ಸಂಬಳ ಕೇಳಿದ್ದಕ್ಕೆ ದಲಿತ ಯುವಕನ ಬಾಯಿಗೆ ಚಪ್ಪಲಿ ತುರುಕಿದ ಮಹಿಳೆ…..!

ಮೊರ್ಬಿ (ಗುಜರಾತ್) : ತನ್ನ ಕಂಪನಿಯಲ್ಲಿ ಹದಿನೈದು ದಿನಗಳ ಕಾಲ ಕೆಲಸ ಮಾಡುತ್ತಿದ್ದ 21 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉದ್ಯಮಿ ಮತ್ತು ಇತರ ಆರು ಮಂದಿಯ ವಿರುದ್ಧ ಗುಜರಾತ್‌ನ ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಬಳ ನೀಡಲು ಒತ್ತಾಯಿಸಿದ್ದಕ್ಕಾಗಿ ಆತನ ಬಾಯಲ್ಲಿ ಚಪ್ಪಲಿ ತುರುಕಿದ ಮಹಿಳೆ ನಂತರ … Continued

ಸೂರತ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : ಓರ್ವ ಸಾವು, ಹಲವರಿಗೆ ಗಾಯ

ಸೂರತ್ : ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ದೀಪಾವಳಿಗೆ ತಮ್ಮ ಊರುಗಳಿಗೆ ತೆರಳುವ ಅಪಾರ ಸಂಖ್ಯೆಯ ಜನರು ವಿವಿಧ ರಾಜ್ಯಗಳಿಗೆ ತೆರಳಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ರೈಲು ಹತ್ತುವಾಗ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಪ್ರಜ್ಞೆ ತಪ್ಪಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ … Continued

ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವ ಪತ್ತೆ

ಸೂರತ್ : ಗುಜರಾತ್‌ನ ಸೂರತ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ಆರು ಮಂದಿ ವಿಷಕಾರಿ ಪದಾರ್ಥಗಳನ್ನು ಸೇವಿಸಿ ಮೃತಪಟ್ಟಿದ್ದಾರೆ. ಏಳನೇ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮನೀಶ್ ಸೋಲಂಕಿ, ಅವರ ಪತ್ನಿ ರೀಟಾ, ತಂದೆ ಕಾನು, ತಾಯಿ ಶೋಭಾ … Continued

ಬೀದಿ ನಾಯಿಗಳ ದಾಳಿಯಿಂದ ಗಾಯ : ವಾಘ್ ಬಕ್ರಿ ಕಂಪನಿ ನಿರ್ದೇಶಕ ಪರಾಗ ದೇಸಾಯಿ ಸಾವು

ಅಹಮದಾಬಾದ್‌ : ವಾಘ್ ಬಕ್ರಿ ಟೀ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ ದೇಸಾಯಿ ಅವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅವರಿಗೆ ಅವರಿಗೆ 49 ವರ್ಷವಾಗಿತ್ತು. ಅಕ್ಟೋಬರ್ 15 ರಂದು ಬೀದಿ ನಾಯಿಗಳ ದಾಳಿಯ ನಂತರ ದೇಸಾಯಿ ಅವರು ತಮ್ಮ ನಿವಾಸದ ಬಳಿ ಬಿದ್ದು ಅವರ ತಲೆಗೆ ಏಟು ಬಿದ್ದಿತ್ತು ಎಂದು … Continued

ಶಾಲಾ ವಿದ್ಯಾರ್ಥಿಗಳಿಂದ ನಮಾಜ್ ಮಾಡಿಸಿದ ಶಾಲೆ : ಪ್ರತಿಭಟನೆಗಳ ನಂತರ ತನಿಖೆಗೆ ಆದೇಶ

ಅಹಮದಾಬಾದ್: ಅಹಮದಾಬಾದ್‌ನ ಖಾಸಗಿ ಶಾಲೆಯೊಂದು ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ಧರ್ಮದ ವಿದ್ಯಾರ್ಥಿಗಳನ್ನು ತನ್ನ ಆವರಣದಲ್ಲಿ ನಮಾಜ್ ಮಾಡಲು ಹೇಳಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಸೆಪ್ಟೆಂಬರ್ 29 ರಂದು ನಡೆದ ಘಟನೆಯ ಕುರಿತು ಘಟ್ಲೋಡಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ಕಲೋರೆಕ್ಸ್ ಫ್ಯೂಚರ್ ಸ್ಕೂಲ್ ಎಂಬ ಶಾಲೆಯ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಶಾಲಾ ಆಡಳಿತ ಮಂಡಳಿಯು ಕ್ಷಮೆಯಾಚಿಸಿದ್ದು, … Continued

ʼವಿಶ್ವಕಪ್ʼ ಕ್ರಿಕೆಟ್ ಅನ್ನು ʼವಿಶ್ವ ಟೆರರ್ ಕಪ್ʼ ಆಗಿ ಬದಲಿಸ್ತೇವೆ ಎಂದು ಬೆದರಿಕೆ : ಖಲಿಸ್ತಾನಿ ಭಯೋತ್ಪಾದಕನ ಪನ್ನುನ್‌ ವಿರುದ್ಧ ಎಫ್‌ ಐ ಆರ್‌ ದಾಖಲು

