ತನ್ನ ಗರ್ಲ್‌ ಫ್ರೆಂಡ್ ಮೇಲೆಯೇ ಕಾರು ಹರಿಸಿ ಕೈ-ಕಾಲು ಮುರಿದ ಐಎಎಸ್‌ ಅಧಿಕಾರಿಯ ಪುತ್ರ : ದೂರು ದಾಖಲು

ಮುಂಬೈ : ತನ್ನ ಗೆಳತಿಯ ಮೇಲೆಯೇ ಆಕೆಯ ಬಾಯ್‌ಫ್ರೆಂಡ್‌ ಕಾರು ಹರಿಸಿ ಕೈ- ಕಾಲು ಮುರಿದಿರುವ ಅಮಾನುಷ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರಿಯಾ ಸಿಂಗ್ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಿಯಾ ಸಿಂಗ್ ಅವರ ಮೇಲೆ ಕಾರು ಹರಿಸಿದ ವ್ಯಕ್ತಿಯನ್ನು ಅಶ್ವಜಿತ್ ಗಾಯಕವಾಡ್‌ ಎಂದು ಗುರುತಿಸಲಾಗಿದೆ. ಮುಂಬೈ ಥಾಣೆಯ ಕಾಸರವಾಡದ ಪೊಲೀಸ್ … Continued

ಕೇರಳದಲ್ಲಿ ಕೋವಿಡ್ ಉಪ ತಳಿ JN.1 ಪತ್ತೆ ; ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ

ನವದೆಹಲಿ: ಕೇರಳವು ಕೋವಿಡ್‌-19 ಉಪ-ತಳಿ JN.1 ಸೋಂಕಿನ ಪ್ರಕರಣವನ್ನು ಪತ್ತೆ ಮಾಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ದೃಢಪಡಿಸಿವೆ. ನವೆಂಬರ್ 18 ರಂದು ಆರ್‌ಟಿ-ಪಿಸಿಆರ್‌ (RT-PCR) ಪರೀಕ್ಷೆಯಲ್ಲಿ 79 ವರ್ಷದ ಮಹಿಳೆಯ ಮಾದರಿಯಲ್ಲಿ ಇದು ಪತ್ತೆಯಾಗಿದೆ ಎಂದು ಅದು ತಿಳಿಸಿದೆ. ಶೀತ-ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹೊಂದಿದ್ದ ರೋಗಿಯು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು … Continued

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: 6ನೇ ಆರೋಪಿ ಬಂಧನ

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಇಂದು, ಶನಿವಾರ (ಡಿಸೆಂಬರ್‌ ೧೬) ಆರನೇ ವ್ಯಕ್ತಿಯನ್ನು ಬಂಧಿಸಿದ್ದಾರೆ. ‘ಮಾಸ್ಟರ್ ಮೈಂಡ್’ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ ಕುಮಾವತ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 2001 ರ ದಾಳಿಯ 22ನೇ ಕರಾಳ ವಾರ್ಷಿಕ ದಿನದಂದು ಡಿಸೆಂಬರ್ 13 ರ ಘಟನೆಯನ್ನು … Continued

ಭಾರತ vs ದಕ್ಷಿಣ ಆಫ್ರಿಕಾ : ಟೆಸ್ಟ್ ಸರಣಿಯಿಂದ ಹೊರಬಿದ್ದ ಮೊಹಮ್ಮದ್ ಶಮಿ, ಏಕದಿನ ಸರಣಿಯಿಂದ ಹಿಂದೆ ಸರಿದ ದೀಪಕ ಚಹಾರ್

ನವದೆಹಲಿ: ಭಾರತದ ಇಬ್ಬರು ಅನುಭವಿ ವೇಗಿಗಳನ್ನು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗಿಡಲಾಗಿದೆ. ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ದೀಪಕ್ ಚಹಾರ್ ಏಕದಿನ ಸರಣಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಡಿಸೆಂಬರ್ 16 ಶನಿವಾರದಂದು ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಈ ಬೆಳವಣಿಗೆ ಬಗ್ಗೆ ಪ್ರಕಟಿಸಿದೆ. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ … Continued

“ಅದು ನನ್ನ ಹಣವಲ್ಲ, ಆದರೆ…”: ತೆರಿಗೆ ಇಲಾಖೆ ವಶಪಡಿಸಿಕೊಂಡ ₹ 350 ಕೋಟಿ ಹಣದಬಗ್ಗೆ ಕಾಂಗ್ರೆಸ್ ಸಂಸದರ ಮೊದಲ ಪ್ರತಿಕ್ರಿಯೆ

ನವದೆಹಲಿ : ತನಗೆ ಸಂಬಂಧಿಸಿದ ನಿವೇಶನಗಳಿಂದ ₹ 350 ಕೋಟಿ ವಶಪಡಿಸಿಕೊಂಡ ದಾಖಲೆಯ ಬಗ್ಗೆ 10 ದಿನಗಳ ನಂತರ ಮೌನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮೌನ ಮುರಿದಿದ್ದಾರೆ. ತಮ್ಮ ಕುಟುಂಬ ದಾಳಿಗೊಳಗಾದ ಕಂಪನಿಗಳ ವ್ಯವಹಾರವನ್ನು ನಿರ್ವಹಿಸುತ್ತದೆ ಮತ್ತು ವಸೂಲಿ ಮಾಡಿದ ಹಣವು ನೇರವಾಗಿ ತಮ್ಮದಲ್ಲ, ಆದರೆ ದಾಳಿಗೊಳಗಾದ ಕಂಪನಿಗಳಿಗೆ ಸೇರಿದೆ. ಈ ಹಣವು ಕಾಂಗ್ರೆಸ್ … Continued

