ವಿವಿಧ ದೇಶಗಳಿಂದ 640 ಪುರಾತನ ಕಲಾಕೃತಿಗಳನ್ನು ಮರಳಿ ಭಾರತಕ್ಕೆ ತಂದ ಪುರಾತತ್ವ ಇಲಾಖೆ ; ಇವುಗಳಲ್ಲಿ ಅಮೆರಿಕದಿಂದಲೇ ಹೆಚ್ಚು

ನವದೆಹಲಿ: ವಿವಿಧ ಕಾರಣಗಳಿಂದ ವಿದೇಶಗಳಿಗೆ ಒಯ್ಯಲ್ಪಟ್ಟಿದ್ದ ಭಾರತದ 640 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತರಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಇಲಾಖೆ ಮಾಹಿತಿ ನೀಡಿದ್ದು, ವಿದೇಶಗಳಿಂದ ಮರಳಿ ತಂದಿರುವ ಕಲಾಕೃತಿಗಳ ಪೈಕಿ ಅತಿಹೆಚ್ಚು ಕಲಾಕೃತಿಗಳನ್ನು ಅಮೆರಿಕದಿಂದ ತರಲಾಗಿದೆ ಎಂದು ಅದು ತಿಳಿಸಿದೆ. ಕಳೆದ ಒಂದು … Continued

ಬಿಲ್‌ ಬಾಕಿ ; ಬಾಂಗ್ಲಾದೇಶಕ್ಕೆ ಅರ್ಧದಷ್ಟು ವಿದ್ಯುತ್ ಸರಬರಾಜು ನಿಲ್ಲಿಸಿದ ಅದಾನಿ ಪವರ್ ; ವಿದ್ಯುತ್‌ ಸಮಸ್ಯೆ ಉಲ್ಬಣ..

ನವದೆಹಲಿ: ಬಾಂಗ್ಲಾದೇಶದಲ್ಲಿ ತೀವ್ರವಾದ ವಿದ್ಯುತ್ ಸಮಸ್ಯೆಗೆ ಕಾರಣವಾಗಬಹುದಾದ ಪ್ರಮುಖ ಕ್ರಮದಲ್ಲಿ, ಬಿಲಿಯನೇರ್ ಅದಾನಿ ಪವರ್‌ ಕಂಪನಿಯು ಬಾಕಿ ಇರುವ ಬಿಲ್‌ಗಳ ಕಾರಣಕ್ಕೆ ಬಾಂಗ್ಲಾದೇಶಕ್ಕೆ ತನ್ನ ವಿದ್ಯುತ್ ಪೂರೈಕೆಯ 50 ಪ್ರತಿಶತವನ್ನು ಕಡಿತಗೊಳಿಸಿದೆ. ಮಾಧ್ಯಮ ವರದಿಯ ಪ್ರಕಾರ, ಬಾಂಗ್ಲಾದೇಶವು ಅದಾನಿ ಪವರ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್‌ಗೆ (ಎಪಿಜೆಎಲ್) $846 ಮಿಲಿಯನ್ ಬಾಕಿ … Continued

ನಿಜ್ಜರ್ ಹತ್ಯೆ ಪ್ರಕರಣ: ವಾಷಿಂಗ್ಟನ್ ಪೋಸ್ಟ್‌ಗೆ ಭಾರತದ ವಿರುದ್ಧ ಮಾಹಿತಿ ಸೋರಿಕೆ ಮಾಡಿದ್ದನ್ನು ಒಪ್ಪಿಕೊಂಡ ಕೆನಡಾದ ಅಧಿಕಾರಿ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ತನಿಖೆಯು ಕೆನಡಾದಲ್ಲಿನ “ಹತ್ಯೆಗಳು ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ಭಾರತೀಯ ಏಜೆಂಟ್‌ಗಳ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಿದೆ ಎಂದು ಕೆನಡಾದ ಪೊಲೀಸರು ಸಾರ್ವಜನಿಕವಾಗಿ ಆರೋಪಿಸುವ ಮುನ್ನವೇ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು ಭಾರತದ ವಿರುದ್ಧ ಗುಪ್ತಚರ ಮತ್ತು ಸೂಕ್ಷ್ಮ ಮಾಹಿತಿಯನ್ನು ವಾಷಿಂಗ್ಟನ್ ಪೋಸ್ಟ್‌ಗೆ ಸೋರಿಕೆ … Continued

ಸ್ವಪಕ್ಷದ ಸಂಸದರಿಂದಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆಗೆ ಒತ್ತಾಯ ; ಅಕ್ಟೋಬರ್ 28ರ ವರೆಗೆ ಗಡುವು

ಒಟ್ಟಾವಾ: ಸಿಬಿಸಿ ನ್ಯೂಸ್‌ನ ವರದಿಯ ಪ್ರಕಾರ, ಸಂಸತ್ತಿನ ಹಿಲ್‌ನಲ್ಲಿ ಸಭೆ ನಡೆಸಿದ್ದ ಲಿಬರಲ್ ಪಕ್ಷದ ಸಂಸದರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸಭೆಯ ಸಮಯದಲ್ಲಿ, ಭಿನ್ನಮತೀಯ ಸಂಸದರು ಟ್ರುಡೊಗೆ ತಮ್ಮ ಆಕ್ಷೇಪಗಳನ್ನು ತಿಳಿಸಿದ್ದಾರೆ. ಹಾಗೂ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇದು ಟ್ರುಡೊ ಪಕ್ಷದೊಳಗೆ ಅವರ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನವನ್ನು … Continued

