ವೀಡಿಯೊ..| ಹೃದಯ ವಿದ್ರಾವಕ ; ಆಸ್ಪತ್ರೆಗೆ ಹೋಗಲು ನಾಲೆಯ ಮೇಲೆ ಉಕ್ಕಿ ಹರಿದ ಹೊಳೆಯಲ್ಲೇ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ…!

ಹೈದರಾಬಾದ್: ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ವ್ಯಕ್ತಿಯೊಬ್ಬ ತನ್ನ ಭುಜದ ಮೇಲೆ ಹೊತ್ತುಕೊಂಡು ತುಂಬಿ ಹರಿಯುತ್ತಿರುವ ಅಣೆಕಟ್ಟಿನ ಮೇಲೆ ರಭಸವಾಗಿ ಹರಿಯುವ ಹೊಳೆ ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ಜನವಸತಿ ಪ್ರದೇಶದ ಪಿಂಜರಿಕೊಂಡ ಎಂಬ ಪುಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. … Continued

ಮುಂಬೈ ಮೂಲದ ಮಾಡೆಲ್-ನಟಿಯ ಅಕ್ರಮ ಬಂಧನ ; ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು

ಅಮರಾವತಿ : ಮುಂಬೈ ಮೂಲದ ಮಾಡೆಲ್ ಹಾಗೂ ನಟಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಅಮಾನತುಗೊಂಡ ಆಂಧ್ರಪ್ರದೇಶದ ಮೂವರು ಐಪಿಎಸ್ ಅಧಿಕಾರಿಗಳಲ್ಲಿ ಡೈರೆಕ್ಟರ್ ಜನರಲ್ ಶ್ರೇಣಿಯ ಒಬ್ಬರು, ಇನ್ಸ್ ಪೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಶ್ರೇಣಿಯ ಒಬ್ಬರು ಮತ್ತು … Continued

ಫಾರ್ಮಾ ಕಂಪನಿ ಘಟಕದಲ್ಲಿ ರಿಯಾಕ್ಟರ್ ಸ್ಫೋಟ; 15 ಮಂದಿ ಸಾವು, ಹಲವರಿಗೆ ಗಾಯ

ಬುಧವಾರ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಔಷಧ ತಯಾರಿಕಾ ಘಟಕದಲ್ಲಿ ರಿಯಾಕ್ಟರ್ ಸ್ಫೋಟಗೊಂಡ ನಂತರ ಕನಿಷ್ಠ ಹದಿನೈದು ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 41 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ ಎಸ್ಸೆಂಟಿಯಾ ಕಂಪನಿಯ ಘಟಕದಲ್ಲಿ ಈ ಘಟನೆ ನಡೆದಿದೆ. ಫಾರ್ಮಾ ಸಂಸ್ಥೆಯ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟವು ಗಮನಾರ್ಹ ಹಾನಿಯನ್ನುಂಟುಮಾಡಿತು ಮತ್ತು ಅನೇಕರು … Continued

ಭರತನಾಟ್ಯ-ಕೂಚಿಪುಡಿಯ ಅಭಿಜಾತ ನೃತ್ಯಪಟು, ಪದ್ಮವಿಭೂಷಣ ಯಾಮಿನಿ ಕೃಷ್ಣಮೂರ್ತಿ ನಿಧನ

ನವದೆಹಲಿ: ಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗಾರ್ತಿ ಯಾಮಿನಿ ಕೃಷ್ಣಮೂರ್ತಿ (84) ಅವರು ಶನಿವಾರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಅವರು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು ಮತ್ತು ಕಳೆದ ಏಳು ತಿಂಗಳಿಂದ ಐಸಿಯುನಲ್ಲಿದ್ದರು ಎಂದು ಯಾಮಿನಿ ಕೃಷ್ಣಮೂರ್ತಿ ಅವರ ಮ್ಯಾನೇಜರ್ ಮತ್ತು ಕಾರ್ಯದರ್ಶಿ ಗಣೇಶ ತಿಳಿಸಿದ್ದಾರೆ. ಅಂತಿಮ ಶ್ರದ್ಧಾಂಜಲಿಗಾಗಿ ಕೃಷ್ಣಮೂರ್ತಿ ಅವರ ಪಾರ್ಥಿವ … Continued

