ಆಸ್ತಿ ಕಬಳಿಸಲು ಒಂದೇ ಕುಟುಂಬದ 6 ಮಂದಿ ಹತ್ಯೆ

ಹೈದರಾಬಾದ್‌ : ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮಕ್ಲೂರು ಗ್ರಾಮದಲ್ಲಿ ಒಂದು ವಾರದ ಅವಧಿಯಲ್ಲಿ ಒಂದೇ ಕುಟುಂಬದ ಆರು ಸದಸ್ಯರನ್ನು ಆಸ್ತಿ ವಿಚಾರವಾಗಿ ಹತ್ಯೆ ಮಾಡಲಾಗಿದೆ. ಪ್ರಮುಖ ಆರೋಪಿ ಮಕ್ಲೂರು ಮೂಲದ ಪ್ರಶಾಂತ (20) ಕೊಲೆಗೈದ ಶಂಕಿತ ಆರೋಪಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಕಾಮರೆಡ್ಡಿ ಜಿಲ್ಲೆಯ ಸದಾಶಿವನಗರದಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾದ ನಂತರ ಅಧಿಕಾರಿಗಳು … Continued

ಅಯೋಧ್ಯೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಎಲ್‌ಕೆ ಅಡ್ವಾಣಿ, ಮುರಳಿಮನೋಹರ ಜೋಶಿಗೆ ಮನವಿ: ರಾಮಮಂದಿರ ಟ್ರಸ್ಟ್

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿ ಹಿರಿಯರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಆರೋಗ್ಯ ಮತ್ತು ವಯಸ್ಸಿನ ಕಾರಣ ಮುಂದಿನ ತಿಂಗಳು ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂದು ದೇವಸ್ಥಾನದ ಟ್ರಸ್ಟ್ ಸೋಮವಾರ ತಿಳಿಸಿದೆ. “ಇಬ್ಬರೂ ಹಿರಿಯರು ಮತ್ತು ಅವರ ವಯಸ್ಸನ್ನು ಪರಿಗಣಿಸಿ, ಅವರನ್ನು ಪಾಲ್ಗೊಳ್ಳದಂತೆ … Continued

ಅಯ್ಯೋ ರಾಮಾ..| ಕಾಂಗ್ರೆಸ್ಸಿನ ‘ದೇಶಕ್ಕಾಗಿ ದೇಣಿಗೆʼ ಕ್ರೌಡ್‌ಫಂಡಿಂಗ್ ಅಭಿಯಾನ ಆರಂಭ : ಕ್ಲಿಕ್‌ ಮಾಡಿದ್ರೆ ಹೋಗುವುದು ಬಿಜೆಪಿ ದೇಣಿಗೆ ಪುಟಕ್ಕೆ ..!

ನವದೆಹಲಿ : ರಾಜಕೀಯ ಪಕ್ಷಕ್ಕೆ ಹಣವನ್ನು ದೇಣಿಗೆ ನೀಡುವಂತೆ ಬೆಂಬಲಿಗರನ್ನು ಆಹ್ವಾನಿಸುವ ತನ್ನ ‘ದೇಶಕ್ಕಾಗಿ ದೇಣಿಗೆ (‘Donate for Desh)’ ಕ್ರೌಡ್‌ಫಂಡಿಂಗ್ ಅಭಿಯಾನ ಆರಂಭಿಸಿದ್ದು, ಆದರೆ ಸೋಮವಾರ (ಡಿಸೆಂಬರ್‌ 18) ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ತಾಂತ್ರಿಕವಾಗಿ ಅಡೆತಡೆ ಎದುರಾಗಿದೆ. ಪಕ್ಷವು ಈ ಅಭಿಯಾನವನ್ನು ಘೋಷಿಸುವ ಮೊದಲು ಡೊಮೇನ್ ಹೆಸರುಗಳನ್ನು ಬುಕ್ ಮಾಡಲಿಲ್ಲ. ಇದರ ಪರಿಣಾಮವಾಗಿ, DonateforDesh.org … Continued

ತಮಿಳುನಾಡು ಮಳೆ: 7,500 ಜನರ ಸ್ಥಳಾಂತರ, ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ 800 ಜನ, ಕಾಯಲ್‌ಪಟ್ಟಿಣಂನಲ್ಲಿ ಒಂದೇ ದಿನ 95 ಸೆಂಮೀ ದಾಖಲೆ ಮಳೆ…!

