ʼಕ್ಯಾಶ್ ಆನ್ ಡೆಲಿವರಿʼ ಮಾಡುವುದಾಗಿ ಆನ್ಲೈನ್‌ ನಲ್ಲಿ ಐಫೋನ್ ಆರ್ಡರ್ ; ಹಣ ಕೊಡಬೇಕಲ್ಲ ಎಂದು ಡೆಲಿವರಿ ಏಜೆಂಟನನ್ನು ಕೊಂದೇಬಿಟ್ಟರು…!

ಲಕ್ನೋ: ಆನ್ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ₹ 1.5 ಲಕ್ಷ ಬೆಲೆಬಾಳುವ ಐ ಫೋನ್‌ ಅನ್ನು ತಲುಪಿಸಲು ಹೋದ 30 ವರ್ಷದ ವ್ಯಕ್ತಿ ಡೆಲಿವರಿ ಏಜೆಂಟ್‌ ನನ್ನು ಇಬ್ಬರು ಸೇರಿ ಕೊಂದಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಡೆಲಿವರಿ ಏಜೆಂಟನ ಮೃತದೇಹವನ್ನು ಇಂದಿರಾ ಕಾಲುವೆಗೆ ಎಸೆಯಲಾಗಿದ್ದು, ಅದನ್ನು ಪತ್ತೆ … Continued

ಕಾರವಾರ : ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಉದ್ಯಮಿಯ ಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣದಲ್ಲಿ ಉದ್ಯಮಿಯೊಬ್ಬರ ಬರ್ಬರ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ವಿನಾಯಕ ನಾಯ್ಕ (54) ಎಂಬವರು ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ. ಮನೆಯಲ್ಲಿದ್ದ ಪತಿ ಹಾಗೂ ಪತ್ನಿಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಉದ್ಯಮಿ ವಿನಾಯಕ ಸಾವಿಗೀಡಾಗಿದ್ದು, ಅವರ ಪತ್ನಿ ಗಂಭೀರಗಾಯಗೊಂಡಿದ್ದಾರೆ … Continued

ಬೆಂಗಳೂರಲ್ಲಿ ಭೀಕರ ಕೊಲೆ: ಯುವತಿಯ ಕೊಂದು 30ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್​ನಲ್ಲಿಟ್ಟ ಆರೋಪಿ

ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ ಒಂದರ ಫ್ರಿಡ್ಜ್‌ನಲ್ಲಿ ಸುಮಾರು 30 ತುಂಡುಗಳಾಗಿ ಕತ್ತರಿಸಿದ 26 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬಂದ ನಂತರ ನೆರೆಹೊರೆಯವರು ಸಂಬಂಧಿಕರಿಗೆ ಕರೆ ಮಾಡಿದ ನಂತರ ವಿಷಯ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ಅದೇ ಬಿಲ್ಡಿಂಗ್​ನ ಅಕ್ಕಪಕ್ಕದವರು … Continued

ಮಗಳ ಬಗ್ಗೆ ಅಪಪ್ರಚಾರ : ತಮ್ಮನನ್ನೇ ಕೊಲೆಗೈದ ಅಣ್ಣ

ಬೆಳಗಾವಿ: ಮೂಡಲಗಿ ತಾಲೂಕು ಕಲ್ಲೋಳಿ ಗ್ರಾಮದಲ್ಲಿ ತಮ್ಮನನ್ನು ಸ್ವತಃ ಅಣ್ಣನೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದವನನ್ನು ವಿಠಲ್ ಚವಾಣ ಎಂದು ಗುರುತಿಸಲಾಗಿದೆ. ಭೀಮಪ್ಪ ಚವಾಣ ಕೊಲೆ ಮಾಡಿರುವ ಆರೋಪಿ. ಅಣ್ಣ ಭೀಮಪ್ಪನ ಮಗಳು ಪಕ್ಕದ ಊರಿನ ಯುವಕನನ್ನು ಪ್ರೀತಿಸಿದ್ದಳು. ಆತ ಸರ್ಕಾರಿ ನೌಕರಿಯಲ್ಲಿದ್ದಾನೆ ಎಂದು ನಂಬಿಸಲಾಗಿತ್ತು. ಆದರೆ ಮದುವೆಯಾದ ಮೂರು ತಿಂಗಳ ನಂತರ … Continued

ಕಾರವಾರ | ಗಣೇಶ ಚತುರ್ಥಿ ಖರ್ಚಿನ ವಿಚಾರವಾಗಿ ಸಹೋದರರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ…!

ಕಾರವಾರ : ಮನೆಯಲ್ಲಿ ಗಣೇಶನ ಪೂಜೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಜಗಳ ಕೊಲೆಯಲ್ಲಿ ಮುಕ್ತಾಯವಾದ ಘಟನೆ ಜಿಲ್ಲೆಯ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಸಂದೇಶ ಪ್ರಭಾಕರ ಬೋರ್ಕರ್ ಎಂದು ಗುರುತಿಸಲಾಗಿದೆ. ಮನೀಶ್ ಕಿರಣ ಬೋರ್ಕರ್ ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಸಂದೇಶ … Continued

ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌-ಸಹಚರರ ಕ್ರೌರ್ಯ ಅನಾವರಣ ; ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ ವೈರಲ್