ಆಂಧ್ರದ ಆರ್ಥಿಕ ಸ್ಥಿತಿ ಸರಿ ಇಲ್ಲವೆಂದು ಸಂಬಳ, ಭತ್ಯೆ ಪಡೆಯುವುದಿಲ್ಲ ಎಂದ ಪವನ ಕಲ್ಯಾಣ

ಗೊಲ್ಲಪ್ರೋಲು : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ತಮ್ಮ ಸಂಬಳ ಮತ್ತು ಕಚೇರಿಗೆ ನೀಡುವ ಹೊಸ ಪೀಠೋಪಕರಣಗಳು ಸೇರಿದಂತೆ ಯಾವುದೇ ವಿಶೇಷ ಭತ್ಯೆಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಅಧಿಕಾರಿಗಳು ತಮ್ಮ ಕಚೇರಿ ನವೀಕರಣ ಕುರಿತು ಪವನ ಕಲ್ಯಾಣ ಅವರೊಂದಿಗೆ ಚರ್ಚಿಸಿದಾಗ ಅವರು ವಿಶೇಷ ಸೌಲಭ್ಯಗಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ, … Continued

ವೀಡಿಯೊ..| ಅಂದು ಕಣ್ಣೀರಿಟ್ಟು ಸಿಎಂ ಆಗಿಯೇ ವಿಧಾನಸಭೆಗೆ ಬರುವೆ ಎಂದು ಶಪಥ ಮಾಡಿ ಹೊರನಡೆದಿದ್ದ ಚಂದ್ರಬಾಬು ನಾಯ್ಡು 31 ತಿಂಗಳ ನಂತರ ಸಿಎಂ ಆಗಿಯೇ ಕಾಲಿಟ್ಟರು..

ಅಮರಾವತಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ‘ತನ್ನ ಕುಟುಂಬಕ್ಕೆ ಅವಮಾನ ಮಾಡಲಾಗಿದೆ’ ಎಂದು ಕಣ್ಣೀರು ಸುರಿಸಿ ವಿಧಾನಸಭೆಯಿಂದ ಹೊರಬಂದ 31 ತಿಂಗಳ ನಂತರ ಇಂದು, ಶುಕ್ರವಾರ (ಜೂನ್‌ 21) ಆಂಧ್ರಪ್ರದೇಶ ವಿಧಾನಸಭೆಗೆ ಮರಳಿದ್ದಾರೆ. ಚಂದ್ರಬಾಬು ನಾಯ್ಡು ನವೆಂಬರ್ 2021 ರಲ್ಲಿ ತಾನು ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಹಿಂತಿರುಗುವುದಾಗಿ ಪ್ರತಿಜ್ಞೆ ಮಾಡಿ ವಿಧಾಸಭೆಯಿಂದ … Continued

ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಇಂದು ಪ್ರಮಾಣ ; ಪವನ ಕಲ್ಯಾಣ ಡಿಸಿಎಂ

ವಿಜಯವಾಡ: ಆಂಧ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ 25 ಸದಸ್ಯರ ಸಚಿವ ಸಂಪುಟ ಇಂದು ಬುಧವಾರ (ಜೂನ್‌ 12) ಪ್ರಮಾಣ ವಚನ ಸ್ವೀಕರಿಸಲಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನೇತೃತ್ವದ ಸರ್ಕಾರದಲ್ಲಿ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಏಕೈಕ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಬುಧವಾರ ಮುಂಜಾನೆ ಬಿಡುಗಡೆಯಾದ 24 ಸಚಿವರ ಪಟ್ಟಿಯಲ್ಲಿ ಜನಸೇನಾ ಪಕ್ಷದ ಮೂವರು … Continued

ವೀಡಿಯೊ..| ಲೋಕಸಭಾ ಚುನಾವಣೆ : ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿಸಿದ ಶಾಸಕ ; ತಿರುಗಿ ಬಾರಿಸಿದ ಮತದಾರ…ಮುಂದಾಗಿದ್ದೇನೆಂದರೆ….

