಗಲಿ”: ರಾಮಮಂದಿರ ಉದ್ಘಾಟನೆಗೆ ಬಗ್ಗೆ ತೆಲಂಗಾಣ ಬಿಆರ್‌ಎಸ್‌ ನಾಯಕಿ ಕವಿತಾ

ಹೈದರಾಬಾದ್ : ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿದ್ದು, ಕೋಟ್ಯಂತರ ಹಿಂದೂಗಳ ಕನಸು ನನಸಾಗಿದೆ ಎಂದು ತೆಲಂಗಾಣದ ನಿರ್ಗಮಿತ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಪತ್ರಿ ಮತ್ತು ಬಿಆರ್‌ಎಸ್ ವಿಧಾನ ಪರಿಷತ್‌ ಸದಸ್ಯೆ ಕಲ್ವಕುಂಟ್ಲಾ ಕವಿತಾ ಭಾನುವಾರ ಹೇಳಿದ್ದಾರೆ. X ನಲ್ಲಿ ಬರೆದ ಪೋಸ್ಟ್‌ನಲ್ಲಿ, ಅವರು ಉದ್ಘಾಟನೆಗೊಳ್ಳಲಿರುವ ಭವ್ಯವಾದ ರಾಮಮಂದಿರದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. … Continued