ನಾಯಿ ಬೇಟೆಗೆ ಬಂದ ಚಿರತೆ ಮನೆಯಲ್ಲಿ ಬಂಧಿ

ಉಡುಪಿ: ನಾಯಿ ಹಿಡಿಯಲು ಬಂದ ಚಿರತೆಯೊಂದು ಮನೆಯೊಳಗೆ ಪ್ರವೇಶಿಸಿ ತಾನೇ ಬಧಿಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡದಿದೆ. ಬ್ರಹ್ಮಾವರ ಬಳಿಯ ನೈಲಾಡಿಯಲ್ಲಿ ಈ ಘಟನೆ ನಡೆದಿದೆ. ಚಿರತೆ ಕುಟುಂಬದ ಸಾಕು ನಾಯಿ ಹಿಡಿಯಲು ಹೊರಟಿತ್ತು, ಆದರೆ ಅದು ತಪ್ಪಿಸಿಕೊಂಡು ಮನೆಯೊಳಗೆ ಓಡಿ ಹೋಯಿತು.ಚಿರತೆಯೂ ನಾಯಿಯನ್ನು ಹಿಂಬಾಲಿಸಿತು.ಶಬ್ದದಿಂದಾಗಿ ಎಚ್ಚರಗೊಂಡ ಮನೆಯ ಮಾಲೀಕರು ನೋಡಿದರೆ ಮನೆಯೊಳಗೆ ಚಿರತೆ ನುಗ್ಗಿದೆ. … Continued

ಕೊರೊನಾ ಹೆಚ್ಚಳ: ಶಾಲಾ-ಕಾಲೇಜುಗಳ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದೆ. ಹೀಗಾಗಿ ಶಾಲಾ-ಕಾಲೇಜುಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ನಾವು ಮಕ್ಕಳ ಆರೋಗ್ಯದ … Continued

ಭಾರತದಲ್ಲಿ 44 ಸಾವಿರ ಸಮೀಪಕ್ಕೆ ನೆಗೆದ ದೈನಂದಿನ ಕೊರೊನಾ ಸೋಂಕು…!

ನವ ದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದ್ದು, ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 43,846 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಕಳೆದ ವರ್ಷದ 112 ದಿನಗಳ ಗರಿಷ್ಠ ಸಂಖ್ಯೆಯಾಗಿದೆ. ಇದೇ ಸಮಯದಲ್ಲಿ ದಿನವೊಂದರಲ್ಲಿ 197 ಕೊವಿಡ್‌ ಮರನಗಳು ಸಂಭವಿಸಿವೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಪ್ರಕರಣ ಹೆಚ್ಚಳವಾಗಿದ್ದು ದೇಶದಲ್ಲಿ ಒಟ್ಟಾರೆ ಪ್ರಕರಣಗಳು ಹೆಚ್ಚಲು ಕಾರಣವಾಗಿದ್ದರೆ ಉಳಿದಂತೆ ದೆಹಲಿ, … Continued

ಪತ್ರ ತನ್ನದೇ ಎಂದು ಖಚಿತಪಡಿಸಿದ ಪರಮ್‌ಬಿರ್‌: ಶೀಘ್ರದಲ್ಲೇ ಸರ್ಕಾರ ತಲುಪಲಿದೆ ಸಹಿ ಮಾಡಿದ ನಕಲು

ಮುಂಬೈ: ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಳುಹಿಸಿದ “ಸಹಿ ಮಾಡದ ಪತ್ರ” ದ ಹಿಂದಿನ ರಹಸ್ಯಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮುಖ್ಯಮಂತ್ರಿ … Continued

ನನ್ನ ವಿರುದ್ಧದ ಆರೋಪ ಆತ್ಮರಕ್ಷಣೆಗಾಗಿ ಪರಮ್‌ ಬಿರ್‌ ಮಾಡಿದ ಪಿತೂರಿ, ಮಾನನಷ್ಟ ಮೊಕದ್ದಮೆ ಹೂಡುವೆ: ದೇಶ್ಮುಖ್

ಮುಂಬೈ: ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅಪ್ಪಟ ಸುಳ್ಳು ಎಂದು ಹೇಳಿರುವ ಆರೋಪವನ್ನು ಗೃಹ ಸಚಿವ ಅನಿಲ್ ದೇಶ್ಮುಖ್ ಇದು ನನ್ನ ಮತ್ತು ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಆತ್ಮರಕ್ಷಣೆಗಾಗಿ ಅಪಖ್ಯಾತಿಗೊಳಿಸುವ ಪಿತೂರಿಯಾಗಿದೆ. ಪರಮ್‌ ಬಿರ್‌ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. ಪ‌ರಮ್‌ ಬೀರ್ ಸಿಂಗ್ ಹೇಗೆ ಸುಳ್ಳು ಹೇಳುತ್ತಿದ್ದಾರೆ. ಸಚಿನ್ … Continued

