ಮಾಜಿ ವೈಜ್ಞಾನಿಕ ಸಲಹೆಗಾರ-ಡಿಆರ್‌ಡಿಒ ಮುಖ್ಯಸ್ಥ ಪದ್ಮವಿಭೂಷಣ ಡಾ.ವಿ.ಎಸ್. ಅರುಣಾಚಲಂ ನಿಧನ ಇನ್ನಿಲ್ಲ

ಬೆಂಗಳೂರು: ಭಾರತೀಯ ವಿಜ್ಞಾನಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮಹಾನಿರ್ದೇಶಕ ಡಾ ವಲ್ಲಂಪಡುಗೈ ಶ್ರೀನಿವಾಸ ರಾಘವನ್ ಅರುಣಾಚಲಂ ಅವರು ಬುಧವಾರ ಕ್ಯಾಲಿಫೋರ್ನಿಯಾದಲ್ಲಿ ನಿಧನರಾದರು. ಮೃತರು ಪತ್ನಿ ಮೀನಾ, ಮಕ್ಕಳಾದ ರಘು, ಮಾಳವಿಕಾ ಮತ್ತು ರಾಮು ಮತ್ತು ಆರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅರುಣಾಚಲಂ ಅವರಿಗೆ 87 ವರ್ಷ ವಯಸ್ಸಾಗಿತ್ತು ಮತ್ತು ಅವರು … Continued

ಸಗಟು ಸಿಮ್ ಕಾರ್ಡ್ ಸಂಪರ್ಕಗಳ ಮೇಲೆ ನಿಷೇಧ: ಸೈಬರ್ ವಂಚನೆ ಪರಿಶೀಲಿಸಲು ಸರ್ಕಾರದ ಕ್ರಮ

ನವದೆಹಲಿ: ಡಿಜಿಟಲ್ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಡೀಲರ್‌ಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ದೊಡ್ಡ ಪ್ರಮಾಣದ ಅಥವಾ ಸಗಟು ಸಂಪರ್ಕಗಳನ್ನು ನೀಡುವುದನ್ನು ನಿಲ್ಲಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ಇದಕ್ಕೂ ಮೊದಲು, ಹೊಸ ಕ್ರಮಗಳನ್ನು ಘೋಷಿಸುವಾಗ, ಸಿಮ್ ಕಾರ್ಡ್ ಡೀಲರ್‌ಗಳ ಪೊಲೀಸ್ ಪರಿಶೀಲನೆಯನ್ನು ಸರ್ಕಾರವು ಕಡ್ಡಾಯಗೊಳಿಸಿದೆ … Continued

ಭಾರತೀಯ ಮುಸ್ಲಿಮರು ಹಿಂದೂಗಳಾಗಿದ್ದರು ; ಮತಾಂತರವಾಗಿ ಮುಸ್ಲಿಮರಾದರು, ಹಿಂದೂ ಧರ್ಮ ಇಸ್ಲಾಂಗಿಂತ ಪುರಾತನವಾದದ್ದು’: ಗುಲಾಂ ನಬಿ ಆಜಾದ್

ಶ್ರೀನಗರ: ಹಿಂದೂ ಧರ್ಮವು ಇಸ್ಲಾಂಗಿಂತ ಪುರಾತನವಾದದ್ದು. ಭಾರತದಲ್ಲಿನ ಎಲ್ಲ ಮುಸ್ಲಿಮರು ಮೂಲತಃ ಹಿಂದೂಗಳಾಗಿದ್ದು ನಂತರ ಇಸ್ಲಾಂಗೆ ಮತಾಂತರಗೊಂಡವರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಆಜಾದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಮರು ಸೇರಿದಂತೆ ದೇಶದ ಎಲ್ಲಾ ಸಮುದಾಯಗಳು ಒಂದೇ ಮಣ್ಣಿನಿಂದ ಬಂದವರು ಮತ್ತು … Continued

ಇಂದು ನಿಮ್ಮ ಫೋನ್‌ನಲ್ಲಿ ತುರ್ತು ಎಚ್ಚರಿಕೆ ಸಂದೇಶ ಬಂದಿದೆಯೇ ? ಈ ಎಚ್ಚರಿಕೆ ಬಂದಿದೆ ಯಾಕೆಂದರೆ….

ನವದೆಹಲಿ: ಭಾರತವು ಇಂದು ತನ್ನ ತುರ್ತು ಎಚ್ಚರಿಕೆ ವ್ಯವಸ್ಥೆ (Emergency alert system)ಯನ್ನು ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ ಪರೀಕ್ಷಾರ್ಥವಾಗಿ ಸ್ಯಾಂಪಲ್‌ ಸಂದೇಶ ಕಳುಹಿಸುವ ಮೂಲಕ ಪರೀಕ್ಷಿಸಿದೆ. ದೇಶಾದ್ಯಂತ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ‘ತುರ್ತು ಎಚ್ಚರಿಕೆ ಸಂದೇಶದ ತೀವ್ರ’ ಫ್ಲ್ಯಾಷ್‌ನೊಂದಿಗೆ ಜೋರಾಗಿ ಬೀಪ್ ಅನ್ನು ಕೇಳಿದ್ದಾರೆ. ಈ ಸಂದೇಶವು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ … Continued

ಚುನಾವಣೆ ಘೋಷಣೆಗೂ ಮೊದಲೇ ಮಧ್ಯಪ್ರದೇಶ, ಛತ್ತೀಸ್‌ಗಢ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ..!

