ಟೀಂ ಇಂಡಿಯಾ ಮುಖ್ಯ ಕೋಚ್‌ ಗೌತಮ ಗಂಭೀರಗೆ ‘ಐಸಿಸ್‌ ಕಾಶ್ಮೀರ’ದಿಂದ ಜೀವ ಬೆದರಿಕೆ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಮಾಜಿ ಸಂಸದ ಗೌತಮ ಗಂಭೀರ ಅವರಿಗೆ “ಐಸಿಸ್ ಕಾಶ್ಮೀರ”ದಿಂದ ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಬೆದರಿಕೆ ಬಂದ ನಂತರ ಗಂಭೀರ ಅವರು ಬುಧವಾರ ದೆಹಲಿ ಪೊಲೀಸರನ್ನು ಸಂಪರ್ಕಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಗಂಭೀರ ಅವರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಲು … Continued

ವೀಡಿಯೊ…| ವೈಮಾನಿಕ ದಾಳಿಯಲ್ಲಿ ಐಸಿಸ್‌ ಭಯೋತ್ಪಾದಕ ಗುಂಪಿನ ನಂ.2 ನಾಯಕನ್ನು ಕೊಂದು ಹಾಕಿದ ಅಮೆರಿಕ

ನವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದಲ್ಲಿ, ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ “ಅಬು ಖದೀಜಾ” ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ (ISIS)ನ ನಂ.2 ನಾಯಕನಾದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿಯನ್ನು ಕೊಂದಿರುವುದಾಗಿ ಅಮೆರಿಕ ಘೋಷಿಸಿದೆ. ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ … Continued

ವೀಡಿಯೊ..|ನ್ಯೂ ಓರ್ಲಿಯನ್ಸ್‌ನಲ್ಲಿ ಜನಸಂದಣಿ ಮೇಲೆ ವಾಹನ ನುಗ್ಗಿಸಿದ ಶಂಕಿತ ಉಗ್ರ ; 15 ಮಂದಿ ಸಾವು, 35 ಜನರಿಗೆ ಗಾಯ : ನಿವೃತ್ತ ಯೋಧನೇ ಶಂಕಿತ ಉಗ್ರ..!

ಅಮೆರಿಕದ ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸುತ್ತಿದ್ದ ಜನಸಂದಣಿಯ ಮೇಲೆ ಟ್ರಕ್ ನುಗ್ಗಿಸಿ ವಿಧ್ವಂಸಕ ಕೃತ್ಯ ಎಸಗಿದ ಘಟನೆಯಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ. ಇದಕ್ಕೆ ಕಾರಣನಾದ ಶಂಕಿತನನ್ನು ಗುರುತಿಸಲಾಗಿದ್ದು, ಈತ ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದ ಅಮೆರಿಕದ ಮಾಜಿ ಸೈನಿಕ ಎನ್ನಲಾಗಿದೆ. ಅಲ್ಲದೆ, ಆತ ಓಡಿಸಿಕೊಂಡು … Continued

ಬಶರ್ ಅಲ್-ಅಸ್ಸಾದ್ ರಷ್ಯಾಕ್ಕೆ ಪಲಾಯನ ; ಸಿರಿಯಾದಲ್ಲಿ ಐಸಿಸ್ ಶಿಬಿರಗಳ ಮೇಲೆ ಅಮೆರಿಕ ವಾಯುದಾಳಿ

ಬಂಡುಕೋರರು ರಾಜಧಾನಿ ದಮಾಸ್ಕಸ್ ಅನ್ನು ವಶಪಡಿಸಿಕೊಂಡ ಬೆನ್ನಲ್ಲೇ 13 ವರ್ಷಗಳ ಅಂತರ್ಯುದ್ಧ ಮತ್ತು ಆರು ದಶಕಗಳ ಅಸ್ಸಾದ್‌ ಕುಟುಂಬದ ನಿರಂಕುಶ ಆಡಳಿತ ಕೊನೆಗೊಂಡಿತು. ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ರಷ್ಯಾಕ್ಕೆ ಪಲಾಯನ ಮಾಡಿದ ಕೆಲವೇ ಗಂಟೆಗಳ ನಂತರ, ಅಮೆರಿಕ ಸಿರಿಯಾದೊಳಗಿನ ಐಸಿಸ್ ಘಟಕಗಳ ಮೇಲೆ ದಾಳಿ ನಡೆಸಿದೆ. ಐಸಿಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ … Continued

ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರ ಬಂಧನ

ಅಹಮದಾಬಾದ್ : ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಕೆಲವು ದಿನಗಳ ನಂತರ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ಅದೇ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಭಯೋತ್ಪಾದಕರು ಶ್ರೀಲಂಕಾದ ನಾಗರಿಕರು ಎಂದು ನಂಬಲಾಗಿದೆ. ಈ ನಾಲ್ವರು ತಮ್ಮ ಹ್ಯಾಂಡ್ಲರ್‌ಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಹ್ಯಾಂಡ್ಲರ್ ಈ ನಾಲ್ವರು … Continued

