ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರದಿಂದ ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ಆರ್ಥಿಕ ಆಘಾತ…!

ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರಕ್ಕೆ ಹಣಕಾಸು ನೆರವಿಗೆ ದೊಡ್ಡ ಹೊಡೆತಬಿದ್ದಿದೆ. ಬಾಂಗ್ಲಾದೇಶಕ್ಕೆ ತನ್ನ ಎಲ್ಲ ನೆರವು ಮತ್ತು ನೆರವಿನ ಯೋಜನೆಗಳನ್ನು ಸ್ಥಗಿತಗೊಳಿಸಲು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (USAID) ಆದೇಶಿಸಿದೆ. ಇದನ್ನು ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ. ಶನಿವಾರ ಯೋಜನೆಯ ಅನುಷ್ಠಾನ ಪಾಲುದಾರರಿಗೆ ಕಳುಹಿಸಲಾದ ಸಂದೇಶದಲ್ಲಿ, ಅಮೆರಿಕದ ಅಂತಾರಾಷ್ಟ್ರೀಯ … Continued

500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ ಅಮೆರಿಕ ; ಮಿಲಿಟರಿ ವಿಮಾನ ಬಳಸಿ ನೂರಾರು ಜನರ ಗಡೀಪಾರು

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭರವಸೆಯ ಸಾಮೂಹಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ 500ಕ್ಕೂ ಹೆಚ್ಚು ವಲಸಿಗರನ್ನು ಬಂಧಿಸಲಾಗಿದೆ ಮತ್ತು ನೂರಾರು ಜನರನ್ನು ಮಿಲಿಟರಿ ವಿಮಾನಗಳ ಮೂಲಕ ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಶ್ವೇತಭವನ ತಿಳಿಸಿದೆ. ಅಂಕಿಅಂಶಗಳನ್ನು ಹಂಚಿಕೊಂಡ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು, ಅಮೆರಿಕದ ಅಧಿಕಾರಿಗಳು 538 ಅಕ್ರಮ … Continued

ಅಮೆರಿಕದ ಜನ್ಮದತ್ತ ಪೌರತ್ವ ಹಕ್ಕು ರದ್ದತಿಯ ಟ್ರಂಪ್‌ ಆದೇಶಕ್ಕೆ ಫೆಡರಲ್‌ ಕೋರ್ಟ್‌ ತಡೆ

ಅಮೆರಿಕದ ಫೆಡರಲ್ ನ್ಯಾಯಾಧೀಶರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದಲ್ಲಿ ಜಾರಿಯಲ್ಲಿರುವ ಜನ್ಮದತ್ತ ಪೌರತ್ವದ ಹಕ್ಕನ್ನು ರದ್ದುಪಡಿಸುವ ಕಾರ್ಯಕಾರಿ ಆದೇಶವನ್ನು ತಡೆಹಿಡಿದಿದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಗುರುವಾರ ವರದಿ ಮಾಡಿದೆ. ನ್ಯಾಯಾಧೀಶರು ಆದೇಶವನ್ನು “ಅಸಂವಿಧಾನಿಕ” ಎಂದು ಕರೆದಿದ್ದಾರೆ. ನಾಲ್ಕು ಡೆಮಾಕ್ರಟಿಕ್ ನೇತೃತ್ವದ ರಾಜ್ಯಗಳ ಅರ್ಜಿಯನ್ನು ಪರಿಗಣಿಸಿರುವ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕೊಘೆನರ್ ಅವರು … Continued

ವೀಡಿಯೊ…| ಅಮೆರಿಕ ಅಧ್ಯಕ್ಷ ಟ್ರಂಪ್‌ ಪ್ರಮಾಣ ವಚನದ ನಂತರ ಕುಣಿದು ಕುಪ್ಪಳಿಸಿದ ವಿಶ್ವದ ನಂ.1 ಶ್ರೀಮಂತ ಮಸ್ಕ್‌…1

ಮಸ್ಕ್‌ ಪ್ರಮಾಣ ವಚನದ ನಂತರ ಸೋಮವಾರ ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್ ಒನ್ ಅರೆನಾದಲ್ಲಿ ಎಲೋನ್ ಮಸ್ಕ್ ಉತ್ಸಾಹಭರಿತ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿ ಸಂಭ್ರಮಿಸಿದರು. ಟೆಸ್ಲಾ ಮುಖ್ಯಸ್ಥ ಮಸ್ಕ್‌ ಕುಣಿಯುತ್ತ ವೇದಿಕೆಯನ್ನು ಪ್ರವೇಶಿಸಿದರು, ಕುಪ್ಪಳಿಸಿದರು, ಬಿಗಿಮುಷ್ಟಿ ಹಿಡಿದು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. SpaceX ಸಿಇಒ (CEO) ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್‌ ಮಸ್ಕ್‌ … Continued

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ

ವಾಷಿಂಗ್ಟನ್‌ ಡಿಸಿ: ಅಮೇರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದರು. ಟ್ರಂಪ್ ಗೂ ಮೊದಲು ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ … Continued

ನೀಲಿ ತಾರೆಗೆ ಲಂಚ ಪ್ರಕರಣದಲ್ಲಿ ಟ್ರಂಪ್‌ ಅಪರಾಧಿ; ಬೇಷರತ್‌ ಬಿಡುಗಡೆಯೇ ಶಿಕ್ಷೆ..