ಬೆಂಗಳೂರು : ನಟ ದರ್ಶನ್ ತೂಗುದೀಪ ಅವರ ಆಜ್ಞೆಯ ಮೇರೆಗೆ ಕೊಲೆಯಾದ 33 ವರ್ಷದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಸಾಯುವ ಕೆಲವೇ ಕ್ಷಣಗಳ ಮೊದಲಿನ ಹೊಸ ಫೋಟೋಗಳು ಹೊರಬಂದಿವೆ. ಹೊರಬಂದ ಎರಡು ಫೋಟೊಗಳ ಪೈಕಿ ಒಂದರಲ್ಲಿ ರೇಣುಕಾಸ್ವಾಮಿ ಪ್ರಾಣಭಯದಿಂದ ಬೇಡಿಕೊಳ್ಳುತ್ತಿರುವುದು ಕಾಣುತ್ತದೆ. ಎರಡೂ ಚಿತ್ರಗಳಲ್ಲಿ ರೇಣುಕಾಸ್ವಾಮಿ ಶರ್ಟ್ ಧರಿಸಿಲ್ಲ, ಹಿನ್ನಲೆಯಲ್ಲಿ ಟ್ರಕ್‌ಗಳು ನಿಂತಿವೆ. ಅವರ ದೇಹದ ಮೇಲೆ … Continued

ಅಸ್ವಸ್ಥ, ಗಂಭೀರ, ಆತ್ಮಹತ್ಯೆ..’: ಅತ್ಯಾಚಾರ-ಕೊಲೆಯಾದ ವೈದ್ಯೆ ಪೋಷಕರಿಗೆ ಆರ್‌ಜಿ ಕರ್ ಆಸ್ಪತ್ರೆಯಿಂದ ಮಾಡಿದ 3 ಫೋನ್‌ ಕರೆಗಳ ವಿವರ ಬಹಿರಂಗ…!

ಕೋಲ್ಕತ್ತಾ : ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯ ವಿದ್ಯಾರ್ಥಿನಿಯ ತಂದೆ-ತಾಯಿಗೆ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಆಗಸ್ಟ್‌ 9ರ ಬೆಳಿಗ್ಗೆ ಮಾಡಿದ್ದು ಎನ್ನಲಾದ ದೂರವಾಣಿ ಕರೆಯ ವಿವರಗಳು ಗುರುವಾರ ಬಹಿರಂಗವಾಗಿವೆ. ಆಗಸ್ಟ್ 9 ರ ಬೆಳಿಗ್ಗೆ, ಅರ್ಧ ಗಂಟೆಯೊಳಗೆ ಮೂರು ಕರೆಗಳು ಅವರ ಹತ್ಯೆಗೀಡಾದ ವೈದ್ಯೆಯ ಕುಟುಂಬದ ಪುಟ್ಟ ಪ್ರಪಂಚವನ್ನು ಛಿದ್ರಗೊಳಿಸಿದವು. ಕೋಲ್ಕತ್ತಾ ಆಸ್ಪತ್ರೆಯಲ್ಲಿ … Continued

ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ : 4 ಮದುವೆಯಾಗಿದ್ದ ಆರೋಪಿ, ಬ್ಲೂ ಟೂತ್ ನೀಡಿತು ಮಹತ್ವದ ಸುಳಿವು

ಕೋಲ್ಕತ್ತ : ಕೋಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಭೀಕರವಾಗಿ ಹತ್ಯೆಗೈದ ಆರೋಪದ ಮೇಲೆ ಬಂಧಿತನಾಗಿರುವ ಪ್ರಮುಖ ಆರೋಪಿ ಸಂಜಯ ರಾಯ್ ನಾಲ್ಕು ಬಾರಿ ವಿವಾಹವಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಆತನ ಅಕ್ಕಪಕ್ಕದವರ ಪ್ರಕಾರ, ಆತನ ಮೊದಲಿನ ಮೂವರು ಪತ್ನಿಯರು ಆತನ ದುರ್ವರ್ತನೆ ಸಹಿಸಲಾಗದೆ ಬಿಟ್ಟು ಹೋಗಿದ್ದರು ಎಂದು ಹೇಳಿದ್ದಾರೆ. ಆತನ ನಾಲ್ಕನೇ … Continued

ಆಘಾತಕಾರಿ..| ಪ್ರೀತಿಸುತ್ತಿದ್ದ ಹುಡುಗಿ ಜೊತೆ ಮದುವೆಗೆ ವಿರೋಧ ; ತಂದೆ-ತಾಯಿ, ಸಹೋದರನನ್ನೇ ಬರ್ಬರವಾಗಿ ಕೊಲೆ ಮಾಡಿದ 15 ವರ್ಷದ ಬಾಲಕ…!

ಗಾಜಿಪುರ: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಮದುವೆಗೆ ವಿರೋಧಿಸಿದ ತಂದೆ-ತಾಯಿ ಮತ್ತು ಸಹೋದರನನ್ನು ಕೊಲೆ ಮಾಡಿದ ಆರೋಪದ ಮೇಲೆ ಗಾಜಿಪುರದ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 7-8 ರ ರಾತ್ರಿ ನಂದಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮದಲ್ಲಿ ನಡೆದ ಕೊಲೆಗಳಿಗೆ ಬಳಸಿದ ಹರಿತವಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಾಪರಾಧಿಯನ್ನು … Continued

ಹಾಸನ ಎಸ್ಪಿ ಕಚೇರಿ ಆವರಣದಲ್ಲೇ ಭೀಕರ ಕೊಲೆ : ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನು ಇರಿದು ಕೊಂದ ಕಾನ್‌ಸ್ಟೆಬಲ್‌…!

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನೇ ಪೊಲೀಸ್ ಕಾನ್‌ಸ್ಟೆಬಲ್‌ ಓರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲೇ ನಡೆದಿದೆ ಎಂದು ವರದಿಯಾಗಿದೆ. ಹಾಸನದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಾಸನ ನಗರ … Continued