ಹಮಾಸ್ ಉಗ್ರರ ನೆಲದೊಳಗಿನ ಸುರಂಗಗಳನ್ನೇ ಮುಚ್ಚಿಬಿಡಲು ಇಸ್ರೇಲ್‌ ಬಳಿ ಇದೆ ರಹಸ್ಯ ಆಯುಧ ‘ಸ್ಪಾಂಜ್ ಬಾಂಬ್’ : ಏನಿದರ ವಿಶೇಷತೆ..?

ಹೊಸದಿಲ್ಲಿ: ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ ಹಮಾಸ್‌ ಉಗ್ರರು ಹಠಾತ್‌ ದಾಳಿ ನಡೆಸಿ ಸುಮಾರು 1,400 ಜನರನ್ನು ಕೊಂದ ನಂತರ ಗಾಜಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ಪ್ರತೀಕಾರದ ದಾಳಿ 21ನೇ ದಿನಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 7ರ ದಾಳಿಯ ನಂತರ, ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ, ಇದರಲ್ಲಿ 7,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು … Continued

ಪ್ಯಾಲೆಸ್ತೀಯನ್ನರ ಬೆಂಬಲಿಸಿ ನಡೆದ ಐಯುಎಂಎಲ್‌ ಸಮಾವೇಶದಲ್ಲಿ ಹಮಾಸ್ ‘ಭಯೋತ್ಪಾದಕ ಗುಂಪು’ ಎಂದ ಶಶಿ ತರೂರ್ : ಹಲವರ ವಿರೋಧದ ನಂತರ‌ ಸ್ಪಷ್ಟನೆ

ತಿರುವನಂತಪುರಂ: ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಹಮಾಸ್‌ ದಾಳಿಯನ್ನು ʼಭಯೋತ್ಪಾದಕರ ದಾಳಿʼ ಎಂದು ಪ್ಯಾಲೆಸ್ತೀನ್ ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಹೇಳಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕೇರಳದ ಐಯುಎಂಎಲ್ ಮತ್ತು ಹಮಾಸ್ ಪರ ಕೆಲವು ಗುಂಪುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಂತರ ಈ ಬಗ್ಗೆ ತರೂರ್‌ ಸ್ಪಷ್ಟನೆ ನೀಡಿದ್ದು, ನಾನು ಯಾವಾಗಲೂ ಪ್ಯಾಲೆಸ್ತೀನ್ ಜನರೊಂದಿಗೆ … Continued

ಫೈಟರ್ ಜೆಟ್‌ ಬಳಸಿ ಮೂವರು ಹಿರಿಯ ಹಮಾಸ್ ಪ್ರಮುಖರ ಹತ್ಯೆ : ಇಸ್ರೇಲ್

ಟೆಲ್‌ ಅವೀವ್‌ :   ಫೈಟರ್ ಜೆಟ್‌ಗಳು ದರಾಜ್ ಟುಫಾ ಬೆಟಾಲಿಯನ್‌ನಲ್ಲಿ ಮೂವರು ಹಿರಿಯ ಹಮಾಸ್ ಪ್ರಮುಖರನ್ನು ಹೊಡೆದುರುಳಿಸಿವೆ ಎಂದು ಶುಕ್ರವಾರ ಮುಂಜಾನೆ ಇಸ್ರೇಲಿ ಸೇನೆ ಹೇಳಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಇಸ್ರೇಲಿ ಸೇನೆ, ಅಕ್ಟೋಬರ್ 7 ರಂದು ಇಸ್ರೇಲ್ ವಿರುದ್ಧದ ಆಕ್ರಮಣ ಮತ್ತು ಅಮಾನವೀಯ ದಾಳಿಯಲ್ಲಿ ಈ ಬೆಟಾಲಿಯನ್ ಕಾರ್ಯಕರ್ತರು ಮಹತ್ವದ ಪಾತ್ರ … Continued

ಹಮಾಸ್ ಘಟಕ ನಾಶಪಡಿಸಿ ಒತ್ತೆಯಾಳುಗಳನ್ನು ರಕ್ಷಿಸಿದ ಇಸ್ರೇಲಿ ಸೇನೆ | ವೀಕ್ಷಿಸಿ

ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಪ್ರತೀಕಾರವಾಗಿ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ದಕ್ಷಿಣ ಇಸ್ರೇಲ್ ಗಡಿಯ ಸಮೀಪವಿರುವ ಕಿಬ್ಬುಟ್ಜ್ ಬೀರಿಯಲ್ಲಿ ಇಸ್ರೇಲಿ ನಾಗರಿಕರನ್ನು ರಕ್ಷಿಸಲು ಹಮಾಸ್ ಕಾರ್ಯಕರ್ತರನ್ನು ಎದುರಿಸಿ ತಟಸ್ಥಗೊಳಿಸಿದ್ದಾರೆ. ಹಾಗೂ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇಸ್ರೇಲಿ ಸೇನೆ (IDF) ಹಂಚಿಕೊಂಡ ವೀಡಿಯೊ ತುಣುಕಿನಲ್ಲಿ, ಸೈನಿಕರು ಹಮಾಸ್ ಕಾರ್ಯಕರ್ತರನ್ನು ಬೆನ್ನಟ್ಟುವುದು ಮತ್ತು ಕೆಲವೇ ನಿಮಿಷಗಳಲ್ಲಿ ಅವರನ್ನು … Continued

