ಹಾಸನ ಜಿಲ್ಲಾ ಪಂಚಾಯತಿಗೆ ರಾಷ್ಟ್ರ ಪ್ರಶಸ್ತಿ

ಹಾಸನ: ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಪಂಚಾಯತಿಗಳ ಸಬಲೀಕರಣಕ್ಕೆ ಕೊಡಮಾಡುವ ರಾಷ್ಟ್ರ ಪ್ರಶಸ್ತಿಗೆ ಹಾಸನ ಜಿಲ್ಲೆ ಆಯ್ಕೆಗೊಂಡಿದೆ. ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳನ್ನು ಎಲ್ಲ ರೀತಿಯಲ್ಲಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಲ್ಲಿ ಹಾಸನ ಜಿಲ್ಲಾ ಪಂಚಾಯತಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡುವ ದೀನ್‌ ದಯಾಳ್‌ … Continued

ಸಿಡಿ ಯುವತಿ ಉಳಿದುಕೊಂಡಿದ್ದ ಪಿಜಿ ಸ್ಥಳ ಮಹಜರು

ಬೆಂಗಳೂರು: ಸಿಡಿ ಪ್ರಕರಣದ ಸಂತ್ರಸ್ತ ಯುವತಿಯನ್ನು ತನಿಖಾಧಿಕಾರಿ ಮತ್ತು ಅವರ ತಂಡ ಆರ್‌.ಟಿ.ನಗರಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ದೂರು ನೀಡಿರುವ ಯುವತಿ ಆರ್‍ಟಿನಗರದ ಪಿಜಿಯಲ್ಲಿ ವಾಸ್ತವ್ಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ತನಿಖಾಧಿಕಾರಿಗಳು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದರು. ಯುವತಿ ದೂರಿನಲ್ಲಿ … Continued

ಕರ್ನಾಟಕದಲ್ಲಿ ಗುರುವಾರವೂ ನಾಲ್ಕು ಸಾವಿರ ದಾಟಿದ ಏಕದಿನದ ಕೊರೊನಾ ಸೋಂಕು..ಬೆಂಗಳೂರಲ್ಲಿಯೇ ಶೇ.೬೮ರಷ್ಟು ಪ್ರಕರಣ..!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣ ಗುರುವಾರವೂ ನಾಲ್ಕು ಸಾವಿರ ದಾಟಿದೆ. ಕಳೆದ 24 ಗಂಟೆಯಲ್ಲಿ 4,234 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 10,01,238ಕ್ಕೆ ಏರಿಕೆಯಾಗಿದೆ. ಅಲ್ಲದೇ 18 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, … Continued

‘ಸಂಘಕಾರ್ಯ’ವನ್ನು ‘ಜೀವನಕಾರ್ಯ’ವನ್ನಾಗಿ ಸ್ವೀಕರಿಸಿದ್ದ ಸಿದ್ದಣ್ಣಗೌಡ ಗಡಿಗುಡಾಳರು

ಕರ್ನಾಟಕ ಉತ್ತರ ಪ್ರಾಂತದ ಹಿಂದಿನ ಪ್ರಾಂತ ಸಂಘಚಾಲಕರಾಗಿದ್ದ ಸಿದ್ದಣ್ಣಗೌಡ ಗಡಿಗುಡಾಳರು ಏಪ್ರಿಲ್‌ ೧ರಂದು ಗುರುವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ೨ಕ್ಕೆ ಬಳ್ಳಾರಿ ಜಿಲ್ಲೆಯ ಅವರ ಸ್ವಗ್ರಾಮ ಗಡಿಗುಡಾಳದಲ್ಲಿ ನಡೆಯಿತು. ಮಾ.ಶ್ರೀ ಸಿದ್ದಣ್ಣಗೌಡ ಗಡಿಗುಡಾಳ್ ರವರು ಇಂದು(1.4.2021) ಬೆಳಗ್ಗೆ 6.15 ಕ್ಕೆ ಗಡಿಗುಡಾಳದ ತಮ್ಮ ಸ್ವಗೃಹದಲ್ಲಿ ದೈವಾಧೀನರಾದ ಸುದ್ದಿ ತಲುಪಿತು. ಸಹಜವಾಗಿ ಮನಸ್ಸಿನಲ್ಲಿ … Continued

ಕೊರಗಜ್ಜ ದೈವಸ್ಥಾನ ಅಪವಿತ್ರಗೊಳಿಸಿದವರಲ್ಲಿ ಒಬ್ಬನ ಸಾವು: ಹೆದರಿ ಇನ್ನಿಬ್ಬರು ಸ್ವಯಂ ತಪ್ಪೊಪ್ಪಿಗೆ…!

ಮಂಗಳೂರು; ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿ ಹೊಂದಿದೆ ಎನ್ನುವುದು ನಂಬಿಕೆ. ಈ ನಂಬಿಕೆಗೆ ಪುಷ್ಟಿ ನೀಡುವಂತಹ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ದೈವಸ್ಥಾನಗಳಿಗೆ ಅಪಚಾರ ಮಾಡಿದ ವ್ಯಕ್ತಿಯೊಬ್ಬ ಸತ್ತಿದ್ದು, ಈ ಕೃತ್ಯಕ್ಕೆ ಸಹಕರಿಸಿದ ಇಬ್ಬರು ದೈವಗಳ ಮುಂದೆ ಶರಣಾಗಿದ್ದಾರೆ. ಮಂಗಳೂರು ನಗರ ಭಾಗದಲ್ಲೇ ದುಷ್ಕರ್ಮಿಗಳು ದೈವಸ್ಥಾನಕ್ಕೆ ಅಪಚಾರ ಎಸಗುತ್ತಿದ್ದರು. ಕಾರಣಿಕ ದೈವ ಕೊರಗಜ್ಜನ ದೈವಸ್ಥಾನಗಳ ಕಾಣಿಕೆ … Continued