ದೆಹಲಿ ಮಾದರಿಯಲ್ಲಿ ಬೆಂಗಳೂರನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರಿಯಿರಿ: ಕರ್ನಾಟಕದ ರೈತರಿಗೆ ಟಿಕಾಯತ್‌ ಕರೆ

ಶಿವಮೊಗ್ಗ: ನರೇಂದ್ರ ಮೋದಿಯವರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವಂತೆ ಅಗ್ರಹಿಸಿ ನಡೆಯುತ್ತಿರುವ ದೇಶವ್ಯಾಪಿ ರೈತ ಹೋರಾಟದ ಭಾಗವಾಗಿ ಶನಿವಾರ ಹೋರಾಟದ ನೆಲ ಶಿವಮೊಗ್ಗದಲ್ಲಿ ಬೃಹತ್ ರೈತ ಮಹಾ ಪಂಚಾಯತ್ ನಡೆಯಿತು. ದಕ್ಷಿಣ ಭಾರತದ ಮೊಟ್ಟ ಮೊದಲನೆ ಬಾರಿಗೆ ಶಿವಮೊಗ್ಗದಲ್ಲಿ ನಡೆದ ಈ ಮಹಾ ಪಂಚಾಯತ್ ನಲ್ಲಿ ರೈತ ಹೋರಾಟದ ನೇತಾರರಾದ ರಾಕೇಶ್ … Continued

ಮಹಾ ಗೃಹ ಸಚಿವ ದೇಶ್​ಮುಖ್ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸಲು ವಾಜೆ ಮೇಲೆ ಒತ್ತಡ: ಪರಮ್‌ಬಿರ್‌ ಸಿಂಗ್ ಸ್ಫೋಟಕ ಆರೋಪ‌

ಮುಂಬೈ: ಇತ್ತೀಚೆಗಷ್ಟೇ ಮುಂಬೈ ಪೊಲೀಸ್‌ ಆಯುಕ್ತ ಹುದ್ದೆಯಿಂದ ವರ್ಗಾವಣೆಯಾಗಿದ್ದ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪರಮ್ ಬೀರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ. ಮುಂಬಯಿ ಪೊಲೀಸ್ ಅಪರಾಧ ವಿಭಾಗದ … Continued

ಮಹಾರಾಷ್ಟ್ರದಲ್ಲಿ 27 ಸಾವಿರಕ್ಕೂ ಹೆಚ್ಚು ದೈನಂದಿನ ಕೊರೊನಾ ಪ್ರಕರಣ ದಾಖಲು

ಮುಂಬೈ: ಮಹಾರಾಷ್ಟ್ರದಲ್ಲಿ ಶನಿವಾರ 27,126 ಹೊಸ ಕೊವಿಡ್‌-19 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ಒಂದು ದಿನದ ಗರಿಷ್ಠ ಏರಿಕೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 92 ಸಾವುನೋವುಗಳೊಂದಿಗೆ, ಸಾವಿನ ಸಂಖ್ಯೆ 53,300 ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶನಿವಾರ, 13,588 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಕೆ 22,03,553 … Continued

ಕರ್ನಾಟಕದಲ್ಲಿ 1,798 ದೈನಂದಿನ ಕೊರೊನಾ ಸೋಂಕು..ಎರಡನೇ ಅಲೆ ಎಚ್ಚರಿಕೆ

ಬೆಂಗಳೂರು: ಕಳೆದ 24 ಗಂಟೆಯಲ್ಲಿ ( ಶನಿವಾರ) ರಾಜ್ಯದಲ್ಲಿ 1,798 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೋನಾ ಸೋಂಕಿನಿಂದ ಏಳು ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,68,487ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 12,432ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು 12,828 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ … Continued

ಕಂಬಳದಲ್ಲಿ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ ಓಡಿಹೊಸ ದಾಖಲೆ ಬರೆದ ಶ್ರೀನಿವಾಸಗೌಡ

ಬೆಳ್ತಂಗಡಿ ತಾಲೂಕು ವೇಣೂರ-ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಡಿ ಹೊಸ ದಾಖಲೆ ಮಾಡಿದ್ದಾರೆ. ಕಂಬಳದ ೧೨೫ ಮೀ. ಕೆರೆಯನ್ನು ೧೧.೨೧ ಸೆಕೆಂಡ್‌ಗಳಲ್ಲಿ ಶ್ರೀನಿವಾಸಗೌಡ ತಲುಪಿದ್ದಾರೆ. ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲ್‌ ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಅವರು ಓಡಿಸಿದ್ದಾರೆ. ಕಳೆದ ವರ್ಷ … Continued