ಹಿಜಾಬ್ ಪ್ರಕರಣ: ವಿದ್ಯಾರ್ಥಿಗಳು ಮಿನಿ, ಮಿಡಿ ಅಥವಾ ಅವರಿಗೆ ಬೇಕಾದದ್ದು ಧರಿಸಿ ಬರಬಹುದೇ ಎಂದು ಅರ್ಜಿದಾರರಿಗೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ನಿಗದಿತ ಸಮವಸ್ತ್ರ ಇರುವಂತಹ ಸರ್ಕಾರಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಸ್ತ್ರಗಳನ್ನು ಧರಿಸಿ ಬರಬಹುದೇ ಎಂದು ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧಿಸಿದ್ದನ್ನು ಪ್ರಶ್ನಿಸಿದ್ದ ಮೇಲ್ಮನವಿದಾರರನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿತು. ಕಾಲೇಜುಗಳಿಗೆ ಸಮವಸ್ತ್ರವನ್ನು ಸೂಚಿಸುವಂತೆ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಕರ್ನಾಟಕ ಸರ್ಕಾರ ನೀಡಿರುವ ಆದೇಶ ಶಿಕ್ಷಣ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಕೂಡ … Continued

ರಾಜಪಥ, ಸೆಂಟ್ರಲ್ ವಿಸ್ಟಾ ಲಾನ್‌ ಹೆಸರು ಬದಲಾಯಿಸಿದ ಕೇಂದ್ರ : ಕರ್ತವ್ಯ ಪಥ ಎಂದು ಮರುನಾಮಕರಣ

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ, ಕೇಂದ್ರವು ರಾಜಪಥ ಮತ್ತು ಸೆಂಟ್ರಲ್ ವಿಸ್ಟಾ ಹುಲ್ಲುಹಾಸುಗಳನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಪ್ರಕಟಿಸಿದೆ. ಈ ಮಾರ್ಗವು ರೈಸಿನಾ ಹಿಲ್‌ನಲ್ಲಿರುವ ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಮೂಲಕ ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದ ವರೆಗೆ ಸಾಗುತ್ತದೆ. ದೇಶದಲ್ಲಿ ಬ್ರಿಟಿಷ್ ವಸಾಹತುಗಳ ಅವಶೇಷಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ … Continued

ರಾಜಸ್ಥಾನದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಕೃಪಾಲ್ ಸಿಂಗ್ ಜಘಿನಾ ಅವರನ್ನು ಕೆಲವು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಭಾನುವಾರ ತಡರಾತ್ರಿ ಬಿಜೆಪಿ ಮುಖಂಡ ತನ್ನ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ರಾತ್ರಿ 10:45 ರ ಸುಮಾರಿಗೆ ಜಘಿನ ಗೇಟ್ ಬಳಿ ಹತ್ತಕ್ಕೂ ಹೆಚ್ಚು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು … Continued

ಆಗ್ರಾದ ಟೋಲ್ ಗೇಟ್ ಮುರಿದು ಸಾಗಿದ ಮರಳು ಮಾಫಿಯಾದ 13 ಟ್ರ್ಯಾಕ್ಟರ್‌ಗಳು: ಕೋಲುಗಳಿಂದ ತಡೆಯುವ ಸಿಬ್ಬಂದಿ ಪ್ರಯತ್ನ ವಿಫಲ | ವೀಕ್ಷಿಸಿ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ಅಕ್ರಮವಾಗಿ ಮರಳು ಸಾಗಾಣೆ ನಡೆಸುತ್ತಿದ್ದ 13 ಟ್ರ್ಯಾಕ್ಟರ್‌ಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಿಸದೇ ಬ್ಯಾರಿಕೇಡ್‌ ಮುರಿದು ಮುಂದೆ ಸಾಗಿರುವ ಘಟನೆ ನಡೆದಿದೆ. ಟೋಲ್‌ ಸಿಬ್ಬಂದಿ ಕೋಲುಗಳನ್ನು ಬಳಸಿ ತಡೆಯಲು ಪ್ರಯತ್ನಿಸಿದರೂ ಅವರು ಟೋಲ್‌ ಗೇಟುಗಳನ್ನು ಮುರಿದುಕೊಂಡು ಮುಂದೆ ಸಾಗಿದ್ದಾರೆ. ಈ ಟ್ರ್ಯಾಕ್ಟರ್‌ಗಳು ಸ್ಥಳೀಯ ಮರಳು ಮಾಫಿಯಾಕ್ಕೆ ಸೇರಿದವು ಎಂದು ಹೇಳಲಾಗಿದೆ. ಈ … Continued

ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಮೌಲಾನಾಗಳಿಂದ ನನಗೆ ಜೀವ ಬೆದರಿಕೆ ಬಂದಿದೆ: ಬಿಜೆಪಿ ನಾಯಕಿ ರೂಬಿ ಖಾನ್‌

ಲಕ್ನೋ: ಉತ್ತರ ಪ್ರದೇಶದ ಮೀರತ್‌ನಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ತನಗೆ ಮುಸ್ಲಿಂ ಧರ್ಮಗುರುಗಳಿಂದ  ಜೀವ  ಬೆದರಿಕೆ ಬಂದಿದೆ ಎಂದು ಬಿಜೆಪಿ ನಾಯಕಿ ರೂಬಿ ಖಾನ್ ಹೇಳಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮನೆಯಲ್ಲಿ ಪೂಜೆ ಸಲ್ಲಿಸಿದಾಗ ತನ್ನ ವಿರುದ್ಧ ಫತ್ವಾ ಹೊರಡಿಸಲಾಗಿತ್ತು ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ. ನಾನು 7 ದಿನಗಳ ಕಾಲ … Continued

ಕಾರಿನ ಹಿಂದಿನ ಸೀಟಿನಲ್ಲಿದ್ದ ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಧರಿಸಿರಲಿಲ್ಲ: ಪೊಲೀಸ್‌ ಮೂಲಗಳು

ಮುಂಬೈ: ಭಾನುವಾರ ಕಾರು ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಗಿತ್ತು. ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಸೈರಸ್ ಮಿಸ್ತ್ರಿ ಅವರು … Continued

2021ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ 1.55 ಲಕ್ಷ ಮಂದಿ ಸಾವು, ಇದು ಇದುವರೆಗಿನ ಅತಿ ಹೆಚ್ಚು: ವರದಿ

ನವದೆಹಲಿ: 2021ರಲ್ಲಿ ದೇಶಾದ್ಯಂತ ರಸ್ತೆ ಸಂಭವಿಸಿದ ಅಪಘಾತಗಳಲ್ಲಿ 1.55 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದ್ದಾರೆ. ಸರಾಸರಿ 426 ದೈನಂದಿನ ಅಥವಾ ಪ್ರತಿ ಗಂಟೆಗೆ 18. – ಅಧಿಕೃತ ಮಾಹಿತಿಯ ಪ್ರಕಾರ ಇದು ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ಇದುವರೆಗೆ ದಾಖಲಾದ ಅತಿ ಹೆಚ್ಚು ಸಾವಿನ ಅಂಕಿಅಂಶವಾಗಿದೆ. ಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು – 2021 ದಾಖಲೆಗಳ … Continued

ಅಂಕೋಲಾ: ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ ನಿಧನ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾಸಗೋಡ ಸೂರ್ವೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವೆಂಕಣ್ಣ ಹಮ್ಮಣ್ಣ ನಾಯಕ (102) ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ ಅವರ ನಿಧನದಿಂದ ಅಂಕೋಲಾ ತಾಲೂಕಿನ ಸ್ವಾತಂತ್ರ್ಯ ಹೋರಾಟದ ಕೊನೆಯ ಕೊಂಡಿ ಕಳಚಿದಂತಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿ ಜೈಲುವಾಸ ಅನುಭವಿಸಿರುವ ಅವರನ್ನು … Continued

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಉರುಳಿದ ನಂತರ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ | ವೀಕ್ಷಿಸಿ

ಮಹಿಳೆಯೊಬ್ಬರು ವಾಹನಕ್ಕೆ ಸಿಲುಕಿ ಸ್ವಲ್ಪದರಲ್ಲೇ ಪಾರಾಗುತ್ತಿರುವ ದೃಶ್ಯದ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಕ್ಲಿಪ್ ಅನ್ನು ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಅಧಿಕಾರಿ ವಿ.ಸಿ. ಸಜ್ಜನರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, ಐಪಿಎಸ್ ಅಧಿಕಾರಿ, ರಸ್ತೆ ಸುರಕ್ಷತೆಯನ್ನು ಎಲ್ಲಿಯವರೆಗೆ ಲಘುವಾಗಿ ತೆಗೆದುಕೊಳ್ಳುತ್ತಾರೆ ..? ಮತ್ತು ಜನರು ತಮ್ಮ ಅದೃಷ್ಟದ ಮೇಲೆ ಅವಲಂಬಿತರಾಗಬೇಕೇ ಎಂಬ ಎಂಬ ಪ್ರಶ್ನೆ ಕೇಳಿದ್ದಾರೆ. … Continued