ಡ್ರಗ್ಸ್​ ಕೇಸ್​ನಲ್ಲಿ ಬಾಲಿವುಡ್‌ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಬಂಧನ

ಮುಂಬೈ: ಡ್ರಗ್ಸ್​​ ಪಾರ್ಟಿಗೆ ತೆರಳಿದವರಲ್ಲಿ ಬಾಲಿವುಡ್‌ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದ ಎನ್​ಸಿಬಿ ಅಧಿಕಾರಿಗಳು ಈಗ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಇದರಿಂದ ನಟ ಶಾರುಖ್​ ಖಾನ್​ಗೆ ಸಂಕಷ್ಟ ಹೆಚ್ಚಿದೆ. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ … Continued

ಭಾರತದಲ್ಲಿ ಜಾತ್ಯತೀತತೆ ವ್ಯಾಖ್ಯಾನ ವಿರೂಪಗೊಳಿಸಲಾಗಿದೆ … ‘ಕಠಿಣ ಹಿಂದುತ್ವ’ ಎಂಬುದು ಏನೂ ಇಲ್ಲ: ರಾಮ ಮಾಧವ್

ನವದೆಹಲಿ: ಹಿಂದುತ್ವವು ‘ಭಾರತ’ದ ಮೂಲಭೂತ ಸಿದ್ಧಾಂತವಾಗಿದೆ ಮತ್ತು ಭಾರತದಲ್ಲಿ ಈ ನಂಬಿಕೆಯ ಬಗ್ಗೆ ಸಾಕಷ್ಟು ತಪ್ಪುಗ್ರಹಿಕೆಗಳಿವೆ, ಅದನ್ನೇ ನಾನು ನನ್ನ ಹೊಸ ಪುಸ್ತಕ’ ಹಿಂದುತ್ವ ಮಾದರಿ ‘ಮೂಲಕ ಹೋಗಲಾಡಿಸಲು ಬಯಸಿದ್ದೇನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ರಾಮ್ ಮಾಧವ್ ಹೇಳಿದ್ದಾರೆ. ಈ ಪುಸ್ತಕದಲ್ಲಿ ನಾನು ಸ್ಪರ್ಶಿಸಲು ಪ್ರಯತ್ನಿಸಿದ್ದು ಹಿಂದುತ್ವದ ಬಗ್ಗೆ ಮತ್ತು ದೀನ್ … Continued

ಭವಾನಿಪುರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಮಮತಾ ಬ್ಯಾನರ್ಜಿ ಭರ್ಜರಿ ಜಯ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ, ಅವರ ಎದುರಾಳಿ ಅಭ್ಯರ್ಥಿ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಭರ್ಹರಿ ಅಂತರದಿಂದ ಸೋಲಿಸಿದ್ದಾರೆ. ಅಂತಿಮ ಸುತ್ತಿನ ಮತ ಎಣಿಕೆ ಭಬಾನಿಪುರದಲ್ಲಿ ಮುಕ್ತಾಯವಾಗುತ್ತಿದ್ದಂತೆ, ಮಮತಾ ಬ್ಯಾನರ್ಜಿ 58,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಭವಾನಿಪುರದಲ್ಲಿ 21 ನೇ ಸುತ್ತಿನ … Continued

ಭಾರತದ 72 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಖಾಲಿ:ಮುಂದೆ ವಿದ್ಯುತ್‌ ಕೊರತೆ ಸಂಕಷ್ಟ..?

ನವದೆಹಲಿ : ಭಾರತದಲ್ಲಿ ಕಲ್ಲಿದ್ದಲು (coal) ಬಿಕ್ಕಟ್ಟು ಗಂಭೀರವಾಗಿದೆ. ಇದರಿಂದಾಗಿ ಹಲವು ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು (power supply )ನಿಲ್ಲಿಸುವ ನಿರೀಕ್ಷೆ ಇದೆ. ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಾದ ಕೋಲ್ ಇಂಡಿಯಾ ಲಿಮಿಟೆಡ್ ನಲ್ಲಿ ಸಮಸ್ಯೆ ಕಂಡು ಬಂದಿದೆ. ವಿದ್ಯುತ್ ಸ್ಥಾವರಕ್ಕೆ ನಿಯಮಿತವಾಗಿ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರ ಕೋಲ್ ಇಂಡಿಯಾವನ್ನು ಕೇಳಿಕೊಂಡಿದೆ. ಕೇಂದ್ರ ಸಂಸ್ಥೆ … Continued

ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾನುವಾರ ದೇಶಾದ್ಯಂತ ದಾಖಲೆಯ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 102.39 ರೂ. ಮತ್ತು ಮುಂಬೈನಲ್ಲಿ 108.43 ರೂ. ದಾಖಲಾಗಿದೆ. ಡೀಸೆಲ್ ದರಗಳು ಕೂಡ ಏರಿಕೆಯನ್ನು ಕಂಡಿದ್ದು, ದೆಹಲಿಯಲ್ಲಿ 90.77 ರೂ. ಮತ್ತು … Continued

