ಸೇರಿದ 10 ದಿನಕ್ಕೇ ಜಗನ್ ರೆಡ್ಡಿ ವೈಎಸ್‌ಆರ್‌ಸಿಪಿ ಪಕ್ಷ ತೊರೆದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು

ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷಕ್ಕೆ (ವೈಎಸ್‌ಆರ್‌ಸಿಪಿ) ಸೇರಿದ ಕೇವಲ ಎಂಟು ದಿನಗಳ ನಂತರ ಕ್ರಿಕೆಟಿಗ ಅಂಬಟಿ ರಾಯುಡು ಅವರು ಶನಿವಾರ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ. ರಾಯುಡು ಜೂನ್ 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು ಮತ್ತು ರಾಜಕೀಯಕ್ಕೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ರಾಯುಡು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, “ನಾನು ವೈಎಸ್‌ಆರ್‌ಸಿಪಿ ಪಕ್ಷವನ್ನು … Continued

ಸಾಯಿಸುವ ಉದ್ದೇಶದಿಂದಲೇ 800 ಜನರ ಗುಂಪಿನಿಂದ ದಾಳಿ’: ಪಶ್ಚಿಮ ಬಂಗಾಳದ ದಾಳಿ ಘಟನೆ ಬಗ್ಗೆ ಇ.ಡಿ.

ನವದೆಹಲಿ : ತೃಣಮೂಲ ಕಾಂಗ್ರೆಸ್‌ ನಾಯಕರೊಬ್ಬರ ಬೆಂಬಲಿಗರು ತನ್ನ ಅಧಿಕಾರಿಗಳ ಮೇಲೆ ನಡೆದ ದಾಳಿಯ ಬಗ್ಗೆ ವಿವರಗಳನ್ನು ನೀಡಿದ ಜಾರಿ ನಿರ್ದೇಶನಾಲಯವು ಗುಂಪು 800-1,000 ಜನರನ್ನು ಒಳಗೊಂಡಿದ್ದು, “ಸಾವಿಗೆ ಕಾರಣವಾಗುವ ಉದ್ದೇಶ” ಇತ್ತು ಎಂದು ಹೇಳಿದೆ. ಇ.ಡಿ.ಯ ಮೂವರು ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಜನಸಮೂಹದಲ್ಲಿರುವ ಜನರು ತಮ್ಮ ಸಿಬ್ಬಂದಿಯ ಮೊಬೈಲ್ ಫೋನ್‌ಗಳು, ವ್ಯಾಲೆಟ್‌ಗಳು ಮತ್ತು … Continued

ದಾವೂದ್ ಇಬ್ರಾಹಿಂನ 15,440 ರೂ. ಮೂಲ ಬೆಲೆಯ ಆಸ್ತಿ ಹರಾಜಿನಲ್ಲಿ 2 ಕೋಟಿ ರೂ.ಗಳಿಗೆ ಮಾರಾಟ

ಮುಂಬೈ: ದಾವೂದ್ ಇಬ್ರಾಹಿಂ ಒಡೆತನದ ನಾಲ್ಕು ಆಸ್ತಿಗಳ ಹರಾಜು ಪ್ರಕ್ರಿಯೆ ಶುಕ್ರವಾರ (ಜನವರಿ 5) ಮುಕ್ತಾಯವಾಗಿದ್ದು, ಎರಡು ಜಮೀನುಗಳಿಗೆ ಯಾವುದೇ ಬಿಡ್‌ಗಳು ಸಿಗಲಿಲ್ಲ ಮತ್ತು ಕೇವಲ ₹ 15,000 ಮೀಸಲು ಬೆಲೆ ಹೊಂದಿದ್ದ ಒಂದನ್ನು ₹ 2 ಕೋಟಿಗೆ ಮಾರಾಟ ಮಾಡಲಾಗಿದೆ. ದಾವೂದ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದು, ಕರಾಚಿಯಲ್ಲಿ ಅಡಗಿದ್ದಾನೆ ಎಂದು ನಂಬಲಾಗಿದೆ. ಸರ್ವೆ … Continued

ಟಿ20 ವಿಶ್ವಕಪ್-2024 ವೇಳಾಪಟ್ಟಿ ಪ್ರಕಟ: ಜೂನ್ 9ರಂದು ಭಾರತ vs ಪಾಕಿಸ್ತಾನ ಪಂದ್ಯ

ದುಬೈ: ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದೆ. ಟೂರ್ನಿಯು ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದಲ್ಲಿ ಆಯೋಜನೆಗೊಳ್ಳಲಿದ್ದು, ಜೂನ್‌ 1ರಂದು ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ಹಾಗೂ ಕೆನಡಾ ಮುಖಾಮುಖಿಯಾಗಲಿವೆ. ಜೂನ್‌ 5ರಂದು ಐರ್ಲೆಂಡ್‌ ವಿರುದ್ಧ ಭಾರತ ತನ್ನ … Continued

ಬಾಬ್ರಿ ಮಸೀದಿ ಪರ ಪ್ರಮುಖ ದಾವೆದಾರ ಇಕ್ಬಾಲ್ ಅನ್ಸಾರಿಗೂ ರಾಮ ಮಂದಿರದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ

ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರನ್ನೂ ಆಹ್ವಾನಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಆಹ್ವಾನ ನೀಡಲಾಗಿದೆ. ಇಕ್ಬಾಲ್ ಅನ್ಸಾರಿ ಅವರು ಬಾಬರಿ ಮಸೀದಿಯ ಪ್ರಮುಖ … Continued

ಮಾಜಿ ವ್ಯವಹಾರ ಪಾಲದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಕ್ರಿಕೆಟಿಗ ಎಂ.ಎಸ್. ಧೋನಿ : 15 ಕೋಟಿ ರೂ ವಂಚನೆ ಆರೋಪ

ರಾಂಚಿ : ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮಿಹಿರ್ ದಿವಾಕರ ಮತ್ತು ಸೌಮ್ಯ ವಿಶ್ವನಾಥನ್‌ ವಿರುದ್ಧ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಸೌಮ್ಯ ವಿಶ್ವನಾಥನ್ ಮತ್ತು ಮಿಹಿರ್ ದಿವಾಕರ ವಿರುದ್ಧ ಧೋನಿ ಸುಮಾರು 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಿಹಿರ್ ದಿವಾಕರ ಅವರು … Continued

ಮುಖೇಶ ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಭಾರತದ ಅತಿ ಶ್ರೀಮಂತ ವ್ಯಕ್ತಿಯಾದ ಗೌತಮ ಅದಾನಿ

ನವದೆಹಲಿ: ಬಿಲಿಯನೇರ್ ಗೌತಮ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಗೌತಮ ಅದಾನಿಯವರ ನಿವ್ವಳ ಮೌಲ್ಯವು ಪ್ರಸ್ತುತ $97.6 ಬಿಲಿಯನ್ ಆಗಿದೆ – ಮುಖೇಶ ಅಂಬಾನಿಯವರ $97 ಶತಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ. ಅವರು ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. … Continued

ಪಡಿತರ ಹಗರಣದ ಶೋಧ ಕಾರ್ಯಕ್ಕೆ ತೆರಳಿದ್ದ ಇ.ಡಿ. ಅಧಿಕಾರಿಗಳು, ವಾಹನಗಳ ಮೇಲೆ ದಾಳಿ

ಕೋಲ್ಕತ್ತಾ: ಪಡಿತರ ಹಗರಣ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಮನೆ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಕೇಂದ್ರ ಭದ್ರತಾ ಪಡೆಗಳ ತಂಡದ ಮೇಲೆ ಬಂಗಾಳದ ಉತ್ತರ 24 ಪರಗಣದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ದಾಳಿ ವೇಳೆ ಸ್ಥಳದಲ್ಲಿದ್ದ ಹಲವಾರು ಮಾಧ್ಯಮ ವಾಹನಗಳನ್ನು ಸಹ ಧ್ವಂಸಗೊಳಿಸಲಾಯಿತು ಎಂದು … Continued

ದಾವೂದ್ ಇಬ್ರಾಹಿಂ ಒಡೆತನದ 4 ಆಸ್ತಿಗಳು ಕೇವಲ ₹ 19 ಲಕ್ಷಕ್ಕೆ ಇಂದು ಬಿಡ್ಡಿಂಗ್‌

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕುಟುಂಬದ ಒಡೆತನದ ನಾಲ್ಕು ಕೃಷಿ ಭೂಮಿ  ಶುಕ್ರವಾರ (ಜನವರಿ 5)  ಕೇವಲ ₹ 19 ಲಕ್ಷದ ಮೀಸಲು ಬೆಲೆಗೆ ಬಿಡ್‌ಗೆ ಹೋಗಲಿದೆ. ಈ ಭೂಮಿ ಭೂಗತ ಪಾತಕಿಯ ಪೂರ್ವಜರ ಆಸ್ತಿಯಾಗಿದ್ದು, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುಂಬಾಕೆ ಗ್ರಾಮದಲ್ಲಿವೆ. ಹರಾಜುದಾರರ ಸಂಖ್ಯೆ ಸ್ಪಷ್ಟವಾಗಿಲ್ಲವಾದರೂ, ಈ ಹಿಂದೆ … Continued

ದೆಹಲಿಯಲ್ಲಿ ಸಿಕ್ಕಿಬಿದ್ದ ವಾಂಟೆಡ್‌ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಜಾವೇದ್ ಅಹ್ಮದ್ ಮಟ್ಟೂ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬೇಕಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್‌ನ ಭಯೋತ್ಪಾದಕ ಜಾವೇದ್ ಅಹ್ಮದ್ ಮಟ್ಟೂ ಗುರುವಾರ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನ ತಲೆಯ ಮೇಲೆ 10 ಲಕ್ಷ ರೂಪಾಯಿ ಬಹುಮಾನ ಇತ್ತು. ಕೇಂದ್ರೀಯ ಏಜೆನ್ಸಿಗಳ ಸಮನ್ವಯದಲ್ಲಿ, ದೆಹಲಿ ಪೊಲೀಸ್ ವಿಶೇಷ ಸೆಲ್ ತಂಡ ಮಟ್ಟೂವನ್ನು ಬಂಧಿಸಿದೆ. ಪೊಲೀಸ್ ತಂಡವು ಮಟ್ಟೂನಿಂದ ಪಿಸ್ತೂಲ್, ಆರು ಲೈವ್ ಕಾರ್ಟ್ರಿಡ್ಜ್ಗಳು ಮತ್ತು … Continued