ತೆಲಂಗಾಣದಲ್ಲಿ 2 ದಿನ ಹೀಟ್‌ವೇವ್..ಮಧ್ಯಾಹ್ನ 12ರಿಂದ 3ರ ನಡುವೆ ಹೊರಬಾರದಂತೆ ಜನರಿಗೆ ಸೂಚನೆ

ಭಾರತ ಹವಾಮಾನ ಇಲಾಖೆಯ ಹೈದರಾಬಾದ್ ಕೇಂದ್ರವು ತೆಲಂಗಾಣಕ್ಕೆ ಪರಿಣಾಮ ಆಧಾರಿತ ಶಾಖದ ಅಲೆಯ ಮುನ್ಸೂಚನೆ ನೀಡಿದೆ, ಇದರಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮುಂದುವರಿಯುವ ನಿರೀಕ್ಷೆಯಿದೆ. ತಾಪಮಾನವು ಸುಮಾರು 40- – 43 ° ಸೆಲ್ಸಿಯಸ್‌ ಆಗಬಹುದು ಎಂದು ಹೇಳಿದೆ. ಐಎಂಡಿಯ ಪ್ರಕಾರ, ಜಿಮಂಚೇರಿಯಲ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲ್ಪಲ್ಲಿ, ಮುಲುಗು, ಭದ್ರಾಡ್ರಿ ಕೊಥಗುಡೆಮ್, … Continued

ನಕ್ಸಲ್‌ ಎನ್‌ಕೌಂಟರ್‌:ಐವರು ಭದ್ರತಾ ಸಿಬ್ಬಂದಿ ಸಾವು

ಛತ್ತೀಸ್ ಘಡದಲ್ಲಿ ಭೀಕರ ನಕ್ಸಲ್ ಎನ್ ಕೌಂಟರ್ ನಡೆದಿದ್ದು, ಘಟನೆಯಲ್ಲಿ ಐದು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ ಟರ್ರೇಮ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಎನ್ ಕೌಂಟರ್ ನಲ್ಲಿ ಐದು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಶನಿವಾರ ಬೆಳಿಗ್ಗೆ ಡಿಜಿಪಿ ಅವಸ್ಥಿ ಅವರು … Continued

ಮಹಾರಾಷ್ಟ್ರದಲ್ಲಿ 1ರಿಂದ 8ನೇ ತರಗತಿ ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯಿಲ್ಲದೆ ಪಾಸ್‌..

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಸಾರ್ವಕಾಲಿಕ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ 1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೆಕಂಡರಿ ಮತ್ತು ಪ್ರೌಢ ಶಿಕ್ಷಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ.ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಕೊವಿಡ್‌ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ. … Continued

ಎರಡನೇ ಕೊರೊನಾ ಅಲೆ ಹೇಗೆ ಭಿನ್ನ? ಇದಕ್ಕೆ ಲಾಕ್‌ಡೌನ್ ಉತ್ತರವೇ..?

ಕಳೆದ ತಿಂಗಳಿಂದ ವೇಗವಾಗಿ ಏರುತ್ತಿರುವ ಕೊರೊನಾ ವೈರಸ್ ಸೋಂಕುಗಳು ಲಾಕ್‌ಡೌನ್‌ನ ಭೀತಿಯನ್ನು ಮರಳಿ ತಂದಿದೆ. ಕೆಲವು ನಗರಗಳಲ್ಲಿ ಈಗಾಗಲೇ ಸೀಮಿತ ಲಾಕ್‌ಡೌನ್‌ ವಿಧಿಸಲಾಗಿದೆ, ಮತ್ತು ಮಹಾರಾಷ್ಟ್ರದಂತಹ ರಾಜ್ಯದ ಮೇಲೆ ಹೆಚ್ಚು ಕಠಿಣವಾದ ಲಾಕ್‌ಡೌನ್ ಬೆದರಿಕೆ ತಂದೊಡ್ಡಿದೆ. ಹಿಂದಿನ ಲಾಕ್‌ಡೌನ್‌ ಪರಿಣಾಮಕಾರಿತ್ವದ ಕುರಿತು ಹಲವಾರು ಮೌಲ್ಯಮಾಪನಗಳನ್ನು ಈಗಾಗಲೇ ಮಾಡಲಾಗಿದೆ. ಈಗ ಕೊವಿಡ್‌ ಎರಡನೇ ಅಲೆಯ ಸೋಂಕುಗಳು ಆ … Continued

