ದೇಶಾದ್ಯಂತ 1,100ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆ : ಮೈಸೂರಿನಲ್ಲಿ ಆರೋಪಿಯ ಬಂಧನ

ನವದೆಹಲಿ: ದೇಶಾದ್ಯಂತ ಶಾಲೆಗಳು, ಆಸ್ಪತ್ರೆಗಳು, ಹೈಕೋರ್ಟ್‌ಗಳು ಮತ್ತು ಸರ್ಕಾರಿ ಕಚೇರಿಗಳಿಗೆ 1,100 ಕ್ಕೂ ಹೆಚ್ಚು ನಕಲಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಕರ್ನಾಟಕದ ಮೈಸೂರಿನಲ್ಲಿ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಶ್ರೀನಿವಾಸ ಲೂಯಿಸ್ (47) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಶ್ರೀನಿವಾಸ … Continued

‘ಎಐ ಸಮಿಟ್’ ಪ್ರತಿಭಟನೆ | ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ನಂತ್ರ ಹೈಡ್ರಾಮಾ ; ಪೊಲೀಸ್‌ vs ಪೊಲೀಸ್‌

ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ನಡೆದ ‘ಎಐ ಸಮಿಟ್’ (AI Summit) ವೇಳೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ವಿಚಾರವಾಗಿ, ಶಿಮ್ಲಾದಲ್ಲಿ ಬುಧವಾರ ತಡರಾತ್ರಿ ದೆಹಲಿ ಮತ್ತು ಹಿಮಾಚಲ ಪ್ರದೇಶ ಪೊಲೀಸರ ನಡುವೆ ಅಸಾಧಾರಣ ಜಟಾಪಟಿ ನಡೆದಿದೆ. ಅಂತರರಾಜ್ಯ ಪೊಲೀಸ್ ಕಾರ್ಯಾಚರಣೆಯಾಗಿ ಆರಂಭವಾದ ಈ ಘಟನೆ, ವಾಹನಗಳ ತಡೆ, ವಾಗ್ವಾದ … Continued

ಭಾರತದಲ್ಲಿ ಭೀಕರ ದಾಳಿಗೆ ಸಂಚು ; ಪಾಕ್‌ ಐಎಸ್‌ಐ, ಬಾಂಗ್ಲಾದೇಶ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟಿದ್ದ 8 ಜನರ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ (ISI) ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳ ಬೆಂಬಲದೊಂದಿಗೆ ಭಾರತದಲ್ಲಿ ಭೀಕರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಟು ಮಂದಿ ಶಂಕಿತರನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ದೆಹಲಿಯ ಕೆಂಪು ಕೋಟೆ ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲು ಇವರು ಯೋಜಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ … Continued

ರೀಲ್ಸ್ ಹುಚ್ಚು | ಚಲಿಸುವಾಗಲೇ ಬಸ್, ರಿಕ್ಷಾ ಬಾಗಿಲು ತೆರೆದು ಪುಂಡಾಟಿಕೆ : ವೀಡಿಯೊ ವೈರಲ್‌ ; ಯುವಕನ ಬಂಧನ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ‘ಲೈಕ್ಸ್’ ಮತ್ತು ‘ಶೇರ್’ಗಳಿಗಾಗಿ ಪ್ರಾಣದ ಹಂಗು ತೊರೆದು ಸ್ಟಂಟ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹದ್ದೇ ಒಂದು ಅಪಾಯಕಾರಿ ಸಾಹಸಕ್ಕೆ ಕೈಹಾಕಿ, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ 22 ವರ್ಷದ ಯುವಕನನ್ನು ಈಶಾನ್ಯ ದೆಹಲಿಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಖಜೂರಿ ಖಾಸ್ ನಿವಾಸಿಯಾದ ತುಷಾರ್ ಪುನಿಯಾ ಬಂಧಿತ ಆರೋಪಿ. ಫೆಬ್ರವರಿ 16 ರಂದು … Continued

ನ್ಯಾಶನಲ್‌ ಹೆರಾಲ್ಡ್ ಪ್ರಕರಣ : ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್ ಐಆರ್

ನವದೆಹಲಿ: ನವದೆಹಲಿ: ನ್ಯಾಶನಲ್‌ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು (Economic Offences Wing) ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಆರು ಜನರ ವಿರುದ್ಧ ದಾಖಲಿಸಿದ ಹೊಸ … Continued

ದೆಹಲಿಯಲ್ಲಿ ಎನ್‌ಕೌಂಟರ್ : ‘ಸಿಗ್ಮಾ ಗ್ಯಾಂಗ್’ ನ ನಾಲ್ವರು ʼಮೋಸ್ಟ್ ವಾಂಟೆಡ್ʼ ಗ್ಯಾಂಗ್‌ಸ್ಟರ್‌ ಗಳು ಹತ

ನವದೆಹಲಿ: ದೆಹಲಿಯಲ್ಲಿ ಬಿಹಾರ ಪೊಲೀಸರ ಸಹಯೋಗದೊಂದಿಗೆ ನಡೆದ ಪ್ರಮುಖ ಎನ್‌ಕೌಂಟರ್‌ನಲ್ಲಿ ನಾಲ್ವರು ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ಗಳು ಹತರಾಗಿದ್ದಾರೆ. ಈ ಘಟನೆ ಗುರುವಾರ ಮುಂಜಾನೆ ದೆಹಲಿಯ ರೋಹಿಣಿಯಲ್ಲಿ ನಡೆದಿದೆ. ದೆಹಲಿ ಪೊಲೀಸರ ಪ್ರಕಾರ, ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಹದ್ದೂರ್ ಶಾ ರಸ್ತೆಯಲ್ಲಿ ಗುಂಡಿನ ಚಕಮಕಿ ಆರಂಭವಾಯಿತು. ಹತರಾದವರನ್ನು ರಂಜನ್ ಪಾಠಕ್ (25), ಬಿಮಲೇಶ್ … Continued

ತನ್ನದೇ ಮದುವೆ ಕಾರ್ಡ್‌ ಕೊಡಲು ಹೋಗುವಾಗ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಮದುಮಗ…!

