ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪತ್ನಿಯರಿಗೆ ಪಾಕಿಸ್ತಾನ ಮಾಡಿದ್ದೇನು? ಮಾಜಿ ಅಧ್ಯಕ್ಷರ ಸಹಾಯಕನಿಂದ ಆಘಾತಕಾರಿ ವಿವರ ಬಹಿರಂಗ

ನವದೆಹಲಿ : ಮೇ 2, 2011 ರ ಬೆಳಿಗ್ಗೆ, ಅಮೆರಿಕ ತನ್ನ ಅತ್ಯಂತ ಮಹತ್ವದ ಮಿಲಿಟರಿ ಕಾರ್ಯಾಚರಣೆ ನಡೆಸಿದ ದಿನ ಜಾಗತಿಕ ಸ್ಮರಣೆಯಲ್ಲಿ ಈಗಲೂ ಉಳಿದಿದೆ. ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ 40 ನಿಮಿಷಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅಮೆರಿಕದ ನೇವಿ ಸೀಲ್‌ಗಳು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದದ ಮೇಲೆ ನಡೆದ 9/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ಅಲ್-ಖೈದಾ … Continued

ವೀಡಿಯೊ | ‘ಭಯೋತ್ಪಾದನೆಯ ಸರ್ಕಾರಿ ಪ್ರಾಯೋಜಕ..’: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬೆವರಿಳಿಸಿದ ಯುಎನ್ ವಾಚ್‌ನ ಕಾರ್ಯನಿರ್ವಾಹಕ ನಿರ್ದೇಶಕ !

ವಿಶ್ವಸಂಸ್ಥೆ : ಇತ್ತೀಚೆಗೆ ಕತಾರ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಕೀಲರು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಟೀಕಿಸಿದ ನಂತರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಮುಜುಗರಕ್ಕೊಳಗಾದ ಪ್ರಸಂಗ ನಡೆಯಿತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ, ಮಾನವ ಹಕ್ಕುಗಳ ವಕೀಲ ಮತ್ತು ಯುಎನ್ ವಾಚ್‌ನ ಕಾರ್ಯನಿರ್ವಾಹಕ … Continued

ಉಪಗ್ರಹ ಚಿತ್ರಗಳು : ಭಾರತದ ದಾಳಿಯಿಂದ ನಾಶವಾಗಿದ್ದ ‘ನೂರ್ ಖಾನ್’ ವಾಯುನೆಲೆಯ ಪುನರ್ ನಿರ್ಮಾಣ ಕಾರ್ಯ ಆರಂಭಿಸಿದ ಪಾಕಿಸ್ತಾನ…!

ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಭಾರತದ ಆಪರೇಶನ್‌ ಸಿಂಧೂರ ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಾದರ ಪುನರ್ನಿಮಾಣ ಕೆಲಸಗಳು ನಡೆಯುತ್ತಿವೆ ಎಂದು ಉಪಗ್ರಹದ ಹೊಸ ಚಿತ್ರಗಳು ಸೂಚಿಸುತ್ತವೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಿಂದ 25 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಮಿಲಿಟರಿ ಕಾರ್ಯತಂತ್ರದ ವಾಯುನೆಲೆಯಾದ ನೂರ್ ಖಾನ್ ಪಾಕಿಸ್ತಾನ ವಾಯುಪಡೆಯ ಮಹತ್ವದ ವಾಯುನೆಲೆಯಾಗಿದೆ. ಮೇ 10 … Continued

ವೀಡಿಯೊಗಳು | ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಿ, ಪುತಿನ್, ಕ್ಸಿ ಆತ್ಮೀಯ ಹರಟೆ ; ನೀರಸ ಮುಖಭಾವದಲ್ಲಿ ನಿಂತಿದ್ದ ಪಾಕ್‌ ಪ್ರಧಾನಿ

ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘದ (SCO) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ಆತ್ಮೀಯವಾಗಿ ವಿಚಾರ ವಿನಿಮಯ ಮಾಡಿದ್ದಾರೆ. ವಿಶೇಷವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಶುಲ್ಕ ವಿಧಿಸಿದ ನಂತರ ಭಾರತ-ಾಮೆರಿಕ ನಡುವೆ ವ್ಯಾಪಾರ ಉದ್ವಿಗ್ನತೆ ಹೆಚ್ಚಿದ … Continued

ಚೀನಾ ಅಧ್ಯಕ್ಷರ ಜೊತೆ ಮಾತುಕತೆ ; ಗಡಿಯಾಚೆಗಿನ ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ ; ಭಾರತ ಬೆಂಬಲಿಸಿದ ಚೀನಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಚೀನಾ ಭಾರತಕ್ಕೆ ಬೆಂಬಲ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ. ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗಡಿಯಾಚೆಗಿನ ಭಯೋತ್ಪಾದನೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಈ … Continued

50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರ ಬಳಸಿ ಪಾಕಿಸ್ತಾನ ಮಂಡಿಯೂರುವಂತೆ ಮಾಡಿದೆವು; ಆಪರೇಶನ್‌ ಸಿಂಧೂರ ಬಗ್ಗೆ ಭಾರತದ ವಾಯುಪಡೆಯ ಉಪಮುಖ್ಯಸ್ಥ