ಭಾರತದಲ್ಲಿ 22,842 ಹೊಸ ಕೋವಿಡ್ -19 ಪ್ರಕರಣಗಳು ವರದಿ.. ಇದು ನಿನ್ನೆಗಿಂತ 6.2% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 22,842 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ ಶೇಕಡಾ 6.2 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,38,13,903 ಕ್ಕೆ ತಲುಪಿದೆ. ಶನಿವಾರದ 24,354 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿತ್ತು. ಇದು ಶುಕ್ರವಾರ ದಾಖಲಾದ ಪ್ರಕರಣಗಳಿಗಿಂತ ಶೇಕಡಾ 8.9 ರಷ್ಟು ಕಡಿಮೆಯಾಗಿದೆ. … Continued

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ: ಬಾಲಿವುಡ್‌ ಸ್ಟಾರ್‌ ಶಾರುಖ್ ಪುತ್ರ ಆರ್ಯನ್ ಖಾನ್ ವಿಚಾರಣೆ

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮುಂಬೈ ಡ್ರಗ್ ಬಸ್ಟ್ ಪ್ರಕರಣದಲ್ಲಿ ಕಾರ್ಡೆಲಿಯಾ ಕ್ರೂಸ್ ಎಂಪ್ರೆಸ್ ಹಡಗಿನಲ್ಲಿ ಪ್ರಶ್ನಿಸುತ್ತಿದೆ ಎಂದು ವರದಿಯಾಗಿದೆ. ಮುಂಬೈ ಕರಾವಳಿಯಲ್ಲಿ ಶನಿವಾರ ರಾತ್ರಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಪ್ರಶ್ನಿಸುತ್ತಿದೆ. ಆರ್ಯನ್ … Continued

ಮುಂಬೈ ಕರಾವಳಿಯಲ್ಲಿ ಕ್ರೂಸ್‌ನಲ್ಲಿ ರೇವ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ; ಸೂಪರ್‌ ಸ್ಟಾರ್‌ ನಟನ ಪುತ್ರ ಸೇರಿ 10 ಜನರ ಬಂಧನ

ಮುಂಬೈ: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ ಸಿಬಿ)ದವರು ಮುಂಬೈ ಕರಾವಳಿಯಲ್ಲಿ ಕ್ರೂಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಸೂಪರ್‌ ಸ್ಟಾರ್ ನಟನ ಪುತ್ರ ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಖಚಿತ ಸುಳಿವು ಪಡೆದ ನಂತರ, ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರ ಎನ್‌ಸಿಬಿ ಅಧಿಕಾರಿಗಳು … Continued

ಉತ್ತರಾಖಂಡದ ಹಿಮಪಾತ: ಕಾಣೆಯಾದ ಐವರಲ್ಲಿ ನಾಲ್ವರು ನೌಕಾಪಡೆ ಪರ್ವತಾರೋಹಿಗಳ ಮೃತದೇಹ ಪತ್ತೆ

ನವದೆಹಲಿ: ಉತ್ತರಾಖಂಡದ ಪರ್ವತದ ಮೇಲೆ ಶುಕ್ರವಾರ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳಲ್ಲಿ ನಾಲ್ವರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಲೆಫ್ಟಿನೆಂಟ್ ಸಿಡಿಆರ್ ರಜನಿಕಾಂತ್ ಯಾದವ್, ಲೆಫ್ಟಿನೆಂಟ್ ಸಿಡಿಆರ್ ಯೋಗೀಶ್ ತಿವಾರಿ, ಲೆಫ್ಟಿನೆಂಟ್ ಸಿಡಿಆರ್ ಅನಂತ್ ಕುಕ್ರೆಟಿ ಮತ್ತು ಹರಿ ಓಂ ಅವರ ಶವಗಳನ್ನು ಚಮೋಲಿಯಿಂದ ಶನಿವಾರ ಪತ್ತೆಹಚ್ಚಲಾಗಿದೆ ಎಂದು ಭಾರತೀಯ ನೌಕಾಪಡೆ ಟ್ವೀಟ್ … Continued

ಲಡಾಕಿನ ಲೇಹದಲ್ಲಿ ಜಗತ್ತಿನ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜದ ಅನಾವರಣ

ನವದೆಹಲಿ: ಖಾದಿ ಬಟ್ಟೆಯಲ್ಲಿ ರಚಿಸಲಾದ ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಮಹಾತ್ಮ ಗಾಂಧೀಜಿಯವರ 152ನೇ ಜನ್ಮದಿನವಾದ ಅಕ್ಟೋಬರ್‌ 2ರಂದು ಲಡಾಕಿನ ಲೇಹದಲ್ಲಿ ಅನಾವರಣಗೊಳಿಸಲಾಯಿತು. ಲಡಾಕ್ ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ. ಮಾಥುರ್ ನೂತನ ರಾಷ್ಟಧ್ವಜವನ್ನು ಅರಳಿಸಿದರು. 225 ಅಡಿ ಉದ್ದ ಹಾಗೂ 150 ಅಡಿ ಅಗಲದ ಈ ತ್ರಿವರ್ಣ ಧ್ವಜವು 1 ಸಾವಿರ ಕೆ.ಜಿ. ಭಾರವಿದೆ. … Continued