ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ: ಕಾಂಗ್ರೆಸ್ ನಾಯಕ ಪವನ್‌ ಖೇರಾ ವಿರುದ್ಧದ ಪ್ರಕರಣ ರದ್ದತಿಗೆ ಸುಪ್ರೀಂಕೋರ್ಟ್‌ ನಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು … Continued

ಅಯೋಧ್ಯೆ ರಾಮ ಮಂದಿರ : ನಾಗರಶೈಲಿಯ ದೇವಾಲಯ ; 392 ಕಂಬಗಳು, 44 ದ್ವಾರಗಳು, ಹತ್ತು ಹಲವು ವಿಶೇಷತೆಗಳು- ಮಾಹಿತಿ ಇಲ್ಲಿದೆ…

ಅಯೋಧ್ಯೆ: ಇದೇ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಅಯೋಧ್ಯೆಯ ರಾಮ ಮಂದಿರವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ರಾಮ ಮಂದಿರದ ವಿಶೇಷತೆಗಳ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇವಾಲಯದ ಪ್ರಮುಖ ವೈಶಿಷ್ಟ್ಯಗಳನ್ನು ಹಂಚಿಕೊಂಡಿದೆ. * ರಾಮಮಂದಿರವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. … Continued

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ

ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಇಬ್ಬರನ್ನು ಬಂಧಿಸಿದೆ. ಎಸ್‌ಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಅಮಿತಾಬ್‌ ಯಶ ಮತ್ತು ದೇವೇಂದ್ರ ತಿವಾರಿ ಎಂಬ ವ್ಯಕ್ತಿಗೂ ಬಾಂಬ್ ಬೆದರಿಕೆಗಳನ್ನು ಕಳುಹಿಸಲಾಗಿದೆ. ಬಂಧಿತ ಆರೋಪಿಗಳಾದ ತಹರ್ ಸಿಂಗ್ … Continued

ʼಭಗವಾನ್ ರಾಮನು ಮಾಂಸಾಹಾರಿ’ : ರಾಮ ಮಂದಿರ ಉದ್ಘಾಟನೆಗೆ ಮುನ್ನ ವಿವಾದ ಸೃಷ್ಟಿಸಿದ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಹೇಳಿಕೆ

ಮುಂಬೈ : ಅಯೋಧ್ಯೆಯಲ್ಲಿ ಬೃಹತ್ ರಾಮ ಮಂದಿರದ ಉದ್ಘಾಟನೆ ಸಮಾರಂಭ ನಡೆಯುವ ಕೆಲವು ದಿನಗಳ ಮೊದಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಅವರು “ಭಗವಾನ್ ರಾಮನು ಮಾಂಸಾಹಾರಿ” ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಎನ್‌ಸಿಪಿಯ ಶರದ್ ಪವಾರ ಬಣಕ್ಕೆ ಸೇರಿದ ಜಿತೇಂದ್ರ ಅವ್ಹಾದ್ ಅವರು ಬುಧವಾರ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ … Continued

ಕಾಂಗ್ರೆಸ್‌ ಸೇರಿದ ಆಂಧ್ರ ಸಿಎಂ ಜಗನ್ಮೋಹನ ರೆಡ್ಡಿ ಸಹೋದರಿ

ನವದೆಹಲಿ: ವೈ.ಎಸ್. ಆರ್. ತೆಲಂಗಾಣ ಪಕ್ಷದ ಸಂಸ್ಥಾಪಕಿ ಹಾಗೂ ಆಂಧ್ರ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ಬುಧವಾರ ತಡರಾತ್ರಿ ನವದೆಹಲಿಗೆ ಆಗಮಿಸಿದ್ದರು. ಸೇರ್ಪಡೆ ಸಮಾರಂಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅವರು ತಮ್ಮ … Continued

ಲೋಕಸಭೆ ಚುನಾವಣೆಗೆ ಮುನ್ನ ಬಂಡಿ ಸಂಜಯ, ಸುನಿಲ ಬನ್ಸಾಲ್, ಇತರರಿಗೆ ಪಕ್ಷದಲ್ಲಿ ಮಹತ್ವದ ಹೊಣೆಗಾರಿಕೆ ನೀಡಿದ ಬಿಜೆಪಿ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕೇವಲ ತಿಂಗಳುಗಳು ಬಾಕಿ ಇರುವಾಗ, ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಪಕ್ಷದ ವಿವಿಧ ವಿಭಾಗಗಳಿಗೆ ಪ್ರಮುಖ ನೇಮಕಾತಿಗಳನ್ನು ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹಲವು ಮುಖಂಡರನ್ನು ವಿವಿಧ ಇಲಾಖೆಗಳ ಉಸ್ತುವಾರಿಗಳನ್ನಾಗಿ ನೇಮಿಸಿದ್ದಾರೆ. ಜೆಪಿ ನಡ್ಡಾ ಅವರು ಅನುಮೋದಿಸಿದ ನೇಮಕಾತಿಗಳ ಪಟ್ಟಿ ಇಲ್ಲಿದೆ: ಸುನಿಲ … Continued

