ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಜೊತೆ ವಿಚ್ಛೇದನದ ವದಂತಿಗಳ ನಡುವೆಯೇ ಪಾಕಿಸ್ತಾನಿ ನಟಿಯನ್ನು ವಿವಾಹವಾದ ಶೋಯೆಬ್ ಮಲಿಕ್..!

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಜೊತೆ ವಿಚ್ಛೇದನದ ವದಂತಿಗಳ ಮಧ್ಯೆಯೇ ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಜನಪ್ರಿಯ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಶನಿವಾರ, ಜನವರಿ 20 ರಂದು ನಡೆದ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶೋಯೆಬ್ ಮಲಿಕ್ ಮತ್ತು … Continued

ವಧುವಿನ ಕಡೆಯವರು ನೀಡಿದ ಊಟದಲ್ಲಿ ಮಟನ್‌ ಇಲ್ಲವೆಂದು ಮದುವೆಯನ್ನೇ ಮುರಿದುಕೊಂಡ ವರನ ಕುಟುಂಬ…!

ಹೈದರಾಬಾದ್: ತೆಲಂಗಾಣದಲ್ಲಿ ವಧುವಿನ ಸಂಬಂಧಿಕರು ನೀಡುವ ಊಟದ ಮೆನುವಿನಲ್ಲಿ ಮಟನ್ ತಿನಿಸನ್ನು ಸೇರಿಸದೇ ಇದ್ದುದಕ್ಕಾಗಿ ವರನ ಕುಟುಂಬದವರು ಕೋಪಗೊಂಡು ಮದುವೆಯನ್ನೇ ರದ್ದುಪಡಿಸಿದ ಘಟನೆ ನಡೆದಿರುವುದು ವರದಿಯಾಗಿದೆ…! ವಧು ನಿಜಾಮಾಬಾದ್ ನಿವಾಸಿಯಾಗಿದ್ದು, ವರ ಜಗತಿಯಾಲ್ ಮೂಲದವರು. ಇವರಿಬ್ಬರ ನಿಶ್ಚಿತಾರ್ಥ ವಧುವಿನ ನಿವಾಸದಲ್ಲಿ ನಡೆದಿತ್ತು. ಆದರೆ ಮೆನುವಿನಲ್ಲಿ ಮಟನ್‌ ಇಲ್ಲದ ಕಾರಣ ಅದರ ಬಗ್ಗೆ ವಾಗ್ವಾದ ನಡೆದು ನಂತರ … Continued

ಮದುವೆಗೆ ಒಪ್ಪದ ಶಾಲಾ ಶಿಕ್ಷಕಿಯ ಅಪಹರಣ….

ಹಾಸನ: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು, ಗುರುವಾರ ಬೆಳಗ್ಗೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಅರ್ಪಿತಾ ಎಂಬವರನ್ನು ಶಾಲೆ ಮುಂಭಾಗದಿಂದಲೇ ಅಪಹರಿಸಲಾಗಿದೆ. ಶಿಕ್ಷಕಿ ಅರ್ಪಿತಾ ಗುರುವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದಾಗ, ಆಕೆಯ ಸಂಬಂಧಿ ರಾಮು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಶಿಕ್ಷಕಿಯ … Continued

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪೂಜಾ ಗಾಂಧಿ

ಬೆಂಗಳೂರು: ಕನ್ನಡ ಚಿತ್ರರಂಗದ ಮುಂಗಾರ ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಅವರು ಬುಧವಾರ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಂತೆ ತಮ್ಮ ಬಹುದಿನದ ಗೆಳೆಯ ವಿಜಯ ಘೋರ್ಪಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಯಲಹಂಕ ಸಮೀಪ ಇರುವ ಆರಂಭ ರೆಸ್ಟೋರೆಂಟ್‌ನಲ್ಲಿ ಪೂಜಾ- ವಿಜಯ ಅವರ ಮದುವೆ ನೆರವೇರಿದೆ. ಕಳೆದ 10 ವರ್ಷಗಳಿಂದ ವಿಜಯ್ … Continued

ಪ್ರೀತಿ ಸಾಯುವುದಿಲ್ಲ…?! : ಸಿನಿಮಾ ಕತೆಯಂತೆ ವಿಚ್ಛೇದನ ಪಡೆದು 5 ವರ್ಷಗಳ ನಂತರ ಮತ್ತೆ ಮದುವೆಯಾದ ದಂಪತಿ ; ಕಾರಣ ಇಲ್ಲಿದೆ

ಗಾಜಿಯಾಬಾದ್‌ : 2018 ರಲ್ಲಿ ವಿಚ್ಛೇದನ ಪಡೆದಿದ್ದ ಗಾಜಿಯಾಬಾದ್‌ನ ಕೌಶಂಬಿ ದಂಪತಿ ಇತ್ತೀಚೆಗೆ ಮತ್ತೆ ವಿವಾಹವಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮತ್ತೆ ಒಂದಾಗಿದ್ದಾರೆ. .ವಿನಯ ಜೈಸ್ವಾಲ್ ಮತ್ತು ಪೂಜಾ ಚೌಧರಿ 2012 ರಲ್ಲಿ ವಿವಾಹವಾದರು ಆದರೆ ಮದುವೆಯಾದ ಒಂದು ವರ್ಷದಲ್ಲಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. … Continued

