ಭಾರತದಲ್ಲಿ ಕೋವಿಡ್‌-19 ಪ್ರಕರಣ ಹೆಚ್ಚಳದ ಹಿಂದೆ 5 ಜಿ ಪ್ರಯೋಗ ದೂಷಿಸುವ ಆಡಿಯೋ ಸಂದೇಶ ನಕಲಿ

ಕೋವಿಡ್‌-19 ರ ಎರಡನೇ ಅಲೆಯ ಬಗ್ಗೆ ಹರಡುತ್ತಿದ್ದ ಪಿತೂರಿ ಸಿದ್ಧಾಂತದ ಬಗ್ಗೆ ಪತ್ರಿಕಾ ಮಾಹಿತಿ ಬ್ಯೂರೋ ಇತ್ತೀಚೆಗೆ ಪ್ರಕಟನೆ ನೀಡಿದೆ. ಭಾರತದಲ್ಲಿ ಕೊವಿಡ್‌ ಪ್ರಕರಣಗಳು ಹಠಾತ್ತನೆ ಉಲ್ಬಣಗೊಳ್ಳಲು 5 ಜಿ ಪರೀಕ್ಷೆಯೇ ಕಾರಣ ಎಂದು ಹೇಳುವ ಆಡಿಯೊ ಸಂದೇಶವು ಸದ್ದು ಮಾಡುತ್ತಿದೆ. 5 ಜಿ ಪರೀಕ್ಷೆಯಿಂದಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಜನರು … Continued

ಬೆಂಗಳೂರಲ್ಲಿ 3 ಸಾವಿರಕ್ಕೂ ಹೆಚ್ಚು ವಾಹನ ಸೀಜ್‌ ಮಾಡಿದ ಪೊಲೀಸರು..!

ಬೆಂಗಳೂರು : ಕೊರೊನಾ ಕರ್ಪ್ಯೂ ಇದ್ದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿ ಬೇಕಾಬಿಟ್ಟಿ ಸಂಚರಿಸಿದ ವಾಹನವನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ವಾಹನಗಳನ್ನು ಜಪ್ತಿ ಮಾಡಿದ್ದು, ಇದರಲ್ಲಿ 2723 ದ್ವಿಚಕ್ರ ವಾಹನಗಳು, 171 ಮೂರು ಚಕ್ರ ವಾಹನಗಳು, 106 ನಾಲ್ಕು ಚಕ್ರ … Continued

ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಶನಿವಾರ 482 ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ 2ನೇ ಅಲೆ ಉಲ್ಬಣ ಮುಂದುವರಿದ್ದು, ಶನಿವಾರ ಸೋಂಕಿಗೆ 482 ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 47563 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,86,448ಕ್ಕೆ ಏರಿಕೆಯಾಗಿದೆ, ಒಟ್ಟು ಸಾವಿನ ಸಂಖ್ಯೆ 18,286ಕ್ಕೆ ಏರಿಕೆಯಾಗಿದೆ. ಶನಿವಾರ ಬೆಂಗಳೂರಿನಲ್ಲಿ 21534 ಜನರಿಗೆ ಕೊರೊನಾ ತಗುಲಿದ್ದು, 285 … Continued

ಕರ್ನಾಟಕದಲ್ಲಿ ಆಮ್ಲಜನಕ ಬೆಡ್‌ 20,000 ಹೆಚ್ಚಳ, ಕೋವಿಡ್ ಪರೀಕ್ಷೆ ವರದಿ ತಡವಾದ್ರೆ ಲ್ಯಾಬ್‌ಗಳಿಗೆ ದಂಡ

ಬೆಂಗಳೂರು: ಸುಪ್ರೀಂ ಕೋರ್ಟ್ 1,200 ಮೆ.ಟನ್‌ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸರ್ಕಾರ ಆಮ್ಲಜನಕ ಬೆಡ್‌ಗಳ ಪ್ರಮಾಣವನ್ನು 20,000 ಹೆಚ್ಚಳ ಮಾಡಲು ಮುಂದಾಗಿದೆ ಎಂದು ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಉಪಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಬಿಜೆಪಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 20,000 ಆಮ್ಲಜನಕ ಬೆಡ್‌ಗಳ … Continued

ಜಿಂದಾಲಿನಿಂದ ಪ್ರತಿದಿನ 650 ಮೆಟ್ರಿಕ್ ಟನ್ ಆಮ್ಲಜನಕ ಕರ್ನಾಟಕಕ್ಕೆ: ಸಚಿವ ಶೆಟ್ಟರ್

ಬಳ್ಳಾರಿ: ಜಿಂದಾಲ್ ಆಮ್ಲಜನಕ ಉತ್ಪಾದನೆ ಘಟಕಗಳಲ್ಲಿ ನಿತ್ಯ 1,000 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 650 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಜ್ಯಕ್ಕೆ ನೀಡುತ್ತಿದೆ.. ಇನ್ನೂ ಹೆಚ್ಚು ಆಮ್ಲಜನಕ ಉತ್ಪಾದನೆಗೆ ಸೂಚನೆ ನೀಡಿದ್ದೇನೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಜಿಂದಾಲ್ ಕಂಪನಿ ಕೋವಿಡ್‌ ರೋಗಿಗಳಿಗಾಗಿ ಒಂದು ಸಾವಿರ ಆಮ್ಲಜನಕದ ಬೆಡ್ ಸಿದ್ಧಗೊಳಿಸಿದೆ. ಇದರಿಂದ … Continued