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್ ಅನ್ನು “ವಿಶ್ವ ಭಯೋತ್ಪಾದಕ ಕಪ್” ಎಂದು ಪರಿವರ್ತಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಮೊದಲ ಮಾಹಿತಿ … Continued

ಚಂದ್ರಯಾನ 3ರ ಲ್ಯಾಂಡರ್ ನಾನೇ ವಿನ್ಯಾಸ ಮಾಡಿದ್ದು ಎಂದು ಹೇಳಿಕೊಂಡಿದ್ದ ನಕಲಿ ವಿಜ್ಞಾನಿ ಬಂಧಿಸಿದ ಪೊಲೀಸರು

ಸೂರತ್​: ಇಸ್ರೋದ ಚಂದ್ರಯಾನ 3 ಮಿಷನ್​ಗೆ ವಿಕ್ರಮ್​ ಲ್ಯಾಂಡರ್​ ಮಾಡ್ಯೂಲ್​ ವಿನ್ಯಾಸ ಮಾಡಿದ್ದು ನಾನೇ ಎಂದು ಹೇಳಿಕೊಂಡು ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ನಕಲಿ ವಿಜ್ಞಾನಿಯನ್ನು ಗುಜರಾತಿನ ಸೂರತ್​ ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಂದ್ರಯಾನ-3ರ ಚಂದ್ರನ ಕಾರ್ಯಾಚರಣೆಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸುವಲ್ಲಿ ತನ್ನ ಪಾತ್ರವಿದೆ ಎಂದು ಸುಳ್ಳು ಹೇಳಿಕೊಂಡು ಈತ ಸ್ಥಳೀಯ ಮಾಧ್ಯಮಗಳಿಗೆ … Continued

ಬಿಲ್ಕಿಸ್ ಬಾನೊ ಪ್ರಕರಣ: ಆಯ್ದ ಅಪರಾಧಿಗಳಿಗೆ ಮಾತ್ರ ಕ್ಷಮಾದಾನ ಏಕೆ ಎಂದು ಗುಜರಾತ್‌ ಸರ್ಕಾರಕ್ಕೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ : 2002ರ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬವನ್ನು ಹತ್ಯೆಗೈದ ಅಪರಾಧಿಗಳ ಅಕಾಲಿಕ ಬಿಡುಗಡೆ ಕುರಿತ ಅರ್ಜಿಗಳ ಸರಣಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಗುರುವಾರ ಗುಜರಾತ್ ಸರ್ಕಾರಕ್ಕೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದೆ. “ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 14 ವರ್ಷಗಳ ಸೇವೆ ಸಲ್ಲಿಸಿದ ನಂತರ … Continued

ನಯಾ ಪೈಸೆ ತೆಗೆದುಕೊಳ್ಳದೆ 138 ದಂಪತಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಈಗ ವಿಚ್ಛೇದನ ನೀಡಿದ ಪತ್ನಿ…! ಕಾರಣ ತಿಳಿದರೆ ದಿಗ್ಭ್ರಮೆ…!!

ಅಹಮದಾಬಾದ್: ಒಮ್ಮೊಮ್ಮೆ ಜೀವನದಲ್ಲಿ ನಾವು ಒಂದು ಬಯಸಿದರೆ ದೈವವು ಇನ್ನೊಂದು ಬಗೆಯುತ್ತದೆ. ನಾವು ಏನಾಗಬಾರದು ಎಂದು ಬಯಸುತ್ತೇವೆಯೇ ಒಮ್ಮೊಮ್ಮೇ ಜೀವನದಲ್ಲಿ ಅದೇ ನಡೆಯುತ್ತದೆ. ಗುಜರಾತಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. 16 ವರ್ಷಗಳಿಗಿಂತ ಹೆಚ್ಚು ವೃತ್ತಿ ಪರ ಅನುಭವ ಇರುವ ವಕೀಲರೊಬ್ಬರು ಈವರೆಗೆ 138 ಜೋಡಿಗಳ ವಿಚ್ಛೇದನ ತಡೆದಿದ್ದಾರೆ. ಒಂದೇ ಒಂದು ಪೈಸೆ ಹಣ ತೆಗೆದುಕೊಳ್ಳದೆ … Continued

ಸಮುದ್ರಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ | ವೀಕ್ಷಿಸಿ

ಗುಜರಾತ್‌ನ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ಮೂರು ಜೀವಗಳನ್ನ ಉಳಿಸಿದ್ದಾರೆ. ನಾಲ್ವರು ಯುವಕರು ಗುಜರಾತ್‌ನ ರಾಜುಲಾ ಸಮೀಪದ ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ತೊರೆಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಅವರು ಮುಳುಗುತ್ತಿದ್ದರು. ಘಟನೆಯ ಬಗ್ಗೆ ತಿಳಿದ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ … Continued