ಸಂಸತ್ ಭದ್ರತಾ ಉಲ್ಲಂಘನೆ: ‘ಮಾಸ್ಟರ್ ಮೈಂಡ್’ ಲಲಿತ್ ಝಾ ಯಾರು? ಆತನ ಬಗ್ಗೆ ಕುತೂಹಲಕಾರಿ ವಿವರ ಬಹಿರಂಗಪಡಿಸಿದ ಕುಟುಂಬ

ನವದೆಹಲಿ : ಸಂಸತ್ತಿನ ಭದ್ರತಾ ಉಲ್ಲಂಘನೆಯ ಮಾಸ್ಟರ್‌ಮೈಂಡ್ ಲಲಿತ್ ಮೋಹನ ಝಾ ಬಾಲ್ಯದಿಂದಲೂ ಶಾಂತ ವ್ಯಕ್ತಿಯಾಗಿದ್ದು, ಯಾವಾಗಲೂ ಗದ್ದಲದಿಂದ ದೂರವಿದ್ದರು ಎಂದು ಸಂಸತ್ತಿನ ಒಳಗೆ ಹೊಗೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ ಆರೋಪಿಯ ಬಗ್ಗೆ ಆಘಾತಕ್ಕೊಳಗಾದ ಬಿಹಾರ ಮೂಲದ ಶಿಕ್ಷಕನ ಕುಟುಂಬ ಸದಸ್ಯರು ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. . ಲಲಿತ್ ಝಾ ಹಿರಿಯ ಸಹೋದರ … Continued

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನಿಗೆ 25 ವರ್ಷಗಳ ಜೈಲು ಶಿಕ್ಷೆ

ಲಕ್ನೋ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹೊತ್ತಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಒಂಬತ್ತು ವರ್ಷಗಳ ಬಳಿಕ 25 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, ವಿಧಾನಸಭೆಯಿಂದ ಅನರ್ಹತೆಯಾಗುವ ಭೀತಿ ಎದುರಿಸುತ್ತಿದ್ದಾರೆ. ಈ ಅಪರಾಧವು 2014 ರಲ್ಲಿ ನಡೆದಿದ್ದು, ದೂರು ದಾಖಲಿಸಿದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಶಾಸಕರು ಕುಟುಂಬಕ್ಕೆ ಒತ್ತಡ ಮತ್ತು … Continued

ಐಪಿಎಲ್ 2024: ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ನೇಮಕ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸೀಸನ್‌ಗೆ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಶುಕ್ರವಾರ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಇದು ಮುಂಬೈ ಇಂಡಿಯನ್ಸ್ (MI) ನಾಯಕನಾಗಿ ರೋಹಿತ್ ಶರ್ಮಾ ಅವರ ಹತ್ತು ವರ್ಷಗಳ ಅಧಿಕಾರಾವಧಿಯನ್ನು ಕೊನೆಗೊಳಿಸಿತು. ನಾಯಕನಾಗಿದ್ದ ಸಮಯದಲ್ಲಿ, ರೋಹಿತ್ ಐದು ಐಪಿಎಲ್ ಟ್ರೋಫಿ ಗೆಲ್ಲಲು ಫ್ರಾಂಚೈಸಿಗೆ ಮಾರ್ಗದರ್ಶನ ನೀಡಿದರು. … Continued

ರಾಜಸ್ಥಾನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ತಂದೆ-ತಾಯಿಯ ಪಾದ ತೊಳೆದ ಭಜನಲಾಲ ಶರ್ಮಾ | ವೀಕ್ಷಿಸಿ

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ಭಜನಲಾಲ ಶರ್ಮಾ ಅವರು ಶುಕ್ರವಾರ ತಮ್ಮ ಮನೆಯಲ್ಲಿ ತಂದೆ ಸ್ವರೂಪ್ ಶರ್ಮಾ ಅವರ ಆಶೀರ್ವಾದ ಪಡೆದರು. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊದಲ್ಲಿ ಅವರು ತಮ್ಮ ತಂದೆ-ತಾಯಿಯ ಪಾದಗಳನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಶರ್ಮಾ ಶುಕ್ರವಾರ (ಡಿಸೆಂಬರ್‌ ೧೫) ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. … Continued

ಎಂ.ಎಸ್. ಧೋನಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿ : ಐಪಿಎಸ್ ಅಧಿಕಾರಿ ಸಂಪತ್‌ಗೆ 15 ದಿನಗಳ ಜೈಲು ಶಿಕ್ಷೆ

ಚೆನ್ನೈ: ಕ್ರಿಕೆಟಿಗ ಎಂ.ಎಸ್‌. ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಸಂಪತಕುಮಾರ ಅವರಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿಗಳಾದ ಎಸ್. ಎಸ್. ಸುಂದರ ಮತ್ತು ಸುಂದರ ಮೋಹನ ಅವರಿದ್ದ ನೇತೃತ್ವದ ವಿಭಾಗೀಯ ಪೀಠವು ಕುಮಾರ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಶಿಕ್ಷೆಯನ್ನು ಮೂವತ್ತು ದಿನಗಳವರೆಗೆ … Continued