ಕೆನಡಾದಿಂದ ದೊಡ್ಡ ರಾಜತಾಂತ್ರಿಕ ವಿವಾದ ; ಕೆನಡಾದ ಭಾರತೀಯ ಹೈಕಮಿಷನರ್ ನನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಸರ್ಕಾರ

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಕೆನಡವು ಅಲ್ಲಿನ ಭಾರತದ ಹೈಕಮಿಷನರ್ ಮತ್ತು ಇತರ ಭಾರತೀಯ ರಾಜತಾಂತ್ರಿಕರನ್ನು ‘ಹಿತಾಸಕ್ತ ವ್ಯಕ್ತಿಗಳು’ ಎಂದು ತನಿಖೆಗೆ ಲಿಂಕ್ ಮಾಡಿದ ನಂತರ ಭಾರತವು ಕೆನಡಾದಲ್ಲಿನ ತನ್ನ ಹೈಕಮಿಷನರ್ ಅವರನ್ನು ಹಿಂಪಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಸಂಜೆ ಪ್ರಕಟಿಸಿದೆ. ಖ”ಅವರ ಭದ್ರತೆಯನ್ನು ಖಾತ್ರಿಪಡಿಸುವ ಪ್ರಸ್ತುತ … Continued

ಕ್ರಿಕೆಟ್‌ | ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ

ನವದೆಹಲಿ: ಅಕ್ಟೋಬರ್ 16 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾದ 15 ಸದಸ್ಯರ ತಂಡವನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ. ಏತನ್ಮಧ್ಯೆ, ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ T20I ಸರಣಿಯಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ವೇಗಿ ಮಯಾಂಕ್ ಯಾದವ್ ಅವರನ್ನು ಕಾಯ್ದಿಟ್ಟ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶ ಟೆಸ್ಟ್ ಸರಣಿಯ … Continued

ಬಾಂಗ್ಲಾದೇಶದ ಕಾಳಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಕಾಣಿಕೆ ನೀಡಿದ್ದ ಕಿರೀಟ ಕಳವು

ಢಾಕಾ : ಬಾಂಗ್ಲಾದೇಶದ ಸತ್ಖಿರಾದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಕೆ ನೀಡಿದ್ದ ಕಾಳಿ ದೇವಿಯ ಕಿರೀಟವನ್ನು ಕಳವು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಗುರುವಾರ ಮಧ್ಯಾಹ್ನ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ ತೆರಳಿದ ಸ್ವಲ್ಪ ಹೊತ್ತಿನಲ್ಲೇ ಬೆಳ್ಳಿ, ಚಿನ್ನ ಲೇಪಿತ ಕಿರೀಟದ ಕಳ್ಳತನವಾಗಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದ ದಿನಪತ್ರಿಕೆ ದಿ ಡೈಲಿ ಸ್ಟಾರ್ … Continued

ವೀಡಿಯೊ…| ಭಾರತವನ್ನು ಹೊಗಳಿ ಹೆಚ್ಚುವರಿ ಲಗೇಜ್‌ ಶುಲ್ಕ ವಿಧಿಸಿದ ಪಾಕಿಸ್ತಾನದ ಸರ್ಕಾರಿ ಏರ್‌ಲೈನ್ಸ್‌ ವಿರುದ್ಧ ಹರಿಹಾಯ್ದ ಝಾಕಿರ್ ನಾಯ್ಕ್

ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರು ತಮ್ಮ ಪಾಕಿಸ್ತಾನದ ಭೇಟಿಯ ಸಮಯದಲ್ಲಿ ಅವರು ಆ ದೇಶಕ್ಕೆ ಪ್ರಯಾಣಿಸುತ್ತಿದ್ದಾಗ ಹೆಚ್ಚುವರಿ ಸಾಮಾನು ಸರಂಜಾಮುಗಳ ಮೇಲೆ ವಿಧಿಸಿದ್ದ ಶುಲ್ಕ ಮನ್ನಾ ಮಾಡಲು ಪಾಕಿಸ್ತಾನದ ಸರ್ಕಾರಿ ಏರ್‌ಲೈನ್ಸ್‌ ನಿರಾಕರಿಸಿದ್ದಕ್ಕೆ ಗರಂ ಆಗಿದ್ದಾರೆ. ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ತನ್ನ ಹೆಚ್ಚುವರಿ ಸಾಮಾ-ಸರಂಜಾಮುಗಳಿಗೆ ವಿಧಿಸಿಲಾಗಿದ್ದ ಶುಲ್ಕದಲ್ಲಿ ಶೇಕಡಾ 50 ರಷ್ಟು … Continued

ಮಾಲ್ಡೀವ್ಸ್‌ ಗೆ ಭೇಟಿ | ಮುಯಿಝು ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ : ರುಪೇ ಕಾರ್ಡ್‌ ಬಿಡುಗಡೆಗೆ ಒಪ್ಪಿಗೆ, ಬೃಹತ್ ಕರೆನ್ಸಿ ಸ್ವಾಪ್ ಒಪ್ಪಂದ

ನವದೆಹಲಿ : ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ, ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್‌ ಅಧ್ಯಕ್ಷರಿಂದ ಆಹ್ವಾನವನ್ನು ಸ್ವೀಕರಿಸಿದ ನಂತರ ದ್ವೀಪಸಮೂಹ ರಾಷ್ಟ್ರಕ್ಕೆ ಭೇಟಿ ನೀಡುವ ಆಹ್ವಾನ … Continued

