ಬಸ್‌ನಲ್ಲಿ ನಮಾಜ್‌ ಮಾಡಿದ ಚಾಲಕ ಅಮಾನತು ; ಕಾರ್ಮಿಕ ದಿನಾಚರಣೆಯಂದೇ ಸಸ್ಪೆಂಡ್‌

ಹುಬ್ಬಳ್ಳಿ : ಮಾರ್ಗ ಮಧ್ಯೆಯೇ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. (ಮೇ 1), ಕಾರ್ಮಿಕರ ದಿನಾಚರಣೆಯಂದೇ ಚಾಲಕ ಅಮಾನತುಗೊಂಡಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಹಾನಗಲ್ (Hangal) … Continued

ವೀಡಿಯೊ | ಮಾರ್ಗ ಮಧ್ಯೆ ಪ್ರಯಾಣಿಕರಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ ; ತನಿಖೆಗೆ ಆದೇಶ

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದರ ಚಾಲಕನೊಬ್ಬ ರಸ್ತೆಬದಿಯಲ್ಲಿ ಪ್ರಯಾಣಿಕರಿದ್ದ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದು, ಆತ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ ವಿಡಿಯೋ ವೈರಲ್‌ ಆದ ನಂತರ ತನಿಖೆಗೆ ಆದೇಶಿಸಲಾಗಿದೆ. ವೀಡಿಯೊದಲ್ಲಿ, ಬಸ್‌ ಚಾಲಕ ಆಸನದ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು, ಬಸ್ ರಸ್ತೆಯ ಪಕ್ಕದಲ್ಲಿ ನಿಂತಿರುವಾಗ ಸಂಚಾರ ದಟ್ಟಣೆಯಿಂದ ಕೂಡಿರುವುದನ್ನು ಹಾಗೂ ಬಸ್ಸಿನಲ್ಲಿದ್ದ … Continued

ಎನ್‌ಸಿಸಿ ಶಿಬಿರದಲ್ಲಿ ನಮಾಜ್‌ ಮಾಡಲು ವಿದ್ಯಾರ್ಥಿಗಳಿಗೆ ಬಲವಂತ : 7 ಶಿಕ್ಷಕರು ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲು

ಬಿಲಾಸ್ಪುರ: ಛತ್ತೀಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದ ಎನ್.ಸಿ.ಸಿ ಶಿಬಿರದಲ್ಲಿ ಗುರು ಘಾಸಿದಾಸ್ ಸೆಂಟ್ರಲ್ ಯೂನಿವರ್ಸಿಟಿಯ ಕೆಲವು ವಿದ್ಯಾರ್ಥಿಗಳಿಗೆ ಬಲವಂತವಾಘಿ ನಮಾಜ್ ಮಾಡಿಸಿದ ಆರೋಪದ ಮೇಲೆ ಶನಿವಾರ ಏಳು ಶಿಕ್ಷಕರು ಸೇರಿದಂತೆ ಎಂಟು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯ ಶಿವತಾರೈ ಗ್ರಾಮದಲ್ಲಿ ಮಾರ್ಚ್ 26 ರಿಂದ … Continued

ವೀಡಿಯೊ..| ಪಾಕಿಸ್ತಾನ | ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು 25 ಅಡಿ ಎತ್ತರದ ಕಂಟೈನರ್‌ ನಿಂದ ಕೆಳಕ್ಕೆ ದೂಡಿದ ಸೇನೆ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆತಂಕಕಾರಿ ಘಟನೆಯೊಂದರಲ್ಲಿ ಭದ್ರತಾ ಪಡೆಗಳು ಪ್ರಾರ್ಥನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು 25 ಅಡಿ ಎತ್ತರದ ಸರಕು ಸಾಗಣೆ ಕಂಟೈನರ್‌ ನಿಂದ ವ್ಯಕ್ತಿಯೊಬ್ಬನನ್ನು ಕೆಳಕ್ಕೆ ತಳ್ಳಿವೆ. ತನ್ನ ಅಧಿಕಾರಾವಧಿಯಲ್ಲಿ 140 ಮಿಲಿಯನ್ ರೂಪಾಯಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ 2023 ರ ಆಗಸ್ಟ್‌ನಿಂದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು … Continued

