ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನ ಕಾರ್ಯಕ್ರಮ ಆಯೋಜನೆಗೆ ದೇಣಿಗೆ ಸ್ವೀಕರಿಸುತ್ತಿದ್ದ ವ್ಯಕ್ತಿಯ ಕೊಲೆ

ಉನ್ನಾವೊ (ಉತ್ತರ ಪ್ರದೇಶ) : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ದಿನವಾದ ಜನವರಿ 22 ರಂದು ಕಾರ್ಯಕ್ರಮವನ್ನು ಆಯೋಜಿಸಲು ಸ್ಥಳೀಯ ದೇವಸ್ಥಾನಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾಗ 35 ವರ್ಷದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ದಾಳಿಕೋರರು ಬೇರೆ ಸಮುದಾಯದವರಾದ್ದರಿಂದ ಇದೊಂದು ಕೋಮು ಘಟನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ, ಆದರೆ ಪೊಲೀಸರು ವಿವಾದ … Continued

ಮೈಸೂರಿನ ಅರುಣ ಯೋಗಿರಾಜ ಕೆತ್ತಿದ ರಾಮಲಲ್ಲಾ ಮೂರ್ತಿಯೇ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆ

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ನೂತನವಾಗಿ ಪ್ರತಿಷ್ಠಾಪನೆ ಮಾಡಲು ಮೈಸೂರು ಮೂಲದ ಅರುಣ ಯೋಗಿರಾಜ ಅವರು ಕೆತ್ತಿರುವ ರಾಮಲಲ್ಲಾನ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೋಮವಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ಪೂಜಿಸಲ್ಪಡುತ್ತಿರುವ ರಾಮಲಲ್ಲಾನ ಪ್ರಸ್ತುತ ವಿಗ್ರಹವನ್ನು ಸಹ ಹೊಸ ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗುವುದು. … Continued

ಮಂದಿರ ನಿರ್ಮಾಣಕ್ಕೆ 20 ರೂ. ದೇಣಿಗೆ ನೀಡಿದ್ದ ಕಸ ಸಂಗ್ರಹಿಸುವ ವೃದ್ಧೆಗೆ ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ…

ಅಯೋಧ್ಯೆ : ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಹಲವಾರು ಭಕ್ತರು ತಮ್ಮ ಕೈಲಾದಷ್ಟು ಹಾಗೂ ತಮ್ಮ ಶಕ್ತಿಗೂ ಮೀರಿ ದೇಣಿಗೆಯನ್ನು ನೀಡಿದ್ದಾರೆ. ಇದೇ ರೀತಿ ಛತ್ತೀಸ್‌ಗಢದ ಪ್ರಯಾಗರಾಜ ಎಂದೂ ಕರೆಯಲ್ಪಡುವ ರಾಜೀಂ ಎಂಬಲ್ಲಿ ಕಸ ಸಂಗ್ರಹಿಸುವ ಬಿಹುಲಾ ಬಾಯಿ ಕೂಡ 20 ರೂ. ದೇಣಿಗೆ ನೀಡಿದ್ದಾರೆ. ಇದಕ್ಕಾಗಿ ಅಯೋಧ್ಯೆಯ ರಾಮಮಂದಿರದಲ್ಲಿನ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಅವರನ್ನು … Continued

ಅಯೋಧ್ಯಾ ರಾಮ ಮಂದಿರ ಉದ್ಘಾಟನೆ: 55 ದೇಶಗಳಿಂದ 100ಕ್ಕೂ ಹೆಚ್ಚು ಗಣ್ಯರ ಆಗಮನ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ 55 ದೇಶಗಳಿಂದ 100ಕ್ಕೂ ಹೆಚ್ಚು ಗಣ್ಯರು ಆಗಮಿಸಲಿದ್ದಾರೆ ಎಂದು ವಿಶ್ವ ಹಿಂದೂ ಫೌಂಡೇಶನ್‌ ಸಂಸ್ಥಾಪಕ ಮತ್ತು ಮುಖ್ಯಸ್ಥ ಸ್ವಾಮಿ ವಿಜ್ಞಾನಂದ ಹೇಳಿದ್ದಾರೆ. 55 ದೇಶಗಳಿಂದ ರಾಯಭಾರಿಗಳು, ಸಚಿವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದ್ದಾರೆ. ಪ್ರಭು ಶ್ರೀ ರಾಮನ … Continued

‘ನಾನು ಕೇವಲ ಸಾರಥಿಯಾಗಿದ್ದೆ…ದೈವಿಕ ಕನಸು ಈಡೇರಿದೆ’ : ರಾಮ ಮಂದಿರ ಉದ್ಘಾಟನೆ ಬಗ್ಗೆ ಎಲ್‌.ಕೆ.ಅಡ್ವಾಣಿ

