ಆರೋಪಿ ವಿಚಾರಣೆ ನಡೆಸದೆ ಸಂತ್ರಸ್ತೆ ಪೋಷಕರ ವಿಚಾರಣೆ ಎಷ್ಟು ಸರಿ: ವಕೀಲ ಜಗದೀಶ ಪ್ರಶ್ನೆ

ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣದಲ್ಲಿ ಆರೋಪಿಯನ್ನು ಈವರೆಗೂ ವಿಚಾರಣೆಗೆ ಒಳಪಡಿಸಿಲ್ಲ. ಆದರೆ ಸಂತ್ರಸ್ತೆಯ ಪೋಷಕರನ್ನು ವಿಚಾರಣೆ ನಡೆಸುತ್ತಿರುವುದು ಎಷ್ಟು ಸರಿಎಂದು ಯುವತಿ ಪರ ವಕೀಲ ಜಗದೀಶ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶಜಾರಕಿಹೊಳಿ ಸಿಡಿ ಪ್ರಕರಣದ ಸಂಬಂಧ ಸಂತ್ರಸ್ತೆಯ ಪೋಷಕರು ಶನಿವಾರ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆಗೆ ಹಾಜರಾಗಿದ್ದಾರೆ. ಹೀಗಾಗಿ … Continued

ಕರ್ನಾಟಕದ ಕೋವಿಡ್ ಪಾಸಿಟಿವಿಟಿ ದರ ರಾಷ್ಟ್ರೀಯ ದರಕ್ಕಿಂತ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆಯಲ್ಲ

ಬೆಂಗಳೂರು: ದೇಶದ ಎಲ್ಲ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, 2ನೇ ಅಲೆ ಆರಂಭ ಕಂಡುಬಂದಿದೆ. ರಾಜ್ಯದಲ್ಲ ಈಗ ಪಾಸಿಟಿವಿಟಿ ದರ 1.6% ಆಗಿದ್ದು, ರಾಷ್ಟ್ರೀಯ ಸರಾಸರಿ ಪಾಸಿಟಿವಿಟಿ ದರ 1.5% ಇದೆ. ನಮ್ಮ ರಾಜ್ಯದ ಪಾಸಿಟಿವಿಟಿ ದರ ಹೆಚ್ಚಿದೆ. ಇದನ್ನು ಒಳ್ಳೆಯ ಬೆಳವಣಿಗೆ ಅಲ್ಲ, ಹೀಗಾಗಿ ಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ … Continued

ಶಾಸಕಿ ಸೌಮ್ಯ ರೆಡ್ಡಿಗೂ ಕೊರೊನಾ ಸೋಂಕು ದೃಢ

ಬೆಂಗಳೂರು:ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದು, ಬೆಂಗಳೂರಿನ ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟರ್ ಮಾಡಿರುವ ಶಾಸಕಿ ಸೌಮ್ಯ ರೆಡ್ಡಿ, ನನಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಹತ್ತಿರದ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಿಂದ ನನ್ನ ಜೊತೆಗೆ … Continued

ಮಣಿಪಾಲ ಎಂಐಟಿಯಲ್ಲಿ  10 ದಿನದಲ್ಲಿ 770 ವಿದ್ಯಾರ್ಥಿಗಳಿಗೆ ಕೊರೊನಾ  

ಉಡುಪಿ: ಮಣಿಪಾಲದ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಸೋಂಕಿನಿಂದಾಗಿ ಉಡುಪಿ ಜಿಲ್ಲೆಯಲ್ಲಿ ಏಕದಿನದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಶುಕ್ರವಾರ 210ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಎಂಐಟಿ 184 ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. 10-12 ದಿನಗಳಲ್ಲಿ ಸುಮಾರು 770 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಎರಡುವಾರದ ಹಿಂದೆ ಎಂಐಟಿಯಲ್ಲಿ ಆಫ್’ಲೈನ್ ಎಂಜಿನಿಯರಿಂಗ್ ತರಗತಿಗಳನ್ನು ಆರಂಭವಾಗಿದ್ದವು. … Continued

