ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ತೃಣಮೂಲ ಕಾಂಗ್ರೆಸ್ ನಾಯಕನ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸತ್ಯನ್ ಚೌಧರಿ ಅವರನ್ನು ಭಾನುವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ಬಹರಂಪುರದಲ್ಲಿ ಈ ಘಟನೆ ನಡೆದಿದೆ. ಮುರ್ಷಿದಾಬಾದ್‌ನ ಟಿಎಂಸಿ) ಪ್ರಧಾನ ಕಾರ್ಯದರ್ಶಿ ಸತ್ಯನ್ ಚೌಧರಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಯಿತು. ಸ್ಥಳೀಯ ಟಿಎಂಸಿ … Continued

‘ಕ್ರಮ ಕೈಗೊಳ್ಳಲು ಹಿಂಜರಿಯಲ್ಲ…’: ಪ್ರಧಾನಿ ಮೋದಿ ವಿರುದ್ಧ ಸಚಿವರ ಅವಹೇಳನಕಾರಿ ಹೇಳಿಕೆ ನಂತರ ಮಾಲ್ಡೀವ್ಸ್ ಸರ್ಕಾರ

ನವದೆಹಲಿ: ಮಾಲ್ಡೀವ್ಸ್ ಸರ್ಕಾರವು ಭಾನುವಾರ ಹೇಳಿಕೆಯಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದೇಶದ ಸಚಿವರು ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಸರ್ಕಾರ ಒಪ್ಪುವುದಿಲ್ಲ ಎಂದು ಹೇಳಿದೆ ಹಾಗೂ ಅವರ ಹೇಳಿಕೆಯು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದೆ. “ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ … Continued

‘ಕ್ಷಮಿಸಿ ಮಾಲ್ಡೀವ್ಸ್, ನನ್ನದೇ ಆದ ಲಕ್ಷದ್ವೀಪವಿದೆ’ : ಮಾಲ್ಡೀವ್ಸ್‌ ಸಚಿವೆ ಪ್ರಧಾನಿ ಮೋದಿಗೆ ಅವಹೇಳನ ಮಾಡಿ ಟ್ವೀಟ್‌ ಮಾಡಿದ ನಂತ್ರ ಮಾಲ್ಡೀವ್ಸ್‌ ಪ್ರವಾಸ ರದ್ದು ಪಡಿಸಿದ ಭಾರತೀಯರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗಿನಿಂದ ನೆರೆಯ ಮಾಲ್ಡೀವ್ಸ್‌ನಲ್ಲಿ ದೊಡ್ಡ ಕೋಲಾಹಲ ಎದ್ದಿದೆ, ಮಾಲ್ಡೀವ್ಸ್‌ ಉನ್ನತ ಮಂತ್ರಿಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮಾಲ್ಡೀವ್ಸ್‌ನ ಯುವ ಸಬಲೀಕರಣ, ಮಾಹಿತಿ ಮತ್ತು ಕಲೆಗಳ ಉಪ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿಯವರ ಲಕ್ಷದ್ವೀಪದ ಫೋಟೋಗಳ ಬಗ್ಗೆ … Continued

ಭರವಸೆ ಕಳೆದುಕೊಂಡಿದ್ದೇನೆ, ಜೈಲಿನಲ್ಲಿ ಸಾಯುವುದೇ ಉತ್ತಮ: ಕೈಮುಗಿದು ಕೋರ್ಟ್‌ಗೆ ಹೇಳಿದ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ ಗೋಯಲ್

ಮುಂಬೈ : ಮುಂಬೈ : ಬದುಕಿನ ಆಸೆ ಆಕಾಂಕ್ಷೆ ಹಾಗೂ ಭರವಸೆಯನ್ನು ನಾನು ಕಳೆದುಕೊಂಡಿದ್ದೇನೆ. ನಾನು ಈ ಸ್ಥಿತಿಯಲ್ಲಿ ಜೀವನ ಸಾಗಿಸುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ’ ಎಂದು ಜೆಟ್‌ ಏರ್‌ ವೇಸ್‌ ಸಂಸ್ಥಾಪಕ ನರೇಶ ಗೋಯಲ್‌ ವಿಶೇಷ ನ್ಯಾಯಾಲಯದ ಮುಂದೆ ಕೈಮುಗಿದು ಅಳಲು ತೋಡಿಕೊಂಡರು. .ಜೆಟ್‌ ಏರ್‌ ವೇಸ್‌ ಸಂಸ್ಥಾಪಕ ನರೇಶ ಗೋಯಲ್‌ ಅವರನ್ನು ಕೆನರಾ … Continued

ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದ ವೇಳೆ 1 ಲಕ್ಷ ತಿರುಪತಿ ಲಡ್ಡುಗಳ ವಿತರಣೆ

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರದ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸುವ ಎಲ್ಲಾ ಅತಿಥಿಗಳು ಮತ್ತು ಭಕ್ತರಿಗೆ ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವರ ಪ್ರಸಿದ್ಧ ಪ್ರಸಾದವಾದ ‘ಶ್ರೀವಾರಿ ಲಡ್ಡು’ ಅನ್ನು ನೀಡಲಾಗುತ್ತದೆ. ವಿಶ್ವವಿಖ್ಯಾತ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಒಂದು ಲಕ್ಷ ‘ಶ್ರೀವಾರಿ ಲಡ್ಡು’ … Continued

ಏಮ್ಸ್‌ನಲ್ಲಿ 5 ವರ್ಷದವಳಿಗೆ “ಎಚ್ಚರ”ದ ಸ್ಥಿತಿಯಲ್ಲಿ ನಡೆದ ಮಿದುಳಿನ ಶಸ್ತ್ರಚಿಕಿತ್ಸೆ : ಈ ವಿಧಾನದ ಶಸ್ತ್ರಚಿಕಿತ್ಸೆಗೆ ಒಳಗಾದ ವಿಶ್ವದ ಅತ್ಯಂತ ಕಿರಿಯ ರೋಗಿ

ನವದೆಹಲಿ : ದೆಹಲಿಯ ಏಮ್ಸ್‌ ವೈದ್ಯರು ಐದು ವರ್ಷದ ಬಾಲಕಿಗೆ ಬ್ರೈನ್‌ ಟ್ಯೂಮರ್‌ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಆಕೆಯನ್ನು ಪ್ರಜ್ಞೆಯ ಸ್ಥಿತಿಯಲ್ಲಿರಿಸಿಕೊಂಡೇ ಆಸ್ಪತ್ರೆಯು ಶಸ್ತ್ರಚಿಕಿತ್ಸೆ ನಡೆಸಿದ್ದು, ಮಗು ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ವಿಶ್ವದ ಅತ್ಯಂತ ಕಿರಿಯ ರೋಗಿ ಎಂದು ಆಸ್ಪತ್ರೆ ಹೇಳಿಕೊಂಡಿದೆ. ಎಡ ಪೆರಿಸಿಲ್ವಿಯನ್ ಇಂಟ್ರಾಕ್ಸಿಯಲ್ ಬ್ರೈನ್ ಟ್ಯೂಮರ್‌ಗೆ ‘ಅವೇಕ್ ಕ್ರ್ಯಾನಿಯೊಟಮಿ’ (ಪ್ರಜ್ಞೆಯ ನಿದ್ರಾಜನಕ … Continued

ಭಗವಾನ್‌ ರಾಮನಿಗೆ ಅರ್ಪಿಸಲು ಚಿನ್ನದ ಪಾದುಕೆಗಳ ಜೊತೆ ಅಯೋಧ್ಯೆಗೆ 8,000 ಕಿಮೀ ಪಾದಯಾತ್ರೆ ಹೊರಟಿರುವ ಹೈದರಾಬಾದಿನ 64 ವರ್ಷದ ವ್ಯಕ್ತಿ…!

ಹೈದರಾಬಾದಿನ 64 ವರ್ಷದ ಚಲ್ಲಾ ಶ್ರೀನಿವಾಸ ಶಾಸ್ತ್ರಿ ಎಂಬವರು ಅಯೋಧ್ಯೆಗೆ 8,000 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದು, ಭಗವಾನ್ ರಾಮನಿಗೆ ಸಮರ್ಪಿಸಲು ಉದ್ದೇಶಿಸಲಾದ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಲೇಪಿತ ಪಾದರಕ್ಷೆಗಳನ್ನು ತಮ್ಮೊಂದಿಗೆ ಒಯ್ಯುತ್ತಿದ್ದಾರೆ. ಜನವರಿ 22 ರಂದು ರಾಮಮಂದಿರ ಉದ್ಘಾಟನೆಯೊಂದಿಗೆ ಹೊಂದಿಕೊಂಡ ಅವರ ಪ್ರಯಾಣವು ಭಗವಾನ್ ರಾಮ ‘ವನವಾಸ’ದ (ವನವಾಸ) ವೇಳೆ ಸಾಗಿ ಬಂದ … Continued

