ಲೋಕಸಭೆ ಚುನಾವಣೆ: ಕಾಂಗ್ರೆಸ್ಸಿನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕರ್ನಾಟಕದಿಂದ 7 ಅಭ್ಯರ್ಥಿಗಳಿಗೆ ಟಿಕೆಟ್‌…!

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದಿಂದ 7, ಕೇರಳದ 15, ತೆಲಂಗಾಣದ 4, ಛತ್ತೀಸ್​ಗಡದ 6, ಮೇಘಾಲಯದ 2, ನಾಗಲ್ಯಾಂಡ್, ಸಿಕ್ಕಿಂ​ ಹಾಗೂ ತ್ರಿಪುರಾದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಒಟ್ಟು 39 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್​ ಘೋಷಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ … Continued

ಹೋಗಿ…ಗೆದ್ದು ಬನ್ನಿ…ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ…: ಲೋಕಸಭೆ ಚುನಾವಣೆಗೂ ಮುನ್ನ ಸಚಿವರಿಗೆ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದೊಂದಿಗೆ ನಡೆದ ಒಂದು ದಿನದ ಸಭೆಯ ನೇತೃತ್ವ ವಹಿಸಿದ್ದರು. ಈ ಸಭೆಯಲ್ಲಿ ಅವರು, ಮುಂಬರುವ ಲೋಕಸಭೆ ಚುನಾವಣೆ ಘೋಷಣೆಗೆ ಮುಂಚಿತವಾಗಿಯೇ ತಮ್ಮ ಸಚಿವರಿಗೆ “ಹೋಗಿ, ಗೆದ್ದುಬನ್ನಿ, ನಾನು ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ” ಎಂದು ಸಂದೇಶ ನೀಡಿದ್ದಾರೆ. ನಿರ್ಣಾಯಕ ಸಭೆಯಲ್ಲಿ ವಿಷನ್ ಡಾಕ್ಯುಮೆಂಟ್ ‘ವಿಕಸಿತ ಭಾರತ 2047’ … Continued

ರಾಜ್ಯಸಭಾ ಚುನಾವಣೆ: ಉತ್ತರಪ್ರದೇಶದ 10 ಸ್ಥಾನಗಳಲ್ಲಿ ಬಿಜೆಪಿ 8 ರಲ್ಲಿ, ಸಮಾಜವಾದಿ ಪಕ್ಷ 2 ರಲ್ಲಿ ಗೆಲುವು

ನವದೆಹಲಿ: ಜಯಂತ ಚೌಧರಿ ಅವರ ರಾಷ್ಟ್ರೀಯ ಲೋಕದಳ ಮತ್ತು ಸಮಾಜವಾದಿ ಪಕ್ಷದ ಕೆಲವು ಬಂಡಾಯ ಶಾಸಕರ ಸಹಾಯದಿಂದ ಬಿಜೆಪಿ ಉತ್ತರ ಪ್ರದೇಶದಿಂದ ರಾಜ್ಯಸಭೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಹೆಚ್ಚುವರಿ ಸ್ಥಾನವನ್ನು ಪಡೆದುಕೊಂಡಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆದ್ದ ನಂತರ ಉತ್ತರ ಪ್ರದೇಶದಲ್ಲಿಯೂ ಬೋನಸ್ ಸ್ಥಾನಗಳನ್ನು ಪಡೆಯಲು ಬಿಜೆಪಿ … Continued

ಬೆಳಗಾವಿ ಪಾಲಿಕೆ ಮೇಯರ್‌, ಉಪಪೇಯರ್‌ ಸ್ಥಾನಕ್ಕೆ ಚುನಾವಣೆ : ಎರಡರಲ್ಲೂ ಬಿಜೆಪಿ ಗೆಲುವು

ಬೆಳಗಾವಿ: ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಯ ಸವಿತಾ ಕಾಂಬಳೆ ಮೇಯರ್ ಆಗಿ ಮತ್ತು ಆನಂದ ಚವ್ಹಾಣ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಎರಡೂ ಸ್ಥಾನಗಳಲ್ಲಿಯೂ ಬಿಜೆಪಿ ಜಯಗಳಿಸಿದೆ. ಐದು ವರ್ಷದ ಬಳಿಕ ಪಾಲಿಕೆಯಲ್ಲಿ ಕನ್ನಡ ಭಾಷಿಕ ಸದಸ್ಯೆ ಮೇಯರ್ ಆಗಿ ಆಯ್ಕೆಯಾಗಿರುವುದು ಆಗಿರುವುದು ವಿಶೇಷವಾಗಿದೆ. … Continued

ಪಾಕಿಸ್ತಾನದ ಚುನಾವಣೆ : ಮತದಾನಕ್ಕೆ ಒಂದು ದಿನ ಮೊದಲು ಅಭ್ಯರ್ಥಿಗಳ ಚುನಾವಣಾ ಕಚೇರಿ ಬಳಿ ಸ್ಫೋಟ ; 22 ಮಂದಿ ಸಾವು

ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನ್‌ನಲ್ಲಿ ಚುನಾವಣಾ ಅಭ್ಯರ್ಥಿಗಳ ಕಚೇರಿಯ ಬಳಿ ಎರಡು ಸ್ಫೋಟಗಳು ಸಂಭವಿಸಿದ್ದು, 22 ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮತ್ತು ಗುರುವಾರದ ಚುನಾವಣೆಯ ಮುನ್ನಾದಿನ ಈ ಸ್ಫೋಟ ಸಂಭವಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ದಾಳಿಗಳು ಮತ್ತು ಆರ್ಥಿಕ ಬಿಕ್ಕಟ್ಟು ಮತ್ತು ಪರಮಾಣು-ಶಸ್ತ್ರಸಜ್ಜಿತ ದೇಶವನ್ನು ಬೆದರಿಸುವ ಇತರ ಸಮಸ್ಯೆಗಳ … Continued

ಚುನಾವಣೆ ವೇಳೆ ಗ್ಯಾರಂಟಿ ಭಾಗ್ಯಗಳ ಮೂಲಕ ಮತದಾರರಿಗೆ ಆಮಿಷ : ಚುನಾವಣೆ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ಗ್ಯಾರಂಟಿ ರೂಪದಲ್ಲಿ ಆಮಿಷವೊಡ್ಡಲಾಗಿದ್ದು, ಅಂತಹ ಅಕ್ರಮಗಳನ್ನು ತಡೆಯುವಂತೆ ಸರ್ಕಾರಗಳು ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿದೆ. … Continued

ಮುಸ್ಲಿಂ ಸ್ಪೀಕರಿಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರೂ ನಮಸ್ಕರಿಸ್ತಾರೆ, ಇದನ್ನು ಕಾಂಗ್ರೆಸ್‌ ಮಾಡಿದೆ : ಸಚಿವ ಜಮೀರ್ ಅಹಮ್ಮದ್‌ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಈಗ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಮುಸ್ಲಿಂ ಸ್ಪೀಕರ್ ಯು.ಟಿ. ಖಾದರ್‌ ಅವರಿಗೆ ಕೈಮುಗಿದು ನಮಸ್ಕರಿಸಬೇಕಾಗಿದೆ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದ ಸೃಷ್ಟಿಸಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಪ್ರಚಾರ ಮಾಡುತ್ತಿರುವ ಜಮೀರ್ ಅಹಮ್ಮದ್ ಖಾನ್, “ಇಂದು ಬಿಜೆಪಿಯವರು ಎದ್ದು ನಿಂತು ನಮ್ಮ ಯುಟಿ ಖಾದರ್ … Continued

ಮಹಾರಾಷ್ಟ್ರ ಗ್ರಾಮ ಪಂಚಾಯತ ಚುನಾವಣೆ ಫಲಿತಾಂಶ : ಬಿಜೆಪಿ ಪ್ರಾಬಲ್ಯ

ಮಹಾರಾಷ್ಟ್ರ ಗ್ರಾಮ ಪಂಚಾಯತ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಗಮನಾರ್ಹ ಗೆಲುವು ಸಾಧಿಸಿದೆ. ಪ್ರಾಥಮಿಕ ಫಲಿತಾಂಶಗಳ ಪ್ರಕಾರ, ರಾಜ್ಯದ ಗ್ರಾಮ ಪಂಚಾಯಿತ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಈಗಾಗಲೇ 724 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯ ಜೊತೆಗೆ, ಅದರ ಮಿತ್ರಪಕ್ಷಗಳಾದ ಶಿವಸೇನೆಯ ಶಿಂಧೆ ಬಣ ಮತ್ತು ಎನ್‌ಸಿಪಿಯ ಅಜಿತ್ ಪವಾರ್‌ … Continued

ಚುನಾವಣೆಗೆ ಮೂರು ದಿನಗಳ ಮೊದಲು ಬಿಜೆಪಿ ನಾಯಕನ ಹತ್ಯೆ

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನಕ್ಕೆ ಮೂರು ದಿನಗಳ ಮೊದಲು ಮಾವೋವಾದಿಗಳು ಚುನಾವಣಾ ಪ್ರಚಾರದಲ್ಲಿದ್ದ ಬಿಜೆಪಿ ನಾಯಕನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಿಜೆಪಿ ನಾಯಕ ರತನ್ ದುಬೆ ಅವರು ಬಿಜೆಪಿಯ ನಾರಾಯಣಪುರ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದರು. ಜಿಲ್ಲೆಯ ಕೌಶಲನರ್ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ರತನ್‌ ದುಬೆ ಅವರು ಜಿಲ್ಲಾ … Continued

ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ : 39 ಕಾಂಗ್ರೆಸ್ ನಾಯಕರ ಉಚ್ಚಾಟನೆ

ಭೋಪಾಲ್: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದಕ್ಕಾಗಿ ಮಧ್ಯಪ್ರದೇಶದ ಕಾಂಗ್ರೆಸ್ 39 ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಕಮಲನಾಥ ಅವರ ನಿರ್ದೇಶನದ ಮೇರೆಗೆ ಈ 39 ನಾಯಕರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ರಾಜ್ಯ … Continued