ನವದೆಹಲಿ : ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮಂಡಿಯೂರುವಂತೆ ಮಾಡಲು ಮತ್ತು ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಲುಸಮಯದಲ್ಲಿ ಭಾರತೀಯ ವಾಯುಪಡೆ (ಐಎಎಫ್) 50 ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿತು ಎಂದು ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ನರ್ಮದೇಶ್ವರ ತಿವಾರಿ ಶನಿವಾರ ಹೇಳಿದ್ದಾರೆ. ಎನ್‌ಡಿಟಿವಿ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಏರ್ ಮಾರ್ಷಲ್ ನರ್ಮದೇಶ್ವರ … Continued

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ್ದಕ್ಕೆ ಭಾರತದ ಸರಕುಗಳ ಮೇಲೆ 50% ಸುಂಕ: ಜೆಫರೀಸ್

ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿ ಜೆಫರೀಸ್ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ ಕಾರಣ ಅಮೆರಿಕ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚಿನ ಸುಂಕಗಳನ್ನು ವಿಧಿಸಿದೆ. ಟ್ರಂಪ್ ಅವರ “ವೈಯಕ್ತಿಕ ದ್ವೇಷ”ದ “ಪರಿಣಾಮ”ವಾಗಿದೆ. ಮತ್ತು ದಕ್ಷಿಣ ಏಷ್ಯಾದ ಎರಡು … Continued

ಕ್ಷೌರಿಕ ಅಂಗಡಿಯಲ್ಲಿ ಭಿಕ್ಷುಕನಂತೆ ನಟಿಸಿ, ಅಲ್ಲಿನ ಕೂದಲಿನ ಮೂಲಕ ಪಾಕಿಸ್ತಾನದ ಪರಮಾಣು ರಹಸ್ಯ ಬಯಲಿಗೆ ಎಳೆದಿದ್ದ ಭಾರತದ ಅಜಿತ ದೋವಲ್…!

ನವದೆಹಲಿ: ಹರಿದ ಶಾಲು, ಧೂಳಿನ ಬೀದಿಗಳು ಮತ್ತು ಯಾರೂ ಗಮನ ಹರಿಸದ ಭಿಕ್ಷಕುನಂತಹ ವ್ಯಕ್ತಿ. ಇದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್, 1980 ರ ದಶಕದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಗಮನಿಸದೆ ವಾಸಿಸುತ್ತಿದ್ದ ಪರಿ. ಪಾಕಿಸ್ತಾನದಲ್ಲಿ ನಡೆದಿರುವ ಗುಪ್ತಚರ ಕಾರ್ಯಾಚರಣೆಗಳಲ್ಲಿ ವೇಷ ಮರೆಸಿಕೊಂಡು ಭಿಕ್ಷುಕನಂತ ವೇಷ ಧರಿಸಿಕೊಂಡು ಶತ್ರು ದೇಶದ ಎದೆಯಲ್ಲಿ ನಡುಕ ಸೃಷ್ಟಿಸಿದವರು. … Continued

“ಅಸಿಮ್ ಮುನೀರ್ ಸೂಟಿನಲ್ಲಿರುವ ಒಸಾಮಾ ಬಿನ್ ಲಾಡೆನ್ “: ಪಾಕ್‌ ಸೇನಾ ಮುಖ್ಯಸ್ಥನನ್ನು ಉಗ್ರನಿಗೆ ಹೋಲಿಸಿದ ಪೆಂಟಗನ್‌ ಮಾಜಿ ಅಧಿಕಾರಿ…!

ವಾಷಿಂಗ್ಟನ್: ಇತ್ತೀಚಿನ ಪರಮಾಣು ಅಸ್ತ್ರದ ಬಳಕೆ ಹೇಳಿಕೆ ಬಗ್ಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಟೀಕಿಸಿದ್ದಾರೆ. ಪಾಕಿಸ್ತಾನವು ಯುದ್ಧಪ್ರೇಮಿ ಸೇನಾ ಮುಖ್ಯಸ್ಥನ ಜೊತೆ “ಒಂದು ರಾಕ್ಷಸ ರಾಷ್ಟ್ರ” ದಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ ನನ್ನು 9/11 ದಾಳಿಯ ಹಿಂದಿನ … Continued

‘ಭಾರತ ಮರ್ಸಿಡಿಸ್‌ʼನಂತೆ, ಪಾಕಿಸ್ತಾನ ಡಂಪ್ ಟ್ರಕ್’ನಂತೆ: ಈ ಹೋಲಿಕೆ ಮಾಡಿ ಆನ್‌ಲೈನ್‌ನಲ್ಲಿ ಟ್ರೋಲ್‌ ಆದ ಪಾಕ್ ಸೇನಾ ಮುಖ್ಯಸ್ಥ

ವಾಷಿಂಗ್ಟನ್: ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದರ ನಡುವೆ, ಪಾಕಿಸ್ತಾನದ ವಾಸ್ತವಿಕ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಭಾರತವನ್ನು “ಹೊಳೆಯುವ ಮರ್ಸಿಡಿಸ್” ಗೆ ಮತ್ತು ತನ್ನ ಸ್ವಂತ ದೇಶವನ್ನು “ಡಂಪ್ ಟ್ರಕ್” ಗೆ ಹೋಲಿಕೆ ಮಾಡಿ ಈಗ ಸುದ್ದಿಯಲ್ಲಿದ್ದಾರೆ. ಫ್ಲೋರಿಡಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುನೀರ್ “ಪರಿಸ್ಥಿತಿ ವಿವರಿಸಲು ನಾನು ಈ ಒರಟಾದ ಸಾದೃಶ್ಯವನ್ನು … Continued