ಸಂಪೂರ್ಣ ಕಾಶ್ಮೀರವೂ ಭಾರತದ್ದೇ ಅವಿಭಾಜ್ಯ ಅಂಗ; ವ್ಯಾಪಾರ ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ‘ಶಾಕ್’ ನೀಡಿದ ಅಮೆರಿಕ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಅಮೆರಿಕ ಈಗ ಅಧಿಕೃತವಾಗಿ ಎತ್ತಿಹಿಡಿದಿದೆ. ಪಾಕಿಸ್ತಾನದ ವಾದಗಳಿಗೆ ವಿರುದ್ಧವಾಗಿ, ಜಗತ್ತಿನ ದೊಡ್ಡಣ್ಣ ಅಮೆರಿಕ ಭಾರತದ ರಾಜಕೀಯ ಭೂಪಟವನ್ನು ಅಂಗೀಕರಿಸುವ ಮೂಲಕ ಪಾಕಿಸ್ತಾನಕ್ಕೆ ಪ್ರಬಲ ರಾಜತಾಂತ್ರಿಕ ಏಟು ನೀಡಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) ಬಿಡುಗಡೆ ಮಾಡಿರುವ ಭಾರತದ ನೂತನ ಭೂಪಟದಲ್ಲಿ, ಜಮ್ಮು … Continued

ಶಾಕಿಂಗ್ : ಜೆಇಎಂ ಭಯೋತ್ಪಾದಕ ಸಂಘಟನೆ ಮಹಿಳಾ ವಿಭಾಗಕ್ಕೆ 5000ಕ್ಕೂ ಹೆಚ್ಚು ಮಹಿಳೆಯರ ನೇಮಕ..! ಆನ್‌ಲೈನ್ ತರಬೇತಿ…

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ. ಈ ಸಂಘಟನೆಯ ಮಹಿಳಾ ವಿಭಾಗಕ್ಕೆ 5,000ಕ್ಕೂ ಹೆಚ್ಚು ಮಹಿಳೆಯರನ್ನು ನೇಮಕ ಮಾಡಲಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಈ ಮಹಿಳಾ ಸದಸ್ಯರಿಗೆ ಆತ್ಮಹತ್ಯಾ ದಾಳಿಗಳಿಗಾಗಿ ತರಬೇತಿ ನೀಡಲಾಗುತ್ತಿದ್ದು, ಉಗ್ರವಾದದ ಸಿದ್ಧಾಂತಕ್ಕೆ ಅವರನ್ನು ಒಳಪಡಿಸಲಾಗುತ್ತಿದೆ ಎಂದು … Continued

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳು ; ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ 8 ಮಂದಿ ಸಾವು

ಮುಜಫರಾಬಾದ್ (ಪಿಒಕೆ): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಸತತ ಮೂರನೇ ದಿನವಾದ ಬುಧವಾರ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಎಂಟು ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಾಗ್ ಜಿಲ್ಲೆಯ ಧೀರ್ಕೋಟ್‌ನಲ್ಲಿ ನಾಲ್ಕು ಜನರು ಸಾವಿಗೀಡಾಗಿದ್ದಾರೆ. ಅಲ್ಲದೆ, ಮುಜಫರಾಬಾದಿನಲ್ಲಿ ಇಬ್ಬರು ಮತ್ತು ಮಿರ್ಪುರದಲ್ಲಿ … Continued

ವೀಡಿಯೊ..| ಜೈಶ್ ಒಪ್ಪಿಕೊಂಡ 2 ದಿನಗಳ ನಂತ್ರ ಭಾರತದ ದಾಳಿಯಲ್ಲಿ ತನ್ನ ಭಯೋತ್ಪಾದಕ ಶಿಬಿರವೂ ನಾಶವಾಗಿದೆ ಎಂದು ಒಪ್ಪಿಕೊಂಡ ಲಷ್ಕರ್ ಸಂಘಟನೆ..!

ಇಸ್ಲಾಮಾಬಾದ್: ಬಹಾವಲ್ಪುರ ಶಿಬಿರದ ಜೊತೆ ಜೆಇಎಂ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನ ಪಾಕಿಸ್ತಾನದ ಸಂಪರ್ಕದ ಬಗ್ಗೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಿರಂಗಪಡಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್‌ ಮತ್ತೊಂದು ಬಾಂಬ್‌ ಸಿಡಿಸಿದ್ದಾನೆ. ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದಲ್ಲಿರುವ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಪ್ರಧಾನ ಕಚೇರಿಯನ್ನು … Continued

ಮಾನವ ಜಿಪಿಎಸ್‌ ಎಂದೇ ಕುಖ್ಯಾತನಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಬಾಗು ಖಾನ್ ಎನ್‌ಕೌಂಟರಿನಲ್ಲಿ ಹತ…!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ‘ಮಾನವ ಜಿಪಿಎಸ್‌ (GPS)’ ಎಂದೇ ಕುಖ್ಯಾತನಾಗಿದ್ದ ಭಯೋತ್ಪಾದಕ ಬಾಗು ಖಾನ್‌ ಎಂಬಾತನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಅಧಿಕಾರಿಗಳು ಆತನ ಗುರುತಿನ ಚೀಟಿಯನ್ನು ಸಹ ಪತ್ತೆಹಚ್ಚಿದ್ದಾರೆ. ಭದ್ರತಾ ಸಂಸ್ಥೆಗಳ ಪಟ್ಟಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ . ಮೂಲಗಳ … Continued