ಚೆನ್ನೈ: ಕಳೆದ ದಿನದಿಂದ ಸುರಿದ ಭಾರೀ ಮಳೆಯ ನಂತರ ತಿರುನಲ್ವೇಲಿ ಮತ್ತು ತೂತುಕುಡಿ ಸೇರಿದಂತೆ ದಕ್ಷಿಣ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿನ ಹಳ್ಳಿಗಳು, ಪಟ್ಟಣಗಳು, ರಸ್ತೆಗಳು ಮತ್ತು ಹೆದ್ದಾರಿಗಳು ಜಲಾವೃತಗೊಂಡು ನದಿಗಳನ್ನು ಹೋಲುತ್ತಿವೆ. ಧಾರಾಕಾರ ಮಳೆಯಿಂದ ತತ್ತರಿಸಿರುವ ತಮಿಳುನಾಡಿನ ನಾಲ್ಕು ದಕ್ಷಿಣ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಭಾರೀ … Continued

ಕೋವಿಡ್‌ ಸೋಂಕು ಹೆಚ್ಚಳದ ನಂತರ ರಾಜ್ಯಗಳಿಗೆ ಕೋವಿಡ್‌ ಸಲಹೆ ನೀಡಿದ ಕೇಂದ್ರ

ನವದೆಹಲಿ: ಕೇರಳದ ತಿರುವನಂತಪುರಂನ 79 ವರ್ಷದ ಮಹಿಳೆ ಮಾದರಿಯಲ್ಲಿ ಕೊರೊನಾ ವೈರಸ್ ಉಪ-ರೂಪಾಂತರಿ JN.1 ಮೊದಲ ಪ್ರಕರಣ ಪತ್ತೆಯಾದ ನಂತರ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಲಹೆಯನ್ನು ನೀಡಿದೆ. ಈ ಹಿಂದೆ, ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಪ್ರಯಾಣಿಕರಲ್ಲಿ ಸಿಂಗಾಪುರದಲ್ಲಿ ಜೆಎನ್.1 ಉಪ-ರೂಪಾಂತರಿ ಪತ್ತೆಯಾಗಿತ್ತು. ಹೀಗಾಗಿ “ಮುಂಬರುವ ಹಬ್ಬದ ಋತುವನ್ನು ಪರಿಗಣಿಸಿ, ನೈರ್ಮಲ್ಯ ಅನುಸರಿಸುವ ಮೂಲಕ ರೋಗ ಹರಡುವ … Continued

ಲೋಕಸಭೆಯಲ್ಲಿ ಟೆಲಿಕಾಂ ಮಸೂದೆ ಮಂಡನೆ ; ‘ರಾಷ್ಟ್ರೀಯ ಭದ್ರತೆ’ ಸಂದರ್ಭದಲ್ಲಿ ಸೇವೆ ಸ್ಥಗಿತ, ಸ್ವಾಧೀನಕ್ಕೆ ಅವಕಾಶ

ನವದೆಹಲಿ: ದೂರಸಂಪರ್ಕ ವಲಯವನ್ನು ನಿಯಂತ್ರಿಸುವ 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸೋಮವಾರ ದೂರಸಂಪರ್ಕ ಮಸೂದೆ-2023 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಲೋಕಸಭೆಯಲ್ಲಿ ಟೆಲಿಕಾಂ ಮಸೂದೆಯನ್ನು ಮಂಡಿಸಿದರು. ಪ್ರಸ್ತಾವಿತ ಮಸೂದೆಯು ರಾಷ್ಟ್ರೀಯ ಭದ್ರತೆ ಉಲ್ಲೇಖಿಸಿ, ಯಾವುದೇ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಬಹುದಾಗಿದೆ. ಅಲ್ಲದೆ, … Continued

ಅಭೂತಪೂರ್ವ ಕ್ರಮದಲ್ಲಿ ಸಂಸತ್ತಿನಿಂದ ವಿಪಕ್ಷಗಳ 45 ರಾಜ್ಯಸಭಾ ಸದಸ್ಯರು, 33 ಲೋಕಸಭೆ ಸದಸ್ಯರು ಅಮಾನತು…!