ಗ್ಯಾಂಗ್‌ಸ್ಟರ್‌ ‘ನಕಲಿ’ ಎನ್‌ಕೌಂಟರ್ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರೂಪದರ್ಶಿಯ ಗುಂಡಿಕ್ಕಿ ಹತ್ಯೆ

ನವದೆಹಲಿ:  2016 ರಲ್ಲಿ ಮುಂಬೈ ಹೋಟೆಲ್ ಕೊಠಡಿಯಲ್ಲಿ ಹರಿಯಾಣ ಮೂಲದ ಗ್ಯಾಂಗ್‌ಸ್ಟರ್‌ನ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾದ ಐದು ತಿಂಗಳ ನಂತರ, 27 ವರ್ಷದ ಮಾಡೆಲ್ ದಿವ್ಯಾ ಪಹುಜಾಳನ್ನು ಮಂಗಳವಾರ ಗುರುಗ್ರಾಮದ ಹೊಟೇಲ್‌ ಒಂದರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ದಿವ್ಯಾ ಪಹುಜಾಳ ಸಹೋದರಿ ನೀಡಿದ ದೂರಿನ ಪ್ರಕಾರ, ಜನವರಿ … Continued

ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್‌: ಎಸ್ಒಪಿ ರೂಪಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡುವಾಗ ನ್ಯಾಯಾಲಯಗಳು ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಹಾಗೂ ಹಾಗೂ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿಸಿದೆ. ಅಲ್ಲದೆ, ಅಧಿಕಾರಿಗಳನ್ನು ಅಪಮಾನಿಸದಂತೆ ಹಾಗೂ ಉಡುಗೆ ತೊಡುಗೆಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ನ್ಯಾಯಾಲಯಗಳಿಗೆ ಸೂಚಿಸಿದೆ. ಎಸ್‌ಒಪಿಯನ್ನು ಎಲ್ಲಾ ಹೈಕೋರ್ಟ್‌ಗಳು ಪಾಲಿಸಬೇಕಿದ್ದು ಅಧಿಕಾರಿಗಳಿಗೆ ಮನಬಂದಂತೆ ಸಮನ್ಸ್‌ ನೀಡಬಾರದು ಎಂದು ಭಾರತದ … Continued

ಲೋಕಸಭೆಯಿಂದ ಮಹುವಾ ಮೊಯಿತ್ರಾ ಉಚ್ಚಾಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ : ‌ತಮ್ಮನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಲೋಕಸಭಾ ಸಚಿವಾಲಯಕ್ಕೆ ಸೂಚಿಸಿದೆ. ಹಾಗೂ ಮೊಯಿತ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ಪೀಠವು ಲೋಕಸಭಾ ಸಚಿವಾಲು ಎರಡು ವಾರಗಳಲ್ಲಿ … Continued

ಇರಾನ್ ಟಾಪ್ ಜನರಲ್ ಖಾಸೆಮ್ ಸೊಲೈಮಾನಿ ಸಮಾಧಿ ಬಳಿ ಅವಳಿ ಸ್ಫೋಟ : 100 ಕ್ಕೂ ಹೆಚ್ಚು ಜನರು ಸಾವು

ದುಬೈ: 2020 ರಲ್ಲಿ ಅಮೆರಿಕದಿಂದ ಡ್ರೋನ್‌ನಿಂದ ಕೊಲ್ಲಲ್ಪಟ್ಟ ಟಾಪ್ ಕಮಾಂಡರ್ ಖಾಸೆಮ್ ಸೊಲೈಮಾನಿ ಸ್ಮರಣಾರ್ಥ ಇರಾನ್‌ನಲ್ಲಿ ನಡೆದ ಸಮಾರಂಭದಲ್ಲಿ ‘ಭಯೋತ್ಪಾದಕ ದಾಳಿ’ಯಿಂದ ಉಂಟಾದ ಎರಡು ಸ್ಫೋಟಗಳಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಜನಸಮೂಹದ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ ಕನಿಷ್ಠ 103 … Continued