ನಾಗ್ಪುರದ ಆರ್‌ಎಸ್‌ಎಸ್ ಕೇಂದ್ರ ಸ್ಥಾನ ಸ್ಫೋಟಿಸುವುದಾಗಿ ಅಪರಿಚಿತ ಫೋನ್‌ ಬೆದರಿಕೆ, ಬಿಗಿ ಭದ್ರತೆ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೇಂದ್ರ ಕಚೇರಿಗೆ ಶನಿವಾರ ಅಪರಿಚಿತ ಕರೆ ಮಾಡಿದವರು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಫೋನ್ ಕರೆ ಬಂದಿತು. ಮಹಲ್ ಪ್ರದೇಶದಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ … Continued

ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ವಾಹನವನ್ನು 3 ಕಿಮೀ ವರೆಗೆ ಬೆನ್ನಟ್ಟಿದ ಕೋಪೋದ್ರಿಕ್ತ ದೈತ್ಯ ಘೇಂಡಾಮೃಗ : ವೀಕ್ಷಿಸಿ

ಗುವಾಹತಿ: ಅಸ್ಸಾಂನ ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ; ಘೇಂಡಾಮೃಗವೊಂದು ಇದ್ದಕ್ಕಿದ್ದಂತೆ ಅವರ ವಾಹನವನ್ನು ಬೆನ್ನಟ್ಟಿದೆ ಘಟನೆ ನಡೆದಿದೆ. ರಾಷ್ಟ್ರೀಯ ಉದ್ಯಾನವನದ ಬಾನ್ ಹಬರಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಫಾರಿ ಜೀಪ್ ಉದ್ಯಾನವನದ ಹಬರಿ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಘೇಂಡಾಮೃಗವು ಪೊದೆಯಿಂದ ಹೊರಬಂದು ಅವರ ವಾಹನವನ್ನು ಹಿಂಬಾಲಿಸಲು ಪ್ರಾರಂಭಿಸಿತು. … Continued

2022 ರಲ್ಲಿ ಭಾರತದ ಸರ್ಕಾರಿ ಏಜೆನ್ಸಿಗಳ ಮೇಲೆ ಅತಿ ಹೆಚ್ಚು ಸೈಬರ್ ದಾಳಿಗಳು : ವರದಿ

ನವದೆಹಲಿ: 2022ರಲ್ಲಿ ಸರ್ಕಾರದ ವಿರುದ್ಧ ಸೈಬರ್ ದಾಳಿಗಳ ಸಂಖ್ಯೆ ದ್ವಿಗುಣಗೊಂಡಿದ್ದು, 2022 ರಲ್ಲಿ ಭಾರತವು ಈ ವಲಯದಲ್ಲಿ ಹೆಚ್ಚು ಗುರಿಯಾಗಿರುವ ದೇಶವಾಗಿದೆ. ಶೇ.13.7 ರಷ್ಟು ಸೈಬರ್ ದಾಳಿಗಳು ಭಾರತೀಯ ಘಟಕಗಳ ವಿರುದ್ಧವಾಗಿದೆ ಎಂದು ಶುಕ್ರವಾರ ವರದಿಯೊಂದು ಬಹಿರಂಗಪಡಿಸಿದೆ. “2022ರಲ್ಲಿ, ಭಾರತ ಸರ್ಕಾರದ ಮೇಲಿನ ದಾಳಿಗಳು ಈ ವಲಯದಲ್ಲಿ ಹೆಚ್ಚಾಗಿ ಗುರಿಯಾಗಿರುವ ದೇಶವಾಗುವಂತೆ ಮಾಡಿದೆ ಎಂದು ಕ್ಲೌಡ್‌ಸೆಕ್ … Continued

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟ : 4 ಮಂದಿ ಸಾವು, 7 ಮಂದಿಗೆ ಗಾಯ