‘ನಾನು ನನ್ನ ಕೈಯಿಂದಲೇ 10 ಯಹೂದಿಗಳನ್ನು ಕೊಂದಿದ್ದೇನೆ..: ಪೋಷಕರಿಗೆ ಫೋನ್ ನಲ್ಲಿ ಹೇಳಿಕೊಂಡ ಹಮಾಸ್ ಉಗ್ರನ ಆಡಿಯೊ ಹಂಚಿಕೊಂಡ ಇಸ್ರೇಲಿ ಸೇನೆ

ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) X ನಲ್ಲಿ ಬಿಡುಗಡೆ ಮಾಡಿದ ಫೋನ್ ರೆಕಾರ್ಡಿಂಗ್ ಆಡಿಯೊ ಕ್ಲಿಪ್‌ ಹಮಾಸ್ ಭಯೋತ್ಪಾದಕ ಮತ್ತು ಅವನ ಹೆತ್ತವರ ನಡುವಿನ ಆಘಾತಕಾರಿ ಸಂಭಾಷಣೆಯನ್ನು ಬಹಿರಂಗಪಡಿಸುತ್ತದೆ. ಆಡಿಯೊ ಕ್ಲಿಪ್‌ನಲ್ಲಿ ಹಮಾಸ್‌ ಉಗ್ರ ತಾನು 10 ಯಹೂದಿಗಳನ್ನು “ನನ್ನ ಕೈಯಿಂದಲೇ” ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಮತ್ತು ತಾನು ಹತ್ಯೆ ಮಾಡಿದವರ ಫೋಟೋಗಳನ್ನು ಕಳುಹಿಸುತ್ತೇನೆ ಎಂದು … Continued

ಉದ್ಧವ್‌ ಠಾಕ್ರೆ ಸ್ವಾರ್ಥ ಸಾಧನೆಗಾಗಿ ಹಮಾಸ್ ಜೊತೆಯೂ ಕೈಜೋಡಿಸಬಹುದು : ದಸರಾ ಸಮಾವೇಶದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಾಗ್ದಾಳಿ

ಮುಂಬೈ : ಉದ್ಧವ್ ಠಾಕ್ರೆ ಮತ್ತು ಅವರ ಶಿವಸೇನೆ ಬಣವು ತಮ್ಮ ಸ್ವಾರ್ಥ ಸಾಧಿಸಲು ಭಯೋತ್ಪಾದಕ ಗುಂಪುಗಳಾದ ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾ ಜೊತೆಯೂ ಕೈಜೋಡಿಸಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಆಜಾದ್ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ರ್ಯಾಲಿಯಲ್ಲಿ ಮಾತನಾಡಿದ ಶಿಂಧೆ, “ತಮ್ಮ ಸ್ವಾರ್ಥಕ್ಕಾಗಿ ಅವರು ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾದೊಂದಿಗೂ … Continued

ಒತ್ತೆಯಾಳುಗಳ ಬಗ್ಗೆ ಮಾಹಿತಿ ನೀಡಿದರೆ ಯೋಗ್ಯ ಬಹುಮಾನ, ಸೂಕ್ತ ರಕ್ಷಣೆ : ಕರಪತ್ರಗಳನ್ನು ಗಾಜಾದಲ್ಲಿ ಹಾಕಿದ ಇಸ್ರೇಲ್ ಸೇನೆ

ಗಾಜಾ: ಹಮಾಸ್‌ ಒತ್ತೆಯಾಳುಗಳಾಗಿ ಇರಿಸಿಕೊಂಡವರ ಬಗ್ಗೆ ಮಾಹಿತಿ ನೀಡಿ ಎಂದು ಇಸ್ರೇಲ್‌ನ ಸೇನೆಯು ಮಂಗಳವಾರ ಗಾಜಾದಲ್ಲಿ ಕರಪತ್ರಗಳನ್ನು ಹಾಕಿದೆ ಮತ್ತು ಹಾಗೆ ಮಾಹಿತಿ ನೀಡುವವರಿಗೆ ರಕ್ಷಣೆ ಮತ್ತು ಬಹುಮಾನ ನೀಡಲಾಗುವುದು ಎಂದು ಪ್ಯಾಲೆಸ್ಟೀನಿಯಾದವರಿಗೆ ತಿಳಿಸಿದೆ. ಅಕ್ಟೋಬರ್ 7ರಂದು 1,400 ಜನರನ್ನು ಕೊಂದ ಇಸ್ರೇಲ್‌ಗೆ ಗಡಿಯಾಚೆಗಿನ ದಾಳಿಯ ಸಮಯದಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್‌ 200 ಕ್ಕೂ … Continued