ವಿದೇಶೀ ವಿನಿಮಯ ಸಂಗ್ರಹ : 700 ಶತಕೋಟಿ ಡಾಲರ್ ದಾಟಿದ ವಿಶ್ವದ 4ನೇ ರಾಷ್ಟ್ರವಾದ ಭಾರತ…

ನವದೆಹಲಿ: ಇದೇ ಮೊದಲ ಬಾರಿಗೆ, ಭಾರತದ ವಿದೇಶಿ ವಿನಿಮಯ (forex) ಮೀಸಲು ಸಂಗ್ರಹ $700 ಬಿಲಿಯನ್ ಗಡಿಯನ್ನು ದಾಟಿದೆ. ಭಾರತದ ವಿದೇಶಿ ವಿನಿಮಯ ಮೀಸಲು ಸತತ ಏಳು ವಾರಗಳ ಗಮನಾರ್ಹ ಬೆಳವಣಿಗೆಯ ಸರಣಿಯನ್ನು ಮುಂದುವರೆಸಿದೆ. ಈ ಸಾಧನೆಯೊಂದಿಗೆ, ಭಾರತವು ಚೀನಾ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್‌ ನಂತರ ಈ ಮೈಲಿಗಲ್ಲು ದಾಟಿದ ವಿಶ್ವದ ನಾಲ್ಕನೇ ಆರ್ಥಿಕತೆಯಾಗಿ ಹೊರಹೊಮ್ಮಿದೆ. … Continued

ವಿವಾದಾತ್ಮಕ ಧಾರ್ಮಿಕ ಬೋಧಕ ಝಾಕಿರ್ ನಾಯ್ಕ್ ‘ಎಕ್ಸ್’ ಖಾತೆಗೆ ಭಾರತದಲ್ಲಿ ನಿರ್ಬಂಧ

ನವದೆಹಲಿ: ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್‌ ಅವರ ‘ಎಕ್ಸ್’ (ಹಿಂದೆ ಟ್ವಿಟರ್) ನಲ್ಲಿನ ಸಾಮಾಜಿಕ ಮಾಧ್ಯಮ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪ್ರಸ್ತುತ ಪಾಕಿಸ್ತಾನಕ್ಕೆ ಒಂದು ತಿಂಗಳ ಭೇಟಿಯಲ್ಲಿರುವ ಜಾಕಿರ್ ನಾಯ್ಕ್‌ ಅವರನ್ನು ಸ್ವಾಗತಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಟೀಕಿಸಿದ ನಂತರ ಈ ಕ್ರಮವನ್ನು ಅನುಸರಿಸಲಾಯಿತು. ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ … Continued

ಸುಷ್ಮಾ ಸ್ವರಾಜ್ ಭೇಟಿಯ 9 ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ವಿದೇಶಾಂಗ ಸಚಿವ ಜೈಶಂಕರ

ನವದೆಹಲಿ: ಎಸ್. ಜೈಶಂಕರ ಅವರು ಶಾಂಘೈ ಸಹಕಾರ ಸಂಘಟನೆ (SCO) ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಈ ತಿಂಗಳ ಕೊನೆಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ಒಂಬತ್ತು ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡುವ ಮೊದಲ ವಿದೇಶಾಂಗ ಸಚಿವರಾಗಿದ್ದಾರೆ. 2015ರಲ್ಲಿ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ … Continued

ವೀಡಿಯೊ…| ಯುದ್ಧ ನಡೆದು 25 ವರ್ಷಗಳ ನಂತರ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ ಸೇನೆ…!

ರಾವಲ್ಪಿಂಡಿ : 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆ ತಾನು ಭಾಗಿಯಾಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು, ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ 1965, 1971 ಮತ್ತು 1999 ರಲ್ಲಿ ಕಾರ್ಗಿಲ್‌ನಲ್ಲಿ ಯುದ್ಧಗಳನ್ನು ನಡೆಸುವಾಗಹಲವಾರು ಸೈನಿಕರು ಪ್ರಾಣ ತ್ಯಾಗ … Continued

ಪ್ಯಾರಾಲಿಂಪಿಕ್ಸ್: ಜಾವೆಲಿನ್ ಹೈಜಂಪ್‌ನಲ್ಲಿ ಚಿನ್ನ ಗೆದ್ದ ಪ್ರವೀಣಕುಮಾರ

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಒಂಬತ್ತನೇ ದಿನ ಪುರುಷರ ಹೈಜಂಪ್-ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣಕುಮಾರ ಚಿನ್ನದ ಪದಕ ಗೆದ್ದಿದ್ದಾರೆ. ಪ್ರವೀಣಕುಮಾರ ಚಿನ್ನದ ಪದಕ ಗೆದ್ದರೆ, ಅಮೆರಿಕದ ಡೆರೆಕ್ ಲೊಸಿಡೆಂಟ್ ಬೆಳ್ಳಿಯ ಪದಕ ಗೆದ್ದಿದ್ದಾರೆ. ಉಜ್ಬೇಕಿಸ್ತಾನ್‌ನ ತೈಮುರ್‌ಬೆಕ್ ಗಿಯಾಜೊವ್ ಮತ್ತು ಪೋಲೆಂಡ್‌ನ ಮಸಿಯೆಜ್ ಲೆಪಿಯಾಟೊ ಜಂಟಿಯಾಗಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.ಪ್ರವೀಣಕುಮಾರ ಅವರು 2.08 ಮೀಟರ್ ಎತ್ತರ ಜಿಗಿಯುವ … Continued