ಗಾಲ್ವಾನ್‌ ಘರ್ಷಣೆಯಲ್ಲಿ ಸತ್ತ ಚೀನಾ ಸೈನಿಕರೆಷ್ಟು? ಮುಗಿಯದ ಗೊಂದಲ

ನವದೆಹಲಿ: ಕಳೆದ ವರ್ಷ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ಮುಖಾಮುಖಿಯಾಗಿ ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಎಷ್ಟು ಸೈನಿಕರು ಕೊಲ್ಲಲ್ಪಟ್ಟರು? ಅದು ನಾಲ್ಕು ಆಗಿದೆಯೇ? ಅಥವಾ ಒಂಬತ್ತು? ಅಥವಾ 14 ಎಂಬುದು ಪಿಎಲ್‌ಎ ಕೂಡ ಖಚಿತವಾದಂತಿಲ್ಲ. ಭಾರತದೊಂದಿಗಿನ ವಿವಿಧ ಹಂತದ ಮಾತುಕತೆಗಳ ಸಮಯದಲ್ಲಿ, ಚೀನಾದ ಅಧಿಕಾರಿಗಳು ವಿವಿಧ ಸಮಯಗಳಲ್ಲಿ, … Continued

ಮತ್ತೆ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿದ ಮುಕೇಶ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿಯಾಗಿದ್ದಾರೆ. ಅವರು ಚೀನಾದ ಜಾಂಗ್‌ ಶಾನ್‌ಶಾನ್‌ ಅವರನ್ನು ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಚೀನಾದ ಉದ್ಯಮಿ ಆಸ್ತಿ 76.6 ಬಿಲಿಯನ್ ಡಾಲರ್‌ ಮೌಲ್ಯದ್ದಾಗಿದ್ದರೆ, ಅಂಬಾನಿಯ ಆಸ್ತಿ ಸುಮಾರು 80 ಬಿಲಿಯನ್ ಡಾಲರ್‌ ಆಗಿದೆ. ಅಂಬಾನಿ ತನ್ನ ಸಾಮ್ರಾಜ್ಯವನ್ನು ಟೆಕ್ ಮತ್ತು ಇ-ಕಾಮರ್ಸ್‌ಗೆ … Continued

ಮ್ಯಾನ್ಮಾರ್‌ನಲ್ಲಿ ನಡೆದ ದಂಗೆಯಲ್ಲಿ ೧೮ ಜನರ ಸಾವು

ಮ್ಯಾನ್ಮಾರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯದಲ್ಲಿ ಕನಿಷ್ಟ ೧೮ ಜನರು ಸಾವನ್ನಪ್ಪಿದ್ದು, ೩೦ ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ಯಾಂಗೊನ್, ದಾವೆ, ಮಾಂಡಲೆ, ಮೈಕ್, ಬಾಗೊ ಮತ್ತು ಪೊಕೊಕ್ಕುಗಳಲ್ಲಿ ಜನಸಮೂಹಕ್ಕೆ ಗುಂಡು ಹಾರಿಸಿದ ಪರಿಣಾಮವಾಗಿ ಸಾವುಗಳು ಸಂಭವಿಸಿವೆ. ಹಲವೆಡೆ ಅಶ್ರುವಾಯು ಮತ್ತು ಫ್ಲ್ಯಾಷ್-ಬ್ಯಾಂಗ್ ಮತ್ತು ಸ್ಟನ್ ಗ್ರೆನೇಡ್‌ಗಳಲ್ಲಿ ಬಳಕೆಯಾಗಿದೆ … Continued

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮತಿ

ವಾಷಿಂಗ್ಟನ್: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಅಮೆರಿಕದಲ್ಲಿ ಸೋಂಕು ತಡೆಯಲು ಈ ಲಸಿಕೆಗೆ ಜೋ ಬೈಡನ್ ಆಡಳಿತ ಅನುಮತಿ ಕೊಟ್ಟಿದೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆಯ ಕೋವಿಡ್‌ ಲಸಿಕೆಯ ಪ್ರಯೋಗಾತ್ಮಕ ವರದಿಯಲ್ಲಿ ಲಸಿಕೆ ಸೋಂಕಿತರ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತುರ್ತು … Continued

ಅಮೆಜೊನಿಯಾ-೧ ಯಶಸ್ವಿ ಉಡಾವಣೆ: ಬ್ರೆಜಿಲ್‌ ಅಧ್ಯಕ್ಷರ ಅಭಿನಂದಿಸಿದ ಮೋದಿ

ಬ್ರೆಜಿಲ್‌ನ ಅಮೆಜೊನಿಯಾ-೧ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್‌ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. ಪಿಎಸ್ಎಲ್ವಿ-ಸಿ 51 ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕಾಗಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಅಭಿನಂದನೆಗಳು. ಇದು ನಮ್ಮ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ ಬ್ರೆಜಿಲ್‌ ವಿಜ್ಞಾನಿಗಳು ಸನ್ಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಪಿಎಂ ಮೋದಿ … Continued

ರೈತರ ಪ್ರತಿಭಟನೆ ವೇಳೆ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ದೇಶದ್ರೋಹದ ಆರೋಪ: ಯುಎನ್‌ಹೆಚ್‌ಸಿಎಚ್ಆರ್ ಖಂಡನೆ

