ವೈದ್ಯೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಸಿನೆಮಾ ನಟ ಡಾಲಿ ಧನಂಜಯ

ಮೈಸೂರು : ಕನ್ನಡ ಸಿನೆಮಾ ನಟ ಡಾಲಿ ಧನಂಜಯ ಮತ್ತು ವೈದ್ಯೆ​ ಧನ್ಯತಾ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಭಾನುವಾರ ಬೆಳಿಗ್ಗೆ 9:10 ರಿಂದ 10:10ರ ವರೆಗಿನ, ಸಂಕಷ್ಟ ಚತುರ್ದರ್ಶಿಯ ಶುಭ ಲಗ್ನದಲ್ಲಿ ಅವರು ವಿವಾಹವಾಗಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಡಾಲಿ ಧನಂಜಯ ಹಾಗೂ ಧನ್ಯತಾ ಇಬ್ಬರು ದಾಂಪತ್ಯ ಜೀವನಕ್ಕೆ … Continued

ವೀಡಿಯೊ…| ಮದುವೆ ಮೆರವಣಿಗೆ ವೇಳೆ ಕುದುರೆ ಮೇಲೆ ಬರುತ್ತಿದ್ದ ಮದುಮಗ ಹೃದಯಾಘಾತದಿಂದ ಸಾವು

ಭೋಪಾಲ್: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ 27 ವರ್ಷದ ಮದುಮಗ ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಮೇಲೆ ಬರುತ್ತಿರುವಾಗಲೇ ಅಲ್ಲಿಯೇ ಕುಸಿದು ಮೃತಪಟ್ಟಿದ್ದಾನೆ. ಶುಕ್ರವಾರ ರಾತ್ರಿ ಪ್ರದೀಪ ಜಾಟ್ ಎಂಬ ಮದುಮಗ ಜಾಟ್ ಹಾಸ್ಟೆಲಿನಲ್ಲಿ ಆಯೋಜಿಸಿದ್ದ ಮದುವೆಯ ಸ್ಥಳಕ್ಕೆ ಕುದುರೆ ಮೇಲೆ ಮೆರವಣಿಗೆಯಲ್ಲಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಮದುವೆಯ ಸ್ಥಳಕ್ಕೆ ಕುದುರೆ ಸವಾರಿ ಮಾಡುವ ಮೊದಲು … Continued

ವೀಡಿಯೊಗಳು…| ಮದುವೆ ಮಂಟಪಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಚಿರತೆ ; ಅರಣ್ಯ ಸಿಬ್ಬಂದಿ ಮೇಲೆ ದಾಳಿ-ಗಾಯ

ಮದುವೆ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಲಕ್ನೋದ ಪಾರಾ ಪ್ರದೇಶದಲ್ಲಿ ನಡೆದಿದೆ. ಲಕ್ನೋ ನಗರದ ಬುದ್ಧೇಶ್ವರ ರಿಂಗ್ ರಸ್ತೆಯ ಎಂಎಂ ಲಾನ್‌ನಲ್ಲಿ ಬುಧವಾರ ರಾತ್ರಿ 11: 40 ರ ಸುಮಾರಿಗೆ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಮದುವೆಗೆ ಬಂದ ನೂರಾರು ಅತಿಥಿಗಳು ಗಾಬರಿಗೊಂಡು ಪಾರಾಗಲು ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಚಿರತೆ ದಾಳಿಯಿಂದ … Continued

ಸರಳವಾಗಿ ನಡೆದ ಬಿಲಿಯನೇರ್‌ ಗೌತಮ ಅದಾನಿ ಪುತ್ರನ ವಿವಾಹ ; ಸಾಮಾಜಿಕ ಕಾರ್ಯಗಳಿಗೆ 10,000 ಕೋಟಿ ರೂ. ದೇಣಿಗೆ