ತೆಲಂಗಾಣದಲ್ಲಿ ಕೊರೊನಾ ಲಸಿಕೆ ಎರಡು ಡೋಸ್ ಪಡೆದ ನಂತರವೂ 15 ಮಂದಿಗೆ ಸೋಂಕು..!

ಹೈದರಾಬಾದ್: ಎರಡು ಕೊರೊನಾ ಲಸಿಕೆಯ ಡೋಸ್ ಪಡೆದ ಬಳಿಕವೂ 15 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದಲ್ಲಿ ಕೋವಿಡ್-19 ಸೋಂಕಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ 15 ಮಂದಿಗೆ ಸೋಂಕು ತಗುಲಿದೆ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯವಾದ ಲಸಿಕೆ ಪಡೆದುಕೊಂಡ ನಂತರ ಬರುವ ಅನಾರೋಗ್ಯವಾಗಿದೆ ಎಂದು ಸಾರ್ವಜನಿಕ ಆರೋಗ್ಯದ ನಿರ್ದೇಶಕ … Continued

ಗಣಿ- ಖನಿಜಗಳ ಕಾಯ್ದೆ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ

ನವ ದೆಹಲಿ: ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣಾ) ಕಾಯ್ದೆಗೆ ಸಂಬಂಧಿಸಿದಂತೆ ತರಲಾದ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಮಾರ್ಚ್​ 19 ರಂದು ಈ ಕಾಯ್ದೆಯನ್ನು ಲೋಕಸಭೆ ಅಂಗೀಕರಿಸಿತ್ತು. ಈ ಮಸೂದೆಗೆ ಶುಕ್ರವಾರ ರಾಜ್ಯಸಭೆಯಲ್ಲೂ ಅನುಮೋದನೆ ಸಿಕ್ಕಿದೆ. ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಕೆಲವೊಂದು ಪ್ರಕ್ರಿಯೆಗಳನ್ನು ಸರಳಗೊಳಿಸಿವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ಗಣಿ … Continued

ಐಪಿಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯುವ ವಾಂಖೆಡೆ ಸ್ಟೇಡಿಯಂನ ಎಂಟು ಮಂದಿ ಗ್ರೌಂಡ್ಸ್‌ಮನ್‌ಗಳಿಗೆ ಕೊರೊನಾ

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ತಯಾರಿ ಹಿನ್ನಡೆ ಅನುಭವಿಸಿದೆ. ಕ್ರೀಡಾಂಗಣದಲ್ಲಿ 19 ಗ್ರೌಂಡ್ಸ್ಮನ್‌ಗಳಲ್ಲಿ ಎಂಟು ಮಂದಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ. ಐಪಿಎಲ್ ಏಪ್ರಿಲ್ 9ರಂದು ಚೆನ್ನೈನಲ್ಲಿ ಕಿಕ್-ಆಫ್ ಆಗಲು ಸಜ್ಜಾಗಿದ್ದು, ಮುಂಬೈನಲ್ಲಿ ಪಂದ್ಯಗಳು ಏಪ್ರಿಲ್ 10 ಮತ್ತು ಏಪ್ರಿಲ್ 25 ರ ನಡುವೆ ನಡೆಯಲಿದೆ. ಮೊದಲ ಪಂದ್ಯ … Continued

