ನಾನು ಹಿಂದು, ಆದ್ರೆ ಹಿಂದುತ್ವವಾದಿ ಅಲ್ಲ ಎಂದ ರಾಹುಲ್ ಗಾಂಧಿ; ಜೈಪುರ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ

ಜೈಪುರ: ಭಾರತವು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳ ದೇಶವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ತೈಲ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ಆಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ … Continued

ಸಾಯುವ ಕೆಲವು ತಾಸುಗಳ ಮೊದಲು ರೆಕಾರ್ಡ್‌ ಮಾಡಿದ ಬಿಪಿನ್‌ ರಾವತ್‌ ಕೊನೆಯ ಸಾರ್ವಜನಿಕ ಸಂದೇಶ ವಿಡಿಯೊ ಸ್ವರ್ಣಿಮ್ ವಿಜಯ್ ಪರ್ವದಲ್ಲಿ ಬಿಡುಗಡೆ..ವೀಕ್ಷಿಸಿ

ನವದೆಹಲಿ: ಸೇನಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್ ದುರಂತ ನಡೆಯುವ ಒಂದು ದಿನದ ಮೊದಲು ರೆಕಾರ್ಡ್ ಮಾಡಿದ ಸಂದೇಶವನ್ನು ಭಾನುವಾರ ನವದೆಹಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಸಂದೇಶದಲ್ಲಿ ದಿವಂಗತ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು 1971 ರ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯದ … Continued

ಅಮೆರಿಕದ ಆರು ರಾಜ್ಯಗಳಲ್ಲಿ ಪ್ರಬಲ ಸುಂಟರಗಾಳಿಗೆ 80 ಕ್ಕೂ ಹೆಚ್ಚು ಜನರು ಸಾವು, ನೂರಾರು ಕಟ್ಟಡಗಳು ನೆಲಸಮ | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕದ ಆರು ರಾಜ್ಯಗಳಲ್ಲಿ ಹತ್ತಾರು ವಿನಾಶಕಾರಿ ಸುಂಟರಗಾಳಿಗಳು ರಾತ್ರಿಯಿಡೀ ಘರ್ಜಿಸಿದ್ದು, 80 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಕಾಣೆಯಾಗಿದ್ದಾರೆ. ಶನಿವಾರ ಅಧ್ಯಕ್ಷ ಜೋ ಬಿಡೆನ್ ಅವರು ಅಮೆರಿಕದ ಇತಿಹಾಸದಲ್ಲಿ “ಅತಿದೊಡ್ಡ” ಚಂಡಮಾರುತ ಏಕಾಏಕಿ ಸಂಭವಿಸಿದೆ ಎಂದು ಹೇಳಿದ್ದಾರೆ ಹಾಗೂ ವಿಪತ್ತಿನಿಂದ ಹೆಚ್ಚು ಹಾನಿಗೊಳಗಾದ ಕೆಂಟುಕಿ ರಾಜ್ಯಕ್ಕೆ ತುರ್ತು ಘೋಷಣೆಗೆ ಅನುಮೋದಿಸಿದ್ದಾರೆ. … Continued

ದೈತ್ಯಾಕಾರದ ಹೆಬ್ಬಾವಿನ ಜೊತೆ ಆಟವಾಡುವ ಪುಟ್ಟ ಹುಡುಗಿ..ನೋಡಿದ್ರೆ ಬೆಚ್ಚಿ ಬೀಳ್ತೀರಿ..! ವೀಕ್ಷಿಸಿ

ಚಿಕ್ಕ ಹುಡುಗಿಯೊಬ್ಬಳು ದೈತ್ಯಾಕಾರದ ಹಾವಿನ ಆಟವಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಯು-ಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದೇರೀತಿ snake._.world’ ಎಂಬ ಬಳಕೆದಾರರಿಂದ ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ (Instagram) ಹಂಚಿಕೊಳ್ಳಲಾಗಿದೆ. ಇದು ಈಗ ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಿಡಿಯೊದಲ್ಲಿ, ಕೆಂಪು ಟಿ-ಶರ್ಟ್, ಪ್ಯಾಂಟ್ ಮತ್ತು ನೀಲಿ ಚಪ್ಪಲಿಗಳನ್ನು ಧರಿಸಿರುವ … Continued

ವಾಯುಸೇನೆ ಹೆಲಿಕಾಪ್ಟರ್‌ ದುರಂತ: ಆರು ಮೃತದೇಹದ ಗುರುತು ಪತ್ತೆ, ನಾಲ್ವರ ಗುರುತು ಪತ್ತೆಗೆ ಕಾಯುತ್ತಿದೆ ಕುಟುಂಬ

ನವದೆಹಲಿ: ವಾಯುಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿ 13 ಮಂದಿ ಸೇನಾಧಿಕಾರಿಗಳು ನಿಧನರಾಗಿದ್ದಾರೆ. ಮಡಿದವರ ಪೈಕಿ ಇಂದು ಮತ್ತೆ 6 ಮೃತದೇಹದ ಗುರುತು ಪತ್ತೆಯಾಗಿದೆ. ಆದರೆ ಇನ್ನೂ ನಾಲ್ವರ ಗುರುತು ಪತ್ತೆಯಾಗಬೇಕಿದ್ದು, ಕುಟುಂಬದವರು ಕಾಯುತ್ತಿದ್ದಾರೆ. ಬಿಪಿನ್ ರಾವತ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್ ಹಾಗೂ ಲಫ್ಟಿನೆಂಟ್ … Continued