ನಾಳೆ ನಟಿ ಪೂಜಾ ಗಾಂಧಿ ಮದುವೆ

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ತಾನು ಪ್ರೀತಿಸಿದ ಯುವಕನ ಜೊತೆಗೆ ಹಸೆಮಣೆ ಏರಲು ಮುಂದಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನವೆಂಬರ್ 29ರಂದು ಬುಧವಾರ ಸಂಜೆ ತಾನು ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ವಿಜಯ ಘೋರ್ಪಡೆ ಅವರ ಜೊತೆ ಮದುವೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನನ್ನ ಮದುವೆಗೆ ಕುಟುಂಬ ಸಮೇತರಾಗಿ … Continued

ವೀಡಿಯೊ…| ಮೈದುನನ ಮದುವೆಯಾಗಲು ಅತ್ತಿಗೆಯಂದಿರ ಹೊಡೆದಾಟ : ಹಲವರಿಗೆ ಗಾಯ

ಬಿಹಾರದ ಹಿಲ್ಸಾ ಜಿಲ್ಲೆಯಲ್ಲಿ ಮೈದುನನ್ನು ಮದುವೆಯಾಗಲು ಇಬ್ಬರು ಅತ್ತಿಗೆಯಂದಿರು ಜಗಳ ಮಾಡಿಕೊಂಡ ವಿಚಿತ್ರ ಹಾಗೂ ಅಸಾಮಾನ್ಯ ಘಟನೆ ಇತ್ತೀಚಿಗೆ ನಡೆದಿರುವುದು ವರದಿಯಾಗಿದೆ. ಈ ಪರಿಸ್ಥಿತಿ ವೇಳೆ ಪರಿಸ್ಥಿತಿ ಉಲ್ಬಣಗೊಂಡಿದ್ದು, ಇಬ್ಬರು ಮಹಿಳೆಯರ ತವರು ಮನೆಯ ಕುಟುಂಬದ ಸದಸ್ಯರು ಕೂಡ ಜಗಳದಲ್ಲಿ ಸೇರಿಕೊಂಡು ಪರಸ್ಪರ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ನೋಡುಗರು ಈ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ, ಅದು ತಕ್ಷಣವೇ … Continued

ತಾಳಿ ಕಟ್ಟುವಾಗ ಮದುವೆ ನಿರಾಕರಿಸಿದ ಯುವತಿ

ತುಮಕೂರು : ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಭಾನುವಾರ ತಾಳಿ ಕಟ್ಟುವ ಸಮಯದಲ್ಲಿ ವಧುವು ಮದುವೆ ನಿರಾಕರಿಸಿ, ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಹೇಳಿ ಹಸಮಣೆಯಿಂದ ಎದ್ದು ಹೋದ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಯುವಕ ಮತ್ತು ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಯುವತಿ ಮದುವೆ ಭಾನುವಾರ ಕೋಳಾಲ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. … Continued

ತಾಳಿ ಕಟ್ಟುವ ವೇಳೆ ಮದುವೆ ಬೇಡವೆಂದು ಹೈಡ್ರಾಮಾ ಮಾಡಿದ ವಧು…!

ಮೈಸೂರು: ಮದುವೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ವಧು ತನಗೆ ಮದುವೆ ಬೇಡ ಎಂದು ಹೈಡ್ರಾಮಾ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಇಲ್ಲಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ವಧು ತಾಳಿ ಕಟ್ಟುವ ಸಮಯದಲ್ಲಿ ತಲೆ ಸುತ್ತಿ ಬಿದ್ದು ಹೈಡ್ರಾಮಾ ನಡೆಸಿದ್ದಾಳೆ. ಮೈಸೂರಿನ ಸುಣ್ಣದಕೇರಿ ಯುವತಿಯ ಮದುವೆ, ಎಚ್.ಡಿ … Continued

ಸಂಜನಾ ಗಣೇಶನ್ -ಭಾರತದ ವೇಗಿ ಬುಮ್ರಾ ಮದುವೆ

ಕ್ರಿಕೆಟಿಗ ಬುಮ್ರಾ ನವ ದೆಹಲಿ: ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ, ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಗೋವಾದಲ್ಲಿ ಮದುವೆಯಾಗಿದ್ದಾರೆ. ವಿವಾಹ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬುಮ್ರಾ ತಮ್ಮ ಮದುವೆ ಪೋಟೋಗಳನ್ನು ಹಂಚಿಕೊಂಡಿದ್ದಾರೆ. 27 ವರ್ಷದ ಬುಮ್ರಾ, ‘ಪ್ರೀತಿಯ ಜತೆಗೆ ನಾವಿಬ್ಬರು ಜತೆಯಾಗಿ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ. ಇಂದು ನಮ್ಮ ಬದುಕಿನ ಅತ್ಯಂತ ಸಂತೋಷದ … Continued