ವೀಡಿಯೊ | ‘ಪ್ರತಿ ಒತ್ತೆಯಾಳುವಿಗೆ 10000 ಅಮೆರಿಕನ್‌ ಡಾಲರ್‌ ಹಣ, ಅಪಾರ್ಟ್‌ಮೆಂಟಿನಲ್ಲಿ ಮನೆ ಕೊಡುವ ಭರವಸೆ’: ಮೇಲಧಿಕಾರಿಗಳು ನೀಡಿದ್ದ ಸೂಚನೆ ಬಹಿರಂಗಪಡಿಸಿದ ಹಮಾಸ್ ಉಗ್ರರು

ಇಸ್ರೇಲಿ ಅಧಿಕಾರಿಗಳು ಸೋಮವಾರ ಹಮಾಸ್ ಭಯೋತ್ಪಾದಕರು ವೀಡಿಯೊ ಮುಂದೆ ದಾಳಿ ಬಗ್ಗೆ ತಪ್ಪೊಪ್ಪಿಕೊಂಡ ವೀಡಿಯೊ ಬಿಡುಗಡೆ ಮಾಡಿದ್ದಾರೆ. ವೀಡಿಯೋದಲ್ಲಿ, ಹಮಾಸ್‌ ಉಗ್ರರು ಇಸ್ರೇಲ್‌ ನಾಗರಿಕರನ್ನು ಅಪಹರಿಸಿ ಗಾಜಾಕ್ಕೆ ಒತ್ತೆಯಾಳಾಗಿ ಒಯ್ದರೆ ತಮಗೆ ಹಮಾಸ್‌ ನಾಯಕರು ಭಾರೀ ಹಣ ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಇಸ್ರೇಲ್ ಸೆಕ್ಯುರಿಟೀಸ್ ಅಥಾರಿಟಿ(ISA)ಯು ಹಮಾಸ್ ಭಯೋತ್ಪಾದಕರು ವಿಚಾರಣೆಯ ಸಮಯದಲ್ಲಿ … Continued

ಹಮಾಸ್‌ ವಿರುದ್ಧ ಇಸ್ರೇಲ್‌ಗೆ “ಆತ್ಮ ರಕ್ಷಣೆಯ ಹಕ್ಕಿದೆ ” : ನಿಲುವು ಬದಲಿಸಿದ ಚೀನಾ

ಯುದ್ಧದ ಬಗೆಗಿನ ತನ್ನ ನಿಲುವಿನ ಬಗ್ಗೆ ಟೀಕೆಗೆ ಒಳಗಾದ ನಂತರ ಚೀನಾ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಹಮಾಸ್ ವಿರುದ್ಧ ಇಸ್ರೇಲ್ ಆತ್ಮರಕ್ಷಣೆಯ ಹಕ್ಕನ್ನು ಹೊಂದಿದೆ ಎಂದು ಚೀನಾ ಒಪ್ಪಿಕೊಂಡಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ವಾಷಿಂಗ್ಟನ್‌ಗೆ ಉನ್ನತ ಮಟ್ಟದ ಭೇಟಿಗಾಗಿ ತಯಾರಿ ನಡೆಸುತ್ತಿರುವಾಗ ಈ ಹೇಳಿಕೆ ಬಂದಿದೆ. “ಪ್ರತಿಯೊಂದು ದೇಶವೂ ಆತ್ಮರಕ್ಷಣೆಯ … Continued

ಇಸ್ರೇಲ್‌ನ ತೀಕ್ಷ್ಣ ಎಚ್ಚರಿಕೆ ನಡುವೆ ಇನ್ನಿಬ್ಬರು ಒತ್ತೆಯಾಳು ಬಿಡುಗಡೆ ಮಾಡಿದ ಹಮಾಸ್ ಗುಂಪು

ಇಸ್ರೇಲಿ ಒತ್ತೆಯಾಳುಗಳಲ್ಲಿ ಇಬ್ಬರು ಮಹಿಳೆಯರನ್ನು ಹಮಾಸ್ ಸೋಮವಾರ ಬಿಡುಗಡೆ ಮಾಡಿದೆ ಎಂದು ಗುಂಪು ಹೇಳಿದೆ. ಹಮಾಸ್‌ನ ಸಬ್ಬತ್ ದಾಳಿಯ ನಂತರ ಗಾಜಾದ ಮೇಲೆ ಇಸ್ರೇಲ್ ದಾಳಿಗಳಲ್ಲಿ 5,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಹೇಳಿದೆ. ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆಯ ನಂತರ “ಮಾನವೀಯ” ಕಾರಣಗಳಿಗಾಗಿ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ … Continued