ಕೇವಲ 2 ಗಂಟೆಗಳಲ್ಲಿ ಓಮಿಕ್ರಾನ್‌ ವೈರಸ್‌ ಪತ್ತೆ ಹಚ್ಚುವ ʼಪರೀಕ್ಷಾ ಕಿಟ್ʼ ಅಭಿವೃದ್ಧಿಪಡಿಸಿದ ಐಸಿಎಂಆರ್

ನವದೆಹಲಿ : ಅಸ್ಸಾಂನ ದಿಬ್ರುಗಢ್‌ನಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೊಸ ಕೋವಿಡ್ -19 ಪರೀಕ್ಷಾ ಕಿಟ್ ವಿನ್ಯಾಸಗೊಳಿಸಿದ್ದು, ಇದು ಕೇವಲ ಎರಡು ಗಂಟೆಗಳಲ್ಲಿ ಹೊಸ ಕೊರೊನಾ ವೈರಸ್ ರೂಪಾಂತರ ಓಮಿಕ್ರಾನ್ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಅನೇಕ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಈ ಬೆಳವಣಿಗೆ ಗಮನಾರ್ಹವಾಗಿದೆ. ಇಲ್ಲಿಯವರೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ … Continued

ಪುಣೆಯಲ್ಲಿ ಓಮಿಕ್ರಾನ್ ಸೋಂಕಿಗೆ ಒಳಗಾದ ಒಂದೂವರೆ ವರ್ಷದ ಬಾಲಕಿ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆ

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿ ಇತ್ತೀಚೆಗೆ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರ ಸೋಂಕು ದೃಢಪಟ್ಟಿದ್ದ ಒಂದೂವರೆ ವರ್ಷದ ಬಾಲಕಿ ಸೋಂಕಿನಿಂದ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ. ಓಮಿಕ್ರಾನ್‌ ಸೋಂಕಿಗೆ ಒಳಗಾದ ಮೂರು ವರ್ಷದ ಹುಡುಗ ಕೂಡ ಲಕ್ಷಣರಹಿತವಾಗಿದ್ದು ಮತ್ತು ಆರೋಗ್ಯವಾಗಿದ್ದಾನೆ ಎಂದು ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ … Continued

ಕಾರ್ಮಿಕ ಇಲಾಖೆಯಿಂದ ಶ್ರಮಿಕ ವರ್ಗಕ್ಕೆ ಭರ್ಜರಿ ಗಿಫ್ಟ್: ರಾಜ್ಯಾದ್ಯಂತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಯೋಜನೆ

ಬೆಂಗಳೂರು: ರಾಜ್ಯದ ಕಾರ್ಮಿಕ ಇಲಾಖೆ ಈಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿ ತರಲು ಹೊರಟಿದೆ. ಕಾರ್ಮಿಕ ಇಲಾಖೆ ಈಗ ಕಾರ್ಮಿಕರು ತಮ್ಮ ಕೆಲಸದ ಪ್ರದೇಶಗಳಿಗೆ ತೆರಳಲು ಅನುವಾಗುವಂತೆ ಉಚಿತ ಸಾರಿಗೆ ಸೇವೆ ಒದಗಿಸಲು ನಿರ್ಧರಿಸಿದೆ. ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಈ ಉಚಿತ ಸೇವೆ ಜಾರಿ ಮಾಡಿರುವ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿ ಈಗ ಈ ಯೋಜನೆ … Continued

15 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ; ಶೀಘ್ರದಲ್ಲೇ ಅಧಿಸೂಚನೆ

ಬೆಂಗಳೂರು: ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಸಿಹಿಸುದ್ದಿ ನೀಡಿದ್ದಾರೆ. 15 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ ಎಂದು ಸಚಿವ ನಾಗೇಶ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ನಾಗೇಶ ಅವರು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ … Continued

ಸಿಡಿಎಸ್‌ ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ವಿರೋಧಿಸಿ ಇಸ್ಲಾಂ ತೊರೆದ ಮಲಯಾಳಂ ನಿರ್ದೇಶಕ ಅಲಿ ಅಕ್ಬರ್: ಪತ್ನಿ ಸಮೇತ ಹಿಂದೂ ಧರ್ಮ ಸ್ವೀಕರಿಸಲು ನಿರ್ಧಾರ

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸುದ್ದಿಗೆ ಕೆಲವು ಮುಸ್ಲಿಮರ ಅಗೌರವದ ಪ್ರತಿಕ್ರಿಯೆಯನ್ನು ಖಂಡಿಸಿರುವ ಕೇರಳದ ಚಲನಚಿತ್ರ ನಿರ್ಮಾಪಕ ಅಲಿ ಅಕ್ಬರ್ ಅವರು ತಾನು ಧರ್ಮದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ ಮತ್ತು ತಮ್ಮ ಪತ್ನಿಯೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಬಿಪಿನ್​ ರಾವತ್​ ಅವರ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ … Continued