ವೀಡಿಯೊ | ನಾವು ಭಾರತದ ಐಪಿಎಲ್ ಫ್ಲಡ್‌ಲೈಟ್‌ ಆಫ್‌ ಮಾಡಿದ್ದೇವೆ : ವಿಚಿತ್ರ ಹೇಳಿಕೆಯಿಂದ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ-ವೀಕ್ಷಿಸಿ

ನವದೆಹಲಿ: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ತಮ್ಮ ವಿಲಕ್ಷಣ ಹೇಳಿಕೆಗಳಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ “ಐಪಿಎಲ್ ಫ್ಲಡ್‌ಲೈಟ್‌ಗಳನ್ನು ಪಾಕಿಸ್ತಾನದವರು ಹ್ಯಾಕಿಂಗ್ ಮಾಡಿದ್ದರು” ಎಂದು ಹೇಳುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ. ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಖವಾಜಾ ಆಸಿಫ್ ಅವರು , ತಮ್ಮ ದೇಶದ “ಸೈಬರ್ ವಾರಿಯರ್ಸ್” ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ … Continued

ವೀಡಿಯೊ…| ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ಜೊತೆ ನಂಟಿತ್ತು ಎಂಬುದನ್ನು ಒಪ್ಪಿಕೊಂಡ ಪಾಕ್‌ ಸೆನೆಟರ್ ಶೆರ್ರಿ ರೆಹಮಾನ್

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಉಪಾಧ್ಯಕ್ಷೆ ಶೆರ್ರಿ ರೆಹಮಾನ್ ಅವರು ಅಲ್-ಖೈದಾಗೆ ಸಂಬಂಧಿಸಿದ ಬ್ರಿಗೇಡ್ 313 ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಾಗ ಪಾಕಿಸ್ತಾನದ ಭೂತಕಾಲವು ಭಯೋತ್ಪಾದನೆ ಜೊತೆ ನಂಟು ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. . “ನೀವು ಭೂತಕಾಲದ ಬಗ್ಗೆ ಮಾತನಾಡುತ್ತಲೇ ಇರುತ್ತೀರಿ ಏಕೆಂದರೆ ಅದು ಹಾಗೆ ಇತ್ತು” ಎಂದು ಅವರು ಸ್ಕೈ ನ್ಯೂಸ್ ಪತ್ರಕರ್ತೆ ಯಾಲ್ಡಾ ಹಕೀಮ್ … Continued

ಭಾರತದ ವಾಯುನೆಲೆ ಹೊಡೆದಿದ್ದೇವೆ ಎಂದ ಪಾಕಿಸ್ತಾನದ ಹಸಿ ಸುಳ್ಳು ಬಯಲಿಗೆ …! ಅದು ನಕಲಿ ಉಪಗ್ರಹ ಚಿತ್ರ, ಕಟ್ಟು ಕಥೆ ಎಂದ ಡೇಮಿಯನ್ ಸೈಮನ್

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಡಿ ಪಾಕಿಸ್ತಾನ ವಾಯು ನೆಲೆಗಳ ಮೇಲೆ ಭಾರತದ ನಿಖರವಾದ ದಾಳಿ ನಡೆಸಿದ ನಂತರ ಪಾಕಿಸ್ತಾನ ನಕಲಿ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಹಂಚಿಕೊಂಡು ಭಾರತದ ಮೇಲೆ ದಾಳಿ ನಡೆಸಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿರುವುದು ಈಗ ಬಯಲಾಗಿದೆ. ಪಂಜಾಬ್‌ನ … Continued