ಚೆನ್ನೈ: ಶನಿವಾರ ನಸುಕಿನಲ್ಲಿ ನಾಮಕ್ಕಲ್ ಜಿಲ್ಲೆಯ ಪಟಾಕಿ ಅಂಗಡಿ ಮಾಲೀಕನ ಮನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಮೃತ ನಾಲ್ವರಲ್ಲಿ ಮೂವರು ಮಹಿಳೆಯರು ಮತ್ತು ಪಟಾಕಿ ಅಂಗಡಿಯ ಮಾಲೀಕರು ಸೇರಿದ್ದಾರೆ. ಶನಿವಾರ, ನಸುಕಿನ 4 ಗಂಟೆಗೆ ಅವರೆಲ್ಲರೂ ತಮ್ಮ ಮನೆಗಳಲ್ಲಿ ಮಲಗಿದ್ದಾಗ ಸ್ಫೋಟ ಸಂಭವಿಸಿದೆ. ಬೆಂಕಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳಿಗೆ … Continued

ಬಿಹಾರದ ಬಿಜೆಪಿ ಉಪಾಧ್ಯಕ್ಷರ ಉಚ್ಚಾಟನೆ

ಪಾಟ್ನಾ: ಬಿಹಾರದ ಬಿಜೆಪಿಯು ಪಕ್ಷದ ಉಪಾಧ್ಯಕ್ಷ ರಾಜೀವ ರಂಜನ್ ಅವರನ್ನು ಅಶಿಸ್ತಿನ ಕಾರಣಕ್ಕಾಗಿ ವಜಾಗೊಳಿಸಿದೆ. ರಂಜನ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡ ಸ್ವಲ್ಪ ಸಮಯದ ನಂತರ ಡಿಸೆಂಬರ್ 29 ರಂದು ರಾಜ್ಯ ಘಟಕದ ಮುಖ್ಯಸ್ಥ ಸಂಜಯ ಜೈಸ್ವಾಲ್ ಅವರು ಹೊರಡಿಸಿದ ಪತ್ರವನ್ನು ಪಕ್ಷವು ಹಂಚಿಕೊಂಡಿದೆ. ನಿಮ್ಮ ಮಾತುಗಳು ರಾಜ್ಯ ಉಪಾಧ್ಯಕ್ಷರಿಗೆ ಯೋಗ್ಯವಲ್ಲ … Continued

ಚಾಲಕನಿಗೆ ಹೃದಯಾಘಾತವಾಗಿ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದ ಬಸ್ : 9 ಸಾವು, 28 ಮಂದಿಗೆ ಗಾಯ

ಗಾಂಧಿನಗರ: ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಬಸ್ ಮತ್ತು ಎಸ್‌ಯುವಿ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂಬತ್ತು ಜನರು ಮೃತಪಟ್ಟಿದ್ದಾರೆ ಮತ್ತು 28 ಮಂದಿ ಗಾಯಗೊಂಡಿದ್ದಾರೆ. ಸೂರತ್‌ನಿಂದ ಪ್ರಮುಖ್ ಸ್ವಾಮಿ ಮಹಾರಾಜ ಶತಾಬ್ದಿ ಮಹೋತ್ಸವ ಕಾರ್ಯಕ್ರಮದಿಂದ ವಾಪಸಾಗುತ್ತಿದ್ದ ಜನರಿಂದ ತುಂಬಿದ್ದ ಬಸ್ ಚಾಲಕನಿಗೆ ನವಸಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ರಲ್ಲಿ ಹೃದಯಾಘಾತ … Continued

ಮುಖದ ಗಾಯಗಳು, ಸೀಳಿದ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಕ್ರಿಕೆಟಿಗ ರಿಷಬ್ ಪಂತ್ : ವರದಿ