ಕಾಜಲ್ ಝಾ ಯಾರು..? ಇವಳ ₹ 100 ಕೋಟಿ ಮೌಲ್ಯದ ದೆಹಲಿ ಬಂಗಲೆ ಸೀಜ್‌ ಮಾಡಿದ ಪೊಲೀಸರು…

ನವದೆಹಲಿ: ಸ್ಕ್ರ್ಯಾಪ್ ಮೆಟಲ್ ಮಾಫಿಯಾ ಮತ್ತು ಗ್ಯಾಂಗ್‌ಸ್ಟರ್‌ ರವೀಂದ್ರ ನಗರ, ಅಲಿಯಾಸ್ ರವಿ ಕಾನಾ ವಿರುದ್ಧದ ಕಾರ್ಯಾಚರಣೆಯಲ್ಲಿ, ನೋಯ್ಡಾ ಪೊಲೀಸರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ₹200 ಕೋಟಿಗೂ ಹೆಚ್ಚು ಮೌಲ್ಯದ ಆತನ ಆಸ್ತಿಯನ್ನು ಯಶಸ್ವಿಯಾಗಿ ಸೀಲ್ ಮಾಡಿದ್ದಾರೆ. ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದ ನೋಯ್ಡಾ ಪೊಲೀಸರು ರವಿ ಕಾನಾ ತನ್ನ ಗೆಳತಿ ಕಾಜಲ್ ಝಾಗೆ ಉಡುಗೊರೆಯಾಗಿ ನೀಡಿದ ₹ … Continued

ಧೋತಿ-ಕುರ್ತಾ ಧರಿಸಿ ಕ್ರಿಕೆಟ್ ಆಡಿದ ವೇದ ಪಂಡಿತರು ; ಸಂಸ್ಕೃತದಲ್ಲೇ ಕಾಮೆಂಟರಿ, ಮಾತುಕತೆ; ವಿಜೇತ ತಂಡಕ್ಕೆ ಅಯೋಧ್ಯಾ ಪ್ರವಾಸದ ಬಹುಮಾನ | ವೀಕ್ಷಿಸಿ

ಭೋಪಾಲ: ಸಂಸ್ಕೃತವನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ವಾರ್ಷಿಕ ಪಂದ್ಯಾವಳಿಯ ಭಾಗವಾಗಿ ಧೋತಿ-ಕುರ್ತಾವನ್ನು ಧರಿಸಿರುವ ಮತ್ತು ಹಣೆಯ ಮೇಲೆ ಕುಂಕುಮ-ತಿಲಕ ಇಟ್ಟುಕೊಂಡ ವೈದಿಕರು ಭೋಪಾಲಿನ ಕ್ರಿಕೆಟ್ ಪಿಚ್‌ನಲ್ಲಿ ಆಯೋಜಿಸಿರುವ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಟವಾಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಧ್ಯಾನದ ಅಭ್ಯಾಸವನ್ನು ಪರಿಚಯಿಸಿದ ಮಹರ್ಷಿ ಮಹೇಶ ಯೋಗಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ವಿಜೇತರಿಗೆ ಈ ವರ್ಷ ಅಯೋಧ್ಯೆ … Continued

ತನ್ನ ಮದುವೆ ವಾರ್ಷಿಕೋತ್ಸವದ ದಿನ ತನ್ನದೇ ಗ್ಯಾಂಗ್‌ನವರ ಗುಂಡಿನ ದಾಳಿಯಲ್ಲಿ ಹತ್ಯೆಯಾದ ಗ್ಯಾಂಗ್‌ಸ್ಟರ್ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

40 ವರ್ಷದ ಗ್ಯಾಂಗ್‌ಸ್ಟರ್ ಶರದ್ ಮೊಹೋಲ್‌‌ ಎಂಬಾತನನ್ನು ಶುಕ್ರವಾರ ಮಧ್ಯಾಹ್ನ ಪುಣೆಯ ಕೊತ್ರುಡ್‌ನಲ್ಲಿ ಆತನ ಗ್ಯಾಂಗ್‌ನ ಕೆಲವು ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲೊಸದೆ ಸಾವಿಗೀಡಾಗಿದ್ದಾನೆ ಎಂದು ಅವರು ಹೇಳಿದ್ದಾರೆ. ಕುಖ್ಯಾತ ಗ್ಯಾಂಗ್‌ಸ್ಟರ್ ನನ್ನು ಮದುವೆಯ ವಾರ್ಷಿಕೋತ್ಸವದ ದಿನವೇ ಕೊಲ್ಲಲಾಯಿತು. “ಮಧ್ಯಾಹ್ನ 1:30 ರ ಸುಮಾರಿಗೆ … Continued