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪತ್ರಕರ್ತರು ಮತ್ತು ಸಾಮಾಜಿ ಕಾರ್ಯಕರ್ತರ ಮೇಲೆ ದೇಶದ್ರೋಹದ ಆರೋಪ ಮತ್ತು ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯುವ ಪ್ರಯತ್ನಗಳು “ಅಗತ್ಯ ಮಾನವ ಹಕ್ಕುಗಳ ತತ್ವಗಳ ಭಂಗ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಹೇಳಿದ್ದಾರೆ. 50ಕ್ಕೂ ಹೆಚ್ಚು ದೇಶಗಳಲ್ಲಿನ ಹಕ್ಕುಗಳ ವಿಷಯದಲ್ಲಿ ಮಾನವ ಹಕ್ಕುಗಳ ಮಂಡಳಿಯ (ಎಚ್‌ಆರ್‌ಸಿ) 46 ನೇ … Continued

ಭಾರತ-ಚೀನಾ ಮಧ್ಯೆ ಹೊಸ ಹಾಟ್‌ಲೈನ್‌

ಭಾರತ ಮತ್ತು ಚೀನಾ ವಿದೇಶಾಂಗ ಮಟ್ಟದಲ್ಲಿ ಸಮಯೋಚಿತ ಅಭಿಪ್ರಾಯ ವಿನಿಮಯಕ್ಕಾಗಿ ಹೊಸ ಹಾಟ್‌ಲೈನ್‌ ಆರಂಭಿಸಲು ಒಪ್ಪಿಕೊಂಡಿವೆ ಆದರೆ ಗಡಿ ಪರಿಸ್ಥಿತಿ ಕುರಿತಾದ ದ್ವಿಪಕ್ಷೀಯ ಸಂಬಂಧ ಕುರಿತ ಉಭಯ ದೇಶಗಳ ಭಿನ್ನಾಭಿಪ್ರಾಯ ಮುಂದುವರೆದಿದೆ. ಗಡಿ ವಿವಾದಗಳು ವಸ್ತುನಿಷ್ಠ ವಾಸ್ತವವಾಗಿದ್ದು, ಸಾಕಷ್ಟು ಗಮನ ಹರಿಸಬೇಕು ಮತ್ತು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಆದರೆ, ವಿವಾದಗಳನ್ನು ಬಗೆಹರಿಸುವ ದಿಸೆಯಲ್ಲಿ ಪ್ರಯತ್ನ ಮುಂದುವರೆಯಬೇಕು ಎಂದು … Continued

ಉತ್ತರ ನೈಜೀರಿಯಾದಲ್ಲಿ ೩೧೭ ಬಾಲಕಿಯರ ಸಾಮೂಹಿಕ ಅಪಹರಣ

ಉತ್ತರ ನೈಜಿರಿಯಾದ ಬೋರ್ಡಿಂಗ್‌ ಶಾಲೆಯಿಂದ ಶನಿವಾರ ಒಂದೇ ಬಾರಿಗೆ ೩೧೭ ಬಾಲಕಿಯರ ಸಾಮೂಹಿಕ ಅಪಹರಣ ನಡೆದಿದೆ. ಪಶ್ಚಿಮ ಆಫ್ರಿಕಾದ ಜಂಗೆಬೆ ಟೌನ್‌ ಸರಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯ ಮೇಲೆ ಬಂದೂಕುದಾರಿಗಳು ದಾಳಿ ನಡೆಸಿ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಹಾಗೂ ಮಿಲಿಟರಿ ಜಂಟಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಜಾಮ್‌ಪಾರ್‌ ಪೊಲೀಸರ ವಕ್ತಾರ … Continued

ಹಿಂದೂ ದೇವತೆ ವಿಡಂಬನೆ ಟ್ವೀಟ್:‌ ಕ್ಷಮೆ ಕೋರಿದ ಪಾಕ್‌ ಶಾಸಕ

ಲಾಹೋರ್:‌ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಸರಕಾರದ ಶಾಸಕರೊಬ್ಬರು ಹಿಂದೂ ಸಮುದಾಯಕ್ಕೆ ಅಗೌರವ ತೋರುವ ಟ್ವೀಟ್‌ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಶಾಸಕ ಅಮೀರ್ ಲಿಯಾಕತ್ ಹುಸೇನ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ವಿರೋಧ ಪಕ್ಷದ ನಾಯಕಿ ಮರಿಯಮ್ ನವಾಜ್ ಅವರನ್ನು ಅಪಹಾಸ್ಯ ಮಾಡಲು ಹಿಂದೂ ದೇವತೆಯ ಚಿತ್ರವನ್ನು … Continued

ಎಲ್‌ಒಸಿಯಲ್ಲಿ ಕದನ ವಿರಾಮ ಜಾರಿ ಘೋಷಣೆ ನಂತರ ಮತ್ತೆ ಕಾಶ್ಮೀರದ ವಿಷಯ ಎತ್ತಿದ ಪಾಕ್‌ ಪ್ರಧಾನಿ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) 2003 ರ ಕದನ ವಿರಾಮ ಜಾರಿಗೆ ತರುವುದಾಗಿ ಘೋಷಿಸಿದ ಕೆಲ ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಯನ್ನು ಎತ್ತಿದ್ದಾರೆ.   ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದು,  “ಕದನ ವಿರಾಮವನ್ನು ನಿಯಂತ್ರಣ ರೇಖೆ (ಎಲ್‌ಒಸಿ) ಯೊಂದಿಗೆ ಪುನಃಸ್ಥಾಪಿಸುವುದನ್ನು ನಾನು ಸ್ವಾಗತಿಸುತ್ತೇನೆ. … Continued