ವಾಷಿಂಗ್ಟನ್ : ನೀಲಿ ಚಿತ್ರ ತಾರೆ ಸ್ಟಾರ್ಮಿ ಡೆನಿಯಲ್ಸ್ ಅವರಿಗೆ ಲಂಚ ನೀಡಿದ ಪ್ರಕರಣದಲ್ಲಿ ದೋಷಿಯಾಗಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜೈಲು ಶಿಕ್ಷೆ ನೀಡದೆ ಅವರಿಗೆ ಬಿಡುಗಡೆಯ ಶಿಕ್ಷೆ ನೀಡಿದ್ದಾರೆ. ಇದರರ್ಥ ಚುನಾಯಿತ ಅಧ್ಯಕ್ಷರು ತಮ್ಮ ಮೇಲಿನ ಆರೋಪಗಳಿಗೆ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ, ಆದರೆ ಅವರು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವುದರಿಂದ ಯಾವುದೇ ಜೈಲು … Continued

ಅಮೆರಿಕ ಶ್ವೇತ ಭವನದ ಎಐ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ ಕೃಷ್ಣನ್ ನೇಮಿಸಿದ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕನ್ ವಾಣಿಜ್ಯೋದ್ಯಮಿ, ಸಾಹಸೋದ್ಯಮ ಬಂಡವಾಳಶಾಹಿ ಮತ್ತು ಲೇಖಕ ಶ್ರೀರಾಮ ಕೃಷ್ಣನ್ (Sriram Krishnan) ಅವರನ್ನು ಕೃತಕ ಬುದ್ಧಿಮತ್ತೆಯ ಹಿರಿಯ ಶ್ವೇತಭವನದ (White House) ನೀತಿ ಸಲಹೆಗಾರರಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನೇಮಿಸಿದ್ದಾರೆ. ಈ ಬಗ್ಗೆ ಭಾನುವಾರ ಅಧಿಕೃತವಾಗಿ ಪ್ರಕಟಿಸಿರುವ ಡೊನಾಲ್ಡ್‌ ಟ್ರಂಪ್‌ ಅವರು, ಶ್ರೀರಾಮ ಕೃಷ್ಣನ್‌ ಅವರು ಶ್ವೇತ … Continued

ಅಮೆರಿಕ: ಡೊನಾಲ್ಡ್ ಟ್ರಂಪ್ ಕ್ಯಾಬಿನೆಟ್‌ನಲ್ಲಿ ಎಲೋನ್ ಮಸ್ಕ್, ವಿವೇಕ ರಾಮಸ್ವಾಮಿಗೆ ಮಹತ್ವದ ಸ್ಥಾನ

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರು ಎಲೋನ್ ಮಸ್ಕ್ ಅವರು ‘ಸರ್ಕಾರಿ ದಕ್ಷತೆಯ ಇಲಾಖೆ’ಯನ್ನು ಮುನ್ನಡೆಸಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ಮಸ್ಕ್ ಹಾಗೂ ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ ರಾಮಸ್ವಾಮಿ ಅವರು ಈ ವಿಭಾಗದ ಮುಖ್ಯಸ್ಥರಾಗಿರುತ್ತಾರೆ ಎಂದು ಪ್ರಕಟಿಸಿದ್ದಾರೆ, “ಈ ಇಬ್ಬರು ಅದ್ಭುತ ಅಮೆರಿಕನ್ನರು ಒಟ್ಟಾಗಿ, ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯಲು, ಹೆಚ್ಚುವರಿ ನಿಯಮಾವಳಿಗಳನ್ನು ಕಡಿತಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು … Continued

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ದಾಖಲೆಯ ಗೆಲುವು ; ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅದ್ಭುತ ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಮಾತುಕತೆಯ ಸಮಯದಲ್ಲಿ, ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದರು ಮತ್ತು ಇಡೀ ಜಗತ್ತು ಅವರನ್ನು ಪ್ರೀತಿಸುತ್ತಿದೆ ಎಂದು ಹೇಳಿದರು … Continued

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ 1.73 ಲಕ್ಷ ಕೋಟಿ ರೂ. ಹಣ ಗಳಿಸಿದ ಎಲೋನ್ ಮಸ್ಕ್…!

ವಾಷಿಂಗ್ಟನ್‌ ; 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭಾರೀ ಶ್ರೀಮಂತರಾಗಿದ್ದಾರೆ…! ಅವರ ಸಂಪತ್ತು ಬುಧವಾರ $ 20.5 ಶತಕೋಟಿ (ಸುಮಾರು 1.73 ಲಕ್ಷ ಕೋಟಿ ರೂ.)ಅಥವಾ ಶೇಕಡಾ 7.73%ರಷ್ಟು ಏರಿಕೆ ಕಂಡಿದೆ….!! ಈಗ ಅವರ ಸಂಪತ್ತು $285.2 ಶತಕೋಟಿಗಳಷ್ಟಾಗಿದೆ ಎಂದು ಫೋರ್ಬ್ಸ್‌ನ … Continued