ಗಾಲ್ವಾನ್ ಘರ್ಷಣೆಯ 4 ವರ್ಷಗಳ ನಂತರದ ಬ್ರಿಕ್ಸ್‌ನಲ್ಲಿ ಮೊದಲ ದ್ವಿಪಕ್ಷೀಯ ಸಭೆ ನಡೆಸಲಿರುವ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ

ನವದೆಹಲಿ: ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 2020 ರ ಗಾಲ್ವಾನ್ ಘರ್ಷಣೆಯ ನಂತರದ ಮೊದಲ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನೇಕ ಅಡಚಣೆಗಳನ್ನು ಎದುರಿಸುತ್ತಿರುವ ವಾಸ್ತವಿಕ ನಿಯಂತ್ರಣ ರೇಖೆ(LAC)ಯ ಉದ್ದಕ್ಕೂ ಗಸ್ತು … Continued

ವೀಡಿಯೊ…| ನಿಜ್ಜರ್‌ ಕೊಲೆಯಲ್ಲಿ ಭಾರತ ಭಾಗಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ; ಒಪ್ಪಿಕೊಂಡ ಕೆನಡಾ ಪ್ರಧಾನಿ ಟ್ರುಡೊ…!

ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದೆ ಎಂದು ಆರೋಪಿಸಿರುವುದಕ್ಕೆ ತಮ್ಮ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಒಪ್ಪಿಕೊಂಡಿದ್ದಾರೆ. ಕೆನಡಾದ ವಿದೇಶಿ ಹಸ್ತಕ್ಷೇಪ ವಿಚಾರಣೆಯ ಮೊದಲು ಸಾಕ್ಷ್ಯ ನೀಡಿದ ಟ್ರೂಡೊ, ನಿಜ್ಜರ್ ಹತ್ಯೆಯ ಆರೋಪಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೊದಲು ಕೆನಡಾದ ಏಜೆನ್ಸಿಗಳು … Continued

ʼಸಿಖ್‌ ಫಾರ್ ಜಸ್ಟಿಸ್ʼ ಸಂಘಟನೆ ಕೆನಡಾ ಪ್ರಧಾನಿ ಕಚೇರಿಯೊಂದಿಗೆ 3 ವರ್ಷಗಳಿಂದ ಸಂಪರ್ಕದಲ್ಲಿದೆ : ಒಪ್ಪಿಕೊಂಡ ಖಲಿಸ್ತಾನಿ ಭಯೋತ್ಪಾದಕ ಪನ್ನುನ್

ಖಲಿಸ್ತಾನಿ ಭಯೋತ್ಪಾದಕ ಗುರ್ಪತವಂತ್ ಸಿಂಗ್ ಪನ್ನುನ್, ತನ್ನ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ತನ್ನ ಸಹಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತದ ವಿರುದ್ಧ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ. ಕೆನಡಾದ ಬ್ರಾಡ್‌ಕಾಸ್ಟರ್ ಸಿಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಲಾಗಿದೆ. ಪನ್ನುನ್ ಅವರು … Continued

ಭಾರತದ ಸೇನೆಗೆ ಮತ್ತಷ್ಟು ಬಲ ; ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್‌ ಖರೀದಿಗೆ 32,000 ಕೋಟಿ ರೂ. ಐತಿಹಾಸಿಕ ಒಪ್ಪಂದಕ್ಕೆ ಸಹಿ

ನವದೆಹಲಿ: ದೇಶದ ಸಶಸ್ತ್ರ ಪಡೆಗಳಿಗೆ ದೊಡ್ಡ ಬಲ ನೀಡಲಿರುವ 31 MQ-9B ಪ್ರಿಡೇಟರ್ ಡ್ರೋನ್‌ಗಳ ಖರೀದಿಗೆ ಭಾರತವು ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್‌ಗಳ ಖರೀದಿಗೆ ಭಾರತ ಹಾಗೂ ಅಮೆರಿಕವು 32,000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. … Continued

ಪಾಕಿಸ್ತಾನದಲ್ಲಿ 5 ದಿನ ಲಾಕ್‌ಡೌನ್‌.. ಶಾಲಾ-ಕಾಲೇಜು ಬಂದ್‌; ಮದುವೆ-ಸಮಾರಂಭ ಬ್ಯಾನ್‌, ಭದ್ರತೆ ಸೇನೆ ನಿಯಂತ್ರಣಕ್ಕೆ

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯ ಭದ್ರತೆಗಾಗಿ ಸೇನೆಯನ್ನು ನಿಯೋಜಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 15 ಮತ್ತು 16 ರಂದು ಎಸ್‌ಸಿಒ ಶೃಂಗಸಭೆ ನಡೆಯಲಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ಪ್ರಧಾನಿ ಲಿ ಕಿಯಾಂಗ್ ಸೇರಿದಂತೆ ವಿಶ್ವದ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿಗರ … Continued

ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ ; 6 ಕೆನಡಾ ರಾಜತಾಂತ್ರಿಕರನ್ನು ಹೊರಹಾಕಿದ ಭಾರತ

ನವದೆಹಲಿ : ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಗದ್ದಲ ಸೋಮವಾರ ತಡರಾತ್ರಿ ಉಲ್ಬಣಗೊಂಡಿದ್ದು, ಭಾರತವು ಕೆನಡಾದಲ್ಲಿನ ತನ್ನ ಉನ್ನತ ರಾಯಭಾರಿಯನ್ನು ಹಿಂಪಡೆದಿದ್ದು, ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ತನಿಖೆಯಲ್ಲಿ ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಮತ್ತು ಇತರ ಕೆಲವು ರಾಜತಾಂತ್ರಿಕರನ್ನು ‘ಆಸಕ್ತಿಯ ವ್ಯಕ್ತಿಗಳು’ ಎಂದು … Continued