ಐಸಿಸ್‌ ಗೆ ನಿಷ್ಠೆ ತೋರಿದ ಗುವಾಹತಿ ಐಐಟಿ ವಿದ್ಯಾರ್ಥಿ ಬಂಧನ

ಗುವಾಹತಿ : ಐಎಸ್‌ಐಎಸ್‌ಗೆ ನಿಷ್ಠೆ ವ್ಯಕ್ತಪಡಿಸಿ ಉಗ್ರಗಾಮಿ ಸಂಘಟನೆಗೆ ಸೇರಲು ಹೊರಟಿದ್ದ ಐಐಟಿ-ಗುವಾಹತಿ ವಿದ್ಯಾರ್ಥಿಯನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಯುಎಪಿಎ (UAPA) ಅಡಿಯಲ್ಲಿ ಬಂಧಿಸಲಾಗಿದೆ. ಬಯೋಸೈನ್ಸ್‌ನ 4ನೇ ವರ್ಷದ ವಿದ್ಯಾರ್ಥಿಯಾಗಿರುವ ಆರೋಪಿ ತೌಸೀಫ್ ಅಲಿ ಫಾರೂಕಿಯನ್ನು ಶನಿವಾರ ಬಂಧಿಸಲಾಗಿದೆ. ಫಾರೂಕಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತ್ತು ಇಮೇಲ್‌ಗಳ ಮೂಲಕ ಭಯೋತ್ಪಾದಕ ಸಂಘಟನೆಗೆ ಸೇರುವ … Continued

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ : ಬಾಂಬ್‌ ಇಟ್ಟಿದ್ದ ಪ್ರಮುಖ ಆರೋಪಿಯ ಗುರುತು ಪತ್ತೆ ಮಾಡಿದ ಎನ್‌ ಐ ಎ ; ಈತ ಯಾರು? ಹಿನ್ನೆಲೆ ಏನು ?

ಬೆಂಗಳೂರು : ಪ್ರಮುಖ ಬೆಳವಣಿಗೆಯಲ್ಲಿ, ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪಿಗಳ ಛಾಯಾಚಿತ್ರಗಳು ಮುನ್ನೆಲೆಗೆ ಬಂದಿವೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ಇವರಿಬ್ಬರೂ ಶಿವಮೊಗ್ಗದ ಐಸಿಸ್ ಘಟಕದೊಂದಿಗೆ ಸಂಬಂಧ ಹೊಂದಿದ್ದು, ಈ ಹಿಂದೆಯೂ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆ. ಪ್ರಮುಖ ಆರೋಪಿಯನ್ನು ಶಿವಮೊಗ್ಗದ ತೀರ್ಥಹಳ್ಳಿ ನಿವಾಸಿ ಮುಸಾವಿರ್ ಹುಸೇನ್ ಶಾಜಿಬ್ ಎಂದು ಗುರುತಿಸಲಾಗಿದ್ದು, … Continued

ಮಾಸ್ಕೋದಲ್ಲಿ ಭಯೋತ್ಪಾದಕರ ಅಟ್ಟಹಾಸ ; ಸಂಗೀತ ಕಛೇರಿ ಸಭಾಂಗಣದಲ್ಲಿ ದಾಳಿ : 60 ಜನರು ಸಾವು, 145 ಜನರಿಗೆ ಗಾಯ

ಮಾಸ್ಕೊ: ಉಗ್ರರ ದಾಳಿಗೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ರಕ್ತದ ಕೋಡಿ ಹರಿದಿದೆ. ಮಾಸ್ಕೋದ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್‌ಗೆ (Crocus City Hall) ನುಗ್ಗಿದ ಶಸ್ತ್ರಸಜ್ಜಿತ ಉಗ್ರರು ನಡೆಸಿದ ಗುಂಡಿನ ದಾಳಿಯಿಂದ 60 ಜನ ಮೃತಪಟ್ಟಿದ್ದಾರೆ ಹಾಗೂ 145 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ಹೇಳಿದೆ. ಐದು ಮಕ್ಕಳು ಸೇರಿದಂತೆ 115 … Continued

ಭಾರತದ ಐಸಿಸ್ ಮುಖ್ಯಸ್ಥ, ಆತನ ಸಹಚರ ಅಸ್ಸಾಂನಲ್ಲಿ ಬಂಧನ

ಗುವಾಹತಿ : ಐಸಿಸ್ ನ ಭಾರತದ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಮತ್ತು ಆತನ ಸಹಚರ ಅನುರಾಗ್ ಸಿಂಗ್ ಬಾಂಗ್ಲಾದೇಶದಿಂದ ಬುಧವಾರ ಭಾರತದ ಗಡಿ ದಾಟಿದ ಕೂಡಲೇ ಅಸ್ಸಾಂನ ಧುಬ್ರಿಯಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ಇವರಿಬ್ಬರು ಬಾಂಗ್ಲಾದೇಶದಿಂದ ಅಸ್ಸಾಂಗೆ ಬರಲು ಗಡಿ ದಾಟಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಈ ಕುರಿತು ಹೇಳಿಕೆ … Continued