ಜನನಿಬಿಡ ಬೀದಿಯಲ್ಲಿ ಮಹಿಳೆ-ಮಕ್ಕಳ ಮೇಲೆ ದಾಳಿ ಮಾಡಿದ ತಪ್ಪಿಸಿಕೊಂಡ ಸಾಕಿದ ಸಿಂಹ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಾಕಿಸ್ತಾನದ ಲಾಹೋರಿನ ಜನನಿಬಿಡ ಬೀದಿಯಲ್ಲಿ ತಪ್ಪಿಸಿಕೊಂಡ ಸಾಕಿದ ಸಿಂಹವೊಂದು ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಬೆನ್ನಟ್ಟಿ, ಗೋಡೆ ಹಾರಿ, ಅವರ ಮೇಲೆ ದಾಳಿ ಮಾಡಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗುರುವಾರ ರಾತ್ರಿ ಸಿಂಹವು ತನ್ನ ಮನೆಯ ಸುತ್ತಲಿನ ತಡೆಗೋಡೆಯನ್ನು ಹಾರಿ, ಶಾಪಿಂಗ್‌ಗೆ ತನ್ನ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಹಿಳೆಯನ್ನು … Continued

ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

ನವದೆಹಲಿ: ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನವು ಚೀನಾದಿಂದ ಭಾರತದ ಪ್ರಮುಖ ಯುದ್ಧ ವಾಹಕಗಳ ಬಗ್ಗೆ ಲೈವ್‌ ಮಾಹಿತಿಯನ್ನು ಪಡೆದುಕೊಂಡಿದೆ ಎಂದು ಭಾರತದ ಸೇನೆಯ ಉನ್ನತ ಜನರಲ್ ರಾಹುಲ್ ಆರ್ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧದ ನಾಲ್ಕು ದಿನಗಳ ಆಪರೇಶನ್‌ ಸಿಂಧೂರದ ಸಂಘರ್ಷದ ಸಂದರ್ಭದಲ್ಲಿ ಭಾರತವು ಗಡಿಯಲ್ಲಿ ದಾಳಿಗಳನ್ನು ಹೇಗೆ ಎದುರಿಸಿತು ಎಂಬುದನ್ನು ವಿವರಿಸುತ್ತ ಹೇಳಿದ್ದಾರೆ. ಸೇನಾ … Continued

ವೀಡಿಯೊ…| “ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು”: ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ನವದೆಹಲಿ: ಆಪರೇಶನ್‌ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತ ಹಾರಿಸಿದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯಲ್ಲಿ ಪರಮಾಣು ಸಿಡಿತಲೆ ಇರಬಹುದೇ ಎಂದು ನಿರ್ಧರಿಸಲು ತಮ್ಮ ದೇಶದ ಸೇನೆಗೆ ಕೇವಲ 30 ರಿಂದ 45 ಸೆಕೆಂಡುಗಳ ಸಮಯ ಮಾತ್ರ ಇತ್ತು ಎಂದು ಪಾಕಿಸ್ತಾನದ ಉನ್ನತ ರಾಜಕಾರಣಿಯೊಬ್ಬರು ಒಪ್ಪಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಜೊತೆ ಸಂಬಂಧ ಹೊಂದಿರುವ ಭಯೋತ್ಪಾದಕರು … Continued

ಎದೆ ಝಲ್‌ ಎನ್ನುವ ವೀಡಿಯೊ…| ಪಾಕಿಸ್ತಾನದ ಪ್ರವಾಹದಲ್ಲಿ ಕೊಚ್ಚಿಹೋದ ಒಂದೇ ಕುಟುಂಬದ 9 ಜನ ; ದುರಂತವಾದ ಪಿಕ್ನಿಕ್‌

ಪಾಕಿಸ್ತಾನದಲ್ಲಿ ಸ್ವಾತ್ ನದಿಯ ಹಠಾತ್ ಪ್ರವಾಹದಲ್ಲಿ ಕುಟುಂಬದ 18 ಜನರಲ್ಲಿ ಒಂಬತ್ತು ಮಂದಿ ಕೊಚ್ಚಿಹೋಗಿ ಸಾವಿಗೀಡಾದ ನಂತರ, ಕುಟುಂಬಕ್ಕೆ ಪಿಕ್ನಿಕ್ ಪ್ರವಾಸವು ದುರಂತವಾಗಿ ಪರಿಣಮಿಸಿತು. ಶುಕ್ರವಾರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ. ಮೈ ಜುಂ ಎನ್ನುವ ವೀಡಿಯೊದಲ್ಲಿ, ಬಲವಾದ ಪ್ರವಾಹದ ಮಧ್ಯೆ ನದಿ ಉಕ್ಕಿ ಹರಿಯುತ್ತಿದ್ದು, ಅದರ ಮಧ್ಯದಲ್ಲಿ ದಿನ್ನೆಯಂತೆ ಕಾಣುವ ಸ್ಥಳದಲ್ಲಿ … Continued

ಪಾಕಿಸ್ತಾನದಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ 13 ಸೈನಿಕರು ಸಾವು

ಪಾಕಿಸ್ತಾನಿ ತಾಲಿಬಾನ್ ನಡೆಸಿರುವ ಆತ್ಮಹತ್ಯಾ ದಾಳಿಯಲ್ಲಿ 13 ಸೈನಿಕರು ಸಾವಿಗೀಡಾಗಿದ್ದಾರೆ. ಅಲ್ಲದೆ, ನಾಗರಿಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ. “ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸ್ಫೋಟದಲ್ಲಿ 13 ಸೈನಿಕರು ಸಾವಿಗೀಡಾಗಿದ್ದಾರೆ. ಅಲ್ಲದೆ, … Continued