ನವದೆಹಲಿ: ಶುಕ್ರವಾರ ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದು, ನಂತರ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಎಂದು ಶುಕ್ರವಾರ ಸುದ್ದಿ ವರದಿಯೊಂದು ತಿಳಿಸಿದೆ. ದೆಹಲಿಯಿಂದ ರೂರ್ಕಿಗೆ ಹಿಂದಿರುಗುತ್ತಿದ್ದಾಗ ಅವರು ಭೀಕರ ಅಪಘಾತಕ್ಕೆ ಒಳಗಾದ ನಂತರ ರಿಷಬ್ ಪಂತ್ ಅವರ ಮೆದುಳು ಮತ್ತು ಬೆನ್ನುಹುರಿಯ MRI … Continued

ಮತ್ತೆ ಕಾಂಗ್ರೆಸ್‌ಗೆ ಮರಳುವುದಿಲ್ಲ : ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ಗುಲಾಂ ನಬಿ ಆಜಾದ್‌

ನವದೆಹಲಿ : ಹಿರಿಯ ರಾಜಕಾರಣಿ ಮತ್ತು ಹೊಸದಾಗಿ ರೂಪುಗೊಂಡ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ 52 ವರ್ಷಗಳ ಕಾಂಗ್ರೆಸ್‌ ಸಂಬಂಧ ಮುರಿದುಕೊಂಡು ಬಂದಿದ್ದು, ಮತ್ತೆ ಕಾಂಗ್ರೆಸ್‌ಗೆ ಮರಳುವ ಯಾವುದೇ ಇರಾದೆಯಿಲ್ಲ ಎಂದು ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರದ … Continued

ಭೀಕರ ಕಾರು ಅಪಘಾತದ ನಂತರ ರಿಷಬ್ ಪಂತ್ ತಾಯಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ನವದೆಹಲಿ: ಭೀಕರ ಕಾರು ಅಪಘಾತದ ನಂತರ ಗಂಭೀರವಾಗಿ ಗಾಯಗೊಂಡಿರುವ ಭಾರತದ ಕ್ರಿಕೆಟ್‌ ಆಟಗಾರ ರಿಷಬ್‌ ಪಂತ್‌ ರಿಷಬ್ ಪಂತ್ ಅವರ ತಾಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾತನಾಡಿದ್ದು, ಅವರ ಆರೋಗ್ಯ ಮತ್ತು ಚೇತರಿಕೆಯ ಬಗ್ಗೆ ವಿಚಾರಿಸಿದ್ದಾರೆ. ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಬರುತ್ತಿದ್ದಾಗ ಭೀಕರ ಅಪಘಾತದಲ್ಲಿ ಗಾಯಗೊಂಡರು. ಹಮ್ಮದ್‌ಪುರ … Continued

ಭಗವಾನ್‌ ರಾಮ, ಹನುಮಂತ ಬಿಜೆಪಿಗೆ ಮಾತ್ರ ಕಾಪಿರೈಟ್‌ ಅಲ್ಲ : ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ಉಮಾಭಾರತಿ

ಭೋಪಾಲ: ತಮ್ಮ ಹೊರತುಪಡಿಸಿ ಇತರರು ಭಗವಾನ್ ರಾಮ ಅಥವಾ ಹನುಮಂತನ ಭಕ್ತರಾಗಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯನ್ನು ಬಿಜೆಪಿ ಹೊಂದಿರಬಾರದು ಎಂದು ಬಿಜೆಪಿ ನಾಯಕಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಹೇಳಿದ್ದಾರೆ. ದೇವತೆಗಳು ಯಾವುದೇ ಜಾತಿ ಅಥವಾ ಧರ್ಮಕ್ಕೆ ಬದ್ಧವಾಗಿಲ್ಲ.ಬಿಜೆಪಿ ; ಜನಸಂಘದ ಅಸ್ತಿತ್ವಕ್ಕೂ ಮುನ್ನ ಅಥವಾ ಮೊಘಲರು ಮತ್ತು ಬ್ರಿಟಿಷರ ಆಳ್ವಿಕೆಗೂ … Continued