ಹುಬ್ಬಳ್ಳಿಯಲ್ಲಿ ಮೇ 9ರಂದು ಪ್ಲಾಸ್ಮಾ ದಾನ ಶಿಬಿರ

ಹುಬ್ಬಳ್ಳಿ: ಸ್ವಯಂಪ್ರೇರಿತ ಬೃಹತ್ ಕೋವಿಡ್ ಪ್ಲಾಸ್ಮಾ ದಾನ ಶಿಬಿರವನ್ನು ಮೇ 9ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೇಶ್ವಾಪುರ ಸರ್ವೋದಯ ಸರ್ಕಲ್ ಎನ್‌.ಕೆ.ಸಭಾಗೃಹದಲ್ಲಿ  ಆಯೋಜಿಸಲಾಗಿದೆ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಮತ್ತು ದಿವಾ ಫೌಂಡೇಶನ್, ಎಸ್ ಎಸ್ ಶೆಟ್ಟರ ಫೌಂಡೇಶನ್ , ಜೈನ ಇಂಟರ್‌ ನ್ಯಾಷನಲ್ ಟ್ರೇಡರ್ಸ್ ಅರ್ಗನೈಸೇಶನ್ , ಲಯನ್ಸ್ ಕ್ಲಬ್ ಇಂಡಿಯಾ , ರೌಂಡ್ ಟೇಬಲ್ ಇಂಡಿಯಾ ,  … Continued

ಕರ್ನಾಟಕದಲ್ಲಿ ಸದ್ಯಕ್ಕೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ದಾಸ್ತಾನು ಬಳಕೆ: ಸುಧಾಕರ

ಬೆಂಗಳೂರು: 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ರಾಜ್ಯದಲ್ಲಿ ಈಗಿರುವ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ದಾಸ್ತಾನು ಬಳಸಲಾಗುವುದು ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಈ ಕುರಿತು ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ. ಹೀಗಾಗಿ ಸದಸ್ಯ ಪರಿಸ್ಥಿತಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ತೆರೆದಿದ್ದರೂ, ಅವರಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಲಸಿಕೆ ಪಡೆಯುವ ಆಯ್ಕೆ ಇರುವುದಿಲ್ಲ. … Continued

ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಕೊರೊನಾ ಸೋಂಕಿಗೆ ಸಾವು

ಬೆಂಗಳೂರು; ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಅವರು ಕೊರೊನಾ ಸೋಂಕಿಗೆ ಮೇ 7 ರ ಶುಕ್ರವಾರ ಮೃತಪಟ್ಟಿದ್ದಾರೆ. ಕಳೆದ ಹತ್ತು ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ವಯಸ್ಸು 70. ಕನ್ನಡ ಚಿತ್ರರಂಗವು ಕಳೆದ ಎರಡು ವಾರಗಳಲ್ಲಿ ಒಂದು ಡಜನ್‌ಗೂ ಹೆಚ್ಚು ನಟರು ಮತ್ತು ನಿರ್ದೇಶಕರನ್ನು ಕಳೆದುಕೊಂಡಿದೆ. ಶಂಖನಾದ ಅರವಿಂದ್ 10 ದಿನಗಳ … Continued

ಎರಡನೇ ಡೋಸ್ ಕೊವ್ಯಾಕ್ಸಿನ್‌ ಸಿಗದೆ ಸಾವಿರಾರು ಜನರ ಪರದಾಟ..

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಮೊದಲ ಸುತ್ತಿನಲ್ಲಿ ಹಿರಿಯರಿಗೆ ಹಾಗೂ ಕೊರೊನಾ ವಾರಿಯರ್ಸ್ ಪಟ್ಟಿಯಲ್ಲಿದ್ದ ಪೊಲೀಸರು ನರ್ಸ್, ವೈದ್ಯರು, ಆಸ್ಪತ್ರೆ ಸಿಬ್ಬಂದಿಗೆ ಕೊಡಲಾಗಿದೆ. ಇದೀಗ ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಬಳಕೆಗೆ ಅವಕಾಶ ನೀಡಲಾಗಿದೆ. ಕೋವ್ಯಾಕ್ಸಿನ್ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ … Continued

ಕರ್ನಾಟಕದಲ್ಲಿ ಕೊರೊನಾದಿಂದ ಒಂದೇ ದಿನ 592 ಸಾವು..!

ಬೆಂಗಳೂರು:ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರ್ಭಟ ಮುಗಿಲುಮುಟ್ಟಿದ್ದು ಶುಕ್ರವಾರ 592 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 48781 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1838885ಕ್ಕೆ ಏರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 17,804ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಂಗಳೂರು ನಗರದಲ್ಲಿ 21376 ಜನರಿಗೆ ಹೊಸ ಕೊರೊನಾ ಸೋಂಕು ತಗುಲಿದ್ದು, 346 ಮಂದಿ … Continued