ನವದೆಹಲಿ : ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಗುರುವಾರ (ಆಗಸ್ಟ್‌ 17) ಪ್ರಕಟಿಸಿದೆ. ಭಾರತೀಯ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೊದಲೇ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರುವುದು ಇದೇ ಮೊದಲು. 90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ 21 ಮತ್ತು … Continued

ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಚಂದ್ರಯಾನ-3 : ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ವಿಕ್ರಂ

ನವದೆಹಲಿ: ಭಾರತದ ಚಂದ್ರನ ಅನ್ವೇಷಣೆಯಲ್ಲಿನ ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು, ಗುರುವಾರ ಮಧ್ಯಾಹ್ನ 1 ಗಂಟೆಗೆ ಚಂದ್ರಯಾನ-3 ಮಿಷನ್‌ನ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದೆ. ನೌಕೆಯು ಈಗ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ಒಂದು ಹೆಜ್ಜೆ ಹತ್ತಿರದಲ್ಲಿದೆ. ಲ್ಯಂಡರ್‌ಗೆ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಸಂಸ್ಥಾಪಕ … Continued

2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಸಿಗುವುದೇ ಹ್ಯಾಟ್ರಿಕ್‌ ಗೆಲುವು…? ಟೈಮ್ಸ್ ನೌ -ಇಟಿಜಿ ನಡೆಸಿದ ಸಮೀಕ್ಷೆ ಏನು ಹೇಳುತ್ತದೆ..?

2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ-ಇಟಿಜಿ ಸಮೀಕ್ಷೆ ಭವಿಷ್ಯ ನುಡಿದಿದೆ. ಆ ಮೂಲಕ ಪಂಡಿತ್ ನೆಹರೂ ನಂತರ ಸತತ ಮೂರು ಬಾರಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು … Continued

ಚಂದ್ರಯಾನ-3 ಮಹತ್ವದ ಘಟ್ಟ : ಇಂದು ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಲಿರುವ ವಿಕ್ರಂ ಲ್ಯಾಂಡರ್

ನವದೆಹಲಿ: ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಇಂದು, ಗುರುವಾರ (ಆಗಸ್ಟ್‌ 17) ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಪ್ರತ್ಯೇಕಗೊಳ್ಳಲಿದೆ. ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್, ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಒಮ್ಮೆ ಚಂದ್ರನ ಮೇಲೆ ಇಳಿದ ನಂತರ ವಿಕ್ರಮ್ ಲ್ಯಾಂಡರ್ ಪ್ರಗ್ಯಾನ್ ರೋವರ್ ಅನ್ನು ಛಾಯಾಚಿತ್ರ ಮಾಡುತ್ತದೆ, ಇದು ಚಂದ್ರನ … Continued

ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆ : 10,000 ಹೊಸ ಇ-ಬಸ್‌ಗಳಿಗಾಗಿ 57,613 ಕೋಟಿ ರೂ.ಗಳಿಗೆ ಸಂಪುಟ ಅನುಮೋದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಗೆ ಅನುಮೋದನೆ ನೀಡಿದೆ. ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಗೆ ಒಟ್ಟು 57,613 ಕೋಟಿ ರೂ. ಈ ಹಣಕಾಸು ನಿಬಂಧನೆಯಲ್ಲಿ ಕೇಂದ್ರ ಸರ್ಕಾರವು 20,000 … Continued

ತಿರುಪತಿ ಬೆನ್ನಲ್ಲೇ ಈಗ ಶ್ರೀಶೈಲಂನಲ್ಲೂ ಚಿರತೆ ಭೀತಿ

ಕರ್ನೂಲ್: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಚಿರತೆ ದಾಳಿಗೆ ಬಾಲಕಿ ಬಲಿಯಾದ ಬೆನ್ನಲ್ಲೇ ಈಗ ಆಂಧ್ರ ಪ್ರದೇಶದ ಮತ್ತೊಂದು ಯಾತ್ರಾತಾಣ ಶ್ರೀಶೈಲಂನಲ್ಲೂ ಚಿರತೆಯ ಆತಂಕ ಎದುರಾಗಿದೆ. ಶ್ರೀಶೈಲಂ ಹೊರವರ್ತುಲ ರಸ್ತೆಯ ಬಳಿ ಮಂಗಳವಾರ ಮುಖ್ಯ ದೇವಸ್ಥಾನದ ಸಮೀಪವಿರುವ ಕಾಟೇಜ್‌ಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದ್ದು, ನಗರದಲ್ಲಿ ಭೀತಿ ಆವರಿಸಿದೆ. ಸೋಮವಾರ ರಾತ್ರಿ ಸ್ಫೂರ್ತಿ ಕೇಂದ್ರದ ಸುತ್ತಮುತ್ತಲ … Continued