ನವದೆಹಲಿ:ಕಳೆದ ತಿಂಗಳು ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ ಅದಾನಿ ತಮ್ಮ ಮಗನ ವಿವಾಹವನ್ನು “ಸರಳ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ” ನಡೆಸಲಾಗುವುದು ಎಂದು ಹೇಳಿದ್ದರು. ಅವರ ಮಾತಿಗೆ ಬದ್ಧರಾಗಿ, ಅವರ ಮಗ ಜೀತ್ ಅದಾನಿ ಅವರ ವಿವಾಹವನ್ನು ಬಿಲಿಯನೇರ್‌ ಉದ್ಯಮಿ ಮದುವೆಯನ್ನು ಸರಳವಾಗಿ ನಡೆಸಿದ್ದಲ್ಲದೆ, ವಿವಿಧ ಸಾಮಾಜಿಕ ಕಾರ್ಯಗಳಿಗಗಾಗಿ 10,000 … Continued

ವೀಡಿಯೊ…| ಮದುವೆಯ ಮೆರವಣಿಗೆಗೆ ತಂದಿದ್ದ ಕುದುರೆಯ ಒದೆತಕ್ಕೆ ಸ್ಥಳದಲ್ಲೇ ಮೃತಪಟ್ಟ ಮಗು…!

ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದುವೆಯ ಸಂಭ್ರಮಾಚರಣೆ ವೇಳೆ ಅಪ್ರಾಪ್ತ ಮಗುವೊಂದು ಕುದುರೆ ಒದೆತದಿಂದ ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಆಘಾತಕಾರಿ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಟವಾಡುತ್ತ ಕುದುರೆಯ ಹಿಂಬದಿಗೆ ಬಂದ ಮಗುವಿಗೆ ಕುದುರೆ ಬಲವಾಗಿ ಒದ್ದಿದೆ, ಒದ್ದ ರಭಸಕ್ಕೆ ಸ್ಥಳದಲ್ಲೇ ಮಗುವಿನ ಪ್ರಾಣ … Continued

ತನ್ನ ಮದುವೆಯಲ್ಲಿ ತಾನೇ ಪುರೋಹಿತನಾಗಿ ವೇದಮಂತ್ರ ಹೇಳಿ ವಿವಾಹದ ವಿಧಿವಿಧಾನ ನೆರವೇರಿಸಿದ ಮದುಮಗ..! ವೀಡಿಯೊ ವೈರಲ್‌

ಹರಿದ್ವಾರದ ಕುಂಜಾ ಬಹದ್ದೂರಪುರದಲ್ಲಿ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ಸಹರಾನಪುರದ ರಾಂಪುರ ಮಣಿಹರನ್‌ ಪ್ರದೇಶದ ಮದುಮಗ ತನ್ನದೇ ವಿವಾಹದಲ್ಲಿ ವಿಧಿವಿಧಾನ ನೆರವೇರಿಸುವಾಗ ವೈದಿಕ ಮಂತ್ರಗಳನ್ನು ತಾನೇ ಪಠಿಸಿದ್ದು ಅತಿಥಿಗಳನ್ನು ವಿಸ್ಮಯಗೊಳಿಸಿದೆ. ಈ ವಿಶಿಷ್ಟ ಮತ್ತು ಸ್ಮರಣೀಯ ಕಾರ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಂಪುರ ಮಣಿಹರನ್‌ನ ವಿವೇಕಕುಮಾರ ಎಂಭವರ ಮದುವೆಯ ಮೆರವಣಿಗೆ ಹರಿದ್ವಾರವನ್ನು ತಲುಪಿದ ನಂತರ ವರನಾದ … Continued

ಸೈಫ್‌ ಅಲಿ ಖಾನ್‌ ಇರಿತ ಪ್ರಕರಣ : ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸಲ್ಪಟ್ಟ ವ್ಯಕ್ತಿಯ ಕೆಲಸ ಹೋಯ್ತು, ಮದುವೆಯೇ ಮುರಿದುಬಿತ್ತು….!

