ಕೋಲ್ಕತ್ತಾ ದುರ್ಗಾಪೂಜೆ ಮಂಟಪದಲ್ಲಿ ಕಾಲ್ತುಳಿತ : 17 ಮಂದಿ ಸಾವು; 35 ಜನರಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಉತ್ತರ ಭಾಗದಲ್ಲಿರುವ ಚೋರ್‌ಬಾಗನ್ ಸಾರ್ವಜನಿಕ ದುರ್ಗಾಪೂಜೆ ಮಂಟಪದಲ್ಲಿ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತದಂತಹ ದುರಂತದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 35 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುರ್ಗಾಪೂಜೆ ಮಂಟಪದ ಹೊರಗೆ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು ಮಳೆ ಆರಂಭವಾಗುತ್ತಿದ್ದಂತೆ ಏಕಾಏಕಿ ಮುನ್ನುಗ್ಗಿದ್ದರಿಂದ ಈ ಅವಘಡ ಸಂಭವಿಸಿದೆ. ಜನಸಂದಣಿಯ … Continued

ವಿಡಿಯೋ | ನಾನು ಬದುಕಲ್ಲ ಎಂದು ಅನ್ಸಿತ್ತು..ಆದ್ರೆ ಪ್ರಯಾಣಿಕರ ಉಳಿಸಲು ಹೋರಾಡ್ಲೇಬೇಕಿತ್ತು’: ಫ್ಲೈದುಬೈ ದಾಳಿಯ ಭೀಕರ ಕ್ಷಣ ಬಿಚ್ಚಿಟ್ಟ ಪೈಲಟ್‌ ಸ್ಮಿತ್ ಮಚ್ಚಾರ್

ದುಬೈ: ವಿಮಾನದ ಪ್ರಯಾಣಿಕರನ್ನು ರಕ್ಷಿಸಲು ತಾನು ಪ್ರಯತ್ನಿಸುತ್ತಿದ್ದಾಗ ತನ್ನ ಜೀವಕ್ಕೇ ಅಪಾಯ ಎದುರಾಗಿದ್ದ ಭೀಕರ ಕ್ಷಣಗಳನ್ನು ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ನೆನಪಿಸಿಕೊಂಡಿದ್ದಾರೆ. ದಾಳಿಯ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪ್ರಜ್ಞೆ ತಪ್ಪಿ ಮತ್ತೆ ಎಚ್ಚರವಾಗುತ್ತಿದ್ದ ಆ ಕ್ಷಣಗಳಲ್ಲಿ ಬದುಕುಳಿಯಬೇಕಾದರೆ ತಕ್ಷಣ ಏನಾದರೂ ಮಾಡಲೇಬೇಕು ಎಂಬ ಅರಿವು ಮೂಡಿತ್ತು ಎಂದು … Continued

ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಭಾರತ ತೊರೆಯುವಂತೆ ನೋಟಿಸ್ : ಬಾಂಬೆ ಹೈಕೋರ್ಟ್‌ ಮೊರೆ ಹೋದ ನಟ ಇಮ್ರಾನ್ ಖಾನ್

ಮುಂಬೈ: ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕದ ಪ್ರಜೆಯಾಗಿರುವ ಹಾಗೂ ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್ ಹೊಂದಿರುವ 43 ವರ್ಷದ ನಟ … Continued

ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ಆರೋಪ : ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು

ನವದೆಹಲಿ: ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆ ರೀಚಾ ಪರಾಶರ ಅವರು, ಈಗ ಅವರ ವಿರುದ್ಧ ಪೊಲೀಸ್ ದೂರು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಇತರರ ವಿರುದ್ಧ ತಕ್ಷಣವೇ ಪ್ರಥಮ ಮಾಹಿತಿ ವರದಿ (FIR) ದಾಖಲಿಸಬೇಕು ಎಂದು … Continued

ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು ನೀಡಿದ ದೆಹಲಿ ಕೋರ್ಟ್

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ  ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಭಾಗವಾಗಿ ಕನ್ನಾಟ್ ಪ್ಲೇಸ್‌ಗೆ ಮೆರವಣಿಗೆಯಲ್ಲಿ ತೆರಳಲು ಸಿದ್ಧತೆ ನಡೆಸಿದ್ದ ಕಾಕ್ರೋಚ್‌ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ ದೀಪ್ಕೆ ಅವರನ್ನು ಷರತ್ತುಬದ್ಧವಾಗಿ ಬಿಡುಗಡೆ ಮಾಡುವಂತೆ ದೆಹಲಿ ನ್ಯಾಯಾಲಯ ಶನಿವಾರ ಆದೇಶಿಸಿದೆ. ಶುಕ್ರವಾರ ಅವರನ್ನು ವಶಕ್ಕೆ ಪಡೆದು ಬಳಿಕ ಬಂಧಿಸಲಾಗಿತ್ತು. ಶಾಂತಿಭಂಗ ಉಂಟುಮಾಡುವುದಿಲ್ಲ … Continued