ಹೈದರಾಬಾದ್: ವಿಐಪಿ ಸಂಸ್ಕೃತಿಯ ಅಣಕು  ಪ್ರದರ್ಶನದಲ್ಲಿ ಇಂದು, ಸೋಮವಾರ ಬೆಳಗ್ಗೆ ಗುಂಟೂರು ಜಿಲ್ಲೆಯ ಮತಗಟ್ಟೆಯಲ್ಲಿ ಶಾಸಕರು ಸರತಿ ಸಾಲಿನಲ್ಲಿ ನಿಲ್ಲದೆ ಅದನ್ನು ಬ್ರೇಕ್‌ ಮಾಡಿ ಮುಂದೆ ಹೋಗಿದ್ದನ್ನು ಪ್ರಶ್ನಿಸಿದ ಮತದಾರರೊಬ್ಬರಿಗೆ ಆಂಧ್ರಪ್ರದೇಶದ ಶಾಸಕರೊಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತೆನಾಲಿಯ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಎ. ಶಿವಕುಮಾರ ಅವರು … Continued

ರಸ್ತೆ ಅಪಘಾತದಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪವಿತ್ರ ಜಯರಾಂ ಸಾವು

ಬೆಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪವಿತ್ರಾ ಜಯರಾಂ (Pavithra Jayaram)ಆಂಧ್ರಪ್ರದೇಶದ ಕರ್ನೂಲು ಸಮೀಪ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪವಿತ್ರಾ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್ ನಡುವೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ನಟಿ ಪವಿತ್ರಾ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು, ಭಾನುವಾರ ಬೆಳಿಗ್ಗೆ ಆಂಧ್ರ ಪ್ರದೇಶದ … Continued

ಅದೃಷ್ಟ ಅಂದ್ರೆ ಇದೇ ಅಲ್ವಾ | ಕೇವಲ 2 ಮೀನುಗಳ ಮಾರಾಟದಿಂದ ಲಕ್ಷಾಧಿಪತಿಯಾದ ಮೀನುಗಾರ..! ಮೀನಿನ ಬೆಲೆ ಕೇಳಿದ್ರೆ ಹೌಹಾರಬೇಕು…!!

ಕೆಲವೊಮ್ಮೆ ಮೀನುಗಾರರು ಬಲೆ ಬೀಸಿದಾಗ ಅಪರೂಪದ ಮೀನುಗಳು ಸಿಗುತ್ತವೆ. ದೊಡ್ಡ ಮೀನುಗಳ ಜೊತೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಮೀನುಗಳು ಸಹ ಬಲೆಗೆ ಬೀಳುತ್ತವೆ. ಕೆಲವು ಅಪರೂಪದ ಜಾತಿಯ ಮೀನುಗಳು ಮೀನುಗಳು ಬಲೆಗೆ ಬಿದ್ದರೆ ಮೀನುಗಾರರ ಸುಗ್ಗಿಯೋ ಸುಗ್ಗಿ. ಯಾಕೆಂದರೆ ಅವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಇಂಥಹದ್ದೇ ಒಂದು ನಿದರ್ಶನದಲ್ಲಿ ಇತ್ತೀಚೆಗೆ ಕೃಷ್ಣಾ ಜಿಲ್ಲೆಯ ಅಂತರವೇದಿಯಲ್ಲಿ ಮೀನುಗಾರರೊಬ್ಬರು ಅಪರೂಪದ … Continued