ಮುಂಬೈ : ಜನವರಿ 16ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚಾಕು ಇರಿತದ ಪ್ರಕರಣದಲ್ಲಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸ್ಪಟ್ಟ ವ್ಯಕ್ತಿಯ ಜೀವನವೇ ಈಗ ಬರ್ಬಾದ್‌ ಆಗಿದೆ. ಪೊಲೀಸರು ತಪ್ಪಾಗಿ ಆತನನ್ನು ಬಂಧಿಸಿದ್ದರಿಂದ ಆತನ ಕೆಲಸವೂ ಹೋಗಿದೆ, ಜೊತೆಗೆ ಆತನ ಮದುವೆ ನಿಶ್ಚಿತಾರ್ಥವೂ ಮುರಿದುಬಿದ್ದಿದೆ ಎಂದು ವರದಿಯಾಗಿದೆ. … Continued

ಎರಡನೇ ಮದುವೆಗಾಗಿ ಗಂಡು ಮಗು ಮಾರಾಟ ಪ್ರಕರಣ ಬೆಳಕಿಗೆ : ನಾಲ್ವರ ಬಂಧನ

ಬೆಳಗಾವಿ : ಮಹತ್ವದ ಕಾರ್ಯಾಚರಣೆ ನಡೆಸಿದ ಹುಕ್ಕೇರಿ ಪೊಲೀಸರು ಎರಡನೇ ಮದುವೆಗಾಗಿ ಏಳು ವರ್ಷದ ಗಂಡು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹುಕ್ಕೇರಿ ತಾಲೂಕು ಸುಲ್ತಾನಪುರ ಗ್ರಾಮದ ಲಕ್ಷ್ಮೀ ಗೋಲಬಾವಿ, ಸದಾಶಿವ ಮಗದುಮ್ಮ, ಹಳಿಯಾಳ ತಾಲೂಕಿನ ಕೆಸರೊಳ್ಳಿಯ … Continued

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ ಚೋಪ್ರಾ

ನವದೆಹಲಿ: ಜಾವೆಲಿನ್‌ ಎಸೆತದಲ್ಲಿ ಡಬಲ್-ಒಲಿಂಪಿಕ್ ಪದಕ ವಿಜೇತ ಭಾರತದ ನೀರಜ್ ಚೋಪ್ರಾ ಖಾಸಗಿ ಸಮಾರಂಭದಲ್ಲಿ ಹಿಮಾನಿ ಅವರನ್ನು ವಿವಾಹವಾಗಿದ್ದಾರೆ. ಸ್ಟಾರ್ ಅಥ್ಲೀಟ್ ಮದುವೆಯಾದ ವಿಷಯವನ್ನು ಸ್ವತಃ ಸಾಮಾಜಿ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನೀರಜ್ ಮತ್ತು ಅವರ ಕುಟುಂಬ ಮದುವೆಯನ್ನು ಖಾಸಗಿಯಾಗಿ ಇರಿಸಿತ್ತು. ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್ 2020 ರ ಸಂದರ್ಭದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ … Continued

ವೀಡಿಯೊ…| ಬೆಂಗಳೂರು : ಕಂಠಪೂರ್ತಿ ಕುಡಿದು ಬಂದು ಮದುಮಗನ ರಂಪಾಟ ; ಮದುವೆಯನ್ನೇ ರದ್ದು ಮಾಡಿದ ವಧುವಿನ ತಾಯಿ…!

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ವಿವಾಹವೊಂದು ದಿಢೀರ್ ಸ್ಥಗಿತವಾದ ಘಟನೆ ವರದಿಯಾಗಿದ್ದು, ಅಚ್ಚರಿ ಎಂದರೆ ತಾಳಿಕಟ್ಟುವ ಕೆಲವೇ ಹೊತ್ತಿನ ಮೊದಲು ವಧು ಹಾಗೂ ವಧುವಿನ ತಾಯಿ ಮದುವೆಯನ್ನು ರದ್ದುಗೊಳಿಸಿದ್ದಾರೆ…! ಮದುವೆ ಸಮಾರಂಭದಲ್ಲಿ ವರ ಕುಡಿದು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮದುವೆಯಲ್ಲಿ ರಂಪಾಟ ಮಾಡಿದ್ದಾನೆ. ಮದುವೆ ವಿಧಿವಿಧಾನಗಳು ನಡೆಯುತ್ತಿದ್ದಾಗ ವರನ ಕಡೆಯವರು ಅನುಚಿತವಾಗಿ ವರ್ತಿಸಿ ಆರತಿ ತಾಳಿ … Continued