ಒಂದೇ ಕುಟುಂಬದ ಐವರು ಸಾವು ; ಹಿಂದಿನ ರಾತ್ರಿ ನೂಡಲ್ಸ್‌ ಸೇವಿಸಿದ್ದ ಕುಟುಂಬ

ನೋಯ್ಡಾ : ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದ ಗ್ರಾಮವೊಂದರಲ್ಲಿ ಶನಿವಾರ ದುರಂತ ಘಟನೆಯೊಂದು ಸಂಭವಿಸಿದ್ದು ಒಂದೇ ಕುಟುಂಬದ ಐವರು ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರಲ್ಲಿ 3ರಿಂದ 11 ವರ್ಷದೊಳಗಿನ ಮೂವರು ಮಕ್ಕಳು ಸೇರಿದ್ದಾರೆ. ಹಿಂದಿನ ರಾತ್ರಿ ಕುಟುಂಬದ ಸದಸ್ಯರು ನೂಡಲ್ಸ್‌ ಸೇವಿಸಿದ್ದರೆನ್ನಲಾಗಿದ್ದು, ಫುಡ್‌ ಪಾಯಿಸನಿಂಗ್‌ನಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಸಾವಿಗೆ … Continued

ಕಾವ್ಯಾ ಮಾರನ್-ಅನಿರುದ್ಧ ರವಿಚಂದರ ಮದುವೆಗೆ ಮುಹೂರ್ತ ಫಿಕ್ಸ್

ಹೈದರಾಬಾದ್‌/ಚೆನ್ನೈ: ಭಾರತದ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ತಂಡ ಸನ್‌ರೈಸರ್ಸ್‌ ಹೈದರಾಬಾದ್‌ನ ಸಹಮಾಲಕಿ ಕಾವ್ಯಾ ಮಾರನ್‌ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ ಅವರ ಮದುವೆ ಕುರಿತ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದೆ. ಕಾವ್ಯಾ ಅವರ ಮದುವೆಯ ಆರತಕ್ಷತೆ ನವೆಂಬರ್‌ 21ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ (ಸಿಎಂಒ) ದೃಢಪಡಿಸಿದೆ. ಕಾವ್ಯಾ ಅವರ … Continued

ತನ್ನ ಬುಡಕ್ಕೇ ಬಂದಾಗ…| ರಷ್ಯಾ ತೈಲ ಖರೀದಿಗೆ ಭಾರತದ ಮೇಲೆ ಉದ್ದೇಶಿತ ಶೇ.100 ಸುಂಕಕ್ಕೆ ತಾತ್ಕಾಲಿಕ ವಿನಾಯಿತಿ ಘೋಷಿಸಿದ ಟ್ರಂಪ್

ವಾಷಿಂಗ್ಟನ್‌: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತ ಮತ್ತು ಚೀನಾಕ್ಕೆ ದೊಡ್ಡ ಮಟ್ಟದ ರಿಲೀಫ್‌ ನೀಡುವ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ವಿಧಿಸಲು ಉದ್ದೇಶಿಸಿದ್ದ ಸುಂಕ ಹಾಗೂ ನಿರ್ಬಂಧಗಳ ಜಾರಿಯನ್ನು ಟ್ರಂಪ್ ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಈ ಕ್ರಮ ಜಾರಿಗೆ ಬರಲು ಒಂದು ದಿನ ಬಾಕಿ ಇರುವಾಗ, … Continued

ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು

ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರನ್ನು ಶುಕ್ರವಾರ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಶುಕ್ರವಾರ ಸಂಜೆ 7:30ರ ಸುಮಾರಿಗೆ ಎದೆ ಸೋಂಕಿನ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಶ್ವಾಸಕೋಶ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಶ್ವಾಸಕೋಶ ವಿಭಾಗಕ್ಕೆ ದಾಖಲಿಸಲಾಗಿದ್ದು, ವೈದ್ಯರ ತಂಡವೊಂದು ಅವರ ಆರೋಗ್ಯದ ಮೇಲೆ … Continued

2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

ನವದೆಹಲಿ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಅಖಾಡ ನಿಧಾನವಾಗಿ ಸಜ್ಜಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದ್ದರೆ, ಅದನ್ನು ಮಣಿಸಿ ಮತ್ತೆ ಅಧಿಕಾರಕ್ಕೇರಲು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿವೆ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಬೇಕಿರುವ ಎಸ್‌ಪಿ–ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ಸ್ಥಾನ ಹೊಂದಾಣಿಕೆ ಮತ್ತು ಚುನಾವಣಾ ಕಾರ್ಯತಂತ್ರದ ಸವಾಲುಗಳಿವೆ. 2027ರ … Continued