ನವದೆಹಲಿ: ಅಯೋಧ್ಯೆ ರಾಮಮಂದಿರ ‘ಪ್ರಾಣ ಪ್ರತಿಷ್ಠೆ ‘ ಕುರಿತು ಮಾತನಾಡಿದ ಮಾಜಿ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ, ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯು “ದೈವಿಕ ಕನಸನ್ನು ನನಸಾಗಿಸಿದೆ” ಎಂದು ಹೇಳಿದರು. ಈ ಹೇಳಿಕೆಯು ಎಲ್‌.ಕೆ. ಅಡ್ವಾಣಿಯವರ ರಾಮ ಮಂದಿರಕ್ಕೆ ಮೀಸಲಾದ ಲೇಖನದ ಭಾಗವಾಗಿದೆ, ಇದನ್ನು ಹಿಂದಿ ಸಾಹಿತ್ಯ ಪತ್ರಿಕೆಯಾದ ರಾಷ್ಟ್ರಧರ್ಮದಲ್ಲಿ ಪ್ರಕಟಿಸಲಾಗುತ್ತದೆ. … Continued

ನಾವೂ ಶ್ರೀರಾಮನ ಭಕ್ತರೆ, ಅಯೋಧ್ಯೆಗೆ ನಾನೂ ಹೋಗಿ ಬರ್ತೇನೆ…ಆದರೆ ಜನವರಿ 22ರ ನಂತರ : ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ : ಜನವರಿ 22ರ ನಂತರ ನಾವು ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶುಕ್ರವಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ. ದೇವರನ್ನು ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಬಳಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀರಾಮಚಂದ್ರನನ್ನು ವಿರೋಧಿಸುವುದಿಲ್ಲ. … Continued

ಅಯೋಧ್ಯೆಯಲ್ಲಿ ಭಗವಾನ್‌ ರಾಮನ ಪ್ರಾಣ ಪ್ರತಿಷ್ಠಾಪನೆ : 11 ದಿನಗಳ ವ್ರತ ಆರಂಭಿಸಿದ ಪ್ರಧಾನಿ ಮೋದಿ

ನವದೆಹಲಿ : ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಇಂದಿನಿಂದ (ಜನವರಿ 12) 11 ದಿನಗಳ ವ್ರತ ಕೈಗೊಳ್ಳುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ಪ್ರಕಟಿಸಿದ ಆಡಿಯೋ ಸಂದೇಶದಲ್ಲಿ ಮೋದಿ, ಅವರು ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಉಪಸ್ಥಿತರಿರುವ ಸೌಭಾಗ್ಯ ನನಗೆ ಸಿಕ್ಕಿದೆ. ಇದರಿಂದ ನಾನು … Continued

ವಿಮಾನದಲ್ಲಿ ರಾಮ ನಾಮ ಬರೆದ ಕೆ.ಎಚ್‌. ಮುನಿಯಪ್ಪ : 20 ವರ್ಷಗಳಿಂದ ರಾಮ ಕೋಟಿ ಬರೆಯುತ್ತಿದ್ದೇನೆ ಎಂದ ಸಚಿವರು

ನವದೆಹಲಿ: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹೋಗದಿರಲು ನಿರ್ಧರಿಸಿರುವ ವಿಚಾರ ಬೆನ್ನಲ್ಲೇ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ವಾಗ್ವಾದ ಜೋರಾಗಿದೆ. ಇದೇ ವೇಳೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಮನಾಮ ಜಪ ಬರೆಯುತ್ತಿದ್ದ ವೀಡಿಯೊ ಕೂಡ ವೈರಲ್ ಆಗಿದೆ. ಕೆ.ಎಚ್.‌ ಮುನಿಯಪ್ಪ ಅವರು ಎಐಸಿಸಿ ಸಭೆ ನಿಮಿತ್ತ ನವದೆಹಲಿಗೆ ಪ್ರಯಾಣ … Continued

ಅಯೋಧ್ಯೆ ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌ : ತನ್ನ ಪಕ್ಷವನ್ನು ಟೀಕಿಸಿದ ಕಾಂಗ್ರೆಸ್ ನಾಯಕ

ನವದೆಹಲಿ : ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್‌ನ ನಿರ್ಧಾರವನ್ನು ಗುಜರಾತ್‌ ಕಾಂಗ್ರೆಸ್‌ ಹಿರಿಯ ನಾಯಕ ಅರ್ಜುನ್ ಮೊದ್ವಾಡಿಯಾ ಅವರು ಬುಧವಾರ ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಅರ್ಜುನ್ ಮೊದ್ವಾಡಿಯಾ ಅವರು ಹಿರಿಯ ನಾಯಕ ಜೈರಾಮ ರಮೇಶ ಅವರ ಹೇಳಿಕೆಯ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಯಲ್ಲಿ ರಾಮ ಮಂದಿರದ … Continued

‘ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕ್ರಮ….’ : ‘ಗೌರವಪೂರ್ವಕʼವಾಗಿ ರಾಮಮಂದಿರ ಆಹ್ವಾನ ನಿರಾಕರಿಸಿದ ಕಾಂಗ್ರೆಸ್ ನಾಯಕತ್ವ

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸುವುದಿಲ್ಲ ಎಂದು ಪಕ್ಷದ ಪ್ರಕಟಣೆ ಬುಧವಾರ ತಿಳಿಸಿದೆ. ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ … Continued