ನವದೆಹಲಿ: ಅಭೂತಪೂರ್ವ ಬೆಳವಣಿಗೆಯಲ್ಲಿ, ಕಳೆದ ವಾರ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸೇರಿ 78 ಸಂಸದರನ್ನು ಸೋಮವಾರ (ಡಿಸೆಂಬರ್‌ 18) ಅಮಾನತುಗೊಳಿಸಲಾಗಿದೆ. ಭದ್ರತಾ ಲೋಪದ ಕುರಿತು ಹೇಳಿಕೆ ನೀಡುವಂತೆ ಗೃಹ ಸಚಿವರು ಒತ್ತಾಯಿಸಿದ್ದಕ್ಕಾಗಿ ಹದಿನಾಲ್ಕು ಸಂಸದರನ್ನು … Continued

ನ್ಯಾಯಾಲಯಕ್ಕೆ ವಾರಾಣಸಿ ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಸಿದ ಪುರಾತತ್ವ ಇಲಾಖೆ

ನವದೆಹಲಿ : ಭಾರತೀಯ ಪುರಾತತ್ವ ಇಲಾಖೆಯು ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ‘ವೈಜ್ಞಾನಿಕ ಸಮೀಕ್ಷೆ’ ವರದಿಯನ್ನು ಸಲ್ಲಿಸಿದೆ. ಸೋಮವಾರ ಮಧ್ಯಾಹ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಯಿತು. ಇದನ್ನು ಸಾರ್ವಜನಿಕಗೊಳಿಸಲಾಗುತ್ತದೆಯೇ ಅಥವಾ ಅರ್ಜಿದಾರರಾದ ಹಿಂದೂ ಪಕ್ಷದೊಂದಿಗೆ ಹಂಚಿಕೊಳ್ಳಲಾಗುತ್ತದೆಯೇ ಅಥವಾ ಮುಸ್ಲಿಂ ಪಕ್ಷದೊಂದಿಗೆ ಹಂಚಿಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ. … Continued

ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 30ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿದ ಲೋಕಸಭಾ ಸ್ಪೀಕರ್

ನವದೆಹಲಿ : ಲೋಕಸಭೆ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆಯ ವೇಳೆ ಸಂಸದರು ಸದನದೊಳಗೆ ಫಲಕಗಳನ್ನು ಪ್ರದರ್ಶಿಸಿದ್ದರಿಂದ ಕಾಂಗ್ರೆಸ್ ನಾಯಕ ಅಧೀರ ರಂಜನ ಚೌಧರಿ ಸೇರಿದಂತೆ 30 ಪ್ರತಿಪಕ್ಷ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸೋಮವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅಮಾನತುಗೊಳಿಸಿದ್ದಾರೆ. … Continued

ಮಹಿಳೆಯ ಮೇಲೆ ಕಾರು ಚಲಾಯಿಸಿದ ಆರೋಪ: ಹಿರಿಯ ಅಧಿಕಾರಿಯ ಪುತ್ರನ ಬಂಧನ

ಮುಂಬೈ: ಈ ವಾರದ ಆರಂಭದಲ್ಲಿ ಥಾಣೆಯಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಮಹಿಳೆಯನ್ನು ಗಾಯಗೊಳಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲ ಗಾಯಕ್ವಾಡ್ ಅವರ ಪುತ್ರ ಅಶ್ವಜಿತ್ ಗಾಯಕ್ವಾಡ್ ಮತ್ತು ರೊಮಿಲ್ … Continued