ನವದೆಹಲಿ: ದುರಂತದ ಘಟನೆಯೊಂದರಲ್ಲಿ, ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ನೀಡಲು ಹೋಗಿದ್ದ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಕಾರಿಗೆ ಬೆಂಕಿ ಹೊತ್ತುಕೊಂಡು ಹಚ್ಚಿ ಸುಟ್ಟು ಕರಕಲಾದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಜಿಪುರದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮದುಮಗ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ. ನಾವಡ ನಿವಾಸಿಯಾಗಿರುವ ಅನಿಲ ಎಂಬವರ … Continued

ಅಧ್ಯಾತ್ಮ ಪ್ರವಾಸಕ್ಕೆಂದು ಭಾರತಕ್ಕೆ ಬರುವ ಅಮೆರಿಕದ ಮಾಡೆಲ್ ಎಂದು ಪೋಸ್ ನೀಡಿ ಡೇಟಿಂಗ್ ಆ್ಯಪ್ ಮೂಲಕ 700 ಮಹಿಳೆಯರಿಗೆ ವಂಚಿಸಿದ ದೆಹಲಿ ವ್ಯಕ್ತಿ..!

ನವದೆಹಲಿ: ಹಗಲಿನಲ್ಲಿ ಈತ ಉತ್ತರ ಪ್ರದೇಶದ ನೋಯ್ಡಾದ ಖಾಸಗಿ ಕಂಪನಿಯಲ್ಲಿ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ, ಆದರೆ ರಾತ್ರಿಯಲ್ಲಿ ಆತ್ಮ-ಶೋಧನೆಯ ಪ್ರವಾಸಕ್ಕೆಂದು ಭಾರತಕ್ಕೆ ಬರುವ ಅಮೆರಿಕ ಮೂಲದ ಮಾಡೆಲ್ ಆಗಿ ಬದಲಾಗುತ್ತಿದ್ದ. ಆತನ ಹಗಲಿನ ಕೆಲಸವು ಆತನಿಗೆ ಜೀವನ ಭದ್ರತೆ ನೀಡಿದರೆ ರಾತ್ರಿಯ ಚಟುವಟಿಕೆಗಳು ಬ್ಲ್ಯಾಕ್‌ಮೇಲ್ ಮೂಲಕ ಹಣ ಮಾಡುವ ದಂಧೆಯಾಯಿತು. ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡೆಲ್ … Continued

ಸುಳ್ಳು ಭರವಸೆ, ವಂಚನೆ ಮಾಡುವ ಚೀನಾ ಕಾಲ್‌ ಸೆಂಟರ್‌ಗಳ ಕೆಲಸಕ್ಕೆ ಬಲವಂತವಾಗಿ ದೂಡುತ್ತಿದ್ದ ವಂಚಕನನ್ನು 2500 ಕಿಮೀ ಬೆನ್ನಟ್ಟಿ ಹಿಡಿದ ಪೊಲೀಸರು…!

ನವದೆಹಲಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಕಲಿ ಕಾಲ್‌ ಸೆಂಟರ್‌ಗಳ ಮೂಲಕ ಸೈಬರ್‌ ಅಪರಾಧ ಎಸಗಲು ಭಾರತದ ಯುವಕರನ್ನು ಬಲವಂತಪಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶನಿವಾರ ಹೈದರಾಬಾದ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಇದಕ್ಕಾಗಿ 2,500 ಕಿ.ಮೀ. ದೂರದ ವರೆಗೆ ಆತನನ್ನು ಬೆನ್ನು ಹಿಡಿದುಬಂದು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಬಂಧಿತ ಕಮ್ರಾನ್ ಹೈದರ್ ಅಲಿಯಾಸ್ … Continued

ಹಣ ಸುಲಿಗೆ ಪ್ರಕರಣ ; ದೆಹಲಿ ಎಎಪಿ ಶಾಸಕ ನರೇಶ ಬಲ್ಯಾನ್ ಬಂಧನ

ನವದೆಹಲಿ : ಕಳೆದ ವರ್ಷ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ನರೇಶ ಬಲ್ಯಾನ್ ಅವರನ್ನು ಶನಿವಾರ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಉತ್ತಮ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ನರೇಶ ಬಲ್ಯಾನ್ ಅವರನ್ನು ವಿಚಾರಣೆಗಾಗಿ ಆರ್ ಕೆ ಪುರಂನಲ್ಲಿರುವ ದೆಹಲಿ ಪೊಲೀಸರ ಅಪರಾಧ ವಿಭಾಗದ ಕಚೇರಿಗೆ ಕರೆಸಲಾಯಿತು ಮತ್ತು ನಂತರ … Continued