ಮೆಟ್ರೋ ಮ್ಯಾನ್ ಇ. ಶ್ರೀಧರನ್ ಹಾಡಿ ಹೊಗಳಿದ ಖ್ಯಾತ ನಟ ಮೋಹನ್ ಲಾಲ್

ಪಾಲಕ್ಕಾಡ್: ಪಾಲಕ್ಕಾಡ್‌ನಿಂದ ಚುನಾವಣಾ ಕಣಕ್ಕಿಳಿದಿರುವ ಮೆಟ್ರೋ ಮ್ಯಾನ್ ಇ. ಶ್ರೀಧರನ್ ಅವರನ್ನು ನಟ ಮೋಹನ್ ಲಾಲ್ ಹಾಡಿ ಹೊಗಳಿದ್ದಾರೆ. ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಅವರು, ಶ್ರೀಧರನ್ ಅವರು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಮೆಟ್ರೋ ನಿರ್ಮಾಣವನ್ನು ಸಾಧ್ಯವಾಗಿಸಿದ ಧೈರ್ಯವಂತ ನಾಯಕ. ದೇಶವನ್ನು ಮುನ್ನಡೆಸಲು ಅವರ ಸೇವೆ ಇನ್ನೂ ಅಗತ್ಯವಿದೆ” ಎಂದು ಹೇಳಿದ್ದಾರೆ. ಪ್ರವಾಹದಲ್ಲಿ ಕುಸಿದು ಬಿದ್ದಿದ್ದ … Continued

ಭಾರತದಲ್ಲಿ 90 ಸಾವಿರದ ಸನಿಹ ಬಂದ ದೈನಂದಿನ ಕೊರೊನಾ ಪ್ರಕರಣ, ಸಾವಿನ ಪ್ರಮಾಣದಲ್ಲೂ ಏರಿಕೆ…!!

ನವ ದೆಹಲಿ: ಭಾರತದಲ್ಲಿ ಶುಕ್ರವಾರ ಹೊಸದಾಗಿ 89,129 ಕೊರೊನಾ ಪ್ರಕರಣಗಳು ವರದಿಯಾಗಿದೆ.ಕಳೆದ 24 ಗಂಟೆಗಳಲ್ಲಿ 714 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 6.58 ಲಕ್ಷಕ್ಕೆ ಏರಿವೆ, ಕನಿಷ್ಠ 1,15,69,241 ಜನರು ಈ ರೋಗದಿಂದ ಚೇತರಿಸಿಕೊಂಡಿದ್ದಾರೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಈ ಹಿಂದೆ ಲೆಕ್ಕವಿಲ್ಲದ ಸಾವುಗಳು ಸೇರ್ಪಡೆಯಾಗಿವೆ. … Continued

ಕೋವಿಡ್ ಎರಡನೇ ಅಲೆ ಏಪ್ರಿಲ್ ಮಧ್ಯದಲ್ಲಿ ಗರಿಷ್ಠ, ಮೇ ತಿಂಗಳಲ್ಲಿ ನಾಟಕೀಯ ಕುಸಿತ: ವಿಜ್ಞಾನಿಗಳ ಊಹೆ

ಗಣಿತದ ಮಾದರಿ ಬಳಸಿಕೊಂಡು ವಿಜ್ಞಾನಿಗಳು ದೇಶಾದ್ಯಂತ ಹರಡುತ್ತಿರುವ ಕೊವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಏಪ್ರಿಲ್ ಮಧ್ಯದ ವೇಳೆಗೆ ಗರಿಷ್ಠವಾಗಬಹುದು ಎಂದು ಅಂದಾಜಿಸಿದ್ದಾರೆ. ಇದರ ನಂತರ ಮೇ ಅಂತ್ಯದ ವೇಳೆಗೆ ಸೋಂಕುಗಳು ಕುಸಿತ ಕಾಣಬಹುದು ಎಂದು ಹೇಳಿದ್ದಾರೆ. ಭಾರತದಾದ್ಯಂತ ಕೊವಿಡ್‌-19 ಸೋಂಕುಗಳ ಮೊದಲ ಅಲೆಯ ಸಮಯದಲ್ಲಿ, ಸೂತ್ರ ಎಂಬ ಗಣಿತದ ವಿಧಾನ ಬಳಸಿ ಆಗಸ್ಟ್‌ನಲ್ಲಿ ಸೋಂಕಿನ … Continued