ಭಿನ್ನಾಭಿಪ್ರಾಯಗಳ ಬಗ್ಗೆ  ಸಿಎಂ ಜತೆ ಚರ್ಚಿಸಿ: ಸಚಿವ ಈಶ್ವರಪ್ಪಗೆ ಬೊಮ್ಮಾಯಿ ಮನವಿ

ಬೆಂಗಳೂರು: ಅನುದಾನ ಬಿಡುಗಡೆ ವಿಚಾರ ಆಡಳಿತಾತ್ಮಕವಾದದ್ದು. ಈ ವಿಚಾರದ ಬಗ್ಗೆ ಭಿನ್ನಾಭಿಪ್ರಾಯ, ಆಕ್ಷೇಪಗಳಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಲಾಖೆಯ … Continued

ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: 3 ಟಿ ಸೂತ್ರ ಪಾಲನೆಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ..!

ಬೆಂಗಳೂರು: ರಾಜ್ಯದಲ್ಲಿ ಕೊರೋನಾಸೋಂಕು ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘3 ಟಿ’ (ಟೆಸ್ಟ್-ಟ್ರ್ಯಾಕ್-ಟ್ರೀಟ್) ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಈ ಬಗ್ಗೆ ಬುಧವಾರ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಐದು ತಿಂಗಳಿಂದ ಕೊರೋನಾ ಪ್ರಕರಣ ಇಳಿಮುಖಗೊಂಡಿತ್ತು. ಆದರೆ, ಕೆಲವೆಡೆ ಕೆಲದಿನಗಳಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಮಾ.23ರಂದು ಕೇಂದ್ರ … Continued

ಕೊವಿಡ್‌ ಲಸಿಕೆ ಪಡೆಯಲು ಕೋ-ವಿನ್ ಪ್ಲಾಟ್‌ಫಾರ್ಮ್ ಅಥವಾ ಆರೋಗ್ಯ ಸೇತು ಅಪ್ಲಿಕೇಶನ್ನಿನಲ್ಲಿ ನೋಂದಾಯಿಸುವ ಮಾಹಿತಿ ಇಲ್ಲಿದೆ..

5 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ವಿಶ್ವದ ಅತಿದೊಡ್ಡ ಕೋವಿಡ್ -19 ಲಸಿಕಾ ಮುಂದಿನ ಹಂತವು ಇಂದು ಏಪ್ರಿಲ್ 1 ರಿಂದ ಪ್ರಾರಂಭವಾಗಿದೆ. ಕೋ-ವಿನ್ ಪ್ಲಾಟ್‌ಫಾರ್ಮ್ ಅಥವಾ ಆರೋಗ್ಯಾ ಸೇತು ಅಪ್ಲಿಕೇಶನ್ ಬಳಸಿ ನಾಗರಿಕರು ನೋಂದಾಯಿಸಿಕೊಳ್ಳಬಹುದು, ವ್ಯಾಕ್ಸಿನೇಷನ್‌ಗಾಗಿ ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು. ಆರೋಗ್ಯ ಸಚಿವಾಲಯದ ಪ್ರಕಾರ, ನಾಗರಿಕರು ಮಧ್ಯಾಹ್ನ 3 ಗಂಟೆಯ ನಂತರ ತಮ್ಮ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ … Continued

ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಉಚ್ಛಾಯಿ ರಥೋತ್ಸವ

ಕಲಬುರಗಿ : ಕಲ್ಯಾಣ ಕರ್ನಾಟಕದ ಐತಿಹಾಸಿಕ ಕಲಬುರಗಿ ಶ್ರೀ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (ಗುರುವಾರ) ಏಪ್ರಿಲ್ 1ರಂದು ಸಂಜೆ ಉಚ್ಛಾಯಿ ರಥೋತ್ಸವ ನಡೆಯುವ ಮೂಲಕ ಚಾಲನೆ ದೊರಕಲಿದೆ. ಕಳೆದ ವರ್ಷ ಕೋವಿಡ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಮಾಡಲಾಗಿತ್ತು. ಈ ತಿಂಗಳಲ್ಲಿ ಮತ್ತೆ ಕೊರೊನಾ ಅರ್ಭಟ ಹೆಚ್ಚಾಗಿದ್ದರಿಂದ ಮತ್ತೆ ಜಿಲ್ಲಾಡಳಿತ ರದ್ದು ಪಡಿಸಿದೆ. … Continued

ಬಿಜೆಪಿ ಸರಕಾರ ರಚನೆಗೆ ಕಾರಣರಾದ ನಾವೆಲ್ಲ ರಮೇಶ ಜಾರಕಿಹೊಳಿ ಬೆನ್ನಿಗೆ ನಿಲ್ಲುತ್ತೇವೆ: ಸಚಿವ ಗೋಪಾಲಯ್ಯ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾವೆಲ್ಲರೂ ಒಗ್ಗಟ್ಟಾಗಿದ್ದು, ರಮೇಶ್ ಜಾರಕಿಹೊಳಿ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿದ ಅವರು, ಸದ್ಯ ಎಸ್ ಐಟಿ ತನಿಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ನಮ್ಮಲ್ಲಿ ಯಾವುದೇ ಒಡಕ್ಕಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದು, ರಮೇಶ್ … Continued