ಪಾಕಿಸ್ತಾನದಲ್ಲಿ ಜಲ ಬಿಕ್ಕಟ್ಟು | ಸಿಂಧೂ ಜಲ ಒಪ್ಪಂದ ಅಮಾನತು ಬೇಡ ; ಭಾರತಕ್ಕೆ 4 ಪತ್ರ ಬರೆದ ಪಾಕಿಸ್ತಾನ…!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾದ ನಂತರ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಿರ್ಧಾರವನ್ನು ಭಾರತವು ಮರುಪರಿಶೀಲಿಸಬೇಕು ಎಂದು ಕೋರಿ ಪಾಕಿಸ್ತಾನವು ಒಂದರ ನಂತರ ಒಂದರಂತೆ ನಾಲ್ಕು ಪತ್ರಗಳನ್ನು ಬರೆದಿದೆ ಎಂದು ವರದಿಯಾಗಿದೆ. ಪಾಕಿಸ್ತಾನವು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಹತಾಶವಾಗಿರುವಂತೆ ತೋರುತ್ತಿದೆ ಎಂದು ಈ … Continued

ಆಪರೇಶನ್‌ ಸಿಂಧೂರ | 30 ಕ್ಷಿಪಣಿಗಳು, 6 ಯುದ್ಧ ವಿಮಾನಗಳು, 2 ಎಡಬ್ಲ್ಯುಎಸಿಎಸ್‌ ವಿಮಾನ, ಹಲವು ಮಾನವ ರಹಿತ ವೈಮಾನಿಕ ವಾಹನ ಕಳೆದುಕೊಂಡ ಪಾಕಿಸ್ತಾನ ; ವರದಿ

ನವದೆಹಲಿ : ಕಳೆದ ತಿಂಗಳು ಭಾರತದ ಜೊತೆಗಿನ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನ ಆರು ಯುದ್ಧ ವಿಮಾನಗಳು, ಎರಡು ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AWACS), ಒಂದು C-130 ಸಾರಿಗೆ ವಿಮಾನ, ಕನಿಷ್ಠ 30 ಕ್ಷಿಪಣಿಗಳು ಮತ್ತು ಹಲವಾರು ಮಾನವರಹಿತ ವೈಮಾನಿಕ ವಾಹನಗಳನ್ನು ಕಳೆದುಕೊಂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕಾರ್ಯಾಚರಣೆಯ … Continued

ಭಾರತದಲ್ಲಿನ ಅನೇಕ ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌, ಕುಖ್ಯಾತ ಉಗ್ರ ಅಬ್ದುಲ್ ಅಜೀಜ್ ಎಸಾರ್ ಪಾಕಿಸ್ತಾನದಲ್ಲಿ ನಿಗೂಢ ಸಾವು: ವರದಿ

ಇಸ್ಲಾಮಾಬಾದ್ : ಭಾರತದ ಮತ್ತೊಬ್ಬ ಶತ್ರು ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಾಗೂ ಖ್ಯಾತ ಭಯೋತ್ಪಾದಕ ಮೌಲಾನಾ ಅಬ್ದುಲ್ ಅಜೀಜ್ ಎಸಾರ್ ಪಾಕಿಸ್ತಾನದ ಪಂಜಾಬ್ ಜಿಲ್ಲೆಯಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾನೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಎಸಾರ್ ಸಾವಿನ ವೀಡಿಯೊ ಹಲವಾರು ವಿದೇಶಿ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿದೆ. ಆತ ಭಾರತದಲ್ಲಿ ನಡೆದ ಅನೇಕ … Continued

ಪಾಕಿಸ್ತಾನ ‘ಭಿಕ್ಷಾ ಪಾತ್ರೆ’ ಹಿಡಿದು ಜಗತ್ತಿನಾದ್ಯಂತ ಸುತ್ತುತ್ತಿದೆ ಎಂದು ಒಪ್ಪಿಕೊಂಡ ಪಾಕ್‌ ಪ್ರಧಾನಿ : ಆದರೆ….