ವೀಡಿಯೊ..| ಭಾರತದ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಚೀನಾ ಗುಪ್ತಚರ ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನದ ರಕ್ಷಣಾ ಸಚಿವ

ಇಸ್ಲಾಮಾಬಾದ್: ಭಾರತದೊಂದಿಗಿನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಚೀನಾವು ಪಾಕಿಸ್ತಾನಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ನೀಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಈ ಮಾಹಿತಿಯು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಬಗ್ಗೆ ವಿವರಗಳನ್ನು ಒಳಗೊಂಡಿತ್ತು ಎಂದು ವರದಿಯಾಗಿದೆ. ಸಂದರ್ಶನವೊಂದರಲ್ಲಿ, ಪಾಕಿಸ್ತಾನದ ಖವಾಜಾ ಆಸಿಫ್, ಭಾರತದ ಜೊತೆ ಸಂಘರ್ಷದ ನಂತರ ಪಾಕಿಸ್ತಾನವು ಹೆಚ್ಚಿನ ಎಚ್ಚರಿಕೆಯಲ್ಲಿದೆ … Continued

ಪಾಕಿಸ್ತಾನ ಪರ ಬೇಹುಗಾರಿಕೆ ; ನೌಕಾಪಡೆ ಪ್ರಧಾನ ಕಚೇರಿಯ ಸಿಬ್ಬಂದಿ ಬಂಧನ : ಆಪರೇಶನ್‌ ಸಿಂಧೂರ ವೇಳೆಯೂ ಮಾಹಿತಿ ರವಾನೆ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ವರ್ಷಗಳಿಂದ ಮತ್ತು ಆಪರೇಷನ್ ಸಿಂಧೂರ ಸಮಯದಲ್ಲಿಯೂ ಸಹ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ದೆಹಲಿಯಲ್ಲಿರುವ ಭಾರತೀಯ ನೌಕಾಪಡೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ಬಂಧಿಸಲಾಗಿದೆ. ಹಣಕ್ಕಾಗಿ ವಿಶಾಲ ಯಾದವ್ ಎಂಬ ಸಿಬ್ಬಂದಿ ನೌಕಾಪಡೆ ಮತ್ತು ಇತರ ರಕ್ಷಣಾ ಘಟಕಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಇದನ್ನು ನಿರ್ವಹಿಸುತ್ತಿದ್ದ ಪಾಕಿಸ್ತಾನಿ ಮಹಿಳೆಗೆ … Continued

ಅಮೆರಿಕ ಅಧ್ಯಕ್ಷ ಟ್ರಂಪ್ ಹೆಸರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ಪಾಕಿಸ್ತಾನ…!

2025 ರ ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ನಿರ್ಣಾಯಕ ರಾಜತಾಂತ್ರಿಕ ತೊಡಗಿಕೊಳ್ಳುವಿಕೆ ಮತ್ತು ನಾಯಕತ್ವ”ವನ್ನು ಗುರುತಿಸಿ ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ಅವರನ್ನು 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವಿನ ಸಂಭಾವ್ಯ ವಿನಾಶಕಾರಿ ಸಂಘರ್ಷವನ್ನು ತಪ್ಪಿಸುವಲ್ಲಿ ಟ್ರಂಪ್ ಅವರ ಮಧ್ಯಸ್ಥಿಕೆಗೆ ಪಾಕಿಸ್ತಾನ … Continued

ವೀಡಿಯೊ…| ತನ್ನ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದನ್ನು ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ಪಾಕಿಸ್ತಾನ…!

ನವದೆಹಲಿ: ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತವು ತನ್ನ ಪ್ರಮುಖ ವಾಯುನೆಲೆಗಳ ಮೇಲಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ಗಮನಾರ್ಹ ವಾಯು ನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಪಾಕಿಸ್ತಾನದ ಉಪ ಪ್ರಧಾನಿ … Continued

ವೀಡಿಯೊಗಳು | ‘ನಿಮಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ’: ವಾಷಿಂಗ್ಟನ್‌ನಲ್ಲಿ ಅಸಿಮ್ ಮುನೀರ್ ಗೆ ಪ್ರತಿಭಟನೆಯ ಬಿಸಿ-ವೀಕ್ಷಿಸಿ

ಪಾಕಿಸ್ತಾನಿ ಜನರಲ್ ಸೈಯದ್ ಅಸಿಮ್ ಮುನೀರ್ ವಾಷಿಂಗ್ಟನ್‌ನಲ್ಲಿದ್ದಾಗ ಅವರನ್ನು ನಿಂದಿಸಲಾಯಿತು. ಕೆಲವು ಪಾಕಿಸ್ತಾನಿ ಪ್ರತಿಭಟನಾಕಾರರು ಮತ್ತು ಪಾಕಿಸ್ತಾನಿ ಮೂಲದ ಜನರು ಮುನೀರ್ ಅವರ ಹೋಟೆಲ್ ಹೊರಗೆ ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನೀರ್ ಹೋಟೆಲ್‌ನಿಂದ ಹೊರಬರುವಾಗ ಪ್ರತಿಭಟನಾಕಾರರು – “ಪಾಕಿಸ್ತಾನಿಯೋಂ ಕೆ ಕಾತಿಲ್,” “ನೀವು ಹೇಡಿ,” ಮತ್ತು “ನಿಮಗೆ ನಾಚಿಕೆಯಾಗಬೇಕು” – ಎಂಬ ಘೋಷಣೆಗಳನ್ನು … Continued