ಧಾರಾವಾಹಿ ರೂಪದಲ್ಲಿ ಬಿಡುಗಡೆ ಆಗುತ್ತಿರುವ ಆಡಿಯೋ- ವಿಡಿಯೋಗಳ ಬಗ್ಗೆ ವೈಜ್ಞಾನಿಕ ತನಿಖೆ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಆಡಿಯೋ ಮತ್ತು ವಿಡಿಯೋಗಳು ಸರಣಿ ಧಾರಾವಾಹಿ ತರಹ ಬರುತ್ತಿವೆ. ಸಿಡಿ, ಆಡಿಯೋ ಮತ್ತು ವಿಡಿಯೋ ಬಗ್ಗೆ  ವೈಜ್ಞಾನಿಕವಾಗಿ ತನಿಖೆ ನಡೆಯಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್‌ಐಟಿ ತನಿಖೆಯ ದಾರಿ ತಪ್ಪಿಸಲು ಯಾರಿಂದಲೂ … Continued

ನನ್ನ ಭೇಟಿಗೆ ಯುವತಿ ಬಂದಿರಬಹುದು. ನಾನು ಭೇಟಿ ಮಾಡಿಲ್ಲ: ಡಿಕೆಶಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಭೇಟಿಗೆ ಪ್ರಯತ್ನಿಸಿದ್ದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಯುವತಿ ನಮ್ಮ ಕಚೇರಿಗೆ ಬಂದಿರಬಹುದು. ಆದರೆ ಆ ಯುವತಿ ನನ್ನನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ … Continued

ತಕ್ಷಣವೇ ಜಾರಕಿಹೊಳಿ ಬಂಧಿಸಿ, ಇಲ್ಲದಿದ್ರೆ ಹೈಕೋರ್ಟಿಗೆ ಹೋಗ್ತೀವಿ..

  ಬೆಂಗಳೂರು: ಸಿಡಿ ಯುವತಿ ಹೇಳಿಕೆ ಆಧರಿಸಿ ನಾನು ದೂರು ನೀಡಿದ್ದೇನೆ.  ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಬಂಧಿಸಬೇಕು. ಬಂಧಿಸದಿದ್ದರೆ, ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಸಂತ್ರಸ್ತೆ ಪರ ವಕೀಲ ಜಗದೀಶ್ ಆಗ್ರಹಿಸಿದ್ದಾರೆ. ಮಾಧ್ಯಮಗಳ ಮೂಲಕ ಜಾರಕಿಹೊಳಿ ಹೆದರಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸಾಕ್ಷ್ಯ ನಾಶ ಮಾಡುವ … Continued

ಸಿಡಿ ಹಗರಣಕ್ಕೆ ಮತ್ತೆ ಟ್ವಿಸ್ಟ್: ಯುವತಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ..

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ನಮ್ಮ ಆಟ ಶುರು, ಇಂದು (ಶನಿವಾರ) ಸಂಜೆ ೪ರಿಂದ ೬ ಗಂಟೆಯೊಳಗೆ ಹೊಸ ಬಾಂಬ್‌ ಹಾಕುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ ಬೆನ್ನಲ್ಲೇ ಈಗ ಸಿಡಿ ಯುವತಿಯದ್ದು ಎನ್ನಲಾದ ಮತ್ತೊಂದು ವಿಡಿಯೋ ಬೆಳಿಗ್ಗೆ ಬಿಡುಗಡೆಯಾಗಿದೆ. ದಿನಕ್ಕೊಂದು ತಿರುವುದು ಪಡೆದುಕೊಳ್ಳುತ್ತಿರುವ ಈ ಸಿಡಿ ಪ್ರಕರಣ ಈಗ ನಾಲ್ಕನೇ … Continued

ಶುಕ್ರವಾರ ಮಣಿಪಾಲ ಎಂಐಟಿಯ 184 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಉಡುಪಿ: ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 210 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, . ಇವರಲ್ಲಿ 184 ಸೋಂಕಿತರು ಮಣಿಪಾಲ ಎಂಐಟಿ ಕ್ಯಾಂಪಸ್ ಒಳಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 210 ಜನರಿಗೆ ಕೊರೊನಾ ಸೋಂಕು … Continued

ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ: ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಸಂಪರ್ಕ ರಸ್ತೆಗಳು ಬಂದ್‌

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾಪ್ರಕರಣಗಳ ದಾಖಲೆ ಮಟ್ಟದಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯದ ರಸ್ತೆಗಳಿಗೆ ಮುಳ್ಳು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಚಿಕ್ಕೋಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ – ದಾನವಾಡ, ಯಕ್ಸಂಬಾ – ದತ್ತವಾಡ, ಮಲಿಕವಾಡ – ದತ್ತವಾಡ … Continued