ಗುಜರಾತ್ ವಿವಿ ಹಾಸ್ಟೆಲ್ ಒಳಗೆ ನಮಾಜ್: ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಗುಂಪು, ಐವರಿಗೆ ಗಾಯ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಶನಿವಾರ ರಾತ್ರಿ ಹಾಸ್ಟೆಲ್‌ ಒಳಗೆ ನುಗ್ಗಿದ ಜನರ ಗುಂಪೊಂದು, ಆಫ್ರಿಕಾ ದೇಶಗಳು, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ದಾಳಿಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿರುವ … Continued

ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್ : ಪ್ರಾಂಶುಪಾಲರು ಅಮಾನತು

ಲಕ್ನೋ : ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ನಮಾಜ್ ಮಾಡಿದ ಆರೋಪಿತ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಶಾಲೆಯ ಪ್ರಾಂಶುಪಾಲರಾದ ಮೀರಾ ಯಾದವ್ ಅವರನ್ನು ಉತ್ತರ ಪ್ರದೇಶ ಸರ್ಕಾರಿ ನೌಕರ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು-1999 ರ ಅಡಿಯಲ್ಲಿ ಶನಿವಾರ ತಕ್ಷಣದಿಂದಲೇ ಜಾರಿಗೆ … Continued

ಶಾಲಾ ವಿದ್ಯಾರ್ಥಿಗಳಿಂದ ನಮಾಜ್ ಮಾಡಿಸಿದ ಶಾಲೆ : ಪ್ರತಿಭಟನೆಗಳ ನಂತರ ತನಿಖೆಗೆ ಆದೇಶ

ಅಹಮದಾಬಾದ್: ಅಹಮದಾಬಾದ್‌ನ ಖಾಸಗಿ ಶಾಲೆಯೊಂದು ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ಧರ್ಮದ ವಿದ್ಯಾರ್ಥಿಗಳನ್ನು ತನ್ನ ಆವರಣದಲ್ಲಿ ನಮಾಜ್ ಮಾಡಲು ಹೇಳಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಸೆಪ್ಟೆಂಬರ್ 29 ರಂದು ನಡೆದ ಘಟನೆಯ ಕುರಿತು ಘಟ್ಲೋಡಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ಕಲೋರೆಕ್ಸ್ ಫ್ಯೂಚರ್ ಸ್ಕೂಲ್ ಎಂಬ ಶಾಲೆಯ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಶಾಲಾ ಆಡಳಿತ ಮಂಡಳಿಯು ಕ್ಷಮೆಯಾಚಿಸಿದ್ದು, … Continued

ದತ್ತಪೀಠದಲ್ಲಿ ಈಗ ಮತ್ತೊಂದು ವಿವಾದ: ಗುಹೆಯೊಳಗೆ ನಮಾಜ್, ಗೋರಿ ಪೂಜೆ ಆರೋಪ

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಮಾಂಸದೂಟ, ಗೋರಿ ಪೂಜೆಯ ಮಾಡಿದ್ದಾರೆ ಎಂಬ ಆರೋಪಗಳಿಂದಾಗಿ ವಿವಾದಗಳಿಗೆ ಕಾರಣವಾಗಿದ್ದ ದತ್ತಪೀಠದಲ್ಲಿ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕೋರ್ಟ್ ಆದೇಶ ಮೀರಿ ದತ್ತ ಪೀಠದ ಆವರಣದಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ. ದತ್ತಪೀಠದ ಆವರಣ ಮಾತ್ರವಲ್ಲದೆ ಗುಹೆಯ ಒಳಗೂ ನಮಾಜ್‌ ಮಾಡುತ್ತಿದ್ದಾರೆದು ಆರೋಪಿಸಲಾಗಿದೆ. ಆವರಣದಲ್ಲಿ ನಮಾಜ್ ಮಾಡುವ ವಿಡಿಯೋವೊಂದು ಈಗ ವೈರಲ್ … Continued

ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ಬಳಕೆ: ವಕ್ಫ್‌ ಬೋರ್ಡಿನಿಂದ ಪರಿಷ್ಕೃತ ಸುತ್ತೋಲೆ

ಬೆಂಗಳೂರು: ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ರಾಜ್ಯ ವಕ್ಫ್‌ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಯೂಸುಫ್, ಮಸೀದಿ, ದರ್ಗಾಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಫಜರ್ ಸೇರಿದಂತೆ ಅಝಾನ್, ನಿಧನವಾರ್ತೆ, ದಫನ್ ಕಾರ್ಯದ ಸಮಯ, ಚಂದ್ರ ದರ್ಶನದಂಥ ಪ್ರಮುಖ ಘೋಷಣೆ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ. … Continued