ಕ್ವೆಟ್ಟಾ: ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನವು ತಮ್ಮ ಮುಂದೆ ‘ಭಿಕ್ಷಾ ಪಾತ್ರೆ’ಯೊಂದಿಗೆ ಬರುವುದನ್ನು ನಿರೀಕ್ಷೆ ಮಾಡುವುದಿಲ್ಲ. ಬದಲಿಗೆ ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆಯಲ್ಲಿ ಸಮಾನ ಪಾಲುದಾರಿಕೆಯ ಆಧಾರದ ಮೇಲೆ ಸಂಬಂಧಗಳನ್ನು ಮುಂದುವರಿಸಲು ಪ್ರಯತ್ನಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಹೇಳಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ವಿವಿಧ ದೇಶಗಳನ್ನು … Continued

ಭಾರತದ 6 ಯುದ್ಧವಿಮಾನ ಹೊಡೆದಿದ್ದೇವೆ ಎಂಬ ಪಾಕ್‌ ಪ್ರಧಾನಿ ಹೇಳಿಕೆ ಶುದ್ಧ ಸುಳ್ಳು ; ಆರಂಭಿಕ ನಷ್ಟ ಸರಿಪಡಿಸಿಕೊಂಡು ಪಾಕ್ ಮೇಲೆ ನಿಖರ ದಾಳಿ-ಸಿಡಿಎಸ್ ಅನಿಲ ಚೌಹಾಣ

ನವದೆಹಲಿ: ಆಪರೇಷನ್ ಸಿಂಧೂರ ನಂತರದ ನಾಲ್ಕು ದಿನಗಳ ಮಿಲಿಟರಿ ಕಾರ್ಯಾಚರಣೆಯಲ್ಲಿ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ ಚೌಹಾಣ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಆದರೆ, ಅವರ ಮಾತುಗಳಿಂದ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಕಳೆದುಕೊಂಡಿರುವುದನ್ನು ಭಾರತದ ಸೇನೆ ಮೊದಲ ಬಾರಿಗೆ ಒಪ್ಪಿಕೊಂಡಂತಿದೆ. ಭಾರತವು “ಯುದ್ಧತಂತ್ರದ … Continued

ವೀಡಿಯೊಗಳು | ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆ ; ಪಾಕ್‌ ನ ಮತ್ತೊಂದು ಪ್ರಮುಖ ನಗರ ವಶಪಡಿಸಿಕೊಂಡ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ…!

ನವದೆಹಲಿ: ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಎಂಬ ಪ್ರತ್ಯೇಕತಾವಾದಿ ಗುಂಪು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಆಯಕಟ್ಟಿನ ನಗರವಾದ ಸುರಬ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಬಲೂಚಿಸ್ತಾನ್ ಪೋಸ್ಟ್ ಹಂಚಿಕೊಂಡ ವೀಡಿಯೊಗಳ ಪ್ರಕಾರ, ನಗರದಾದ್ಯಂತ ಹಲವಾರು ಸ್ಥಳಗಳಿಂದ ದಟ್ಟವಾದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಹೊರಹೊಮ್ಮುತ್ತಿರುವುದು ಕಂಡುಬಂದಿದ್ದು, ಹಲವಾರು ಪೊಲೀಸ್ ಠಾಣೆಗಳು ಮತ್ತು … Continued

ವೀಡಿಯೊ..| ನಾವು ದಾಳಿ ನಡೆಸುವ ಮೊದಲೇ ಭಾರತ ನಮ್ಮ ವಾಯುನೆಲೆಗಳ ಮೇಲೆ ʼಬ್ರಹ್ಮೋಸ್ʼ ದಾಳಿ ನಡೆಸಿತು ಎಂದು ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ…!

ನವದೆಹಲಿ: ಮೇ 9-10ರ ಮಧ್ಯರಾತ್ರಿ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ನಮ್ಮ ಪ್ರಮುಖ ಸೇನಾ ನೆಲೆಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಉಡಾಯಿಸಿ ನಮ್ಮ ಯೋಜನೆಗಳನ್ನು ಭಾರತವು ವಿಫಲಗೊಳಿಸಿತು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಪರವಾಗಿ ನಿಂತ ಕೆಲವೇ ರಾಷ್ಟ್ರಗಳಲ್ಲಿ ಒಂದಾದ ಅಜೆರ್ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್‌ ಪ್ರಧಾನಿ ಷರೀಫ್, … Continued