ಪಿಒಕೆ ಹಿಂತಿರುಗಿಸಿ, ಉಗ್ರರನ್ನು ಹಸ್ತಾಂತರಿಸಿ ; ಇದು ಬಿಟ್ಟು ಬೇರೆ ಮಾತುಕತೆ ಇಲ್ಲ; ಡಿಜಿಎಂಒ ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ನಡುವೆ, ಭಾರತವು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದೆ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಅದು ಪಾಕ್‌ ಆಕ್ರಮಿತ ಕಾಶ್ಮೀರ (PoK) ಬಿಟ್ಟು ತೊಲಗುವುದು ಹಾಗೂ ಉಗ್ರರ ಹಸ್ತಾಂತರಕಷ್ಟೇ ಸೀಮಿತ ಎಂದು ತಿಳಿಸಿದೆ. ಇದನ್ನು ಹೊರತುಪಡಿಸಿ ಎರಡು ದೇಶಗಳ ಮಧ್ಯೆ ಯಾವುದೇ ರೀತಿಯ ಮಾತುಕತೆ ಇಲ್ಲ ಎಂದು ಭಾರತ … Continued

ಪಾಕಿಸ್ತಾನ್ ಮುರ್ದಾಬಾದ್ ಎಂದ ಬಾಲಕನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು…

ಶಹಜಹಾನಪುರ : ಪಾಕಿಸ್ತಾನದಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ವೈಮಾನಿಕ ದಾಳಿಯ ನಂತರ, ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯ ಹಳ್ಳಿಯಲ್ಲಿ ನಡೆದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರದ ಮೇಲೆ ಭಾರತ ನಡೆಸಿದ ವಾಯುದಾಳಿಯ ನಂತರ ಸಾರ್ವಜನಿಕರ ಸಂಭ್ರಮದ ವೇಳೆ ಎಂಟು ವರ್ಷದ … Continued

ಆಪರೇಷನ್ ಸಿಂಧೂರ | ಪಹಲ್ಗಾಮ್‌, ಪುಲ್ವಾಮಾ, ಪಠಾಣಕೋಟ್, ಮುಂಬೈ…ಅನೇಕ ಭಯೋತ್ಪಾದಕ ದಾಳಿಗಳಿಗೆ ಭಾರತ ಸೇಡು ತೀರಿಸಿಕೊಂಡಿದ್ದು ಹೇಗೆ..?

ನವದೆಹಲಿ: 26/11 ಮುಂಬೈ ದಾಳಿಯಿಂದ ಹಿಡಿದು 2024 ರ ಗುಲ್ಮಾರ್ಗ್ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯವರೆಗಿನ ಪಾಕಿಸ್ತಾನದ ಭಯೋತ್ಪಾದಕ ತರಬೇತಿ ಸ್ಥಳಗಳನ್ನು ಭಾರತವು ಗುರಿಯಾಗಿಸಿ ದಾಳಿ ಮಾಡಿದೆ, ಈ ಸ್ಥಳಗಳಲ್ಲಿಯೇ ಹಲವಾರು ದಾಳಿಗಳನ್ನು ಯೋಜಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂಬ ಮಾಹಿತಿ ಆದಾರದ ಮೇಲೆ ಈ ಸ್ಥಳಗಳ ಮೇಲೆ ಭಾರತದ ಸೈನ್ಯ ವಾಯು ದಾಳಿ ನಡೆಸಿದೆ. ಆಪರೇಷನ್ … Continued

ವೀಡಿಯೊಗಳು..| ಭಾರತದ ವಾಯು ದಾಳಿಯಲ್ಲಿ ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಮಸೂದ್‌ ಅಜರ್‌ ಮದರಸಾ ಧ್ವಂಸ ; ಉಗ್ರ ಅಜ್ಮಲ್‌ ಕಸಬ್‌ ತರಬೇತಿ ಪಡೆದಿದ್ದ ಉಗ್ರರ ನೆಲೆ ಉಡೀಸ್‌

ನವದೆಹಲಿ: 26 ಜನರನ್ನು ಕೊಂದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಬುಧವಾರ ರಾತ್ರಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬರೋಬ್ಬರಿ 24 ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿಸುಮಾರು 80ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ದಾಳಿಯಲ್ಲಿ ಜೈಶ್‌ … Continued

ವೀಡಿಯೊಗಳು..| ಆಪರೇಶನ್‌ ಸಿಂಧೂರ್‌ : ಪಾಕಿಸ್ತಾನ, ಪಿಒಕೆಯ 9 ಭಯೋತ್ಪಾಕರ ನೆಲೆ ಮೇಲೆ ಭಾರತ ಸೇನೆಯಿಂದ ಕ್ಷಿಪಣಿ ದಾಳಿ, 80ಕ್ಕೂ ಹೆಚ್ಚು ಉಗ್ರರು ಸಾವು..?

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. ಇದಕ್ಕೆ ʼಆಪರೇಷನ್ ಸಿಂಧೂರ್ʼ (‌Operation Sindoor) ಎಂದು ಹೆಸರಿಡಲಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕರ ತಾಣಗಳ ಮೇಲೆ ಬುಧವಾರ ಬೆಳಗಿನ ಜಾವ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದೆ ಎಂದು ರಕ್ಷಣಾ ಸಚಿವಾಲಯ … Continued